Monkeypox alert: ಆಫ್ರಿಕಾ, ಯುರೋಪ್ ಮತ್ತು ಅಮೇರಿಕನ್ ದೇಶಗಳಗಳಲ್ಲಿ ಮಂಕಿಪಾಕ್ಸ್ ಹೊಸ ಸಾಂಕ್ರಾಮಿಕ ರೋಗ ಪತ್ತೆ
ಮಂಕಿಪಾಕ್ಸ್ ರೋಗ ಸದ್ಯ ಆಫ್ರಿಕಾದ ದೇಶಗಳಲ್ಲಿ ವ್ಯಾಪಕವಾಗಿ ಹಬ್ಬುತ್ತಿದೆ. ಈ ಸಾಂಕ್ರಾಮಿಕ ರೋಗಕ್ಕೆ ಯುರೋಪ್ ಮತ್ತು ಅಮೇರಿಕನ್ ದೇಶಗಳ ಜನರು ತುತ್ತಾಗಿದ್ದಾರೆ.
ಕೊರೊನಾದಿಂದ ಬೆಂದು ಹೋಗಿದ್ದ ಜಗತ್ತಿಗೆ ಈಗ ಮತ್ತೊಂದು ಸಾಂಕ್ರಾಮಿಕ ರೋಗ ವಕ್ಕರಿಸುವ ಭೀತಿ ಎದುರಾಗಿದೆ. ಅದು ಮಂಕಿಪಾಕ್ಸ್ (Monkeypox) . ಈ ರೋಗದ ಲಕ್ಷಣಗಳು ಕೆಲವು ದೇಶಗಳಲ್ಲಿ ಮಾತ್ರ ಕಂಡು ಬಂದಿದೆ. ಈ ರೋಗ ಸದ್ಯ ಆಫ್ರಿಕಾದ (Africa) ದೇಶಗಳಲ್ಲಿ ವ್ಯಾಪಕವಾಗಿ ಹಬ್ಬುತ್ತಿದ್ದು, ವೈದ್ಯರಿಗೆ ಇದು ತೆಲೆನೋವಾಗಿ ಸಂಭವಿಸಿದೆ. ಅಲ್ಲದೇ ಈ ಸಾಂಕ್ರಾಮಿಕ ರೋಗಕ್ಕೆ ಯುರೋಪ್ (Europe) ಮತ್ತು ಅಮೇರಿಕನ್ (America) ದೇಶಗಳ ಜನರು ತುತ್ತಾಗಿದ್ದಾರೆ. ಆದರೆ ಆಫ್ರಿಕಾದಷ್ಟು ವ್ಯಾಪಕವಾಗಿ ಹಬ್ಬಿಲ್ಲ.
ಆಫ್ರಿಕಾದ ಸಾಕಷ್ಟು ಜನರು ಈ ರೋಗಕ್ಕೆ ತುತ್ತಾಗುತ್ತಿದ್ದು, ಆರೋಗ್ಯ ಅಧಿಕಾರಿಗಳು ಪ್ರಕರಣಗಳ ಪ್ರಗತಿಯ ಮೇಲೆ ನಿಗಾ ಇರಿಸಿದ್ದಾರೆ. ಅಲ್ಲದೇ ಆಫ್ರಿಕಾಕ್ಕೆ ಪ್ರಯಾಣ ಬೆಳಸಿದವರಲ್ಲೂ ಈ ರೋಗ ಕಂಡು ಬಂದಿದೆ. ಈ ರೋಗ ಹೆಚ್ಚಾಗಿ ಯುವಕರಲ್ಲಿ ಕಂಡು ಬಂದಿದ್ದು, ಇದರಿಂದ ಅಪಾಯ ಕಡಿಮೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಮಂಕಿಪಾಕ್ಸ್ ಒಂದು ವೈರಸ್ ಆಗಿದ್ದು ಅದು ದಂಶಕಗಳು ಮತ್ತು ಪ್ರೈಮೇಟ್‌ಗಳಂತಹ ಕಾಡು ಪ್ರಾಣಿಗಳಿಂದ ಹಬ್ಬುತ್ತದೆ ಎಂದು ವರದಿಯಾಗಿದೆ. ಈ ರೋಗದ ಹೆಚ್ಚಿನ ಪ್ರಕರಣಗಳು ಮಧ್ಯ ಮತ್ತು ಪಶ್ಚಿಮ ಆಫ್ರಿಕಾದಲ್ಲಿ ದಾಖಲಾಗಿವೆ.
- ಸ್ಪೇನ್‌ನಲ್ಲಿ ಮಂಕಿಪಾಕ್ಸ್ನ 7 ಪ್ರಕರಣಗಳು ದಾಖಲಾಗಿವೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
- ಮಂಕಿಪಾಕ್ಸ್ ಯುರೋಪ್‌ನಲ್ಲಿ ಕೂಡ ಏರಿಕೆಯಾಗುತ್ತಿದ್ದು, ಪೋರ್ಚುಗಲ್ನಲ್ಲಿ ಗುರುವಾರ 14 ಪ್ರಕರಣಗಳು ದಾಖಲಾಗಿವೆ.
- ಸ್ಪೇನ್‌ನ ಮ್ಯಾಡ್ರಿಡ್‌ನ ಪುರುಷರಲ್ಲಿ ಈ ರೋಗ ಹೆಚ್ಚಾಗಿ ಕಂಡು ಬಂದಿದ್ದು, 22 ಶಂಕಿತ ಪ್ರಕರಣಗಳು ಪತ್ತೆಯಾಗಿವೆ. ಸದ್ಯ ಅವರನ್ನು ವೈದ್ಯರು ಪರಿಶೀಲಿಸುತ್ತಿದ್ದಾರೆ ಎಂದು ಪ್ರಾದೇಶಿಕ ಆರೋಗ್ಯ ಇಲಾಖೆಯ ಆಂಟೋನಿಯೊ ಜಪಾಟೆರೊ ಹೇಳಿದ್ದಾರೆ.
- ಇಟಲಿಯಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ವರದಿಯಾಗಿದೆ.
- ಸ್ವೀಡನ್‌ನಲ್ಲಿ ಒಬ್ಬ ವ್ಯಕ್ತಿಗೆ ಮಂಕಿಪಾಕ್ಸ್ ದೃಢಪಟ್ಟಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
- ಯುನೈಟೆಡ್ ಕಿಂಗ್‌ಡಂನಲ್ಲಿ ಇದುವರೆಗೆ ಒಂಬತ್ತು ಪ್ರಕರಣಗಳು ವರದಿಯಾಗಿವೆ.
- ಒಂದು ದಿನದ ಹಿಂದೆ, ಯುನೈಟೆಡ್ ಸ್ಟೇಟ್ಸ್ನ ಮ್ಯಾಸಚೂಸೆಟ್ಸ್ನಿಂದ ಇತ್ತೀಚೆಗೆ ಕೆನಡಾಕ್ಕೆ ಪ್ರಯಾಣಿಸಿದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಪ್ರಕರಣವನ್ನು ವರದಿಯಾಗಿದೆ.
ಮಂಕಿಪಾಕ್ಸ್ ನಂತಹ ರೋಗ ಮೊದಲು 1958 ರಲ್ಲಿ ಮಂಗಗಳಲ್ಲಿ ಕಂಡು ಬಂದಿತ್ತು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಹೀಗಾಗಿ, ಮಂಕಿಪಾಕ್ಸ್ ಎಂದು ಹೆಸರು ಬಂತು. ಮೊದಲ ಮಾನವ ಸೋಂಕು 1970 ರಲ್ಲಿ – ಆಸ್ಟ್ರೇಲಿಯಾದ ಒಂದು ಊರಿನಲ್ಲಿ ಒಂಬತ್ತು ವರ್ಷದ ಹುಡುಗನಲ್ಲಿ ಕಂಡು ಬಂದಿತ್ತು. ಅಪರೂಪದ ಕಾಯಿಲೆಯು ಸಾಮಾನ್ಯವಾಗಿ ಜ್ವರ, ಸ್ನಾಯು ನೋವು, ಊದಿಕೊಂಡ ದುಗ್ಧರಸ ಗ್ರಂಥಿಗಳು, ಶೀತ, ಬಳಲಿಕೆ ಮತ್ತು ಕೈ ಮತ್ತು ಮುಖದ ಮೇಲೆ ದದ್ದುಗಳಂತ ಲಕ್ಷಣಗಳು ಕಂಡು ಬರುತ್ತವೆ .