ಜನ ಇಮ್ರಾನ್​ರನ್ನು ಕ್ಷಮಿಸುವುದಿಲ್ಲ, ಕೊರಳಪಟ್ಟಿ ಹಿಡಿದು ಪಾಪಗಳ ಲೆಕ್ಕ ಕೇಳಲಿದ್ದಾರೆ: ಶೆಹಬಾಜ್ ಷರೀಫ್, ಪಾಕ್ ಪ್ರಧಾನಿ

ಪಾಕಿಸ್ತಾನದ ಆಂತರಿಕ ವ್ಯವಹಾರಗಳ ಸಚಿವ ರಾಣಾ ಸನಾವುಲ್ಲಾ ಕೂಡ ಪಿಟಿಐನ ಬೃಹತ್ ಱಲಿಯ ಬಗ್ಗೆ ಮಾತಾಡಿ, ‘ಱಲಿಯನ್ನು ಇಸ್ಲಾಮಾಬಾದ್ ಪ್ರವೇಶಿಸಲು ಬಿಡಬೇಕೇ ಇಲ್ಲವೇ ಅಂತ ಸರ್ಕಾರ ತನ್ನ ಮಿತ್ರಪಕ್ಷಗಳೊಡನೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದು,’ ಎಂದರು.

ಜನ ಇಮ್ರಾನ್​ರನ್ನು ಕ್ಷಮಿಸುವುದಿಲ್ಲ, ಕೊರಳಪಟ್ಟಿ ಹಿಡಿದು ಪಾಪಗಳ ಲೆಕ್ಕ ಕೇಳಲಿದ್ದಾರೆ: ಶೆಹಬಾಜ್ ಷರೀಫ್, ಪಾಕ್ ಪ್ರಧಾನಿ
ಶೆಹಬಾಜ್ ಷರೀಫ್ ಮತ್ತು ಇಮ್ರಾನ್ ಖಾನ್
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:May 24, 2022 | 1:12 AM

ಲಾಹೋರ: ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ (Imran Khan) ಅವರ ಸರ್ಕಾರವನ್ನು ಪದಚ್ಯುತಗೊಳಿಸಿ ಶೆಹಬಾಜ್ ಷರೀಫ್ (Shehbaz Sharif) ನೇತೃತ್ವದ ಹೊಸ ಸರ್ಕಾರ ಅಧಿಕಾರಕ್ಕೆ ಬಂದರೂ ಇಮ್ರಾನ್ ಸುದ್ದಿಯಲ್ಲಿರುತ್ತಾರೆ. ರವಿವಾರದಂದು ಲಾಹೋರ್​ ನಲ್ಲಿ ಮಾತಾಡಿರುವ ಪ್ರಧಾನಿ ಷರೀಫ್​ ಅವರು, ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಪಕ್ಷದ (ಪಿಟಿಐ) (PTI) ಮುಖ್ಯಸ್ಥರಾಗಿರುವ ಇಮ್ರಾನ್ ಖಾನ್ ದೇಶದಲ್ಲಿ ನಾಗರಿಕ ಯುದ್ಧ ಆಗುವುದನ್ನು ನೋಡಲು ಕಾತುರರಾಗಿದ್ದಾರೆ, ಆದರೆ ದೇಶ ಅವರ ಕೊರಳಪಟ್ಟಿ ಹಿಡಿದು ಎಸಗಿದ ಪಾಪಗಳ ಲೆಕ್ಕ ಕೇಳಲಿದೆ ಎಂದಿದ್ದಾರೆ. ‘ಇಮ್ರಾನ್ ನಿಯಾಜಿ ದೇಶದಲ್ಲಿ ನಾಗರಿಕ ಯುದ್ಧ ಆರಂಭಿಸಬೇಕೆಂಬ ಇಚ್ಛೆ ಉಳ್ಳವರಾಗಿದ್ದಾರೆ. ಆದರೆ ಅವರಲ್ಲಿ ತಪ್ಪು ಗ್ರಹಿಕೆ ಉಂಟಾಗಿದೆ. ಅವರು ಎಸಗಿದ ಪಾಪಗಳನ್ನು ದೇಶ ಕ್ಷಮಿಸಲಾರದು ಮತ್ತು ಅವರ ಕೊರಳಪಟ್ಟಿ ಹಿಡಿದು ಲೆಕ್ಕ ಕೇಳಲಿದೆ,’ ಅಂತ ಷರೀಫ್ ಹೇಳಿರುವರೆಂದು ಡಾನ್ ಪತ್ರಿಕೆ ವರದಿ ಮಾಡಿದೆ. ಇಮ್ರಾನ್ ಅವರ ಪಿಟಿಐ ಪಕ್ಷ ಮೇ 25 ರಂದು ಇಸ್ಲಾಮಾಬಾದ್ ನಲ್ಲಿ ನಡೆಸಲಿರುವ ಬೃಹತ್ ಱಲಿಯ ಬಗ್ಗೆ ಕೇಳಿದಾಗ ಷರೀಫ್​ ಹಾಗೆ ಹೇಳಿದರು.

ಲಾಹೋರನಲ್ಲಿರುವ ಪಾಕಿಸ್ತಾನ ಕಿಡ್ನಿ ಮತ್ತು ಲಿವರ್ ಇನ್​ಸ್ಟಿಟ್ಯೂಟ್​​ ನಲ್ಲಿ ಮಾಧ್ಯಮವನ್ನುದ್ದೇಶಿಸಿ ಪ್ರಧಾನಿ ಷರೀಫ್ ಮಾತಾಡಿದರು. ​​ಪಿಟಿಐನ ಱಲಿಯನ್ನು ತಡೆಯಲು ಸರ್ಕಾರ ಯಾವ ಯೋಜನೆ ಮಾಡಿಕೊಂಡಿದೆ ಎಂದು ಪತ್ರಕರ್ತರು ಕೇಳಿದಾಗ ನಿರ್ಧಾರ ತೆಗೆದುಕೊಳ್ಳಬೇಕಾದ ಪ್ರಸಂಗ ಎದುರಾದರೆ ತಿಳಿಸಲಾಗುವುದು ಎಂದರು.

ಪಾಕಿಸ್ತಾನದ ಆಂತರಿಕ ವ್ಯವಹಾರಗಳ ಸಚಿವ ರಾಣಾ ಸನಾವುಲ್ಲಾ ಕೂಡ ಪಿಟಿಐನ ಬೃಹತ್ ಱಲಿಯ ಬಗ್ಗೆ ಮಾತಾಡಿ, ‘ಱಲಿಯನ್ನು ಇಸ್ಲಾಮಾಬಾದ್ ಪ್ರವೇಶಿಸಲು ಬಿಡಬೇಕೇ ಇಲ್ಲವೇ ಅಂತ ಸರ್ಕಾರ ತನ್ನ ಮಿತ್ರಪಕ್ಷಗಳೊಡನೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದು,’ ಎಂದರು.

‘ಸಮ್ಮಿಶ್ರ ಸರ್ಕಾರ ಕಾರ್ಯರೂಪಕ್ಕಿಳಿದರೆ, ಪ್ರತಿಭಟನೆಕಾರರನ್ನು ತಮ್ಮ ತಮ್ಮ ಮನೆಗಳಿಂದ ಹೊರಗೆ ಬರುವ ಅವಕಾಶವನ್ನೂ ನಾವು ನೀಡುವುದಿಲ್ಲ,’ ಎಂದು ಸನಾವುಲ್ಲಾ ಹೇಳಿದರು.

ಶಾಂತಿಯುತವಾಗಿ ಪ್ರತಿಭಟನೆ ನಡೆಸುವ ಭರವಸೆ ನೀಡಿರುವುದನ್ನು ಅವರ ಗಮನಕ್ಕೆ ತಂದಾಗ ಸನಾವುಲ್ಲಾ, ‘ಪಿಟಿಐ ಮತ್ತು ಅದರ ಕಾರ್ಯಕರ್ತರ ಹಿಂದಿನ ದಾಖಲೆಗಳನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ, ಕಾನೂನು ಸುವ್ಯವಸ್ಥೆ ಹಾಳು ಮಾಡಿ ದೊಂಬಿ ಸೃಷ್ಟಿಸುವ ಉದ್ದೇಶದಿಂದಲೇ ಅವರು ಇಸ್ಲಾಮಾಬಾದ್ ಗೆ ಬರುತ್ತಿದ್ದಾರೆ. ಸುಳ್ಳು ಹೇಳುವುದು ಮತ್ತು ಉಲ್ಟಾ ಹೊಡೆಯುವುದನ್ನು ಕರಗತ ಮಾಡಿಕೊಂಡಿರುವ ಇಮ್ರಾನ್ ಖಾನ್ ಅವರ ಮಾತಗಳನ್ನು ನಾನು ನಂಬುವುದಿಲ್ಲ,’ ಎಂದು ಸನಾವುಲ್ಲಾ ಹೇಳಿದರೆಂದು ಡಾನ್ ವರದಿ ಮಾಡಿದೆ.

‘ಮೂರು ದಿನ ಸರಳುಗಳ ಹಿಂದೆ ಕಳುಹಿಸಿದರೆ ಇಮ್ರಾನ್​ ಅವರಲ್ಲಿರುವ ರಾಜಕಾರಣಿ ನಶಿಸಿ ಹೋಗುತ್ತಾನೆ,’ ಎಂದು ಅವರು ಹೇಳಿದ್ದಾರೆ.

ಮೂರೂವರೆ ವರ್ಷಗಳ ಅವಧಿಯಲ್ಲಿ ತಮ್ಮ ವಿರೋಧಿಗಳಿಗೆ ಕಾಟ ಕೊಡುವುದನ್ನು ಮಾತ್ರ ಇಮ್ರಾನ್ ಮಾಡಿದ್ದಾರೆಯೇ ಹೊರತು ಜನರ ಅಭ್ಯುದಯ ಯೋಜನೆಗಳ ಬಗ್ಗೆ ಯೋಚಿಸಲೂ ಇಲ್ಲ ಎಂದು ಸನಾವುಲ್ಲಾ ಹೇಳಿದ್ದಾರೆ.

‘ಮಾಜಿ ಪ್ರಧಾನ ಮಂತ್ರಿಗಳು ಜನಕಲ್ಯಾಣ ಯೋಜನೆಗಳನ್ನು ಕುರಿತು ಒಂದರೆ ಕ್ಷಣವೂ ಯೋಚಿಸಲಿಲ್ಲ. ಅದರ ಬದಲಿಗೆ ನ್ಯಾಶನಲ್ ಅಕೌಂಟೇಬಿಲಿಟಿ ಬ್ಯೂರೋದ ನೆರವಿನಿಂದ ವಿರೋಧಿಗಳನ್ನು ಮಟ್ಟ ಹಾಕುವ ಕೆಲಸ ಮಾಡಿದರು,’ ಎಂದು ಸನಾವುಲ್ಲಾ ಹೇಳಿದ್ದಾರೆ.

ಇದೇ ವಿಷಯದ ಬಗ್ಗೆ ಮಾತಾಡಿದ ಪಾಕಿಸ್ತಾನ ಪೀಪಲ್ಸ್​ ಪಾರ್ಟಿಯ ಪ್ರಧಾನ ಕಾರ್ಯದರ್ಶಿ ನಯ್ಯಾರ್ ಬೊಖಾರಿ ಅವರು, ಇಮ್ರಾನ್ ಖಾನ್ ಅವರ ಸರ್ಕಾರ ಅಧಿಕಾರದಲ್ಲಿದ್ದಾಗ ಬೆಲೆಗಳು ಗಗನಕ್ಕೆ ಮುಟ್ಟಿದ್ದನ್ನು ಮರೆತಿರದ ಜನ ಪಿಟಿಐನ ಉದ್ದೇಶಿತ ಱಲಿಯನ್ನು ವಿಫಲಗೊಳಿಸಲಿದ್ದಾರೆ, ಎಂದಿದ್ದಾರೆ.

ಖಾನ್ ಅವರು ಪೊಲೀಸ್ ಅಧಿಕಾರಿಗಳ, ನಾಗರಿಕ ಸೇವೆ ಅಧಿಕಾರಿಗಳ ಮತ್ತು ಮಿಲಿಟರಿ ಅಧಿಕಾರಿಗಳ ನೆರವಿನ ಮೂಲಕ ತಮ್ಮ ರಾಜಕಾರಣ ಮುಂದುವರಿಯಲಿದೆ ಅಂತ ಭಾವಿಸಿದ್ದರೆ ಅವರು ಭ್ರಮೆಯಲ್ಲಿದ್ದಾರೆ. ಇಮ್ರಾನ್ ಅವರಿಂದಾಗಿ ಸಾವಿರಾರು ಜನ ಕೆಲಸಗಳನ್ನು ಕಳೆದುಕೊಂಡರು. ಅವರ ಕೋಪವನ್ನು ಈಗ ಎದುರಿಸಲಿದ್ದಾರೆ,’ ಎಂದು ಬೊಖಾರಿ ಹೇಳಿದ್ದಾರೆ.

ಸಾರ್ವಜನಿಕ ಸಭೆ ನಡೆಸಲು ಪ್ರತಿಯೊಬ್ಬ ನಾಗರಿಕನಿಗೆ ಕಾನೂನಾತ್ಮಕ ಹಕ್ಕಿದೆ. ಅದರೆ ಸರ್ಕಾರ ಪಿಟಿಐ ಪ್ರತಿಭಟನೆಕಾರರು ಕಾನೂನು ಕೈಗೆತ್ತಿಕೊಳ್ಳುವ ಅವಕಾಶ ನೀಡುವುದಿಲ್ಲ ಎಂದು ಹೇಳಿದ ಬೊಖಾರಿ ದೊಂಬಿ ನಡೆಸುವ ಪ್ರಯತ್ನ ಮಾಡಿದರೆ ಉಗ್ರಕ್ರಮ ಎದುರಿಸಬೇಕಾಗುತ್ತದೆ ಅಂತ ಎಚ್ಚರಿಸಿದ್ದಾರೆ.

ಇದನ್ನೂ ಓದಿ:   India Vs Pakistan Mens Hockey Asia Cup: ಬದ್ಧವೈರಿ ಪಾಕ್ ಎದುರು ಮಂಕಾದ ಭಾರತ! ಪಂದ್ಯ ಡ್ರಾದಲ್ಲಿ ಅಂತ್ಯ

Published On - 1:11 am, Tue, 24 May 22

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್