ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಶಾಸ್ತಿ ಮಾಡಿ ಎಂದು ರೈತರಲ್ಲಿ ಒತ್ತಾಯಿಸಿದ ಸಂಯುಕ್ತ ಕಿಸಾನ್ ಮೋರ್ಚಾ

ಈ ಕಾನೂನನ್ನು ವಿರೋಧಿಸಿದ ರೈತರ ಮೇಲೆ ಈ ಹಿಂದೆ ಬಿಜೆಪಿ ಸರ್ಕಾರ ಅಶ್ರುವಾಯು ಪ್ರಯೋಗಿಸಿತ್ತು, ಜಲಫಿರಂಗಿ ಪ್ರಯೋಗಿಸಿತು. ಲಾಠಿ ಚಾರ್ಜ್ ಮಾಡಿ ಸುಳ್ಳು ಕೇಸುಗಳನ್ನು ಹಾಕಿತ್ತು. ಚಳವಳಿಗಾರರನ್ನು ಮಧ್ಯವರ್ತಿಗಳು, ಭಯೋತ್ಪಾದಕರು ಮತ್ತು ದೇಶವಿರೋಧಿಗಳು ಎಂದು ಕರೆದು ಅವಮಾನಿಸಿತ್ತು.

ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಶಾಸ್ತಿ ಮಾಡಿ ಎಂದು ರೈತರಲ್ಲಿ ಒತ್ತಾಯಿಸಿದ ಸಂಯುಕ್ತ ಕಿಸಾನ್ ಮೋರ್ಚಾ
ಸಂಯುಕ್ತ ಕಿಸಾನ್ ಮೋರ್ಚಾ
TV9kannada Web Team

| Edited By: Rashmi Kallakatta

Feb 03, 2022 | 7:43 PM

ಲಖನೌ: ಕಳೆದ ವರ್ಷ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ವರ್ಷವಿಡೀ ನಡೆದ ಆಂದೋಲನದ ನೇತೃತ್ವ ವಹಿಸಿದ್ದ ಹಲವಾರು ರೈತ ಸಂಘಗಳ ಸಂಘಟನೆಯಾದ ಸಂಯುಕ್ತ ಕಿಸಾನ್ ಮೋರ್ಚಾ (SKM) ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ (Uttar Pradesh Polls) ಬಿಜೆಪಿಯನ್ನುಶಿಕ್ಷಿಸುವಂತೆ ಉತ್ತರ ಪ್ರದೇಶದ ರೈತರಿಗೆ ಮನವಿ ಮಾಡಿದೆ. ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಚುನಾವಣೆಯಲ್ಲಿ ಸೋಲುತ್ತದೆ ಎಂದು ತಿಳಿದ ನಂತರ ಮೂರು ಕಾನೂನುಗಳನ್ನು ಹಿಂತೆಗೆದುಕೊಂಡಿದೆ. ರೈತ ಪ್ರತಿಭಟನಾಕಾರರಿಗೆ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ ಎಂದು ರಾಜ್ಯದ ರೈತರನ್ನು ಉದ್ದೇಶಿಸಿ ಪತ್ರದಲ್ಲಿ ಎಸ್‌ಕೆಎಂ ಹೇಳಿದೆ. ಕಾರ್ಯಕರ್ತ ಮತ್ತು ಸ್ವರಾಜ್ ಇಂಡಿಯಾ ನಾಯಕ ಯೋಗೇಂದ್ರ ಯಾದವ್ (Yogendra Yadav)ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಪತ್ರದಲ್ಲಿ ರೈತ ಮುಖಂಡರಾದ ರಾಕೇಶ್ ಟಿಕಾಯತ್, ದರ್ಶನ್ ಪಾಲ್, ಹನ್ನನ್ ಮೊಲ್ಲಾ, ಜಗಜಿತ್ ಸಿಂಗ್ ದಲ್ಲೆವಾಲ್, ಜೋಗಿಂದರ್ ಸಿಂಗ್ ಉಗ್ರನ್, ಶಿವಕುಮಾರ್ ಶರ್ಮಾ (ಕಕ್ಕಾ ಜೀ) ಮತ್ತು ಯುಧ್ವೀರ್ ಸಿಂಗ್ ಅವರ ಹೆಸರುಗಳೂ ಇವೆ.

ಈ ಕಾನೂನನ್ನು ವಿರೋಧಿಸಿದ ರೈತರ ಮೇಲೆ ಈ ಹಿಂದೆ ಬಿಜೆಪಿ ಸರ್ಕಾರ ಅಶ್ರುವಾಯು ಪ್ರಯೋಗಿಸಿತ್ತು, ಜಲಫಿರಂಗಿ ಪ್ರಯೋಗಿಸಿತು. ಲಾಠಿ ಚಾರ್ಜ್ ಮಾಡಿ ಸುಳ್ಳು ಕೇಸುಗಳನ್ನು ಹಾಕಿತ್ತು. ಚಳವಳಿಗಾರರನ್ನು ಮಧ್ಯವರ್ತಿಗಳು, ಭಯೋತ್ಪಾದಕರು ಮತ್ತು ದೇಶವಿರೋಧಿಗಳು ಎಂದು ಕರೆದು ಅವಮಾನಿಸಿತ್ತು. ನಂತರ ಚುನಾವಣೆಯಲ್ಲಿ ಸೋಲಬಹುದು ಎಂದು ಅನಿಸಿದಾಗ ಮೂರೂ ಕಾನೂನುಗಳನ್ನು ಹಿಂಪಡೆಯಲಾಯಿತು ಎಂದು ಮೋರ್ಚಾ ಹೇಳಿದೆ.

ಕಳೆದ ವರ್ಷ ಮೂರು ಕಾನೂನುಗಳ ವಿರುದ್ಧ ಪ್ರತಿಭಟನಕಾರರ ಗುಂಪಿನ ಮೇಲೆ ವೇಗವಾಗಿ ವಾಹನ ಚಲಾಯಿಸಿ ಡಿಕ್ಕಿ ಹೊಡೆದ ನಂತರ ನಾಲ್ವರು ರೈತರು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ ಲಖಿಂಪುರ ಖೇರಿ ಹಿಂಸಾಚಾರದ ಬಗ್ಗೆ ಎಸ್‌ಕೆಎಂ ರೈತರಿಗೆ ನೆನಪಿಸಿದೆ.

ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ, ಅವರ ಪುತ್ರ ಆಶಿಶ್ ಮಿಶ್ರಾ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಅವರನ್ನು ರಾಜ್ಯದಲ್ಲಿ ಆಡಳಿತಾರೂಢ ಯೋಗಿ ಆದಿತ್ಯನಾಥ ಸರ್ಕಾರ ರಕ್ಷಿಸುತ್ತಿದೆ ಎಂದು ಮೋರ್ಚಾ ಹೇಳಿದೆ.

“ಸುಪ್ರೀಂಕೋರ್ಟ್ ಛೀಮಾರಿ ಹಾಕಿದ ನಂತರವೇ ಸಚಿವರ ಮಗನನ್ನು ಬಂಧಿಸಲಾಯಿತು. ಕೊಲೆಯ ಹಿಂದೆ ಪಿತೂರಿ ಇದೆ ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ, ಆದರೆ ನಿಜವಾದ ಸಂಚುಕೋರರು ಇನ್ನೂ ಮುಕ್ತವಾಗಿ ತಿರುಗುತ್ತಿದ್ದಾರೆ. ಯಾಕೆ? ಏಕೆಂದರೆ ಚುನಾವಣೆಯಲ್ಲಿ ಬಿಜೆಪಿಗೆ ಅಜಯ್ ಮಿಶ್ರಾ ಟೆನಿ ಅಗತ್ಯವಿದೆ. ಬಿಜೆಪಿಯು ರೈತರ ಹತ್ಯೆಗಿಂತ ಮತಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತದೆ ಎಂದು ಮೋರ್ಚಾ ಹೇಳಿದೆ. ರೈತರನ್ನು ಅವಮಾನಿಸಿರುವ ಬಿಜೆಪಿಗೆ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ರೈತರಿಗೆ ಎಸ್ ಕೆಎಂ ಕರೆ ನೀಡಿದೆ.

ಬಿಜೆಪಿ ಸರ್ಕಾರಕ್ಕೆ ಸತ್ಯ ಮತ್ತು ಸುಳ್ಳಿನ ಭಾಷೆ ಅರ್ಥವಾಗುವುದಿಲ್ಲ, ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವುದಿಲ್ಲ, ಸಾಂವಿಧಾನಿಕ ಅಥವಾ ಅಸಾಂವಿಧಾನಿಕ ನಡುವಿನ ವ್ಯತ್ಯಾಸವನ್ನು ತಿಳಿದಿಲ್ಲ. ಈ ಪಕ್ಷಕ್ಕೆ ಒಂದೇ ಭಾಷೆ ಅರ್ಥವಾಗಿದೆ – ಮತ, ಸ್ಥಾನ, ಅಧಿಕಾರ” ಎಂದು ಅದು ಹೇಳಿದೆ.

ಉತ್ತರ ಪ್ರದೇಶದಲ್ಲೂ ಬಿಜೆಪಿ ತನ್ನ ಮಾತಿನಿಂದ ಹಿಂದೆ ಸರಿದಿದೆ ಎಂದು ಆರೋಪಿಸಿರುವ ಬಿಜೆಪಿ, ರಾಜ್ಯ ಸರ್ಕಾರ ಭರವಸೆ ನೀಡಿದಂತೆ ರೈತರ ಸಾಲ ಮನ್ನಾ ಮಾಡಿಲ್ಲ. ವಿದ್ಯುತ್ ದರವನ್ನೂ ಇಳಿಸಿಲ್ಲ. “ಗೋವುಗಳನ್ನು ರಕ್ಷಿಸುವ ಭರವಸೆ ಇತ್ತು, ಆದರೆ ಇಂದು ಇಡೀ ರಾಜ್ಯದ ರೈತರು ಬೀದಿ ಪ್ರಾಣಿಗಳ ಸಮಸ್ಯೆಯಿಂದ ಬಳಲುತ್ತಿದ್ದಾರೆ”.  ವಲಸೆ ಕಾರ್ಮಿಕರು ಮತ್ತು ರಾಜ್ಯದಲ್ಲಿ ನಿರುದ್ಯೋಗದ ಬಗ್ಗೆಯೂ ರೈತರ ಸಂಘ ಮಾತನಾಡಿದೆ.

ಈ ರೈತ ವಿರೋಧಿ ಬಿಜೆಪಿ ಸರಕಾರದ ಕಿವಿ ತೆರೆಯಲು ಚುನಾವಣೆಯಲ್ಲಿ ತಕ್ಕ ಶಾಸ್ತಿ ಮಾಡಬೇಕಾಗಿದೆ ಎಂದು ರೈತ ಸಂಘ ಹೇಳಿದೆ. ರೈತರ ಬಳಿ ಮತ ಕೇಳಲು ಬಂದ ಬಿಜೆಪಿ ನಾಯಕರನ್ನು ಈ ವಿಷಯಗಳ ಬಗ್ಗೆ ಪ್ರಶ್ನಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ.

ಇದನ್ನೂ ಓದಿ: ಕುಂದಾಪುರ ಪದವಿ ಪೂರ್ವ ಕಾಲೇಜು ಆವರಣ ಪ್ರವೇಶಿಸದಂತೆ ಹಿಜಾಬ್ ಧರಿಸಿದ ವಿದ್ಯಾರ್ಥಿಗಳನ್ನು ತಡೆದ ಪ್ರಿನ್ಸಿಪಾಲ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada