Health Tips : ನೆಗಡಿ ಕಡಿಮೆಯಾಗಬೇಕಂದ್ರೆ ಈ ಆಹಾರವನ್ನು ಮಿಸ್ ಮಾಡ್ಲೆ ಬೇಡಿ
ಹವಾಮಾನ ಬದಲಾವಣೆಯಿಂದಾಗಿ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಕಾಡಲು ಶುರುವಾಗುತ್ತದೆ. ಅದರಲ್ಲಿಈ ಚಳಿಗಾಲ ಆರಂಭವಾಯಿತೆಂದರೆ ಕೇಳುವುದೇ ಬೇಡ, ಶೀತ, ನೆಗಡಿ ಕಾಮನ್ ಆಗಿರುತ್ತದೆ. ಹೀಗಾಗಿ ಈ ಋತುಮಾನದಲ್ಲಿ ದೇಹವನ್ನು ಬೆಚ್ಚಗಿರಿಸುವ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರವನ್ನು ಸೇವಿಸುವುದು ಅತ್ಯಗತ್ಯ. ನಿಮಗೇನಾದ್ರೂ ಚಳಿಗಾಲದಲ್ಲಿ ವಿಪರೀತ ಶೀತವಾಗುತ್ತಿದ್ರೆ ಯಾವೆಲ್ಲಾ ಆಹಾರಗಳನ್ನು ಸೇವಿಸಬೇಕು ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಇನ್ನೇನು ಕೆಲವೇ ಕೆಲವು ತಿಂಗಳಲ್ಲಿ ಚಳಿಗಾಲ ಆರಂಭವಾಗುತ್ತದೆ. ಈ ವೇಳೆ ಯಲ್ಲಿ ಹವಾಮಾನ ಬದಲಾವಣೆಯಿಂದಾಗಿ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಕಾಡಲು ಶುರುವಾಗುತ್ತದೆ. ಈ ವೇಳೆಯಲ್ಲಿ ಸೇವಿಸುವ ಆಹಾರದಿಂದ ಹಿಡಿದು ಪ್ರತಿಯೊಂದರ ಬಗ್ಗೆ ಹೆಚ್ಚು ಗಮನ ಕೊಡಬೇಕು. ಕೆಲವರಿಗಂತೂ ವಿಪರೀತ ಶೀತ, ನೆಗಡಿ ಕೆಮ್ಮಿನಂತಹ ಸಮಸ್ಯೆಯು ಈ ಸಮಯದಲ್ಲಿ ಸರ್ವೇ ಸಾಮಾನ್ಯ. ಈ ವೇಳೆಯಲ್ಲಿ ರೋಗ ನಿರೋಧಕ ಹೆಚ್ಚಿಸುವ ಈ ಆಹಾರಗಳ ಸೇವನೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
- ಶುಂಠಿ : ಶುಂಠಿಯು ಉರಿಯೂತ ಹಗ್ ಉತ್ಕರ್ಷಣ ರೋಗ ನಿರೋಧಕ ಗುಣಗಳನ್ನು ಹೊಂದಿದೆ. ಇದರ ನಿಯಮಿತ ಸೇವನೆಯಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಅಡುಗೆ ಮನೆಯಲ್ಲಿ ಲಭ್ಯವಿರುವ ಈ ಶುಂಠಿಯನ್ನು ಬಳಸಿ ಚಹಾ ಅಥವಾ ಕಷಾಯವನ್ನು ತಯಾರಿಸಿ ಕುಡಿಯಬಹುದು. ಇಲ್ಲದಿದ್ದರೆ ಶುಂಠಿಯನ್ನು ಜಗಿದು ತಿನ್ನುವುದರಿಂದಲು ಚಳಿಗಾಲದಲ್ಲಿ ಕಾಡುವ ಶೀತ ಹಾಗೂ ನೆಗಡಿಯಿಂದ ಮುಕ್ತಿ ಹೊಂದಬಹುದು.
- ಅರಿಶಿನ : ಅರಶಿನದಲ್ಲಿ ಕರ್ಕ್ಯುಮಿನ್ ಎಂಬ ಅಂಶವಿದ್ದು, ಇದರ ನಿಯಮಿತ ಸೇವನೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಚಳಿಗಾಲದಲ್ಲಿ ಅರಿಶಿನದ ಹಾಲನ್ನು ಕುಡಿಯುವುದು ತುಂಬಾ ಪ್ರಯೋಜನಕಾರಿಯಾಗಿದ್ದು ಇದು ದೇಹವನ್ನು ಬೆಚ್ಚಗೆ ಇಡಲು ಸಹಕಾರಿಯಾಗಿದೆ. ಇಲ್ಲದಿದ್ದರೆ ಆಹಾರ ಪದಾರ್ಥಗಳನ್ನು ತಯಾರಿಸುವಾಗ ನಿಯಮಿತವಾಗಿ ಅರಶಿನವನ್ನು ಬಳಸಿಕೊಳ್ಳಬಹುದು.
- ನಿಂಬೆ : ವಿಟಮಿನ್ ಸಿ ಯ ಹೇರಳವಾಗಿರುವ ಈ ನಿಂಬೆಯ ಸೇವನೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ ನಿಂಬೆ ನೀರನ್ನು ಕುಡಿಯುವುದರಿಂದ ದೇಹವನ್ನು ಹೈಡ್ರೇಟ್ ಮಾಡುವುದು ಮಾತ್ರವಲ್ಲದೆ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸಲಾಡ್ ಅಥವಾ ಬೆಚ್ಚಗಿನ ನೀರಿನಲ್ಲಿ ನಿಂಬೆ ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ಪ್ರಯೋಜನಕಾರಿಯಾಗಿದೆ.
- ಬಾದಾಮಿ : ಬಾದಾಮಿಯಲ್ಲಿ ವಿಟಮಿನ್ ಇ, ಫೈಬರ್ ಹಾಗೂ ಇತರ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಪ್ರತಿದಿನ ಒಂದು ಹಿಡಿ ಬಾದಾಮಿಯನ್ನು ತಿನ್ನುವುದರಿಂದ ರೋಗನಿರೋಧಕ ಶಕ್ತಿಯನ್ನು ಸುಧಾರಿಸುವುದಲ್ಲದೆ, ದೇಹದ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ.
- ಪಾಲಕ್ : ಪಾಲಕ್ ಸೊಪ್ಪು ವಿಟಮಿನ್ ಎ, ಸಿ ಮತ್ತು ಕೆ ಯ ಅತ್ಯುತ್ತಮ ಮೂಲವಾಗಿದೆ. ಇದು ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು, ಚಳಿಗಾಲದಲ್ಲಿ ಪಾಲಕ್ ಸೊಪ್ಪನ್ನು ಸೂಪ್, ಪರಾಟಾ ಅಥವಾ ಸಲಾಡ್‌ಗಳ ರೂಪದಲ್ಲಿ ಸೇವಿಸುವ ಮೂಲಕ ರೋಗನಿರೋಧಕ ಶಕ್ತಿಯನ್ನು ಬಲಪಡಿಸಿಕೊಳ್ಳಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:10 pm, Fri, 4 October 24