Quad Summit 2022: 40 ಗಂಟೆಗಳಲ್ಲಿ 23 ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ ಭಾಗಿ

Quad Summit 2022: 40 ಗಂಟೆಗಳಲ್ಲಿ 23 ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ ಭಾಗಿ
ನರೇಂದ್ರ ಮೋದಿ

Quad Summit:ಕ್ವಾಡ್ ( Quad) ರಾಷ್ಟ್ರಗಳ ನಾಯಕರ ಶೃಂಗಸಭೆಯು ಮೇ 24 ರಂದು ಜಪಾನ್​ನ ಟೋಕಿಯೋ ನಗರದಲ್ಲಿ ನಡೆಯುತ್ತಿದೆ. ಈ ಪ್ರಧಾನಿ ನರೇಂದ್ರ ಮೋದಿ(Narendra Modi) ಪಾಲ್ಗೊಳ್ಳಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ.

TV9kannada Web Team

| Edited By: Nayana Rajeev

May 22, 2022 | 11:46 AM

ಕ್ವಾಡ್ ( Quad) ರಾಷ್ಟ್ರಗಳ ನಾಯಕರ ಶೃಂಗಸಭೆಯು ಮೇ 24 ರಂದು ಜಪಾನ್​ನ ಟೋಕಿಯೋ ನಗರದಲ್ಲಿ ನಡೆಯುತ್ತಿದೆ. ಈ ಪ್ರಧಾನಿ ನರೇಂದ್ರ ಮೋದಿ(Narendra Modi) ಪಾಲ್ಗೊಳ್ಳಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್‌, ಆಸ್ಟ್ರೇಲಿಯಾ ಹಾಗೂ ಜಪಾನ್‌ನ ಪ್ರಧಾನಮಂತ್ರಿಗಳ ಜತೆ ಸಭೆ ಸೇರಿದಂತೆ ಒಟ್ಟು 40 ಗಂಟೆಗಳ ಅವಧಿಯಲ್ಲಿ 23 ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆಂದು ಸಚಿವಾಲಯ ತಿಳಿಸಿದೆ.

ಕ್ವಾಡ್‌ ಕಲ್ಪನೆಯನ್ನು 2007ರಲ್ಲಿ ಮೊದಲ ಬಾರಿಗೆ ಪ್ರಧಾನಮಂತ್ರಿ ಶಿಂಜೊ ಅಬೆ ಅವರು ಪ್ರಸ್ತಾಪಿಸಿದರು. ಚೀನಾದ ಒತ್ತಡದಿಂದಾಗಿ ಆಸ್ಪ್ರೇಲಿಯಾವು ಇದರಿಂದ ಹಿಂದೆ ಸರಿದ ಕಾರಣ ಈ ಕಲ್ಪನೆಯು ಮುಂದುವರೆಯಲು ಸಾಧ್ಯವಾಗಲಿಲ್ಲ.

ಅಂತಿಮವಾಗಿ 2017ರಲ್ಲಿ ಈ ನಾಲ್ಕು ದೇಶಗಳು ಈ ಒಕ್ಕೂಟ ರಚಿಸಿದವು. ಈ ನಾಲ್ಕು ರಾಷ್ಟ್ರಗಳು ಅಡೆತಡೆಯಿಲ್ಲದ ಕಡಲ ವ್ಯಾಪಾರ, ಭದ್ರತೆಯ ಸಾಮಾನ್ಯ ಹಿತಾಸಕ್ತಿಯನ್ನು ಬೆಂಬಲಿಸುವುದು ಸೇರಿದಂತೆ ವಿವಿಧ ಉದ್ದೇಶವನ್ನು ಹೊಂದಿದೆ.

ಇನ್ನಷ್ಟು ಓದಿ

ಇಂಡೊ-ಪೆಸಿಫಿಕ್‌ ವಲಯದ ಅಭಿವೃದ್ಧಿ ಮತ್ತು ಪ್ರಚಲಿತ ಜಾಗತಿಕ ಬಿಕ್ಕಟ್ಟುಗಳ ಬಗ್ಗೆ ಚರ್ಚಿಸಲು ಕ್ವಾಡ್‌ ನಾಯಕರಿಗೆ ಈ ಶೃಂಗಸಭೆ ವೇದಿಕೆ ಒದಗಿಸಲಿದೆ ಎಂದು ವಿದೇಶಾಂಗ ಸಚಿವಾಲಯ ವಕ್ತಾರ ಅರಿಂದಮ್‌ ಬಗ್ಚಿ ಹೇಳಿದ್ದಾರೆ. ಶೃಂಗಸಭೆ ನೇಪಥ್ಯದಲ್ಲಿ ಮೋದಿ ಅವರು ಜಪಾನ್‌ ಪ್ರಧಾನಿ ಫುಮಿಯೊ ಕಿಷಿದಾ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಜತೆಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ಶೃಂಗಸಭೆಯ ಕೆಲವು ಪ್ರಮುಖಾಂಶಗಳು

ಬ್ರಿಕ್ಸ್‌ ಶೃಂಗ: ಭಾರತ, ಚೀನಾ, ಬ್ರೆಜಿಲ್‌, ರಷ್ಯಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳ ಒಕ್ಕೂಟವನ್ನು ಬ್ರಿಕ್ಸ್‌ ಎಂದು ಕರೆಯಲಾಗುತ್ತದೆ. ಭದ್ರತೆ, ವ್ಯಾಪಾರ, ಅಭಿವೃದ್ಧಿ ಸೇರಿದಂತೆ ವಿವಿಧ ಅಂಶಗಳ ಬಗ್ಗೆ ಈ ಶೃಂಗಗಳಲ್ಲಿ ನಿರ್ಣಯ ಕೈಗೊಳ್ಳಲಾಗುತ್ತದೆ. ಬಹುತೇಕ ಅಭಿವೃದ್ಧಿಶೀಲ ದೇಶಗಳನ್ನು ಸದಸ್ಯರಾಗಿ ಹೊಂದಿರುವ ಈ ಒಕ್ಕೂಟ 2009ರಿಂದ ವಾರ್ಷಿಕ ಶೃಂಗಸಭೆಗಳನ್ನು ನಡೆಸುತ್ತಿದೆ.

ಜಿ-20 ಶೃಂಗ: ಜಿ-20 ಸಮಾವೇಶಕ್ಕೆ ಚಾಲನೆ ದೊರೆತಿದ್ದು 1999ರಲ್ಲಿ. ಇದು ವಿಶ್ವದ 20 ಪ್ರಮುಖ ರಾಷ್ಟ್ರಗಳು ಮತ್ತು ಕೇಂದ್ರೀಯ ಬ್ಯಾಂಕ್‌ಗಳ ಒಕ್ಕೂಟವಾಗಿದೆ.

ಆಸಿಯಾನ್‌ ಶೃಂಗ: ಆಗ್ನೇಯ ಏಷ್ಯಾ ರಾಷ್ಟ್ರಗಳು ರಾಜಕೀಯ, ಆರ್ಥಿಕ, ಭಧ್ರತೆ ಮತ್ತು ಸಾಮಾಜಿಕ-ಸಾಂಸ್ಕೃತಿಕ ಅಭಿವೃದ್ಧಿಗಾಗಿ ಸಿದ್ಧಪಡಿಸಿರುವ ಗುಂಪು ಇದಾಗಿದೆ. ಇದು ಪ್ರಾದೇಶಿಕ(ಏಷ್ಯಾ) ಮತ್ತು ಅಂತಾರಾಷ್ಟ್ರೀಯ(ವಿಶ್ವಾದ್ಯಂತ) ಕಾನ್ಫರೆನ್ಸ್‌ ನಡೆಸುತ್ತದೆ.

ಅಪೆಕ್‌ ಶೃಂಗ: ಎಪಿಇಸಿ ವಿಸ್ತೃತ ರೂಪ- ಏಷ್ಯಾ ಪೆಸಿಫಿಕ್‌ ಆರ್ಥಿಕ ಸಹಕಾರ. ಏಷ್ಯಾ ಪೆಸಿಫಿಕ್‌ ಎಕಾನಾಮಿಕ್‌ ಕೋ-ಆಪರೇಷನ್‌ ಎನ್ನುವುದು 21 ಪೆಸಿಫಿಕ್‌ ಸದಸ್ಯ ರಾಷ್ಟ್ರಗಳ ಕೂಟ. ಏಷ್ಯಾ ಪೆಸಿಫಿಕ್‌ ಉದ್ದಗಲದಲ್ಲಿಯೂ ಮುಕ್ತ ವ್ಯಾಪಾರವನ್ನು ಈ ಒಕ್ಕೂಟವು ಉತ್ತೇಜಿಸುತ್ತದೆ.

ಸಾರ್ಕ್ ಶೃಂಗಸಭೆ: ಸಾರ್ಕ್ ಕಾರ್ಯಾಲಯವನ್ನು ನೇಪಾಳದ ಕಾಠ್ಮಂಡುವಿನಲ್ಲಿ1987 ಜನವರಿ 16ರಂದು ತೆರೆಯಲಾಯಿತು. ಸಾರ್ಕ್​ನ ವಿಸ್ತೃತ ರೂಪ ದಕ್ಷಿಣ ಏಷ್ಯಾ ಪ್ರಾದೇಶಿಕ ಸಂಘಟನೆ ಎಂಬುದಾಗಿದೆ.

ವಿದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada