AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shocking Video: ಮಂಗಾಟವಾಡಲು ಬೋನಿನ ಬಳಿ ಬಂದ ಯುವಕನ ಕೈ ಕಚ್ಚಿದ ಸಿಂಹ; ಭಯಾನಕ ವಿಡಿಯೋ ವೈರಲ್

Viral Video: ಶುಕ್ರವಾರ ಸೇಂಟ್ ಎಲಿಜಬೆತ್‌ನ ಜಮೈಕಾ ಮೃಗಾಲಯದಲ್ಲಿ ವ್ಯಕ್ತಿಯೊಬ್ಬ ಸಿಂಹದ ಪಂಜರದ ಒಳಗೆ ಕೈ ಹಾಕಿದ ಘಟನೆ ನಡೆದಿದೆ. ಈ ವೇಳೆ ಸಿಂಹ ಆತನ ಕೈಗಳನ್ನು ಕಚ್ಚಿ, ಬೆರಳು ಕಟ್ ಮಾಡಿದ ವಿಡಿಯೋ ವೈರಲ್ ಆಗಿದೆ.

Shocking Video: ಮಂಗಾಟವಾಡಲು ಬೋನಿನ ಬಳಿ ಬಂದ ಯುವಕನ ಕೈ ಕಚ್ಚಿದ ಸಿಂಹ; ಭಯಾನಕ ವಿಡಿಯೋ ವೈರಲ್
ಯುವಕನ ಕೈ ಕಚ್ಚಿರುವ ಸಿಂಹImage Credit source: India.com
TV9 Web
| Edited By: |

Updated on:May 23, 2022 | 3:47 PM

Share

ಕೆಲವರು ಝೂಗೆ (Zoo) ಹೋದಾಗ ಪ್ರಾಣಿಗಳನ್ನು ಸುಮ್ಮನೆ ನೋಡಿಕೊಂಡು ಬರುವುದನ್ನು ಬಿಟ್ಟು ಅವುಗಳ ಜೊತೆ ಹುಡುಗಾಟವಾಡಲು ಹೋಗುತ್ತಾರೆ. ಹಾಗೆ, ಹುಡುಗಾಟವಾಡಿದರೆ ಏನಾಗುತ್ತದೆ ಎಂಬುದಕ್ಕೆ ಇದೀಗ ವೈರಲ್ ಆಗಿರುವ ವಿಡಿಯೋ ಸಾಕ್ಷಿ. ಬೋನ್​ನಲ್ಲಿದ್ದ ಸಿಂಹವೊಂದನ್ನು (Lion) ಕೆಣಕಲು ಹೋದ ಪ್ರವಾಸಿಗ ಆ ಬೋನಿನ ಒಳಗೆ ಕೈ ಹಾಕಿ, ಸಿಂಹವನ್ನು ಕೆಣಕುತ್ತಿದ್ದ. ಇದರಿಂದ ಕೋಪಗೊಂಡ ಸಿಂಹ ಒಂದೆರಡು ಬಾರಿ ಆತನನ್ನು ನೋಡಿ ಘರ್ಜಿಸಿತು. ಅದರಿಂದ ಇನ್ನಷ್ಟು ಉದ್ರೇಕಿತನಾದ ಯುವಕ ತನ್ನ ಕೈಯನ್ನು ಬೋನಿನ ಒಳಗೆ ಹಾಕಿ ಮತ್ತೆ ಕೆಣಕಿದ. ಕೋಪಗೊಂಡ ಸಿಂಹ ಆತನ ಕೈಗಳನ್ನು ಕಚ್ಚಿ ಹಿಡಿದು ತನ್ನ ಆಕ್ರೋಶ ಹೊರಹಾಕಿದೆ. ಈ ಆಘಾತಕಾರಿ ವಿಡಿಯೋ (Shocking Video) ಇಂಟರ್ನೆಟ್​ನಲ್ಲಿ ಸಂಚಲನ ಮೂಡಿಸಿದೆ.

ಶುಕ್ರವಾರ ಸೇಂಟ್ ಎಲಿಜಬೆತ್‌ನ ಜಮೈಕಾ ಮೃಗಾಲಯದಲ್ಲಿ ವ್ಯಕ್ತಿಯೊಬ್ಬ ಸಿಂಹದ ಪಂಜರದ ಒಳಗೆ ಕೈ ಹಾಕಿದ ಘಟನೆ ನಡೆದಿದೆ. ಮನುಷ್ಯನ ನಿರಂತರ ಚುಡಾಯಿಸುವಿಕೆಯಿಂದ ಕೋಪಗೊಂಡ ಸಿಂಹ ತನ್ನ ಹಲ್ಲುಗಳನ್ನು ತೋರಿಸುತ್ತಾ, ಘರ್ಜಿಸುತ್ತಾ ಆ ವ್ಯಕ್ತಿಯನ್ನು ಎಚ್ಚರಿಸಲು ಪ್ರಯತ್ನಿಸಿತು. ಆದರೆ, ಆ ವ್ಯಕ್ತಿ ಅದರತ್ತ ಗಮನ ಕೊಡಲಿಲ್ಲ. ಮತ್ತೆ ಮತ್ತೆ ಆತ ಸಿಂಹವನ್ನು ಛೇಡಿಸತೊಡಗಿದಾಗ ಕೋಪಗೊಂಡ ಸಿಂಹವು ಆ ಯುವಕನ ಬೆರಳನ್ನು ಕಚ್ಚಿತು. ಮನುಷ್ಯನ ಬೆರಳು ಸಿಂಹದ ಬಾಯಿಯಲ್ಲಿ ಸಿಲುಕಿಕೊಂಡಿತು.

ಇದನ್ನೂ ಓದಿ
Image
Viral News: ಮೌಂಟ್ ಎವರೆಸ್ಟ್​ ಬೇಸ್ ಕ್ಯಾಂಪ್ ಹತ್ತಿದ 10 ವರ್ಷದ ಬಾಲಕಿ ರಿದಮ್!
Image
Trending: 80ರ ವರ್ಷದಲ್ಲಿ ಡೆಡ್‌ಲಿಫ್ಟ್‌ ಮಾಡುತ್ತಿರುವ ಅಜ್ಜಿಯ ವಿಡಿಯೋ ವೈರಲ್
Image
Viral Video: ಕೋತಿಗೆ ಅಂಗಡಿಯಿಂದ ಚಿಪ್ಸ್ ಪ್ಯಾಕೆಟ್ ಕದಿಯಲು ಸಹಾಯ ಮಾಡಿದ ನಾಯಿ; ಕ್ಯೂಟೆಸ್ಟ್​​ ವಿಡಿಯೋ ಇಲ್ಲಿದೆ

ಇದರಿಂದ ಗಾಬರಿಯಾದ ಯುವಕ ತನ್ನ ಕೈಗಳನ್ನು ಹೊರಗೆ ಎಳೆದುಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಬಿಡದ ಸಿಂಹ ಆತನ ಕೈಗಳನ್ನು ಗಟ್ಟಿಯಾಗಿ ಕಚ್ಚಿ ಹಿಡಿಯಿತು. ಇದರಿಂದ ಆ ಯುವಕನ ಕೈ ಬೆರಳುಗಳು ಅರ್ಧ ತುಂಡಾಗಿವೆ. ಸುತ್ತಲೂ ಇದ್ದವರು ಇದನ್ನು ಮೊಬೈಲ್​ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: Shocking Video: ನಡುರಸ್ತೆಯಲ್ಲೇ ಹೆಂಡತಿ, ಮಗಳನ್ನು ಕೊಂದು, ತಾನೂ ಶೂಟ್ ಮಾಡಿಕೊಂಡ ವ್ಯಕ್ತಿ; ಶಾಕಿಂಗ್ ವಿಡಿಯೋ ವೈರಲ್

ಪ್ರತ್ಯಕ್ಷದರ್ಶಿಯೊಬ್ಬರು ಈ ಕುರಿತು ಪ್ರತಿಕ್ರಿಯಿಸಿದ್ದು, ನಾನು ಮೊದಲು ಅದನ್ನು ತಮಾಷೆ ಎಂದು ಭಾವಿಸಿದೆ. ಅದು ಇಷ್ಟು ಗಂಭೀರವಾಗಿದೆ ಎಂದು ನಾನು ಅಂದುಕೊಂಡಿರಲಿಲ್ಲ. ಆ ಯುವಕ ನೆಲದ ಮೇಲೆ ಬಿದ್ದಾಗ ನಮಗೆ ಭಯವಾಯಿತು. ಆತನ ಕೈಗಳ ಚರ್ಮ ಮತ್ತು ಅವನ ಬೆರಳಿನ ಮೂಳೆ ಮುರಿದುಹೋಗಿದೆ ಎಂದು ಅವರು ಹೇಳಿದ್ದಾರೆ.

ಈ ವಿಡಿಯೋ ವೈರಲ್ ಆಗಿದ್ದು, ಸಿಂಹವನ್ನು ಕೆಣಕಿದ್ದಕ್ಕೆ ಹಲವರು ವ್ಯಕ್ತಿಯನ್ನು ಛೀಮಾರಿ ಹಾಕಿದ್ದಾರೆ. ಅತಿಯಾಗಿ ಹುಡುಗಾಟವಾಡಿದ್ದಕ್ಕೆ ಆತನಿಗೆ ಸರಿಯಾದ ಶಾಸ್ತಿಯಾಗಿದೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:44 pm, Mon, 23 May 22

Follow Us
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ಊರ್ವಶಿ: ಶೀರ್ಷಿಕೆ, ಫಸ್ಟ್ ಲುಕ್ ಪೋಸ್ಟರ್
ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ಊರ್ವಶಿ: ಶೀರ್ಷಿಕೆ, ಫಸ್ಟ್ ಲುಕ್ ಪೋಸ್ಟರ್
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ