ಸರ್ಕಾರಿ ಭೂಮಿ ಕಬಳಿಕೆ ಆರೋಪ: ಬಿಕೆಯು ಒಡಕಿನ ಬಳಿಕ ಟಿಕಾಯತ್ ಸಹೋದರರಿಗೆ ಎದುರಾಯ್ತು ಮತ್ತೊಂದು ಸಂಕಷ್ಟ

ಸರ್ಕಾರಿ ಭೂಮಿ ಕಬಳಿಕೆ ಆರೋಪ: ಬಿಕೆಯು ಒಡಕಿನ ಬಳಿಕ ಟಿಕಾಯತ್ ಸಹೋದರರಿಗೆ ಎದುರಾಯ್ತು ಮತ್ತೊಂದು ಸಂಕಷ್ಟ
ರಾಕೇಶ್ ಟಿಕಾಯತ್

ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯ ಸಿಸೌಲಿ ಗ್ರಾಮದ ನಿವಾಸಿಗಳಲ್ಲಿ ಒಬ್ಬರಾದ ರಾಹುಲ್ ಮುಖಿಯಾ ಅವರು ಬಿಕೆಯು ಮುಖ್ಯಸ್ಥ ನರೇಶ್ ಮತ್ತು ಅವರ ಸಹೋದರ ರಾಕೇಶ್ ಟಿಕಾಯತ್ ಸರ್ಕಾರಿ ಭೂಮಿಯನ್ನು "ಅಕ್ರಮವಾಗಿ ವಶಪಡಿಸಿಕೊಂಡಿದ್ದಾರೆ" ಎಂದು ಆರೋಪಿಸಿದ್ದಾರೆ.

TV9kannada Web Team

| Edited By: Rashmi Kallakatta

May 23, 2022 | 4:16 PM

ದೆಹಲಿ: ಭಾರತೀಯ ಕಿಸಾನ್ ಯೂನಿಯನ್ (BKU) ನಲ್ಲಿ ಒಡಕಿನ ಬಳಿಕ ಟಿಕಾಯತ್ ಸಹೋದರರು ಈಗ ಸರ್ಕಾರಿ ಭೂಮಿಯನ್ನು ಕಬಳಿಸಿದ ಆರೋಪದ  ತನಿಖೆಯನ್ನು ಎದುರಿಸುತ್ತಿದ್ದಾರೆ. ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯ ಸಿಸೌಲಿ ಗ್ರಾಮದ ನಿವಾಸಿಗಳಲ್ಲಿ ಒಬ್ಬರಾದ ರಾಹುಲ್ ಮುಖಿಯಾ(Rahul Mukhiya) ಅವರು ಬಿಕೆಯು ಮುಖ್ಯಸ್ಥ ನರೇಶ್ ಮತ್ತು ಅವರ ಸಹೋದರ ರಾಕೇಶ್ ಟಿಕಾಯತ್ (Rakesh Tikait) ಸರ್ಕಾರಿ ಭೂಮಿಯನ್ನು “ಅಕ್ರಮವಾಗಿ ವಶಪಡಿಸಿಕೊಂಡಿದ್ದಾರೆ” ಎಂದು ಆರೋಪಿಸಿದ್ದಾರೆ. ದಶಕದ ಹಿಂದೆಯೇ ಸಿಸೌಲಿಯಲ್ಲಿ ಕೆರೆ ನಿರ್ಮಿಸಲು ಸರಕಾರದಿಂದ ಜಮೀನು ಮಂಜೂರು ಮಾಡಲಾಗಿತ್ತು. ಆದರೆ ಟಿಕಾಯತ್ ಸಹೋದರರು ಕೆರೆಗೆ ಮಣ್ಣು ತುಂಬಿ ಅಕ್ರಮವಾಗಿ ನಿವೇಶನಗಳನ್ನು ನಿರ್ಮಿಸಿಕೊಂಡಿದ್ದಾರೆ. ಈ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಲಿಖಿತವಾಗಿ ತಿಳಿಸಿದ್ದು ಕೇಂದ್ರ ರಾಜ್ಯ ಸಚಿವ ಡಾ.ಸಂಜೀವ್ ಬಲಿಯಾನ್ ಅವರಿಗೂ ವಿಷಯ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು. ದೂರು ದಾಖಲಾಗಿರುವ ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುವುದು. ನಾವು ಈ ವಿಷಯವನ್ನು ತನಿಖೆ ಮಾಡಿ ಅದರ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ಬುಧಾನಾ ಪ್ರದೇಶದ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಅರುಣ್ ಕುಮಾರ್ ಹೇಳಿದ್ದಾರೆ.  ಈ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳದಿದ್ದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಬಳಿ ತೆರಳಿ ನ್ಯಾಯಕ್ಕಾಗಿ ಮನವಿ ಮಾಡುವುದಾಗಿ ರಾಹುಲ್ ಮುಖಿಯಾ ಎಚ್ಚರಿಸಿದ್ದಾರೆ.

ಏತನ್ಮಧ್ಯೆ ಆರೋಪಗಳು ಆಧಾರ ರಹಿತ ಮತ್ತು ಯಾವುದೇ ವಿಚಾರಣೆಗೆ ನಾನು ಸಿದ್ಧ ಎಂದು ನರೇಶ್ ಟಿಕಾಯಿತ್ ಹೇಳಿದ್ದಾರೆ. ಈ ಜನರು ನಮ್ಮ ಮೇಲೆ ಏಕೆ ಆರೋಪ ಮಾಡುತ್ತಿದ್ದಾರೆ ಎಂದು ನನಗೆ ತಿಳಿದಿಲ್ಲ, ನಾವು ಯಾವುದೇ ಸರ್ಕಾರಿ ಭೂಮಿಯನ್ನು ವಶಪಡಿಸಿಕೊಂಡಿಲ್ಲ, ಎಲ್ಲಾ ಆರೋಪಗಳು ಆಧಾರರಹಿತವಾಗಿವೆ ಎಂದು ಅವರು ಹೇಳಿದರು.

ಇದನ್ನೂ ಓದಿ

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada