India Vs Pakistan Mens Hockey Asia Cup: ಬದ್ಧವೈರಿ ಪಾಕ್ ಎದುರು ಮಂಕಾದ ಭಾರತ! ಪಂದ್ಯ ಡ್ರಾದಲ್ಲಿ ಅಂತ್ಯ

India Vs Pakistan Mens Hockey Asia Cup: ಪಂದ್ಯದ ಮೊದಲ ಕ್ವಾರ್ಟರ್‌ನಲ್ಲಿಯೇ ಮುನ್ನಡೆ ಸಾಧಿಸಿದ ಭಾರತ ತಂಡ, ಉಳಿದ ಅವಕಾಶಗಳನ್ನು ಬಳಸಿಕೊಳ್ಳದ ಕಾರಣ ತಂಡವು ಅದರ ಭಾರವನ್ನು ಹೊರಬೇಕಾಯಿತು.

India Vs Pakistan Mens Hockey Asia Cup: ಬದ್ಧವೈರಿ ಪಾಕ್ ಎದುರು ಮಂಕಾದ ಭಾರತ! ಪಂದ್ಯ ಡ್ರಾದಲ್ಲಿ ಅಂತ್ಯ
ಭಾರತ- ಪಾಕಿಸ್ತಾನ ಹಾಕಿ ತಂಡ
Follow us
TV9 Web
| Updated By: ಪೃಥ್ವಿಶಂಕರ

Updated on:May 23, 2022 | 7:33 PM

ಏಷ್ಯಾ ಕಪ್ 2022 (Asia Cup 2022)ರ ಆರಂಭವು ಭಾರತೀಯ ಪುರುಷರ ಹಾಕಿ ತಂಡಕ್ಕೆ ಉತ್ತಮವಾಗಿಲ್ಲ. ಜಕಾರ್ತಾದಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಹಾಕಿ 2022 ( Asia Cup Hockey 2022)ರಲ್ಲಿ ತಮ್ಮ ಗುಂಪು ಹಂತದ ಮೊದಲ ಪಂದ್ಯದಲ್ಲಿ, ಭಾರತ ತನ್ನ ಹಳೆಯ ಮತ್ತು ಕಠಿಣ ಎದುರಾಳಿ ಪಾಕಿಸ್ತಾನದ ಎದುರು ಡ್ರಾಗೆ ತೃಪ್ತಿಪಡಬೇಕಾಯಿತು. ಪಂದ್ಯದ ಮೊದಲ ಕ್ವಾರ್ಟರ್‌ನಲ್ಲಿಯೇ ಮುನ್ನಡೆ ಸಾಧಿಸಿದ ಭಾರತ ತಂಡ, ಉಳಿದ ಅವಕಾಶಗಳನ್ನು ಬಳಸಿಕೊಳ್ಳದ ಕಾರಣ ತಂಡವು ಅದರ ಭಾರವನ್ನು ಹೊರಬೇಕಾಯಿತು. ಹೂಟರ್ ಸದ್ದಿಗೆ ಒಂದು ನಿಮಿಷ ಮೊದಲು ಗೋಲು ಗಳಿಸುವ ಮೂಲಕ ಪಾಕಿಸ್ತಾನ ಪಂದ್ಯವನ್ನು ಡ್ರಾದಲ್ಲಿ ಅಂತ್ಯಗೊಳಿಸಿತು.

ಮೊದಲ ಕ್ವಾರ್ಟರ್‌ನಲ್ಲಿ ಭಾರತದ ಮುನ್ನಡೆ

ಈ ಪೂಲ್ ಎ ಪಂದ್ಯದಲ್ಲಿ ಪಾಕಿಸ್ತಾನ ತ್ವರಿತ ಆರಂಭವನ್ನು ಮಾಡಿತು. ಮೊದಲ ಏಳು-ಎಂಟು ನಿಮಿಷಗಳಲ್ಲಿ ಎರಡು ಪೆನಾಲ್ಟಿ ಕಾರ್ನರ್‌ಗಳನ್ನು ಪಡೆದುಕೊಂಡಿತು. ಆದರೆ ತಂಡವು ಅದನ್ನು ಗೋಲಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಈ ನಡುವೆ ಭಾರತವೂ ತನ್ನ ಮೊದಲ ಪೆನಾಲ್ಟಿ ಕಾರ್ನರನ್ನು ಕಳೆದುಕೊಂಡಿತು. ಆದರೆ ಸ್ವಲ್ಪ ಸಮಯದಲ್ಲಿ ಮತ್ತೆ ಪಾಕಿಸ್ತಾನದ ಡಿ ಪ್ರವೇಶಿಸುವ ಮೂಲಕ ಒತ್ತಡವನ್ನು ಉಂಟುಮಾಡಿತು ಮತ್ತು ಅದು ಉತ್ತಮ ಫಲಿತಾಂಶವನ್ನು ಪಡೆಯಿತು.

ಇದನ್ನೂ ಓದಿ
Image
PAK vs WI: ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ 16 ಸದಸ್ಯರ ಬಲಿಷ್ಠ ತಂಡ ಪ್ರಕಟಿಸಿದ ಪಾಕಿಸ್ತಾನ..!
Image
IND vs SA: ಉತ್ತಮ ಪ್ರದರ್ಶನದ ನಡುವೆಯೂ ಟೀಂ ಇಂಡಿಯಾಕ್ಕೆ ಆಯ್ಕೆಯಾಗದ ನತದೃಷ್ಟ ಕ್ರಿಕೆಟಿಗರಿವರು
Image
IPL 2022: ಈ ಐಪಿಎಲ್​ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ತಂಡ ಯಾವುದು ಗೊತ್ತಾ? ಇಲ್ಲಿದೆ ವಿವರ

ಮೊದಲ ಕ್ವಾರ್ಟರ್‌ನ ಎಂಟನೇ ನಿಮಿಷದಲ್ಲಿ, ಭಾರತಕ್ಕೆ ಸತತ ಎರಡು ಪೆನಾಲ್ಟಿ ಕಾರ್ನರ್‌ಗಳು ದೊರೆತವು. ಇದರಲ್ಲಿ ಭಾರತವು ಎರಡನೇ ಪ್ರಯತ್ನದಲ್ಲಿ ತನ್ನ ಮೊದಲ ಗೋಲು ಗಳಿಸಿ ಮುನ್ನಡೆ ಸಾಧಿಸಿತು. ಯುವ ಆಟಗಾರ ಸೆಲ್ವಂ ಕಾರ್ತಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ಇದಾದ ನಂತರವೂ ಭಾರತಕ್ಕೆ ಒಂದಷ್ಟು ಅವಕಾಶಗಳು ಸಿಕ್ಕರೂ ಯಶಸ್ಸು ಕಾಣದ ಕಾರಣ ಮೊದಲ ಕ್ವಾರ್ಟರ್ 1-0ಯಿಂದ ಭಾರತದ ಪರವಾಗಿತ್ತು. ಅದೇ ಸಮಯದಲ್ಲಿ, ಮೊದಲಾರ್ಧದ ಎರಡನೇ ಕ್ವಾರ್ಟರ್‌ನಲ್ಲಿ ಭಾರತವು ಪ್ರಾಬಲ್ಯ ಸಾಧಿಸಿತು. ಮತ್ತೊಮ್ಮೆ ತಂಡವು ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಗಳಿಸುವ ಸಮೀಪದಲ್ಲಿತ್ತು. ಆದರೆ ಪಾಕಿಸ್ತಾನದ ಗೋಲ್‌ಕೀಪರ್ ಉತ್ತಮ ಸೇವ್ ಮಾಡುವ ಮೂಲಕ ಭಾರತವನ್ನು ಸ್ಕೋರ್‌ಲೈನ್ ಹೆಚ್ಚಿಸದಂತೆ ತಡೆದರು.

ಅವಕಾಶಗಳನ್ನು ಕಳೆದುಕೊಂಡ ಟೀಂ ಇಂಡಿಯಾ, ಪಾಕಿಸ್ತಾನಕ್ಕೆ ಲಾಭ

ಮೂರನೇ ಕ್ವಾರ್ಟರ್‌ನಲ್ಲಿ (ದ್ವಿತೀಯಾರ್ಧದಲ್ಲಿ), ಪಾಕಿಸ್ತಾನವು ವೇಗವಾಗಿ ಆರಂಭಿಸಿತು. ಮೊದಲ ನಿಮಿಷದಲ್ಲಿ ಪೆನಾಲ್ಟಿ ಕಾರ್ನರನ್ನು ಪಡೆದುಕೊಂಡಿತು, ಆದರೆ ತಂಡವು ಈ ಬಾರಿಯೂ ತಪ್ಪಿಸಿಕೊಂಡಿತು. ಅದೇ ಸಮಯದಲ್ಲಿ, ಅನೇಕ ಸಂದರ್ಭಗಳಲ್ಲಿ, ಪಾಕಿಸ್ತಾನವು ಉತ್ತಮ ಆಟ ಪ್ರದರ್ಶಿಸಿತು. ಆದರೆ ನಿಖರವಾದ ಮುಕ್ತಾಯದ ಕೊರತೆಯಿಂದಾಗಿ, ಅವರು ಭಾರತಕ್ಕೆ ಸರಿಸಾಟಿಯಾಗಲು ಸಾಧ್ಯವಾಗಲಿಲ್ಲ. ಮತ್ತೊಂದೆಡೆ ಭಾರತ ಕೂಡ ಹಲವು ಅವಕಾಶಗಳನ್ನು ಕಳೆದುಕೊಂಡಿತು. ಕೊನೆಯ ಕ್ವಾರ್ಟರ್‌ನಲ್ಲಿ, ಪಾಕಿಸ್ತಾನವು ಗೋಲಿನ ಹುಡುಕಾಟದಲ್ಲಿ ತನ್ನ ದಾಳಿಯನ್ನು ಹೆಚ್ಚಿಸಿತು. ಇದರ ಫಲವಾಗಿ 59 ನೇ ನಿಮಿಷದಲ್ಲಿ ಮತ್ತೊಂದು ಪೆನಾಲ್ಟಿ ಕಾರ್ನರ್ ಅನ್ನು ಪಡೆದುಕೊಂಡಿತು. ಈ ಬಾರಿ ರಾಣಾ ತಂಡಕ್ಕೆ ಗೋಲು ಗಳಿಸಿ ಸಮಬಲ ಸಾಧಿಸಿ ಭಾರತದ ಪ್ರಯತ್ನವನ್ನು ವಿಫಲಗೊಳಿಸಿದರು.

ಜಪಾನ್ ವಿರುದ್ಧ ಮುಂದಿನ ಪಂದ್ಯ

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ನಂತರ, ಭಾರತ ತಂಡವು ಮೊದಲ ಬಾರಿಗೆ ದೊಡ್ಡ ಟೂರ್ನಿಗೆ ಪ್ರವೇಶಿಸುತ್ತಿದೆ. ಆದರೆ ಈ ಬಾರಿ ಹೆಚ್ಚಿನ ಯುವ ಆಟಗಾರರಿಗೆ ಅವಕಾಶ ನೀಡಲಾಗಿದೆ. ತಂಡದ 9 ಆಟಗಾರರು ಪಾಕಿಸ್ತಾನದ ವಿರುದ್ಧ ಅಂತಾರಾಷ್ಟ್ರೀಯ ಪದಾರ್ಪಣೆ ಮಾಡಿದರು. ನಿಸ್ಸಂಶಯವಾಗಿ, ಅಂತಹ ಪರಿಸ್ಥಿತಿಯಲ್ಲಿ, ಭಾರತ ತಂಡವು ಹೆಚ್ಚು ಬಲಶಾಲಿಯಾಗಿ ಕಾಣಲಿಲ್ಲ. ಆದರೆ ಮುಂಬರುವ ಪಂದ್ಯಗಳಲ್ಲಿ, ತಂಡವು ಅದನ್ನು ಸುಧಾರಿಸಬೇಕಾಗಿದೆ. ತಂಡದ ಮುಂದಿನ ಪಂದ್ಯವು ಮಂಗಳವಾರ ಮೇ 24 ರಂದು ಜಪಾನ್ ವಿರುದ್ಧ ನಡೆಯಲಿದೆ, ಅವರು ತಮ್ಮ ಮೊದಲ ಪೂಲ್ ಎ ಪಂದ್ಯದಲ್ಲಿ ಇಂಡೋನೇಷ್ಯಾವನ್ನು 9-0 ಅಂತರದಿಂದ ಸೋಲಿಸಿದ್ದಾರೆ.

Published On - 7:11 pm, Mon, 23 May 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ