ADHD Disease: ಚಂಚಲತೆ ಮತ್ತು ಅತಿ ಚಟುವಟಿಕೆಯ ಕಾಯಿಲೆ ಎಂದರೇನು? ಲಕ್ಷಣಗಳೇನು?
ADHD Diseaseಚಂಚಲತೆ ಮತ್ತು ಅತಿ ಚಟುವಟಿಕೆಯ ಕಾಯಿಲೆ( AHAD) ಇದೊಂದು ವಿಚಿತ್ರ ಕಾಯಿಲೆಯಾಗಿದ್ದು. ಈ ಕಾಯಿಲೆ ಇರುವ ವ್ಯಕ್ತಿಗಳು ಕೂತಲ್ಲಿ ಕೂರುವುದಿಲ್ಲ, ನಿಂತಲ್ಲಿ ನಿಲ್ಲುವುದಿಲ್ಲ ತುಂಬಾ ಆಕ್ಟೀವ್ ಆಗಿರುವಂತೆ ಕಾಣಿಸುತ್ತಾರೆ.
ಚಂಚಲತೆ ಮತ್ತು ಅತಿ ಚಟುವಟಿಕೆಯ ಕಾಯಿಲೆ( AHAD) ಇದೊಂದು ವಿಚಿತ್ರ ಕಾಯಿಲೆಯಾಗಿದ್ದು. ಈ ಕಾಯಿಲೆ ಇರುವ ವ್ಯಕ್ತಿಗಳು ಕೂತಲ್ಲಿ ಕೂರುವುದಿಲ್ಲ, ನಿಂತಲ್ಲಿ ನಿಲ್ಲುವುದಿಲ್ಲ ತುಂಬಾ ಆಕ್ಟೀವ್ ಆಗಿರುವಂತೆ ಕಾಣಿಸುತ್ತಾರೆ. ಆದರೆ ಅದು ಅವರ ಕಾಯಿಲೆ ಎಂಬುದು ಯಾರಿಗೂ ತಿಳಿದಿರುವುದಿಲ್ಲ. ಹೋಂವರ್ಕ್ ಅಥವಾ ಶಾಲೆಯ ಚಟುವಟಿಕೆಗಳು ಮುಂತಾದ ದಿನನಿತ್ಯದ ಕೆಲಸಗಳನ್ನು ಮಾಡಲು ಇಷ್ಟಪಡದಿರುವುದು. ಇತರ ದೈನಂದಿನ ಚಟುವಟಿಕೆಗಳಲ್ಲಿ ಬಲುಬೇಗನೆ ಬೇಸರಗೊಳ್ಳುವುದು.
ಸ್ನೇಹಿತರ ಜತೆ ಜಗಳ/ಹೊಡೆದಾಟ, ತನ್ನ ತಪ್ಪನ್ನು ಒಪ್ಪಿಕೊಳ್ಳದಿರುವುದು. ಗದ್ದಲ, ಚಲನೆ ಅಥವಾ ಇತರ ಬಾಹ್ಯ ಅಂಶಗಳಿಂದ ಶೀಘ್ರವಾಗಿ ಚಂಚಲತೆಗೆ ಒಳಗಾಗುವುದುಅತಿಯಾಗಿ ಮಾತನಾಡುವುದು, ಇತರರ ಮಾತಿನ ಮಧ್ಯೆ ಮಧ್ಯದಲ್ಲಿ ಮಾತನಾಡುವುದು, ಬೇಗನೆ ಕೋಪಿಸಿಕೊಳ್ಳುವುದು, ತಾಳ್ಮೆಯಿಲ್ಲದೆ ಇರುವುದು, ಮತ್ತು ಇತರರು ಮಾತನಾಡಿ ಮುಗಿಸುವ ಮೊದಲೇ ಪ್ರತಿಕ್ರಿಯೆ ನೀಡುವುದು.
ತನ್ನ ವಸ್ತುಗಳನ್ನು, ಆಟದ ವಸ್ತುಗಳನ್ನು, ಶಾಲೆಯ ಪುಸ್ತಕಗಳನ್ನು ಕಾಳಜಿಯಿಂದ ನೋಡಿಕೊಳ್ಳಲು ಸಾಧ್ಯವಾಗದಿರುವುದು. ಭಾವನೆಗಳನ್ನು ಯಾವುದೇ ಮುಜುಗರವಿಲ್ಲದೇ ತೋರುವುದು ಮತ್ತು ಅತಿಯಾದ ಸಂವೇದನೆಗಳನ್ನು ನಿಯಂತ್ರಿಸಲು ಅಸಾಧ್ಯವಾಗುವುದು ಈ ಸ್ಥಿತಿಯನ್ನು ನಾವು ಅತಿ ಚಟುವಟಿಕೆಯ ಸಮಸ್ಯೆ (ADHD) ಎಂದು ಕರೆಯುತ್ತೇವೆ. ಇದು ನರಗಳಿಗೆ ಸಂಬಂಧಿಸಿದ ಸಮಸ್ಯೆ. ಕಲಿಕೆ, ಏಕಾಗ್ರತೆ ಮತ್ತು ವರ್ತನೆಯ ಮೇಲೆ ಇದು ಪರಿಣಾಮ ಬೀರುತ್ತದೆ.
ಈ ಸಮಸ್ಯೆಯಿರುವ ಮಕ್ಕಳು ಶಾಲೆ ಹಾಗೂ ಮನೆಗಳಲ್ಲಿ ನಿತ್ಯದ ಕೆಲಸಗಳನ್ನು ನಿರ್ವಹಿಸಲು ಕಷ್ಟಪಡುತ್ತಾರೆ. ಸಾಮಾನ್ಯವಾಗಿ ಬಾಲ್ಯದಿಂದ ಆರಂಭವಾಗುವ ಈ ಸಮಸ್ಯೆ ಹದಿಹರೆಯ ಹಾಗೂ ಪ್ರೌಡಾವಸ್ಥೆಯವರೆಗೂ ಸಮಸ್ಯೆಗಳು ಉಳಿದುಕೊಳ್ಳಬಹುದು.
ಯಾವುದನ್ನು ಎಡಿಎಚ್‌ಡಿ ಎಂದು ಪರಿಗಣಿಸಲಾಗುವುದಿಲ್ಲ?
ದುಡುಕು ಪೃವ್ರತ್ತಿಯನ್ನು ಪ್ರದರ್ಶಿಸುವುದು, ಅತಿಯಾಗಿ ಕ್ರಿಯಾಶೀಲರಾಗಿರುವುದು, ಹೆಚ್ಚು ಮಾತನಾಡುವುದು, ಆಟವಾಡುವಾಗ ಸ್ನೇಹಿತರ ಜತೆ ಜಗಳಾಡುವುದು, ಪಾಠದ ಬಗ್ಗೆ ಹೆಚ್ಚು ಗಮನವಿಲ್ಲದಿರುವುದು, ಇವೆಲ್ಲವೂ ಎಲ್ಲ ಮಕ್ಕಳ ಸಹಜ ಪ್ರವೃತ್ತಿ. ಅವರ ದೈನಂದಿನ ಹಾಗೂ ಶಾಲೆಯ ಚಟುವಟಿಕೆಗಳಿಗೆ ಇವು ಗಮನಾರ್ಹ ಪ್ರಮಾಣದಲ್ಲಿ ಅಡ್ಡಿಯುಂಟುಮಾಡುವುದಿಲ್ಲ. ಹೀಗಾಗಿ ಇದನ್ನು ಎಡಿಎಚ್‌ಡಿ ಎಂದು ಪರಿಗಣಿಸಲಾಗದು.
ಎಡಿಎಚ್‌ಡಿ ವಿಧಗಳೇನು?
ಸಾಮಾನ್ಯವಾಗಿ ಎ.ಡಿ.ಎಚ್.ಡಿ ಮೂರು ವಿಧಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ ಎರಡು ಪ್ರಮುಖವಾಗಿದ್ದು, ಮೂರನೆಯದು ಮೊದಲಿನೆರಡವುಗಳ ಸಮ್ಮಿಶ್ರಣವಾಗಿದೆ.
ಹಠಾತ್ ಪ್ರವೃತ್ತಿಯ, ಹೈಪರ್ ಆಕ್ಟಿವ್-ಇಂಪಲ್ಸಿವ್ ವಿಧದ ಎಡಿಎಚ್‌ಡಿ (Hyperactive-impulsive type): ತುಂಬಾ ಚಿಕ್ಕ ವಯಸ್ಸಿನಲ್ಲೇ ಈ ತೊಂದರೆಯನ್ನು ಗುರುತಿಸಲಾಗುತ್ತದೆ.
ಎ.ಡಿ.ಎಚ್.ಡಿ ಉಂಟಾಗಲು ಕಾರಣವೇನು? ಈ ತೊಂದರೆಯು ಯಾಕೆ ಕಾಣಿಸಿಕೊಳ್ಳುತ್ತದೆ ಎಂಬ ಬಗ್ಗೆ ವೈದ್ಯರಲ್ಲಿ ನಿರ್ದಿಷ್ಟ ಅಭಿಪ್ರಾಯಗಳಿಲ್ಲ. ಅನುವಂಶೀಯತೆ ಹಾಗೂ ಸಣ್ಣ ಪ್ರಮಾಣದ ಹಾನಿ ಇದಕ್ಕೆ ಕಾರಣ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಏಕಾಗ್ರತೆ, ಸಂಘಟನೆ ಮತ್ತು ಸಂವೇದನೆಗಳನ್ನು ನಿರ್ವಹಿಸುವ ನ್ಯುರೋಟ್ರಾನ್ಸ್ಮಿಟರ್ ಸರಿಯಾಗಿ ಕೆಲಸ ಮಾಡುವುದಿಲ್ಲ. ಎಡಿಎಚ್ ಡಿ ಉಂಟಾಗಲು ಕೆಲವು ಕಾರಣಗಳು :
ವಂಶವಾಹಿಗಳು: ಮೆದುಳಿನಲ್ಲಿರುವ ನರಸಂದೇಶವಾಹಕಗಳು ಸರಿಯಾಗಿ ಕಾರ್ಯನಿರ್ವಹಿಸದೇ ಇರುವುದರಿಂದ ಈ ಸಮಸ್ಯೆ ಶೇ.80ರಷ್ಟು ಆನುವಂಶಿಕವಾಗಿದೆ ಎಂದು ಹಲವಾರು ಅಧ್ಯಯನಗಳಿಂದ ತೀರ್ಮಾನಿಸಲಾಗಿದೆ.
ಎ.ಡಿ.ಎಚ್.ಡಿ ಗುಣಲಕ್ಷಣಗಳು ಶಿಕ್ಷಕರು ಹಾಗೂ ಪೋಷಕರು ಶಾಲೆ ಹಾಗೂ ಮನೆಯಲ್ಲಿ ಮಗುವಿನ ವರ್ತನೆಯಲ್ಲಾಗುವ ಬದಲಾವಣೆಗಳನ್ನು ಮೊದಲು ಗುರುತಿಸಬಲ್ಲರು. ಎಡಿಎಚ್‌ಡಿ ಸಮಸ್ಯೆಗೆ ಚಿಕಿತ್ಸೆ ನೀಡುವುದಕ್ಕೆ ಮಗುವಿಗೆ ಏಳು ವರ್ಷವಾಗುವ ಮೊದಲೇ ಈ ಗುಣಲಕ್ಷಣ ಪತ್ತೆಮಾಡಿರಬೇಕು. ಶಾಲೆ, ಮನೆ ಮತ್ತು ಸಾಮಾಜಿಕ ಸಂದರ್ಭ ಹೀಗೆ ವಿವಿಧ ಪರಿಸರಗಳಲ್ಲಿ ಮೇಲೆ ವಿವರಿಸಿರುವ ಗುಣಲಕ್ಷಣಗಳಲ್ಲಿ ಏಳಕ್ಕಿಂತ ಹೆಚ್ಚು ಗುಣಲಕ್ಷಣಗಳು ಕಾಣಿಸಿದರೆ ಮಾತ್ರ ಇದನ್ನು ಎಡಿಎಚ್‌ಡಿ ಎಂದು ಪರಿಗಣಿಸಲಾಗುತ್ತದೆ. ಕಲಿಕೆ, ನಡುವಳಿಕೆಗಳಲ್ಲಿ ಗಮನಾರ್ಹವಾಗಿ ತೊಂದರೆ ಕಂಡುಬಂದು ಅವು ಮಗುವಿನ ಸಾಮಾನ್ಯ ಕಾರ್ಯನಿರ್ವಹಣೆಯಲ್ಲಿ ತೊಂದರೆಯಾದರೆ ಮಾತ್ರ ಅಂತಹ ಪರಿಸ್ಥಿತಿಯನ್ನು ಎಡಿಡಚ್ ಡಿ ಎಂದು ಪರಿಗಣಿಸಲಾಗುವದು.
ಸೂಚನೆ: ಕೆಲವು ಮಕ್ಕಳು ವಯಸ್ಸಿಗೆ ಬರುತ್ತಿದ್ದಂತೆ ಹಲವು ಗುಣಲಕ್ಷಣಗಳು ಮಾಯವಾಗಬಹುದು. ಆದರೂ ಅವರಲ್ಲಿ ಏಕಾಗ್ರತೆಯ ಕೊರತೆ ಮತ್ತು ದುಡುಕು ಸ್ವಭಾವವು ಹಾಗೆಯೇ ಮುಂದುವರೆದು ಸಮಾಜಿಕ ಹಾಗೂ ವೃತ್ತಿ ಬದುಕಿನಲ್ಲಿ ಪ್ರಭಾವ ಬೀರಬಹುದು. ಇದೇ ವೇಳೆ, ಮಗು ಶೈಕ್ಷಣಿಕ ವಿಷಯಗಳಲ್ಲಿ ಕಷ್ಟಪಡುತ್ತಿದ್ದರೂ, ತಮಗೆ ಆಸಕ್ತಿಯಿರುವ ಚಟುವಟಿಕೆಯಲ್ಲಿ ಅತ್ಯಂತ ಸಾಮರ್ಥ್ಯವನ್ನು ಹೊಂದಿರಬಹುದು. ಇದನ್ನು ತಂದೆತಾಯಿಗಳು ಅರಿಯುವುದು ಅತ್ಯಂತ ಮುಖ್ಯವಾದ ಸಂಗತಿಯಾಗಿರುತ್ತದೆ.
ಪಾಠ ಹೇಳಿಕೊಡುವಾಗ ಗಮನ ಕೊಡದೆ ಇರುವುದು ಮತ್ತು ಸೂಚನೆಗಳನ್ನು ಅನುಸರಿಸಲು ಕಷ್ಟಪಡುವುದು. ವಿಶ್ರಾಂತಿ ಇಲ್ಲದಿರುವುದು, ಕೈ ಕಾಲು ಚಡಪಡಿಸುವುದು, ಕೆಲವು ನಿಮಿಷ ಕೂಡ ಸುಮ್ಮನೆ ಕುಳಿತುಕೊಳ್ಳಲಾಗದಿರುವುದು.
ಓದುವುದು, ಬರೆಯುವುದು ಅಥವಾ ಕಾಗುಣಿತದಲ್ಲಿ ಆಸಕ್ತಿ ತೋರಿಸುವುದಿಲ್ಲ ಹಾಗೂ ತಪ್ಪುಗಳನ್ನು ಮಾಡುವುದು. ತರಗತಿಯ ಕೋಣೆಯಲ್ಲಿ ಕುಳಿತುಕೊಳ್ಳಲು ನಿರಾಕರಿಸುವುದು. ತರಗತಿಯಲ್ಲಿ ಎದ್ದುನಿಲ್ಲುವುದು, ನಡೆದಾಡುವುದು ಅಥವಾ ಓಡಾಡುವ ಮೂಲಕ ಇತರರಿಗೆ ಅಡ್ಡಿಪಡಿಸುವುದು.
ಪುಸ್ತಕಗಳನ್ನು ಜೋಡಿಸುವುದು ಹಾಗೂ ಹೋಂವರ್ಕ್ ನಿತ್ಯವೂ ಮಾಡುವ ಸಾಮಾನ್ಯ ಕೆಲಸಗಳನ್ನು ಪೂರೈಸಲು ಕಷ್ಟಪಡುವುದು. ನಡೆಯುವುದರ ಬದಲಿಗೆ ಓಡುವುದು, ಹತ್ತುವುದು, ಇಳಿಯುವುದು ಮಾಡುವುದು, ರಸ್ತೆಯ ನಿಯಮಗಳನ್ನು ಪಾಲಿಸದಿರುವುದು, ಇತ್ಯಾದಿ. ಇದರಿಂದ ಪಾಲಕರಲ್ಲಿ ಮಕ್ಕಳಿಗೆ ಅಪಘಾತ ಅಥವಾ ಗಾಯಗಳುಂಟಾಗುವ ಸಾಧ್ಯತೆಯ ಕುರಿತಾಗಿ ಭಯ ಹಾಗೂ ಆತಂಕ ಉಂಟಾಗುತ್ತದೆ.
ಹಲ್ಲುಜ್ಜುವುದು, ಶೂ ಧರಿಸುವುದು, ಕೈ ತೊಳೆಯುವಂತ ದಿನನಿತ್ಯದ ಸಾಮಾನ್ಯ ಕೆಲಸಗಳನ್ನು ಮತ್ತು ಸೂಚನೆಗಳನ್ನು ಸುಲಭವಾಗಿ ಮರೆಯುವುದು. ಸನ್ನಿವೇಶವನ್ನು ಅರ್ಥ ಮಾಡಿಕೊಳ್ಳದೇ, ಆಗಬಹುದಾದ ಪರಿಣಾಮಗಳನ್ನು ಲೆಕ್ಕಿಸದೇ ದುಡುಕಿನಿಂದ ಪ್ರತಿಕ್ರಿಯಿಸುವುದು.
ಎ.ಡಿ.ಎಚ್.ಡಿ ಚಿಕಿತ್ಸೆ ಆಪ್ತ ಸಲಹೆ, ಕಾಗ್ನಿಟಿವ್ ಬೇಹೇವಿಯರ್ ಥೆರಪಿ ಮುಂತಾದ ಸಮ್ಮಿಶ್ರಣ ರೂಪದ ಚಿಕಿತ್ಸಾ ವಿಧಾನವನ್ನು ಅನುಸರಿಸಬಹುದು. ಮಗುವಿನ ಆರೋಗ್ಯ ಸ್ಥಿತಿ, ವ್ಯಕ್ತಿತ್ವ ಮತ್ತು ಸಮಸ್ಯೆಯ ಗುಣಲಕ್ಷಣಗಳ ತೀವ್ರತೆಯನ್ನು ಆಧರಿಸಿ ತಜ್ಞರು ಚಿಕಿತ್ಸೆಯ ವಿಧವನ್ನು ಆಯ್ಕೆ ಮಾಡುತ್ತಾರೆ. ಬಹುತೇಕ ಮಕ್ಕಳು ಸಮಸ್ಯೆಯನ್ನು ನಿಭಾಯಿಸಲು ಕಲಿಯುತ್ತಾರೆ ಮತ್ತು ಸಹಜವಾಗಿ ಜೀವನ ನಡೆಸಲು ತೊಡಗುತ್ತಾರೆ.
ಫಾರ್ಮಾಕೋಥೆರಪಿ (Pharmacotherapy): ಈ ಥೆರಪಿಯಲ್ಲಿ ಔಷಧಗಳನ್ನು ಬಳಸಿ ಸಮಸ್ಯೆಗೆ ಚಿಕಿತ್ಸೆ ನೀಡಲಾಗುತ್ತದೆ.
ಸೈಕೋಥೆರಪಿ (Psychotherapy):
ಇದರಲ್ಲಿ ತಜ್ಞರು (ಮನೋವೈದ್ಯರು ಅಥವಾ ಮನಃಶಾಸ್ತ್ರಜ್ಞರು) ವೈಜ್ಞಾನಿಕವಾಗಿ ನಿರ್ಧಿಷ್ಟ ವಿಧಾನಗಳನ್ನು ಬಳಸಿಕೊಂಡು ಮಕ್ಕಳು ಆರೋಗ್ಯಕರ ಮತ್ತು ಪರಿಣಾಮಕಾರಿ ಹವ್ಯಾಸಗಳನ್ನು ಬೆಳೆಸಿಕೊಳ್ಳಲು ನೆರವಾಗುತ್ತಾರೆ. ಮಗುವಿನಲ್ಲಿ ಕಂಡುಬರುವ ನಕಾರಾತ್ಮಕ ನಡವಳಿಕೆಯನ್ನು ಗುರುತಿಸಿ ಅದನ್ನು ಒಳ್ಳೆಯ ನಡವಳಿಕೆಯಾಗಿ ಬದಲಾಗುವಂತೆ ಮಾಡಲು ತಜ್ಞರು ಕೆಲಸ ಮಾಡುತ್ತಾರೆ. ಈ ಬದಲಾದ ನಡವಳಿಕೆಯನ್ನು ಮುಂದುವರೆಸಲು ಪ್ರೋತ್ಸಾಹಿಸುತ್ತಾರೆ.
ಕಾಗ್ನಿಟಿವ್ ಬೇಹೇವಿಯರ್ ಥೆರಪಿ (Cognitive Behavior Therapy): ಈ ಥೆರಪಿಯಲ್ಲಿ ಶಿಕ್ಷ್ಶಕರು ಹಾಗೂ ಪೋಷಕರು ಮಕ್ಕಳ ನಡವಳಿಕೆಯನ್ನು ನಿಭಾಯಿಸಲು ಹಲವಾರು ವಿಧಾನಗಳನ್ನು ಒಳಗೊಂಡಿರುತ್ತದೆ. ಮಕ್ಕಳು ಉತ್ತಮ ವರ್ತನೆಗಳನ್ನು ತೋರಿದಾಗ ಪ್ರೋತ್ಸಾಹಿಸುವುದು, ಪ್ರತಿ ಚಟುವಟಿಕೆಗೂ ಸಮಯ ನಿಗದಿಗೊಳಿಸುವುದು ಮತ್ತು ನಿತ್ಯದ ಚಟುವಟಿಕೆಗಳಿಗೆ ವೇಳಾಪಟ್ಟಿಯನ್ನು ನಿರ್ದಿಷ್ಟಪಡಿಸುವುದನ್ನು ಈ ಚಿಕಿತ್ಸಾ ವಿಧಾನದಲ್ಲಿ ಸೂಚಿಸಲಾಗುತ್ತದೆ. ಇದರಿಂದಾಗಿ ಮಕ್ಕಳ ವರ್ತನೆಯಲ್ಲಿ ಸುಧಾರಣೆ ಕಾಣಬಹುದು.
ಕುಟುಂಬ ಚಿಕಿತ್ಸೆ ಅಥವಾ ಪಾಲಕರ ತರಬೇತಿ: ಎ.ಡಿ.ಎಚ್.ಡಿ ಬಾಧಿತ ಮಗುವಿನ ಆರೈಕೆ ಮಾಡುವಲ್ಲಿ ಪೋಷಕರು ಹಾಗೂ ಸಹೋದರ/ಸಹೋದರಿಯರು ತುಂಬಾ ಆತಂಕ ಹಾಗೂ ಒತ್ತಡಕ್ಕೆ ಒಳಗಾಗಬಹುದು. ಹೀಗಾಗಿ ಇಂತಹ ಮಕ್ಕಳನ್ನು ಹೇಗೆ ನೋಡಿಕೊಳ್ಳುವುದು, ಯಾವ ರೀತಿ ಅವರನ್ನು ಪಾಲಿಸುವುದು ಎಂಬ ವಿಷಯದ ಕುರಿತಾಗಿ ತರಬೇತಿ ನೀಡಲಾಗುತ್ತದೆ. ಸನ್ನಿವೇಶವನ್ನು ಎದುರಿಸಲು ಪರ್ಯಾಯ ವವಿಧಾನಗಳನ್ನು ಪೋಷಕರಿಗೆ ಸೂಚಿಸಲಾಗುತ್ತದೆ. ಕುಟುಂಬ ಚಿಕಿತ್ಸೆಯಿಂದ ಮಕ್ಕಳನ್ನು ನಿರ್ವಹಿಸುವ ಉತ್ತಮ ವಿಧಾನಗಳು ಪೋಷಕರಿಗೆ ಲಭ್ಯವಾಗುತ್ತವೆ.
ವಯಸ್ಕರಲ್ಲಿ ಎ.ಡಿ.ಎಚ್.ಡಿ
ತಜ್ಞರ ಪ್ರಕಾರ ಎ.ಡಿ.ಎಚ್.ಡಿ ಒಂದು ದೀರ್ಘಕಾಲೀನ ಸಮಸ್ಯೆ. ಎ.ಡಿ.ಎಚ್.ಡಿ ಕಾಣಿಸಿಕೊಂಡ ಮೂರರಲ್ಲಿ ಎರಡರಷ್ಟು ಮಕ್ಕಳಲ್ಲಿ ಇದು ಮುಂದುವರಿದು ವಯಸ್ಕರಾಗುವವರೆಗೂ ಉಳಿದುಕೊಳ್ಳುವ ಸಾಧ್ಯತೆಯಿದೆ.
ಇದು ಹಲವು ಸಮಸ್ಯೆಗಳನ್ನು ತಂದೊಡ್ಡುತ್ತದೆ. ಮನೆ ಮತ್ತು ಕಚೇರಿಯಲ್ಲಿ ಕರ್ತವ್ಯಗಳನ್ನು ಬೇಕಾಬಿಟ್ಟಿಯಾಗಿ ಮಾಡುವುದು, ಸಮಯಕ್ಕೆ ಸರಿಯಾಗಿ ಕೆಲಸವನ್ನು ಪೂರೈಸದಿರುವುದು, ಸೂಚನೆಗಳನ್ನು ಪಾಲಿಸುವಲ್ಲಿ ಸಹನೆ ಇಲ್ಲದಿರುವುದು ಹಾಗೂ ಕಿರಿಕಿರಿಯನ್ನು ಅನುಭವಿಸುವುದು, ನಿತ್ಯದ ಕೆಲಸಗಳ ಬಗ್ಗೆ ನಿರ್ಲಕ್ಷ್ಯ, ಬೇಸರ ಹಾಗೂ ಸಂಬಂಧಗಳಲ್ಲಿ ತೊಡಕು, ಮುಂತಾದ ಹಲವು ಸಮಸ್ಯೆಗಳು ಎದುರಾಗಬಹುದು.
ಸಾಮಾನ್ಯವಾಗಿ ವಯಸ್ಕರ ಕಾರ್ಯನಿರ್ವಹಣೆಯ ವಿಧಾನದ ಮೌಲ್ಯಮಾಪನವನ್ನು ಅಷ್ಟಾಗಿ ಮಾಡದೇ ಇರುವುದರಿಂದ ವಯಸ್ಕರಲ್ಲಿ ಕಂಡುಬರುವ ಎ.ಡಿ.ಎಚ್.ಡಿ.ಯನ್ನು ನಿರ್ಲಕ್ಷಿಸಲಾಗುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ