IPL 2025: ಐಪಿಎಲ್ ಫ್ರಾಂಚೈಸಿಗಳ ಚಿಂತೆ ಹೆಚ್ಚಿಸಿದ ಹೊಸ ರೂಲ್ಸ್

IPL 2025 Mega Auction: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2025) ಮೆಗಾ ಹರಾಜಿಗಾಗಿ ಪ್ರಕಟಿಸಲಾದ ರೈಟ್ ಟು ಮ್ಯಾಚ್ ರೂಲ್ಸ್​ನಲ್ಲಿನ ಲೋಪದೋಷಗಳ ಬಗ್ಗೆ ಐಪಿಎಲ್ ಫ್ರಾಂಚೈಸಿಗಳು ಕಳವಳ ವ್ಯಕ್ತಪಡಿಸಿದೆ. ಅಲ್ಲದೆ ಈ ನಿಯಮವನ್ನು ಮರುಪರಿಶೀಲಿಸುವಂತೆ ಬಿಸಿಸಿಐಗೆ ಮನವಿ ಮಾಡಿದೆ.

ಝಾಹಿರ್ ಯೂಸುಫ್
|

Updated on: Oct 05, 2024 | 4:09 PM

ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್-18ರ ಮೆಗಾ ಹರಾಜಿಗಾಗಿ ಸಿದ್ಧತೆಗಳು ಶುರುವಾಗಿದೆ. ಇದರ ಮೊದಲ ಹೆಜ್ಜೆಯಾಗಿ ಇದೀಗ ಆಟಗಾರರ ರಿಟೈನ್ ನಿಯಮವನ್ನು ಪ್ರಕಟಿಸಲಾಗಿದೆ. ಈ ನಿಯಮದಂತೆ ಮೆಗಾ ಹರಾಜಿಗೂ ಮುನ್ನ ಗರಿಷ್ಠ 6 ಆಟಗಾರರನ್ನು ತಂಡದಲ್ಲೇ ಉಳಿಸಿಕೊಳ್ಳಬಹುದು.

1 / 9
ಹಾಗೆಯೇ ಉಳಿಸಿಕೊಳ್ಳಲು ಬಯಸದಿದ್ದರೂ ರೈಟ್ ಟು ಮ್ಯಾಚ್ ಕಾರ್ಡ್ ಮೂಲಕ ಗರಿಷ್ಠ 6 ಆಟಗಾರರನ್ನು ಹರಾಜಿಗೆ ಬಿಡುಗಡೆ ಮಾಡಲು ಸಹ ಅವಕಾಶ ನೀಡಲಾಗಿದೆ. ಅಂದರೆ ಇಲ್ಲಿ ಆರ್​ಟಿಎಂ ಕಾರ್ಡ್​ ಬಳಸಿದ ಆಟಗಾರರು ಹರಾಜಿನಲ್ಲಿ ಕಾಣಿಸಿಕೊಂಡರೂ ಅವರ ಮೇಲಿನ ಹಕ್ಕು ಹಳೆಯ ಫ್ರಾಂಚೈಸಿಯ ಕೈಯಲ್ಲೇ ಇರಲಿದೆ.

2 / 9
ಉದಾಹರಣೆಗೆ: RCB ತಂಡವು ಮೊಹಮ್ಮದ್ ಸಿರಾಜ್ ಅವರನ್ನು ಹರಾಜಿಗಾಗಿ ರಿಲೀಸ್ ಮಾಡಿದೆ ಎಂದಿಟ್ಟುಕೊಳ್ಳಿ. ಆದರೆ ಬಿಡುಗಡೆಗೂ ಮುನ್ನ ಆರ್​ಟಿಎಂ ಆಯ್ಕೆ ಬಳಸಿ ಮೆಗಾ ಹರಾಜಿಗಾಗಿ ರಿಲೀಸ್ ಮಾಡಿದರೆ, ಸಿರಾಜ್ ಮೇಲಿನ ಹಕ್ಕು ಆರ್​ಸಿಬಿ ಬಳಿಯೇ ಇರುತ್ತದೆ.

3 / 9
ಅದರಂತೆ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡ ಮೊಹಮ್ಮದ್ ಸಿರಾಜ್ (ಆರ್​ಟಿಎಂ) ಅವರ ಖರೀದಿಗೆ ಚೆನ್ನೈ ಸೂಪರ್ ಕಿಂಗ್ಸ್​ ಫ್ರಾಂಚೈಸಿಯು 10 ಕೋಟಿ ರೂ.ವರೆಗೆ ಬಿಡ್ ಮಾಡಿತು ಎಂದಿಟ್ಟುಕೊಳ್ಳಿ. ಈ ವೇಳೆ ಆ ಮೊತ್ತವನ್ನು ತಾವೇ ನೀಡುತ್ತೇವೆ ಎಂದು ಸಿರಾಜ್ ಅವರನ್ನು ಆರ್​ಸಿಬಿ ಮರಳಿ ಖರೀದಿಸಬಹುದು.

4 / 9
ಒಂದು ವೇಳೆ ಬಿಡುಗಡೆ ಮಾಡಿದ ತಂಡವು ಮರಳಿ ಖರೀದಿಸಲು ಇಚ್ಛಿಸದಿದ್ದರೆ ಮಾತ್ರ ಆರ್​ಟಿಎಂ ಆಯ್ಕೆಯಲ್ಲಿ ಕಾಣಿಸಿಕೊಂಡ ಆಟಗಾರರು ಕೊನೆಯದಾಗಿ ಬಿಡ್ ಮಾಡಿದ ತಂಡದ ಪಾಲಾಗಲಿದ್ದಾರೆ. ಆದರೆ ಈ ಆಯ್ಕೆಯೊಂದಿಗೆ ಬಿಸಿಸಿಐ ಪರಿಚಯಿಸಿದ ಹೊಸ ರೂಲ್ಸ್ ಈಗ ಫ್ರಾಂಚೈಸಿಗಳ ಚಿಂತೆಗೆ ಕಾರಣವಾಗಿದೆ.

5 / 9
ಅಂದರೆ ಇಲ್ಲಿ ಆರ್​ಟಿಎಂ ಆಯ್ಕೆಯಲ್ಲಿ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡ ಆಟಗಾರನ ಖರೀದಿಗೆ ಫ್ರಾಂಚೈಸಿಯೊಂದು ಕೊನೆಯದಾಗಿ 10 ಕೋಟಿ ರೂ. ಬಿಡ್ಡಿಂಗ್ ಮಾಡಿದ್ರೆ, ಆರ್​ಟಿಎಂ ಬಳಸಿದ ಫ್ರಾಂಚೈಸಿಗೆ ನೀವು ಈ ಆಟಗಾರನನ್ನು ಉಳಿಸಿಕೊಳ್ಳಲು ಬಯಸುತ್ತೀರಾ ಎಂದು ಕೇಳಲಾಗುತ್ತದೆ. ಈ ವೇಳೆ ಎಸ್​ ಎಂದರೆ... ಕೊನೆದಾಗಿ ಬಿಡ್ ಮಾಡಿದ ಫ್ರಾಂಚೈಸಿಗೆ ಮತ್ತೊಂದು ಬಿಡ್ಡಿಂಗ್​ಗೆ ಅವಕಾಶ ನೀಡಲಾಗುತ್ತದೆ. ಈ ನಿಯಮದ ಬಗ್ಗೆ ಇದೀಗ ಫ್ರಾಂಚೈಸಿಗಳು ಅಸಮಾಧಾನ ಹೊರಹಾಕಿದ್ದಾರೆ.

6 / 9
ಉದಾಹರಣೆಗೆ: ಆರ್​ಸಿಬಿ ತಂಡವು ರಜತ್ ಪಾಟಿದಾರ್​ ಅವರನ್ನು ಆರ್​ಟಿಎಂ ಆಯ್ಕೆಯಲ್ಲಿ ಬಿಡುಗಡೆ ಮಾಡಿದೆ ಎಂದಿಟ್ಟುಕೊಳ್ಳಿ. ಹರಾಜಿನಲ್ಲಿ ಸಿಎಸ್​ಕೆ ಫ್ರಾಂಚೈಸಿಯು ಪಾಟಿದಾರ್ ಅವರಿಗಾಗಿ 10 ಕೋಟಿ ರೂ. ಬಿಡ್ಡಿಂಗ್ ಮಾಡಿರುತ್ತದೆ. ಈ ವೇಳೆ ಆರ್​ಸಿಬಿಗೆ ನೀವು 10 ಕೋಟಿ ರೂ.ಗೆ ಪಾಟಿದಾರ್ ಅವರನ್ನು ಮರಳಿ ಖರೀದಿಸಲು ಬಯಸುತ್ತೀರಾ ಎಂದು ಕೇಳಲಾಗುತ್ತದೆ. ಈ ವೇಳೆ ಹೌದು ಎಂದರೆ, ಸಿಎಸ್​ಕೆಗೆ ಮತ್ತೊಂದು ಬಿಡ್​ಗೆ ಅವಕಾಶ ನೀಡಲಾಗುತ್ತದೆ.

7 / 9
ಹೀಗೆ ಸಿಗುವ ಅವಕಾಶದಲ್ಲಿ ಎದುರಾಳಿ ಫ್ರಾಂಚೈಸಿ ತನ್ನ ಮೊತ್ತವನ್ನು ಡಬಲ್ ಮಾಡಬಹುದು. ಉದಾಹರಣೆಗೆ, ಪಾಟಿದಾರ್​ಗೆ 10 ಕೋಟಿ ರೂ.ವರೆಗೆ ಬಿಡ್ ಮಾಡಿದ್ದ ಸಿಎಸ್​ಕೆ ಫ್ರಾಂಚೈಸಿ ತನಗೆ ಆ ಆಟಗಾರ ಸಿಗಲ್ಲ ಎಂದು ಗೊತ್ತಾದ ಮೇಲೆ ಕೊನೆಯ ಬಿಡ್ ಅನ್ನು ಏಕಾಏಕಿ 15 ಕೋಟಿ ರೂ.ಗೆ ಹೆಚ್ಚಿಸಬಹುದು. ಇದರಿಂದ ಆರ್​ಟಿಎಂ ಬಳಸಿದ ಫ್ರಾಂಚೈಸಿ 15 ಕೋಟಿ ರೂ. ನೀಡಬೇಕಾಗುತ್ತದೆ. ಹೀಗಾಗಿ ಈ ನಿಯಮವನ್ನು ಫ್ರಾಂಚೈಸಿಗಳು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

8 / 9
ಇದೇ ಕಾರಣದಿಂದ ಇದೀಗ ಕೊಲ್ಕತ್ತಾ ನೈಟ್ ರೈಡರ್ಸ್ ಸೇರಿದಂತೆ ಕೆಲ ಫ್ರಾಂಚೈಸಿಗಳು ರೈಟ್ ಟು ಮ್ಯಾಚ್ (ಆರ್‌ಟಿಎಂ) ಹೊಸ ನಿಯಮದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ನಿಯಮವನ್ನು ಬದಲಿಸುವಂತೆ ಬಿಸಿಸಿಐಗೆ ಪತ್ರದ ಮೂಲಕ ಮನವಿ ಮಾಡಿದೆ ಎಂದು ವರದಿಯಾಗಿದೆ.

9 / 9
Follow us
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ