ಟೀಮ್ ಇಂಡಿಯಾ ಪರ ಕಣಕ್ಕಿಳಿದರೆ ಅನ್​ಕ್ಯಾಪ್ಡ್ ಪಟ್ಟಿಯಿಂದ ಮೂವರು ಹೊರಕ್ಕೆ..!

IPL 2025: ಐಪಿಎಲ್ ನಿಯಮದ ಪ್ರಕಾರ ಅನ್​ಕ್ಯಾಪ್ಡ್ ಪಟ್ಟಿಯಿಂದ ರಿಟೈನ್ ಆಗುವ ಆಟಗಾರರಿಗೆ 4 ಕೋಟಿ ರೂ. ನೀಡಿದರೆ ಸಾಕು. ಆದರೀಗ ಐಪಿಎಲ್​ನ ಮೂವರು ಅನ್​ಕ್ಯಾಪ್ಡ್ ಆಟಗಾರರು ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಆಟಗಾರರು ಬಾಂಗ್ಲಾದೇಶ್ ವಿರುದ್ಧದ ಸರಣಿಯಲ್ಲಿ ಕಣಕ್ಕಿಳಿಯದರೆ ಅನ್​ಕ್ಯಾಪ್ಡ್ ಪಟ್ಟಿಯಿಂದ ಹೊರಬೀಳಲಿದ್ದಾರೆ.

ಝಾಹಿರ್ ಯೂಸುಫ್
|

Updated on: Oct 05, 2024 | 11:58 AM

ಭಾರತ ಮತ್ತು ಬಾಂಗ್ಲಾದೇಶ್ ನಡುವಣ ಮೂರು ಪಂದ್ಯಗಳ ಟಿ20 ಸರಣಿ ಭಾನುವಾರದಿಂದ (ಅಕ್ಟೋಬರ್ 6) ಶುರುವಾಗಲಿದೆ. ಈ ಸರಣಿಗಾಗಿ ಆಯ್ಕೆ ಮಾಡಲಾಗಿರುವ ಟೀಮ್ ಇಂಡಿಯಾದಲ್ಲಿ ಮೂವರು ಹೊಸಮುಖಗಳು ಕಾಣಿಸಿಕೊಂಡಿದ್ದಾರೆ. ಅವರೆಂದರೆ ಮಯಾಂಕ್ ಯಾದವ್, ನಿತೀಶ್ ಕುಮಾರ್ ರೆಡ್ಡಿ ಹಾಗೂ ಹರ್ಷಿತ್ ರಾಣ.

1 / 7
ಈ ಮೂವರು ಆಟಗಾರರು ಬಾಂಗ್ಲಾದೇಶ್ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾ ಪರ ಪಾದಾರ್ಪಣೆ ಮಾಡಿದರೆ ಐಪಿಎಲ್​ನ​ ಅನ್​ಕ್ಯಾಪ್ಡ್​ ಪಟ್ಟಿಯಿಂದ ಹೊರಬೀಳಲಿದ್ದಾರೆ. ಹೀಗಾಗಿಯೇ ಇದೀಗ ಬಾಂಗ್ಲಾದೇಶ್ ವಿರುದ್ಧದ ಸರಣಿಯ ಮೂಲಕ ಯಾವ ಆಟಗಾರ ಅನ್​ಕ್ಯಾಪ್ಡ್ ಪಟ್ಟ ಕಳಚಲಿದ್ದಾರೆ ಎಂಬುದೇ ಕುತೂಹಲ.

2 / 7
ಏಕೆಂದರೆ ಐಪಿಎಲ್ ನಿಯಮದ ಪ್ರಕಾರ ಭಾರತದ ಪರ ಆಡದ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್​ ಆಡಿ 5 ವರ್ಷ ಕಳೆದಿರುವ ಆಟಗಾರರನ್ನು ಅನ್​ಕ್ಯಾಪ್ಡ್​ ಪ್ಲೇಯರ್ಸ್ ಎಂದು ಪರಿಗಣಿಸಲಾಗುತ್ತದೆ. ಅಲ್ಲದೆ ಈ ಆಟಗಾರರನ್ನು ಮೆಗಾ ಹರಾಜಿಗೂ ಮುನ್ನ 5+1 ಅಥವಾ 4+2 ಸೂತ್ರದಡಿಯಲ್ಲಿ ರಿಟೈನ್ ಮಾಡಿಕೊಳ್ಳಬಹುದು.

3 / 7
ಅಂದರೆ ಮೆಗಾ ಹರಾಜಿಗೂ ಮುನ್ನ ಫ್ರಾಂಚೈಸಿಯೊಂದು 6 ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ಬಯಸಿದರೆ, ಅದರಲ್ಲಿ ಒಬ್ಬರು ಅನ್​ಕ್ಯಾಪ್ಡ್ ಆಟಗಾರ ಇರಲೇಬೇಕು. ಇನ್ನು ಗರಿಷ್ಠ ಇಬ್ಬರು ಅನ್​ಕ್ಯಾಪ್ಡ್ ಆಟಗಾರರನ್ನು ಮೆಗಾ ಹರಾಜಿಗೂ ಮುನ್ನ ಉಳಿಸಿಕೊಳ್ಳಬಹುದು ಎಂದು ತಿಳಿಸಲಾಗಿದೆ. ಹೀಗೆ ಅನ್​ಕ್ಯಾಪ್ಡ್​ ಪಟ್ಟಿಯಲ್ಲಿ ಉಳಿಸಿಕೊಂಡ ಆಟಗಾರರಿಗೆ ಕೇವಲ 4 ಕೋಟಿ ರೂ. ನೀಡಿದರೆ ಸಾಕು.

4 / 7
ಇದೀಗ ಲಕ್ನೋ ಸೂಪರ್ ಜೈಂಟ್ಸ್​ ತಂಡದ ಪ್ರಮುಖ ವೇಗಿಯಾಗಿರುವ ಮಯಾಂಕ್ ಯಾದವ್ ಅವರು ಟೀಮ್ ಇಂಡಿಯಾ ಪರ ಕಣಕ್ಕಿಳಿದರೆ, ಅವರನ್ನು ಉಳಿಸಿಕೊಳ್ಳಬೇಕಿದ್ದರೆ ಎಲ್​ಎಸ್​ಜಿ ಫ್ರಾಂಚೈಸಿಯು ಕನಿಷ್ಠ 11 ಕೋಟಿ ರೂ. ಪಾವತಿಸಬೇಕಾಗುತ್ತದೆ.

5 / 7
ಹಾಗೆಯೇ ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ನಿತೀಶ್ ಕುಮಾರ್ ರೆಡ್ಡಿಯನ್ನು ಅನ್​ಕ್ಯಾಪ್ಡ್ ಪಟ್ಟಿಯಲ್ಲಿ ಆಯ್ಕೆ ಮಾಡಿದರೆ 4 ಕೋಟಿ ರೂ. ನೀಡಿದರೆ ಸಾಕಿತ್ತು. ಅದುವೇ ಅವರು ಬಾಂಗ್ಲಾದೇಶ್ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾ ಪರ ಕಣಕ್ಕಿಳಿದರೆ ಅವರ ಕನಿಷ್ಠ ರಿಟೈನ್ ಮೊತ್ತ 11 ಕೋಟಿ ರೂ. ಆಗಲಿದೆ.

6 / 7
ಇದೇ ನಿಯಮ ಕೆಕೆಆರ್ ವೇಗಿ ಹರ್ಷಿತ್ ರಾಣಗೂ ಅನ್ವಯಿಸುತ್ತದೆ. ಕೊಲ್ಕತ್ತಾ ನೈಟ್ ರೈಡರ್ಸ್ ಪರ ಕಳೆದ ಸೀಸನ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ರಾಣ ಅವರು ಬಾಂಗ್ಲಾದೇಶ್ ವಿರುದ್ದದ ಸರಣಿಯಲ್ಲಿ ಕಣಕ್ಕಿಳಿದರೆ, ಅವರ ಕನಿಷ್ಠ ರಿಟೈನ್ ಮೊತ್ತ 11 ಕೋಟಿ ರೂ. ಆಗಲಿದೆ. ಹೀಗಾಗಿಯೇ ಮೂರು ಪಂದ್ಯಗಳ ಸರಣಿಯಲ್ಲಿ ಈ ಮೂವರು ಆಟಗಾರರಲ್ಲಿ ಯಾರು ಅನ್​ಕ್ಯಾಪ್ಡ್ ಪಟ್ಟ ಕಳಚಿ ಹತ್ತು ಕೋಟಿಗೂ ಅಧಿಕ ಮೊತ್ತ ಗಳಿಸಲಿದ್ದಾರೆ ಕಾದು ನೋಡಬೇಕಿದೆ.

7 / 7
Follow us
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ

ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ

ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!

ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ

ಬಾತ್​ ರೂಮ್​ನಲ್ಲೂ ನಡೆಯುತ್ತಿದೆ ಬಿಗ್ ಬಾಸ್​ ಆಟ; ಅನುಮಾನದ ಕಣ್ಣು

ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ

ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು

ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ

‘ದರ್ಶನ್​ಗೆ ಬೇಲ್ ಕೊಡಬಾರದು, ಸುಪ್ರೀಂ ಕೋರ್ಟ್​ಗೆ ಹಾಕ್ತೀವಿ’: ಪರಮೇಶ್ವರ್

ವಕ್ಫ್ ಹೋರಾಟ ಪ್ರಧಾನಿ ಮೋದಿ ಆರಂಭಿಸಿದ ಕೇಂದ್ರದ ಯೋಜನೆ: ವಿಜಯೇಂದ್ರ