AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ವಯಂ ನಿವೃತ್ತಿ ಪಡೆದ ಇ.ಡಿ.ಜಂಟಿ ನಿರ್ದೇಶಕ; ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಸಿದ್ಧತೆ !

ರಾಜೇಶ್ವರ್​ ಸಿಂಗ್​ ಅವರು ಇ.ಡಿ.ಯ ಲಖನೌದಲ್ಲಿ ಜಂಟಿ ನಿರ್ದೇಶಕರಾಗಿದ್ದರು. ಸೋಮವಾರ ಮಾಡಿದ ಟ್ವೀಟ್​ನಲ್ಲಿ ರಾಜೇಶ್ವರ್​ ಸಿಂಗ್​ ಅವರು, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ,  ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​, ಯುಪಿ ಸಿಎಂ ಯೋಗಿ ಆದಿತ್ಯನಾಥ್​, ಇ.ಡಿ.ನಿರ್ದೇಶಕ ಎಸ್​.ಕೆ.ಮಿಶ್ರಾರಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಸ್ವಯಂ ನಿವೃತ್ತಿ ಪಡೆದ ಇ.ಡಿ.ಜಂಟಿ ನಿರ್ದೇಶಕ; ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಸಿದ್ಧತೆ !
ರಾಜೇಶ್ವರ್ ಸಿಂಗ್​
TV9 Web
| Edited By: |

Updated on: Feb 01, 2022 | 8:04 AM

Share

ದೆಹಲಿ: ಜಾರಿ ನಿರ್ದೇಶನಾಲಯದ  (E.D)ದ ಜಂಟಿ ನಿರ್ದೇಶಕರಾಗಿದ್ದ ರಾಜೇಶ್ವರ್​ ಸಿಂಗ್​ ಅವರು ವೃತ್ತಿಯಿಂದ ಸ್ವಯಂ ನಿವೃತ್ತಿ (VRS) ತೆಗೆದುಕೊಂಡಿದ್ದು, ಅವರು ಶೀಘ್ರದಲ್ಲೇ ರಾಜಕೀಯ ಸೇರ್ಪಡೆಯಾಗಲಿದ್ದಾರೆ. ಅಷ್ಟೇ ಅಲ್ಲ, ಉತ್ತರಪ್ರದೇಶ ಚುನಾವಣೆಯಲ್ಲೂ ಸ್ಪರ್ಧಿಸಲಿದ್ದಾರೆ ಎಂದು ಮೂಲಗಳಿಂತ ತಿಳಿದು ಬಂದಿದೆ. ನಾನು ಸ್ವಯಂ ನಿವೃತ್ತಿ ತೆಗೆದುಕೊಳ್ಳುವ ಬಗ್ಗೆ ಕಳಿಸಿದ್ದ ಮನವಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ನಿನ್ನೆ ರಾಜೇಶ್ವರ್​ ಸಿಂಗ್​ ಟ್ವಿಟರ್​​ನಲ್ಲಿ ಶೇರ್ ಮಾಡಿಕೊಂಡಿದ್ದರು.  ನಾನು 10ವರ್ಷಗಳ ಕಾಲ ಉತ್ತರ ಪ್ರದೇಶ ಪೊಲೀಸ್​ ಇಲಾಖೆಯಲ್ಲಿ ಸೇವೆ ಸಲ್ಲಿಸಿದೆ. ಅದಾದ ಬಳಿಕ 24ವರ್ಷ ಜಾರಿ ನಿರ್ದೇಶನಾಲಯದಲ್ಲಿ ವಿವಿಧ ಉನ್ನತ ಹುದ್ದೆಗಳನ್ನು ನಿಭಾಯಿಸಿದೆ.  ಅಷ್ಟಾದ ಮೇಲೆ ಕೂಡ ನನ್ನ ನಿವೃತ್ತಿಗೆ ಇನ್ನೂ 11 ವರ್ಷಗಳು ಬಾಕಿ ಇವೆ. ನನಗೆ ಸಾರ್ವಜನಿಕರಿಗೆ ಸೇವೆ ಮಾಡುವ ಆಸಕ್ತಿಯಿದೆ. ಸಂಪೂರ್ಣವಾಗಿ, ಹೃದಯಪೂರ್ವಕವಾಗಿ ದೇಶಸೇವೆ ಮಾಡುವ ಆಸೆಯಿದೆ. ಇದನ್ನು ಸಾಧ್ಯವಾಗಿಸಲು ಸರಿಯಾದ ಮಾಧ್ಯಮವೆಂದರೆ ಅದು ರಾಜಕೀಯ ಎಂದು ನಾನು ನಂಬಿದ್ದೇನೆ ಎಂದು  ರಾಜೇಶ್ವರ್ ಸಿಂಗ್ ಹೇಳಿದ್ದಾಗಿ ಇಂಡಿಯಾಟುಡೆ ವರದಿ ಮಾಡಿದೆ.

ರಾಜೇಶ್ವರ್​ ಸಿಂಗ್​ ಅವರು ಇ.ಡಿ.ಯ ಲಖನೌದಲ್ಲಿ ಜಂಟಿ ನಿರ್ದೇಶಕರಾಗಿದ್ದರು. ಸೋಮವಾರ ಮಾಡಿದ ಟ್ವೀಟ್​ನಲ್ಲಿ ರಾಜೇಶ್ವರ್​ ಸಿಂಗ್​ ಅವರು, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ,  ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​, ಯುಪಿ ಸಿಎಂ ಯೋಗಿ ಆದಿತ್ಯನಾಥ್​, ಇ.ಡಿ.ನಿರ್ದೇಶಕ ಎಸ್​.ಕೆ.ಮಿಶ್ರಾರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಇದೀಗ ಸ್ವಯಂ ನಿವೃತ್ತಿ ಪಡೆದ ರಾಜೇಶ್ವರ್​ ಸಿಂಗ್​ ಉತ್ತರಪ್ರದೇಶದ ಸುಲ್ತಾನ್​​ಪುರದವರು. ಅವರು ಇಲ್ಲಿಂದಲೇ ಸ್ಪರ್ಧಿಸಬಹುದು ಅಥವಾ ಲಖನೌದ ಸರೋಜಿನಿನಗರ ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂದು ಹೇಳಲಾಗಿದೆ. ಅಂದಹಾಗೆ ಇಂದು ಅವರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಪಡೆಯಲಿದ್ದಾರೆ. ಇವರ ಪತ್ನಿ ಲಕ್ಷ್ಮೀ ಸಿಂಗ್​, ಲಖನೌನಲ್ಲಿ ಐಜಿ ಶ್ರೇಣಿಯ ಅಧಿಕಾರಿಯಾಗಿದ್ದಾರೆ. ರಾಜೇಶ್ವರ್​ ಸಿಂಗ್​​ಗಿಂತಲೂ ಮೊದಲು ಐಪಿಎಸ್​ ಅಧಿಕಾರಿ ಅಸೀಮ್ ಅರುಣ್​ ಅವರು ಸ್ವಯಂ ನಿವೃತ್ತಿ ಪಡೆದು, ರಾಜಕೀಯಕ್ಕೆ ಕಾಲಿಟ್ಟಿದ್ದಾರೆ. ಅವರೀಗ ಕನ್ನೌಜ್​​ನ ಸಾದರ್​ ಕ್ಷೇತ್ರದ ಅಭ್ಯರ್ಥಿ.

ರಾಜೇಶ್ವರ್ ಸಿಂಗ್​ 2007ರಲ್ಲಿ ಇ.ಡಿ.ಗೆ ನಿಯೋಜನೆಗೊಂಡಿದ್ದರು. ಅಂದಿನಿಂದಲೂ ಹಲವು ಹೈಪ್ರೊಫೈಲ್​ ಕೇಸ್​​ಗಳ ತನಿಖೆ ನಡೆಸಿದ್ದಾರೆ.  2ಜಿ ಸ್ಪೆಕ್ಟ್ರಮ್ ಹಂಚಿಕೆ ಹಗರಣ, ಅಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಡೀಲ್, ಏರ್‌ಸೆಲ್ ಮ್ಯಾಕ್ಸಿಸ್ ಹಗರಣ, ಆಮ್ರಪಾಲಿ, ನೋಯ್ಡಾ ಪೊಂಜಿ ಸ್ಕೀಮ್ ಹಗರಣ, ಗೋಮತಿ ರಿವರ್‌ಫ್ರಂಟ್ ಪ್ರಕರಣಗಳ ತನಿಖೆಗಳೂ ಸೇರಿವೆ.

ಇದನ್ನೂ ಓದಿ: Letter to God: ದೇವರಿಗೆ ಪತ್ರ ಬರೆದ ಭಕ್ತ, ಈತನ ಬೇಡಿಕೆಗಳ ಪಟ್ಟಿ ನೋಡಿದ್ರೆ ನಿಮಗೆ ಶಾಕ್ ಆಗದೆ ಇರೋದಿಲ್ಲ

ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು