IPL 2022: ನಂ.2..! ಐಪಿಎಲ್‌ನಲ್ಲಿ ಇರ್ಫಾನ್ ಪಠಾಣ್ ದಾಖಲೆ ಸರಿಗಟ್ಟಿದ ಭುವನೇಶ್ವರ್ ಕುಮಾರ್
IPL 2022: ಐಪಿಎಲ್‌ನಲ್ಲಿ ಅತಿ ಹೆಚ್ಚು ಮೇಡನ್ ಓವರ್‌ಗಳಲ್ಲಿ ಭುವನೇಶ್ವರ್ ಕುಮಾರ್ ಎರಡನೇ ಸ್ಥಾನಕ್ಕೆ ತಲುಪಿದ್ದಾರೆ. ಅವರು ಇದುವರೆಗೆ ಒಟ್ಟು 10 ಮೇಡನ್ ಓವರ್ ಎಸೆದಿದ್ದಾರೆ. ಈ ವಿಚಾರದಲ್ಲಿ ಭುವನೇಶ್ವರ್ ಕುಮಾರ್ ಇರ್ಫಾನ್ ಪಠಾಣ್ ಅವರನ್ನು ಸರಿಗಟ್ಟಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (IPL 2022) ನಲ್ಲಿ ನಡೆದ ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad played)- ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ನಡುವೆ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅದ್ಭುತ ಪ್ರದರ್ಶನ ನೀಡಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 21 ರನ್‌ಗಳಿಂದ ಸೋಲಿಸಿತು. ಆದಾಗ್ಯೂ, ಈ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಭುವನೇಶ್ವರ್ ಕುಮಾರ್ (Bhuvneshwar Kumar) ಉತ್ತಮವಾಗಿ ಬೌಲಿಂಗ್ ಮಾಡಿ 4 ಓವರ್‌ಗಳಲ್ಲಿ ಕೇವಲ 25 ರನ್ ನೀಡಿ 1 ವಿಕೆಟ್ ಬೇಗನೆ ಪಡೆದರು. ಜೊತೆಗೆ ಮೇಡನ್ ಓವರ್ ಕೂಡ ಎಸೆದರು. ಈ ಮೇಡನ್ ಓವರ್ನಿಂದಾಗಿ ಭುವನೇಶ್ವರ್ ತಮ್ಮ ಹೆಸರಿನಲ್ಲಿ ವಿಶೇಷ ದಾಖಲೆ ಬರೆದಿದ್ದಾರೆ. ಅದೆನೆಂದರೆ, ಭುವಿ ಈಗ ಭಾರತದ ಮಾಜಿ ವೇಗದ ಬೌಲರ್ ಇರ್ಫಾನ್ ಪಠಾಣ್ ಅವರ ಐಪಿಎಲ್‌ನಲ್ಲಿ ಅತಿ ಹೆಚ್ಚು ಮೇಡನ್ ಓವರ್‌ಗಳ ದಾಖಲೆಯನ್ನು ಸರಿಗಟ್ಟಿದ್ದಾರೆ.
ಐಪಿಎಲ್‌ನಲ್ಲಿ ಅತಿ ಹೆಚ್ಚು ಮೇಡನ್ ಓವರ್‌ಗಳಲ್ಲಿ ಭುವನೇಶ್ವರ್ ಕುಮಾರ್ ಎರಡನೇ ಸ್ಥಾನಕ್ಕೆ ತಲುಪಿದ್ದಾರೆ. ಅವರು ಇದುವರೆಗೆ ಒಟ್ಟು 10 ಮೇಡನ್ ಓವರ್ ಎಸೆದಿದ್ದಾರೆ. ಈ ವಿಚಾರದಲ್ಲಿ ಭುವನೇಶ್ವರ್ ಕುಮಾರ್ ಇರ್ಫಾನ್ ಪಠಾಣ್ ಅವರನ್ನು ಸರಿಗಟ್ಟಿದ್ದಾರೆ. ಇರ್ಫಾನ್ ಪಠಾಣ್ ಕೂಡ ಇದುವರೆಗೆ 10 ಮೇಡನ್ ಓವರ್ ಬೌಲ್ ಮಾಡಿದ್ದಾರೆ. ಈ ವಿಚಾರದಲ್ಲಿ ಪ್ರವೀಣ್ ಕುಮಾರ್ ಮೊದಲ ಸ್ಥಾನದಲ್ಲಿದ್ದಾರೆ. ಪ್ರವೀಣ್ ಕುಮಾರ್ ಇದುವರೆಗೆ ಒಟ್ಟು 14 ಮೇಡನ್ ಓವರ್ ಎಸೆದಿದ್ದಾರೆ. ಈ ವೇಳೆ ಲಸಿತ್ ಮಾಲಿಂಗ ಮೂರನೇ ಸ್ಥಾನದಲ್ಲಿದ್ದಾರೆ. ಲಸಿತ್ ಮಾಲಿಂಗ ಒಟ್ಟು 8 ಮೇಡನ್ ಓವರ್ ಎಸೆದಿದ್ದಾರೆ. ಸಂದೀಪ್ ಶರ್ಮಾ ಮತ್ತು ಧವಳ್ ಕುಲಕರ್ಣಿ ತಲಾ 8 ಮೇಡನ್ ಓವರ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
ಭುವಿಗೆ 142 ಐಪಿಎಲ್ ಪಂದ್ಯಗಳಲ್ಲಿ 152 ವಿಕೆಟ್ ಈ ಸೀಸನ್ನಲ್ಲಿ ಭುವನೇಶ್ವರ್ ಕುಮಾರ್ ಇಲ್ಲಿಯವರೆಗೆ ಉತ್ತಮ ಬೌಲಿಂಗ್ ಮಾಡಿದ್ದಾರೆ ಎಂಬುದು ಉಲ್ಲೇಖಾರ್ಹ. ಅವರು 10 ಪಂದ್ಯಗಳಲ್ಲಿ 10 ವಿಕೆಟ್‌ಗಳನ್ನು ವೇಗವಾಗಿ ಗಳಿಸಿದ್ದಾರೆ. ಏತನ್ಮಧ್ಯೆ, ಒಂದು ಪಂದ್ಯದಲ್ಲಿ 22 ರನ್‌ಗಳಿಗೆ 3 ವಿಕೆಟ್‌ಗಳನ್ನು ಪಡೆದಿರುವುದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ. ಜೊತೆಗೆ ಈ ಸೀಸನ್ನಲ್ಲಿ ಭುವನೇಶ್ವರ್ ಕುಮಾರ್ ಅವರ ಒಟ್ಟಾರೆ ಪ್ರದರ್ಶನ ಕೂಡ ಉತ್ತಮವಾಗಿದ್ದು ಇದುವರೆಗೆ 142 ಐಪಿಎಲ್ ಪಂದ್ಯಗಳಲ್ಲಿ 152 ವಿಕೆಟ್ ಪಡೆದಿದ್ದಾರೆ.
ಐಪಿಎಲ್‌ನಲ್ಲಿ ಅತಿ ಹೆಚ್ಚು ಮೇಡನ್ ಓವರ್ ಎಸೆದ ಬೌಲರ್ಗಳಿವರು:
- ಪ್ರವೀಣ್ ಕುಮಾರ್: 14
- ಭುವನೇಶ್ವರ್ ಕುಮಾರ್: 10
- ಇರ್ಫಾನ್ ಪಠಾಣ್: 10
- ಲಸಿತ್ ಮಾಲಿಂಗ: 8
- ಸಂದೀಪ್ ಶರ್ಮಾ: 8
- ಧವನ್ ಕುಲಕರ್ಣಿ: 8
- ಡೇಲ್ ಸ್ಟೈನ್: 7
ಡೆಲ್ಲಿಗೆ 21 ರನ್‌ಗಳ ಗೆಲುವು ಈ ಪಂದ್ಯದಲ್ಲಿ ಹೈದರಾಬಾದ್ ತಂಡವನ್ನು ಡೆಲ್ಲಿ 21 ರನ್‌ಗಳಿಂದ ಸೋಲಿಸಿತು. ಟಾಸ್ ಗೆದ್ದ ಹೈದರಾಬಾದ್ ನಾಯಕ ಕೇನ್ ವಿಲಿಯಮ್ಸ್ ಮೊದಲ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಡೇವಿಡ್ ವಾರ್ನರ್ ಮತ್ತು ರೋವ್‌ಮನ್ ಪೊವೆಲ್ ಅವರ ಅಮೋಘ ಅರ್ಧಶತಕದೊಂದಿಗೆ ಡೆಲ್ಲಿ ಉತ್ತಮ ಸ್ಕೋರ್ ಕಲೆ ಹಾಕಿತು. ಇದಕ್ಕೆ ಉತ್ತರವಾಗಿ ಹೈದರಾಬಾದ್ ನಿಕೋಲಸ್ ಪೂರನ್ ಅವರ ಬಿರುಸಿನ ಆಟದೊಂದಿಗೆ ಡೆಲ್ಲಿ ನೀಡಿದ ಟಾರ್ಗೆಟನ್ನು ಬೆನ್ನಟ್ಟಿತು. ಆದರೆ ಅಂತಿಮವಾಗಿ ಹೈದರಾಬಾದ್ 20 ಓವರ್‌ಗಳಲ್ಲಿ 186 ರನ್ ಗಳಿಸಲಷ್ಟೇ ಶಕ್ತವಾಯಿತು.
Published On - 3:55 pm, Fri, 6 May 22