‘ರೈತ ನಾಯಕ’ ರಾಕೇಶ್ ಟಿಕಾಯತ್ ಹಾಗೂ ನರೇಶ್ ಟಿಕಾಯಿತ್ ಹೊರ ಹಾಕಿದ ಭಾರತೀಯ ಕಿಸಾನ್ ಯೂನಿಯನ್

ಕೃಷಿ ಕಾಯ್ದೆ ವಿರೋಧಿ ಹೋರಾಟದ ಮುಂದಾಳತ್ವ ವಹಿಸಿದ್ದ ಬಿಕೆಯು 'ರೈತ ನಾಯಕ' ರಾಕೇಶ್ ಟಿಕಾಯತ್ ಹಾಗೂ ಅವರ ಸಹೋದರ ನರೇಶ್ ಟಿಕಾಯಿತ್ ಉಚ್ಛಾಟನೆಗೊಂಡಿದ್ದಾರೆ. ಟಿಕಾಯತ್ ಸಹೋದರರು ರಾಜಕೀಯ ಮಾಡುತ್ತಿದ್ದಾರೆ ಮತ್ತು ರಾಜಕೀಯ ಪಕ್ಷದ ಹಿತಾಸಕ್ತಿಗಳಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.

'ರೈತ ನಾಯಕ' ರಾಕೇಶ್ ಟಿಕಾಯತ್ ಹಾಗೂ ನರೇಶ್ ಟಿಕಾಯಿತ್ ಹೊರ ಹಾಕಿದ ಭಾರತೀಯ ಕಿಸಾನ್ ಯೂನಿಯನ್
ರಾಕೇಶ್ ಟಿಕಾಯತ್
Follow us
TV9 Web
| Updated By: ಆಯೇಷಾ ಬಾನು

Updated on:May 15, 2022 | 8:10 PM

ದೆಹಲಿ: ಭಾರತೀಯ ಕಿಸಾನ್ ಯೂನಿಯನ್ (BKU) ‘ರೈತ ನಾಯಕ’ ರಾಕೇಶ್ ಟಿಕಾಯತ್(Rakesh Tikait) ಅವರನ್ನು ಸಂಘಟನೆಯಿಂದ ಹೊರಹಾಕಿದೆ. 2020ರಲ್ಲಿ ದೇಶಾದ್ಯಂತ ನಡೆದ ಕೃಷಿ ಕಾಯ್ದೆ ವಿರೋಧಿ ಹೋರಾಟದ ಮುಂದಾಳತ್ವ ವಹಿಸಿದ್ದ ಬಿಕೆಯು ‘ರೈತ ನಾಯಕ’ ರಾಕೇಶ್ ಟಿಕಾಯತ್ ಸಹೋದರರನ್ನು ಹೊರಹಾಕಿದೆ. ರಾಕೇಶ್ ಟಿಕಾಯತ್ ಹಾಗೂ ಅವರ ಸಹೋದರ ನರೇಶ್ ಟಿಕಾಯಿತ್ ಕೂಡ ಬಿಕೆಯು ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ಉಚ್ಛಾಟನೆಗೊಂಡಿದ್ದಾರೆ. ಟಿಕಾಯತ್ ಸಹೋದರರು ರಾಜಕೀಯ ಮಾಡುತ್ತಿದ್ದಾರೆ ಮತ್ತು ರಾಜಕೀಯ ಪಕ್ಷದ ಹಿತಾಸಕ್ತಿಗಳಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.

ಇನ್ನು ಸುಮಾರು ಒಂದು ವರ್ಷಗಳ ಕಾಲ ಮೂರು ರೈತ ಕಾನೂನುಗಳ ವಿರುದ್ಧ ಹೋರಾಡುವ ಜವಾಬ್ದಾರಿಯನ್ನು ಹೊತ್ತಿದ್ದ ಬಿಕೆಯು ರೈತ ಸಂಘಟನೆಯನ್ನು ಎರಡು ಬಣಗಳಾಗಿ ವಿಂಗಡಿಸಲಾಗಿದೆ. ನರೇಶ್ ಟಿಕಾಯತ್ರನ್ನು ಬದಲಿಸಿದ್ದು ಬಿಕೆಯು ಹೊಸ ಮುಖ್ಯಸ್ಥರಾಗಿ ರೈತ ನಾಯಕ ರಾಜೇಶ್ ಸಿಂಗ್ ಚೌಹಾಣ್ ಅವರನ್ನು ನೇಮಿಸಲಾಗಿದೆ. ಇನ್ನು ಈ ಬಗ್ಗೆ ಪತ್ರಿಕಾಗೋಷ್ಠಿ ಕರೆದು ಮಾತನಾಡಿದ ಚೌಹಾಣ್, ರೈತರ ಹಿತಾಸಕ್ತಿಗಳನ್ನು ಪೂರೈಸಲು ರಚಿಸಲಾದ ಬಿಕೆಯು ಅನ್ನು ಟಿಕಾಯತ್ ಸಹೋದರರು ರಾಜಕೀಯಗೊಳಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ರೈತರ ಹಿತಾಸಕ್ತಿಗಳನ್ನು ಕಾಪಾಡಲು ನಿರ್ಮಿಸಲಾದ ಏಕೀಕೃತ ಭಾರತೀಯ ಕಿಸಾನ್ ಯೂನಿಯನ್ ರಚಿಸಲು ಸಾಕಷ್ಟು ಶ್ರಮ ವಹಿಸಲಾಗಿದೆ. ಹಾಗಿದ್ದರೂ, ಟಿಕಾಯತ್ಸ್ ಅಡಿಯಲ್ಲಿ ಸಂಘಟನೆಯು ‘ರಾಜಕೀಯ ವಲಯ’ವಾಗಿ ಬದಲಾಗುತ್ತಿತ್ತು. ರೈತ ಸಂಘಟನೆಯು ಯಾವುದೇ ‘ರಾಜಕೀಯ ಪಕ್ಷ’ಕ್ಕೆ ಕೆಲಸ ಮಾಡುವುದಿಲ್ಲ. ಭಾರತೀಯ ಕಿಸಾನ್ ಯೂನಿಯನ್ (ಅಪಾಲಿಟಿಕಲ್) ಎಂಬ ಹೊಸ ಬಣವನ್ನು ರಚಿಸುತ್ತೇವೆ ಎಂದು ರಾಜೇಶ್ ಸಿಂಗ್ ಚೌಹಾಣ್ ಹೊಸ ಬಣದ ಬಗ್ಗೆ ಘೋಷಿಸಿದ್ದಾರೆ.

ದೇಶದ ಇತರೆ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಇಂದು ನಮ್ಮ ಸಂಘಟನೆಯು ಸಭೆಯನ್ನು ನಡೆಸಿತು. ನಮ್ಮ ಹೊಸ ಸಂಘಟನೆಯ ಹೆಸರು ಭಾರತೀಯ ಕಿಸಾನ್ ಯೂನಿಯನ್ (ಅಪಾಲಿಟಿಕಲ್) ಆಗಿರುತ್ತದೆ. ರಾಕೇಶ್ ಟಿಕಾಯತ್ ಅಥವಾ ನರೇಶ್ ಟಿಕಾಯತ್ ಬಗ್ಗೆ ನಮಗೆ ಯಾವುದೇ ಪ್ರತಿಕ್ರಿಯೆ ಇಲ್ಲ, ಅವರು ಏನು ಮಾಡಬೇಕೆಂದು ಬಯಸುತ್ತಾರೋ ಅದನ್ನು ಮಾಡುತ್ತಲೇ ಇರುತ್ತಾರೆ. ಇದರಿಂದಾಗಿ ಬಿಕೆಯು ರಾಜಕೀಯ ವಲಯವಾಗಿ ಮಾರ್ಪಟ್ಟಿತು. ರಾಜಕೀಯ ಪ್ರೇರಿತ ನಿರ್ಧಾರಗಳು ಬರಲು ಆರಂಭಿಸಿದವು. ನಾವು ರಾಕೇಶ್ ಟಿಕಾಯತ್ ಅವರೊಂದಿಗೆ ಮಾತನಾಡಿ ನಮ್ಮ ಕಳವಳವನ್ನು ವ್ಯಕ್ತಪಡಿಸಿದ್ದೇವೆ. ನಾವು ಬಿಕೆಯು ಅನ್ನು ರಚಿಸಲು ಸಾಕಷ್ಟು ಶ್ರಮಿಸಿದ್ದೇವೆ, ಆದರೆ ಅವರು ಒಂದು ಪಕ್ಷವನ್ನು ಬೆಂಬಲಿಸುವಂತೆ ಕೇಳಿದರು. ಅದಕ್ಕೆ ನಾವು ಆಕ್ಷೇಪಿಸುತ್ತೇವೆ. ನಮ್ಮ ಉದ್ದೇಶವು ರೈತರ ಸಮಸ್ಯೆಗಳನ್ನು ಪರಿಶೀಲಿಸುವುದು. ನಾವು ಯಾವುದೇ ಪಕ್ಷದ ಪರವಾಗಿ ಕೆಲಸ ಮಾಡುವುದಿಲ್ಲ.

ಮೂರು ಫಾರ್ಮ್ ಕಾನೂನುಗಳನ್ನು ರದ್ದುಗೊಳಿಸುವುದರೊಂದಿಗೆ ರೈತರ ಮುಕ್ತಾಯಗೊಂಡ ನಂತರ, ರಾಕೇಶ್ ಟಿಕಾಯತ್ ರಾಜಕೀಯ ಪಕ್ಷಗಳ ಪ್ರಚಾರದೊಂದಿಗೆ ಗುರುತಿಸಿಕೊಂಡಿದ್ದರು. ರೈತರ ಸಂಘಟನೆಯ ವಕ್ತಾರರಾಗಿ, ಟಿಕಾಯತ್ ಅವರ ರಾಜಕೀಯ ಸಂಬಂಧಗಳು ಅಚ್ಚರಿ ಮೂಡಿಸಿದ್ದವು ಎಂದು ಚೌಹಾಣ್ ತಿಳಿಸಿದರು.

Published On - 8:10 pm, Sun, 15 May 22

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ