ಸ್ವಿಜರ್​ಲ್ಯಾಂಡ್​​​ನಲ್ಲೂ ಪತ್ತೆಯಾಯಿತು ಮಂಕಿಪಾಕ್ಸ್ ಪ್ರಕರಣ, ಸೋಂಕಿನ ಬಗ್ಗೆ ಹೆಚ್ಚಿದ ಆತಂಕ

ಸ್ವಿಜರ್​ಲ್ಯಾಂಡ್​​​ನಲ್ಲೂ ಪತ್ತೆಯಾಯಿತು ಮಂಕಿಪಾಕ್ಸ್ ಪ್ರಕರಣ, ಸೋಂಕಿನ ಬಗ್ಗೆ ಹೆಚ್ಚಿದ ಆತಂಕ
ಮಂಕಿಪಾಕ್ಸ್​ ರೋಗ

ಆರಂಭಿಕ ಹಂತದಲ್ಲಿ ಸಲಿಂಗಕಾಮಿ ಪುರುಷರು ಲೈಂಗಿಕ ಕಾಯಿಲೆಗಳ ಚಿಕಿತ್ಸೆಗೆಂದು ಆಸ್ಪತ್ರೆಗಳಿಗೆ ಬಂದಾಗ ಅವರಲ್ಲಿ ವೈರಸ್ ಕಂಡು ಬಂದಿತ್ತು ಎಂದು ಕ್ಲೂಜ್ ಹೇಳಿದ್ದಾರೆ. ಅದರರ್ಥ ಸೋಂಕಿನ ಹರಡುವಿಕೆ ಕೆಲ ಸಮಯದಿಂದ ನಡೆಯುತ್ತಲೇ ಇತ್ತು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

TV9kannada Web Team

| Edited By: Arun Belly

May 22, 2022 | 1:24 AM

ಜಿನೀವಾ: ವಿಶ್ವದ ಹಲವಾರು ಭಾಗಗಳಲ್ಲಿ ಕೋವಿಡ್ ಪಿಡುಗಿನ ನಂತರ ತಲ್ಲಣ ಸೃಷ್ಟಿಸುತ್ತಿರುವ ಮಂಕಿಪಾಕ್ಸ್ (Monkeypox) ರೋಗವು ಸ್ವಿಜರ್ ಲ್ಯಾಂಡನ್ನೂ (Switzerland) ಪ್ರವೇಶಿಸಿದೆ. ಸ್ವಿಸ್ ಆರೋಗ್ಯ ಅಧಿಕಾರಿಗಳು ಶನಿವಾರ ಬಿಡುಗಡೆ ಮಾಡಿರುವ ಪ್ರಕಟಣೆಯೊಂದರ ಪ್ರಕಾರ ಬರ್ನೆಯ (Berne) ಪ್ರದೇಶವೊಂದರಲ್ಲಿ ವಾಸವಾಗಿರುವ ವ್ಯಕ್ತಿಯೊಬ್ಬ ಮಂಕಿಪಾಕ್ಸ್ ಸೋಂಕಿನಿಂದ ಪೀಡಿತನಾಗಿದ್ದು ಅವನು ಸೋಂಕನ್ನು ಹೊರ ದೇಶವೊಂದರಲ್ಲಿ ತಾಕಿಸಿಕೊಂಡಿರವನೆಂದು ಹೇಳಿದ್ದಾರೆ.

ಬರ್ನೆಯ ಆರೋಗ್ಯ ಅಧಿಕಾರಿಯೊಬ್ಬರು ಸೋಂಕಿತ ಒಬ್ಬ ಹೊರರೋಗಿಯಾಗಿ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬಂದಾಗ ಅವನಿಗೆ ಮಂಕಿಪಾಕ್ಸ್ ಸೋಂಕು ತಗುಲಿರುವುದು ಖಚಿತಗೊಂಡಿದ್ದು ಅವನ ಮನೆಯಲ್ಲೇ ಪ್ರತ್ಯೇಕಿಸಿ ಟ್ರೀಟ್ ಮೆಂಟ್ ನೀಡಲಾಗುತ್ತಿದೆ, ಅವನ ಸಂಪರ್ಕದಲ್ಲಿದ್ದ ಎಲ್ಲರಿಗೂ ವಿಷಯ ತಿಳಿಸಲಾಗಿದೆ ಎಂದು ಹೇಳಿದರು.

ನಮ್ಮಲ್ಲಿರುವ ಮಾಹಿತಿಯ ಪ್ರಕಾರ ಸದರಿ ವ್ಯಕ್ತಿಗೆ ವಿದೇಶವೊಂದಕ್ಕೆ ಹೋದಾಗ ಸೋಂಕು ತಗಲಿದೆ, ಎಂದು ಅಧಿಕಾರಿ ಹೇಳಿದ್ದಾರೆ.

ಬರ್ನೆಯ ಆರೋಗ್ಯ ಅಧಿಕಾರಿಗಳಿಗೆ ಶುಕ್ರವಾರದಂದು ಪ್ರಕರಣದ ಬಗ್ಗೆ ಗೊತ್ತಾಗಿದ್ದರೂ ಅದು ಖಚಿತಪಟ್ಟಿದ್ದು ಶನಿವಾರ. ಬ್ರಿಟನ್, ಜರ್ಮನಿ, ಸ್ಪೇನ್, ಸ್ವೀಡನ್ ಮೊದಲಾದ ಪಾಶ್ಚಮಾತ್ಯ ರಾಷ್ಟ್ರಗಳಲ್ಲಿ ಮಂಕಿಪಾಕ್ಸ್ ಪ್ರಕರಣಗಳು ಈಗಾಗಲೇ ಬೆಳಕಿಗೆ ಬಂದಿದ್ದು ಈ ಪಟ್ಟಿಗೆ ಈಗ ಸ್ವಿಜರ್ ಲ್ಯಾಂಡ್ ಸಹ ಸೇರಿದೆ.

ಮಂಕಿಪಾಕ್ಸ್ ಪ್ರಕರಣಗಳು ಯುಎಸ್ ನಲ್ಲೂ ವರದಿಯಾಗಿದ್ದು ಸೋಂಕಿನ ಬಗ್ಗೆ ಜನರಲ್ಲಿ ಭೀತಿ ದಿನೇದಿನೆ ಹೆಚ್ಚುತ್ತಿದೆ. ಪ್ರತಿದಿನ ಒಂದು ಹೊಸ ದೇಶದಲ್ಲಿ ಪ್ರಕರಣಗಳು ಪತ್ತೆಯಾಗುತ್ತಿರುವುದನ್ನು ಗಮನಿಸಿದರೆ ಸೋಂಕು ಹರಡುತ್ತಿದೆ ಅನ್ನೋದು ಗೊತ್ತಾಗುತ್ತದೆ.

ಈ ಅಪರೂಪದ ಕಾಯಿಲೆ ಲಕ್ಷಣಗಳು ಜ್ವರ, ಸ್ನಾಯು ಸೆಳೆತ, ಊದಿಕೊಂಡ ದುಗ್ಧರಸ ಗ್ರಂಥಿಗಳು, ಶೀತ, ಆಯಾಸ ಮತ್ತು ಕೈ ಹಾಗೂ ಮುಖದ ಮೇಲೆ ಚಿಕನ್ ಪಾಕ್ಸ್ ತರಹದ ದದ್ದು ಆಗಿವೆ.

ಸೋಂಕಿತ ವ್ಯಕ್ತಿಯ ಚರ್ಮದ ಗಾಯಗಳು, ಸೀನಿದಾಗ ಇಲ್ಲವೇ ಉಗುಳಿದಾಗ ಅದರ ಮೂಲಕ ವೈರಸ್ ಹರಡಬಹುದು, ಹಾಗೆಯೇ ಸೋಂಕಿತನ ಹಾಸಿಗೆ ಅಥವಾ ಟವೆಲ್‌ಗಳಂತಹ ವಸ್ತುಗಳನ್ನು ಬಳಸಿದಾಗಲೂ ಸೋಂಕು ಹರಡಬಹುದು.

ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯೂ ಹೆಚ್ ಒ) ಒದಗಿಸಿರುವ ಮಾಹಿತಿಯ ಪ್ರಕಾರ ಸಾಮಾನ್ಯವಾಗಿ ಮಂಕಿಪಾಕ್ಸ್ ಎರಡರಿಂದ ನಾಲ್ಕು ವಾರಗಳಲ್ಲಿ ವಾಸಿಯಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಯುರೋಪ್ ಪ್ರಾದೇಶಿಕ ನಿರ್ದೇಶಕರಾಗಿರುವ ಹ್ಯಾನ್ಸ್ ಕ್ಲೂಜ್ ಅವರು ವೈರಸ್ ಯೂರೋಪಿನಾದ್ಯಂತ ಹರಡಿರುವುದರಿಂದ ಪ್ರಕರಣಗಳು ವೇಗವಾಗಿ ಹೆಚ್ಚಲಿವೆ ಎಂದು ಶುಕ್ರವಾರ ಎಚ್ಚರಿಸಿದ್ದಾರೆ.

ಆರಂಭಿಕ ಹಂತದಲ್ಲಿ ಸಲಿಂಗಕಾಮಿ ಪುರುಷರು ಲೈಂಗಿಕ ಕಾಯಿಲೆಗಳ ಚಿಕಿತ್ಸೆಗೆಂದು ಆಸ್ಪತ್ರೆಗಳಿಗೆ ಬಂದಾಗ ಅವರಲ್ಲಿ ವೈರಸ್ ಕಂಡು ಬಂದಿತ್ತು ಎಂದು ಕ್ಲೂಜ್ ಹೇಳಿದ್ದಾರೆ. ಅದರರ್ಥ ಸೋಂಕಿನ ಹರಡುವಿಕೆ ಕೆಲ ಸಮಯದಿಂದ ನಡೆಯುತ್ತಲೇ ಇತ್ತು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಹೆಚ್ಚಿನ ಪ್ರಕರಣಗಳಲ್ಲಿ ಮಂಕಿಪಾಕ್ಸ್ ರೋಗಾಣು ಸಲಿಂಗಕಾಮಿ, ದ್ವಿಲಿಂಗಿ ಕಾಮಿ (ಬೈಸೆಕ್ಸುವಲ್) ಅಥವಾ ಪುರುಷರೊಂದಿಗೆ ಲೈಂಗಿಕ ಸಂಬಂಧ ಹೊಂದಿರುವ ಪುರುಷರಲ್ಲೇ ಕಂಡುಬಂದಿರುವುದರಿಂದ ಈ ಅಂಶದ ಮೇಲೆ ಅಧ್ಯಯನ ನಡೆಸಲಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಇದನ್ನೂ ಓದಿ:   Monkeypox alert: ಆಫ್ರಿಕಾ, ಯುರೋಪ್ ಮತ್ತು ಅಮೇರಿಕನ್ ದೇಶಗಳಗಳಲ್ಲಿ ಮಂಕಿಪಾಕ್ಸ್ ಹೊಸ ಸಾಂಕ್ರಾಮಿಕ ರೋಗ ಪತ್ತೆ

Follow us on

Related Stories

Most Read Stories

Click on your DTH Provider to Add TV9 Kannada