AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Work Life Balance : ವೈಯುಕ್ತಿಕ ಹಾಗೂ ವೃತ್ತಿ ಜೀವನವನ್ನು ನಿಭಾಯಿಸಲು ಒದ್ದಾಡ್ತಾ ಇದ್ದೀರಾ? ಇಲ್ಲಿದೆ ಸಿಂಪಲ್ ಟಿಪ್ಸ್

ಈಗಿನ ಕಾಲದಲ್ಲಿ ಯಾರಿಗೂ ಬಿಡುವು ಅನ್ನೋದೇ ಇಲ್ಲ. ಕೆಲಸದಲ್ಲೇ ಬ್ಯುಸಿಯಾಗಿರುವ ಅನೇಕರು ವೃತ್ತಿ ಹಾಗೂ ವೈಯುಕ್ತಿಕ ಜೀವನವನ್ನು ನಿಭಾಯಿಸಿಕೊಂಡು ಹೋಗುವಲ್ಲಿ ಸೋತಿರುತ್ತಾರೆ. ಅದಲ್ಲದೇ, ಹೆಚ್ಚಿನವರು ಒತ್ತಡದ ಜೀವನವನ್ನು ನಡೆಯುತ್ತಿರುತ್ತಾರೆ. ಹೀಗಾಗಿ ವೃತ್ತಿ ಜೀವನ ಹಾಗೂ ವೈಯುಕ್ತಿಕ ಜೀವನವನ್ನು ಬ್ಯಾಲೆನ್ಸ್ ಮಾಡುವುದು ಹಲವರಿಗೆ ತಿಳಿಯದ ವಿಷಯವೇ ಆಗಿದ್ದು, ಈ ಕೆಲವು ಸಲಹೆಗಳನ್ನು ಪಾಲಿಸಿದರೆ ಸ್ವಲ್ಪ ಆರಾಮದಾಯಕವಾಗಿರಬಹುದು.

Work Life Balance : ವೈಯುಕ್ತಿಕ ಹಾಗೂ ವೃತ್ತಿ ಜೀವನವನ್ನು ನಿಭಾಯಿಸಲು ಒದ್ದಾಡ್ತಾ ಇದ್ದೀರಾ? ಇಲ್ಲಿದೆ ಸಿಂಪಲ್ ಟಿಪ್ಸ್
ಸಾಂದರ್ಭಿಕ ಚಿತ್ರ
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on: Oct 04, 2024 | 12:41 PM

Share

ಕೆಲವರು ವೃತ್ತಿ ಹಾಗೂ ವೈಯಕ್ತಿಕ ಜೀವನವನ್ನು ನಿಭಾಯಿಸಲು ಹೆಣಗಾಡುವುದನ್ನು ನೋಡಿರಬಹುದು. ರಾತ್ರಿ ಮಲಗುವವರೆಗೂ ಆಫೀಸ್ ಕೆಲಸವಂತೂ ಮುಗಿಯುವುದೇ ಇಲ್ಲ. ಸಂಜೆ ಮನೆಗೆ ಹೋದರೂ ಕೂಡ ಆಫೀಸ್ ವರ್ಕ್ ನಲ್ಲೇ ಬ್ಯುಸಿಯಾಗುವವರು ಇದ್ದಾರೆ. ಹೀಗಾಗಿ ಕುಟುಂಬದೊಂದಿಗೆ ಸಮಯ ಕಳೆಯಲು ಟೈಮ್ ಅನ್ನೋದೇ ಇರಲ್ಲ. ತುಂಬಾ ಮಂದಿಗೆ ವರ್ಕ್ ಲೈಫ್ ಬ್ಯಾಲೆನ್ಸ್ ಮಾಡುವುದೇ ದೊಡ್ಡ ತಲೆ ನೋವಾಗಿರುತ್ತದೆ. ಈ ವೇಳೆಯಲ್ಲಿ ಹೆಚ್ಚು ತಲೆ ಕೆಡಿಸಿಕೊಳ್ಳದೇ ಈ ಕೆಲವು ಬದಲಾವಣೆಯನ್ನು ಮಾಡಿಕೊಂಡರೆ ಎಲ್ಲವನ್ನು ಸಲೀಸಾಗಿ ನಿಭಾಯಿಸಿಕೊಂಡು ಹೋಗಬಹುದು.

* ಗಡಿಗಳನ್ನು ಹೊಂದಿಸಿ : ಕೆಲಸ ಮತ್ತು ವೈಯಕ್ತಿಕ ಜೀವನದ ನಡುವೆ ಸ್ಪಷ್ಟವಾದ ಗಡಿಗಳನ್ನು ಹೊಂದಿಸಿ. ಕೆಲಸದ ಸಮಯ ಮುಗಿದ ಬಳಿಕ ಅಥವಾ ವಾರಾಂತ್ಯದಲ್ಲಿ ಇಮೇಲ್‌ಗಳನ್ನು ಪರಿಶೀಲಿಸುವುದು ಅಥವಾ ಆಫೀಸ್ ಕೆಲಸಗಳನ್ನು ಮಾಡುವುದು ಆದಷ್ಟು ತಪ್ಪಿಸಿ. ಈ ಸಮಯದಲ್ಲಿ ರಿಲ್ಯಾಕ್ಸ್ ಮಾಡುವುದನ್ನು ಕಲಿಯಿರಿ. ಈ ರೀತಿ ಗಡಿಯನ್ನು ಹೊಂದಿಸುವುದರಿಂದ ವೈಯುಕ್ತಿಕ ಹಾಗೂ ವೃತ್ತಿ ಜೀವನವನ್ನು ನಿಭಾಯಿಸುವುದು ಸುಲಭವಾಗುತ್ತದೆ.

* ಸಮಯ ನಿರ್ವಹಣೆಗೆ ಆದ್ಯತೆ ನೀಡಿ : ಆಫೀಸಿನ ಸಮಯವನ್ನು ಆಫೀಸಿನಲ್ಲಿ ಮತ್ತು ಮನೆಯ ಸಮಯವನ್ನು ಮನೆಯಲ್ಲಿ ಕಳೆಯುವುದು ಕೂಡ ಮುಖ್ಯ. ಲೇಟಾಗಿ ಆಫೀಸಿಗೆ ಹೊರಡುವುದು, ಮನೆಗೆ ಬೇಗ ಬರುವುದು ಈ ರೀತಿ ಮಾಡುವುದರಿಂದ ಕೆಲಸಗಳು ಬಾಕಿ ಉಳಿಯುತ್ತದೆ. ನಿಮ್ಮ ಕೆಲಸವು ಪೂರ್ಣಗೊಳ್ಳಬೇಕಾದರೆ ಟೈಮ್ ಟೇಬಲ್ ಮಾಡಿಟ್ಟುಕೊಳ್ಳಿ. ಎಲ್ಲಾ ಕೆಲಸಗಳಿಗೂ ಸಮಯವನ್ನು ಹೊಂದಿಸಿಕೊಳ್ಳಿ. ಹೀಗೆ ಮಾಡಿದ್ದಲ್ಲಿ ವೈಯಕ್ತಿಕ ಜೀವನಕ್ಕೂ ಹೆಚ್ಚು ಗಮನ ಕೊಡಲು ಸಾಧ್ಯ.

* ಕೆಲಸ ನಡುವೆ ಬ್ರೇಕ್ ತೆಗೆದುಕೊಳ್ಳಿ : ಆಫೀಸಿನಲ್ಲಿ ಕೆಲಸ ಮಾಡುತ್ತಿರುವ ವೇಳೆಯಲ್ಲಿ ಸ್ವಲ್ಪ ಬ್ರೇಕ್ ತೆಗೆದುಕೊಳ್ಳುವುದರಿಂದ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು. ಸಣ್ಣ ವಿರಾಮದ ಸಮಯದಲ್ಲಿ ವಾಕ್ ಮಾಡಿ, ಇಲ್ಲದಿದ್ದರೆ ಲ್ಯಾಪ್ ಟಾಪ್ ನಿಂದ ದೂರವಿರುವುದರಿಂದ ಸ್ವಲ್ಪ ರಿಲ್ಯಾಕ್ಸ್ ಅನುಭವವಾಗುತ್ತದೆ.

* ಇಲ್ಲ ಎಂದು ಹೇಳುವುದನ್ನು ಕಲಿಯಿರಿ : ಆಫೀಸಿನಲ್ಲಿ ಎಲ್ಲಾ ಕೆಲಸಗಳನ್ನು ವಹಿಸಿಕೊಳ್ಳಬೇಡಿ. ಇಲ್ಲ ಎಂದು ಹೇಳಲು ಕಲಿಯುವುದರಿಂದ ಕೂಡ ಕೆಲಸದ ಹೊರೆಯನ್ನು ತಪ್ಪಿಸಬಹುದು. ಹೆಚ್ಚು ಕೆಲಸಗಳು ತಲೆ ಮೇಲೆ ಬಿದ್ದಾಗ ಪೂರ್ಣಗೊಳಿಸಲು ವೈಯಕ್ತಿಕ ಸಮಯವನ್ನು ಮೀಸಲಿಡಬೇಕಾಗುತ್ತದೆ. ಹೆಚ್ಚುವರಿ ಕೆಲಸವನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳುವುದರಿಂದ ವರ್ಕ್ ಲೈಫ್ ನಲ್ಲಿ ಸಮತೋಲನವಾಗಿಟ್ಟುಕೊಳ್ಳಬಹುದು.

* ಸೋಶಿಯಲ್ ಮೀಡಿಯಾ ಬಳಕೆಯು ಮಿತವಾಗಿರಲಿ : ಕೆಲವರು ಆಫೀಸಿನಿಂದ ಮನೆಗೆ ಬಂದ ಕೂಡಲೇ ಸೋಶಿಯಲ್ ಮೀಡಿಯಾದಲ್ಲಿ ಬ್ಯುಸಿಯಾಗುತ್ತಾರೆ. ಇದು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅದಲ್ಲದೇ ವೈಯುಕ್ತಿಕ ಜೀವನಕ್ಕೆ ಮೀಸಲಿಡಬೇಕಾದ ಸಮಯವನ್ನು ಈ ಡಿಜಿಟಲ್ ಮಾಧ್ಯಮಗಳು ತಿಂದು ಬಿಡುತ್ತವೆ. ಹೀಗಾಗಿ ಡಿಜಿಟಲ್ ಡಿಟಾಕ್ಸ್ ನಂತಹ ಅಭ್ಯಾಸವನ್ನು ರೂಢಿಸಿಕೊಳ್ಳುವುದು ಬಹಳ ಮುಖ್ಯ.

ಇದನ್ನೂ ಓದಿ: ಇದೊಂದು ಟಿಪ್ಸ್‌ ಗೊತ್ತಿದ್ರೆ, ಮಕ್ಕಳ ಕೋಪವನ್ನು ನಿಭಾಯಿಸುವುದು ಸುಲಭ

* ಕೆಲಸವನ್ನು ನಿಯೋಜಿಸಿಕೊಳ್ಳಿ : ಕೆಲಸದಲ್ಲಿರಲಿ ಅಥವಾ ಮನೆಯಲ್ಲಿರಲಿ, ಬಾಕಿಯಿರುವ ಕೆಲಸವನ್ನು ನಿಯೋಜಿಸಲು ಹಿಂಜರಿಯಬೇಡಿ. ಯಾವ ಸಮಯಕ್ಕೆ ಕೆಲಸವು ಪೂರ್ಣಗೊಳಿಸಬೇಕೆನ್ನುವ ನಿಯೋಜನೆಯು ನಿಮ್ಮ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

* ಸ್ವಯಂ ಕಾಳಜಿ ಇರಲಿ : ಎಷ್ಟೇ ಕೆಲಸದ ಒತ್ತಡವಿದ್ದರೂ ಸ್ವಯಂ ಕಾಳಜಿ ವಹಿಸುವುದು ಅಷ್ಟೇ ಮುಖ್ಯ. ವ್ಯಾಯಾಮ, ಧ್ಯಾನ ಅಥವಾ ಹವ್ಯಾಸಗಳಲ್ಲಿ ಬ್ಯುಸಿಯಾಗುವ ಮೂಲಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು. ಇದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಸುಧಾರಿಸುತ್ತದೆ. ಸ್ವಯಂ-ಆರೈಕೆಗೆ ಆದ್ಯತೆ ನೀಡುವುದರಿಂದ ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚು ಕೆಲಸ ಮಾಡಲು ಸಾಧ್ಯವಾಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ