Asian Games 2022: ಸೆಪ್ಟೆಂಬರ್‌ನಲ್ಲಿ ನಡೆಯಬೇಕಿದ್ದ ಏಷ್ಯನ್ ಗೇಮ್ಸ್‌ 2022 ಮುಂದೂಡಿಕೆ

19ನೇ ಏಷ್ಯನ್ ಕ್ರೀಡಾಕೂಟವನ್ನು (Asian Games 2022) ನಂತರದ ದಿನಾಂಕಕ್ಕೆ ಮುಂದೂಡಲಾಗುವುದು ಎಂದು ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾದ ಮಹಾನಿರ್ದೇಶಕ ಫ್ರಿ. ಹಾಂಗ್ಝೌ ತಿಳಿಸಿದ್ದಾರೆ.

Asian Games 2022: ಸೆಪ್ಟೆಂಬರ್‌ನಲ್ಲಿ ನಡೆಯಬೇಕಿದ್ದ ಏಷ್ಯನ್ ಗೇಮ್ಸ್‌ 2022 ಮುಂದೂಡಿಕೆ
Asian Games 2022
Follow us
TV9 Web
| Updated By: Vinay Bhat

Updated on:May 06, 2022 | 1:31 PM

ಇದೇ ವರ್ಷ ಸೆಪ್ಟೆಂಬರ್ 10 ರಿಂದ 25 ರವರೆಗೆ ಚೀನಾದ ಹಾಂಗ್ಝೌನಲ್ಲಿ ನಡೆಯಬೇಕಿದ್ದ 19ನೇ ಏಷ್ಯನ್ ಕ್ರೀಡಾಕೂಟವನ್ನು (Asian Games 2022) ನಂತರದ ದಿನಾಂಕಕ್ಕೆ ಮುಂದೂಡಲಾಗುವುದು ಎಂದು ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾದ ಮಹಾನಿರ್ದೇಶಕರು ತಿಳಿಸಿದ್ದಾರೆ.  ಏಷ್ಯನ್ ಗೇಮ್ಸ್ ವಿಳಂಬಕ್ಕೆ ಯಾವುದೇ ಅಧಿಕೃತ ಕಾರಣವನ್ನು ನೀಡಲಾಗಿಲ್ಲ. ಆದರೆ ಕೋವಿಡ್ (Covid) ಪ್ರಕರಣಗಳ ಸೋಂಕು ಹೆಚ್ಚಳದ ಕಾರಣ, ಚೀನಾದಲ್ಲಿ (China) ಈಗ ಅದರ ವಿರುದ್ಧದ ಹೋರಾಟ ಮುಂದುವರೆದಿದೆ. ಈ ಹಿನ್ನಲೆಯ್ಲಲಿಯೇ, ಸೆಪ್ಟೆಂಬರ್​ನಲ್ಲಿ ಆರಂಭವಾಗಬೇಕಿದ್ದಂತ ಏಷ್ಯಾನ್ ಕ್ರೀಡಾಕೂಟವನ್ನು ಮುಂದೂಡಿಕೆ ಮಾಡಲಾಗಿದೆ ಎಂದು ವರದಿಯಾಗಿದೆ. ನೂತನ ದಿನಾಂಕ ಇನ್ನೂ ಪ್ರಕಟವಾಗಿಲ್ಲ. ಹಾಂಗ್ಝೌ ಶಾಂಘೈ ಸಮೀಪದಲ್ಲಿಯೇ ಇದ್ದು, ಆದರೆ ಶಾಂಘೈನಲ್ಲಿ ಕೊರೊನಾ ಹಾವಳಿ ಮಿತಿಮೀರಿದೆ. ಈ ಹಿನ್ನೆಲೆಯಲ್ಲಿ ಶಾಂಘೈನಲ್ಲಿ ಈಗಾಗಲೇ ಭಾಗಶಃ ಲಾಕ್‌ ಡೌನ್‌ ಹೇರಲಾಗಿದೆ.

ಏಷ್ಯನ್ ಗೇಮ್ಸ್‌ನಲ್ಲಿ ಭಾರತ: ಏಷ್ಯನ್ ಗೇಮ್ಸ್ ಟೂರ್ನಿ ಭಾರತೀಯ ಹಾಕಿ ತಂಡಕ್ಕೆ ಕಠಿಣ ಸವಾಲೊಡ್ಡುವದರಲ್ಲಿ ಅನುಮಾನವಿಲ್ಲ. ಪದಕ ಗೆಲ್ಲುವ ನೆಚ್ಚಿನ ತಂಡವಾಗಿ ಭಾರತ ಗುರುತಿಸಿಕೊಂಡಿದ್ದರೂ ಜಪಾನ್, ದಕ್ಷಿಣ ಕೊರಿಯಾ, ಮಲೇಶಿಯಾ ಮತ್ತು ಪಾಕಿಸ್ತಾನದಂತಾ ತಂಡಗಳ ಸವಾಲು ಮೀರಿ ನಿಲ್ಲಬೇಕಿದೆ. ಭಾರತ ಏಷ್ಯನ್ ಗೇಮ್ಸ್‌ನಲ್ಲಿ ಕೊನೆಯ ಬಾರಿ ಚಿನ್ನ ಗೆದ್ದುಕೊಂಡಿದ್ದು 2014ರಲ್ಲಿ.

ಇದನ್ನೂ ಓದಿ
Image
David Warner: ಅಜೇಯ 92 ರನ್: ಡೇವಿಡ್ ವಾರ್ನರ್ ಸ್ಫೋಟಕ ಬ್ಯಾಟಿಂಗ್​ಗೆ ಗೇಲ್ ದಾಖಲೆ ಉಡೀಸ್
Image
IPL 2022: CSK ಹಾಗೂ ಮುಂಬೈ ಇಂಡಿಯನ್ಸ್​ಗೆ ಇನ್ನೂ ಇದೆ ಪ್ಲೇಆಫ್ ಚಾನ್ಸ್..!
Image
IPL 2022: RCBಗೆ ಹ್ಯಾಟ್ರಿಕ್ ಗೆಲುವು ಅನಿವಾರ್ಯ..!
Image
Rashid Khan: ರಶೀದ್ ಖಾನ್ ಫ್ಲೈಯಿಂಗ್ ಕಿಸ್ ಕೊಟ್ಟಿದ್ದು ಯಾರಿಗೆ? ವೈರಲ್ ಆಯ್ತು ವಿಡಿಯೋ

ಹೆಚ್ಚಿನ ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:32 pm, Fri, 6 May 22