ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜೊತೆ ನರಕವಾಸಿಗಳ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಬಿಗ್ ಬಾಸ್ ಮನೆಯಲ್ಲಿ ಸಣ್ಣ ಸಣ್ಣ ವಿಚಾರಕ್ಕೂ ಜಗಳ ನಡೆಯುತ್ತಿದೆ. ಸ್ವರ್ಗವಾಸಿಗಳ ಜೊತೆ ನರಕವಾಸಿಗಳು ಜಗಳಕ್ಕೆ ನಿಂತಿದ್ದಾರೆ. ಕೀ ಇಟ್ಟುಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ದೊಡ್ಡ ಜಗಳ ಆಗುವ ಮುನ್ಸೂಚನೆ ಕಾಣಿಸಿದೆ. ಚೈತ್ರಾ ಕುಂದಾಪುರ, ಶಿಶಿರ್, ಮಾನಸಾ, ಮೋಕ್ಷಿತಾ ಪೈ, ಅನುಷಾ ರೈ, ಗೋಲ್ಡ್ ಸುರೇಶ್, ರಂಜಿತ್ ಅವರು ನರಕದಲ್ಲಿ ಇದ್ದಾರೆ.
ಮಾತಿಗೆ ನಿಂತರೆ ಚೈತ್ರಾ ಕುಂದಾಪುರ ಅವರು ಎಲ್ಲರಿಗೂ ತಿರುಗೇಟು ನೀಡುತ್ತಾರೆ. ನರಕದಲ್ಲಿ ಇರುವ ಅವರು ಹತ್ತಾರು ತಂತ್ರಗಾರಿಕೆ ಮಾಡುತ್ತಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 11’ ಮೊದಲ ವಾರದಲ್ಲಿ ಸಾಕಷ್ಟು ಕಿರಿಕ್ಗಳು ನಡೆದಿವೆ. ‘ನರಕದವರು ಕೀ ಕಿತ್ತುಕೊಂಡರೆ ನೀರು ಕೂಡ ಕೊಡಲ್ಲ. ಸ್ಟೋರ್ ರೂಮ್ನಿಂದ ಊಟವನ್ನೂ ಕೊಡಲ್ಲ’ ಎಂದು ಉಗ್ರಂ ಮಂಜು ಸವಾಲು ಹಾಕಿದ್ದಾರೆ. ಇದರಿಂದ ದೊಡ್ಡ ಜಗಳ ಆದರೂ ಅಚ್ಚರಿ ಏನಿಲ್ಲ. ಸ್ವರ್ಗದಲ್ಲಿ 10 ಜನ, ನರಕದಲ್ಲಿ 7 ಜನ ಇದ್ದಾರೆ. ‘ಕಲರ್ಸ್ ಕನ್ನಡ’ ವಾಹಿನಿ ಹಾಗೂ ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ಶೋ ವೀಕ್ಷಿಸಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos