SBI Personal Loan: ಎಸ್ಬಿಐ ಯೋನೋ ಮೂಲಕ ಫಟಾಫಟ್ ಪರ್ಸನಲ್ ಲೋನ್ ರಿಯಲ್ ಟೈಮ್ ಎಕ್ಸ್ಪ್ರೆಸ್ ಕ್ರೆಡಿಟ್
ಯೋನೋ ಮೂಲಕ ರಿಯಲ್ ಟೈಮ್ ಎಕ್ಸ್ಪ್ರೆಸ್ ಕ್ರೆಡಿಟ್ ನೀಡುವುದಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಘೋಷಣೆ ಮಾಡಿದೆ.
ಸ್ಟೇಟ್ ಬ್ಯಾಂಕ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಸೋಮವಾರ ಘೋಷಣೆ ಮಾಡಿದ ಪ್ರಕಾರ, ಯೋನೋ ಪ್ಲಾಟ್ಫಾರ್ಮ್ನಲ್ಲಿ (Yono) ರಿಯಲ್ ಟೈಮ್ ಎಕ್ಸ್ಪ್ರೆಸ್ ಕ್ರೆಡಿಟ್ ಪರಿಚಯಿಸುತ್ತಿದೆ. ಈ ಮೂಲಕ ಅರ್ಹ ಗ್ರಾಹಕರಿಗೆ 35 ಲಕ್ಷ ರೂಪಾಯಿ ತನಕ ವೈಯಕ್ತಿಕ ಸಾಲ (Personal Loan) ದೊರೆಯುತ್ತದೆ. ಬ್ಯಾಂಕ್ ತಿಳಿಸಿರುವ ಪ್ರಕಾರ, ಈ ಸಾಲದ ಉತ್ಪನ್ನವು ವೇತನದಾರ ಗ್ರಾಹಕರಿಗಾಗಿ ಇದೆ. ಎಕ್ಸ್ಪ್ರೆಸ್ ಕ್ರೆಡಿಟ್ ಇದೀಗ ಡಿಜಿಟಲ್ ರೂಪದಲ್ಲಿ ಸಿಗುತ್ತಿದ್ದು, ಗ್ರಾಹಕರು ಯೋನೋ ಮೂಲಕ ಇದನ್ನು ಪಡೆಯಬಹುದು. ಇದು ಶೇ 100ರಷ್ಟು ಕಾಗದರಹಿತ ಆಗಿರುತ್ತದೆ. ಮೊದಲಿಂದ ಕೊನೆ ತನ ಎಂಟು ಹಂತದ ಪಯಣ ಆಗಿರಲಿದೆ ಮತ್ತು ಡಿಜಿಟಲ್ ಅನುಭವ ನೀಡಲಿದೆ.
ರಿಯಲ್ ಟೈಮ್ ಎಕ್ಸ್ಪ್ರೆಸ್ ಸಾಲದ ಅಡಿಯಲ್ಲಿ ಕೇಂದ್ರ, ರಾಜ್ಯ ಸರ್ಕಾರ ಮತ್ತು ರಕ್ಷಣಾ ವಲಯದ ವೇತನದಾರ ಗ್ರಾಹಕರು ವೈಯಕ್ತಿಕ ಸಾಲ ಪಡೆಯುವ ಸಲುವಾಗಿ ಎಸ್ಬಿಐ ಶಾಖೆಗೆ ಭೇಟಿ ನೀಡುವ ಅಗತ್ಯ ಇಲ್ಲ. ಕ್ರೆಡಿಟ್ ಪರಿಶೀಲನೆ, ಅರ್ಹತೆ, ವಿತರಣೆ ಮತ್ತು ದಾಖಲಾತಿಗಳ ಸಂಗ್ರಹ ಎಲ್ಲವೂ ರಿಯಲ್ಟೈಮ್ನಲ್ಲಿ ಡಿಜಿಟಲ್ ಆಗಿ ಮುಗಿಯುತ್ತದೆ, ಎನ್ನಲಾಗಿದೆ.
ಎಸ್ಬಿಐ ಅಧ್ಯಕ್ಷ ದಿನೇಶ್ ಖರ ಮಾತನಾಡಿ, ರಿಯಲ್ ಟೈಮ್ ಎಕ್ಸ್ಪ್ರೆಸ್ ಕ್ರೆಡಿಟ್ ಸಾಲ ವ್ಯವಸ್ಥೆಯನ್ನು ರಿಯಲ್ಟೈಮ್ನಲ್ಲಿ ನಮ್ಮ ಅರ್ಹ ಗ್ರಾಹಕರಿಗೆ ಯೋನೋ ಮೂಲಕ ಪರಿಚಯಿಸುತ್ತಿರುವುದಕ್ಕೆ ಸಂತೋಷವಾಗಿದೆ ಎಂದಿದ್ದಾರೆ. ಈ ಎಕ್ಸ್ಪ್ರೆಸ್ ಕ್ರೆಡಿಟ್ ಉತ್ಪನ್ನದ ಮೂಲಕ ಸಾಲ ಪ್ರಕ್ರಿಯೆಯಲ್ಲಿ ನಮ್ಮ ಗ್ರಾಹಕರಿಗೆ ಡಿಜಿಟಲ್, ತಡೆರಹಿತ ಮತ್ತು ಕಾಗದರಹಿತ ಅನುಭವವನ್ನು ದೊರಕಿಸುತ್ತದೆ. ನಾವು ಎಸ್ಬಿಐನಲ್ಲಿ ಬ್ಯಾಂಕಿಂಗ್ ಸರಳಗೊಳಿಸಲು ನಿರಂತರವಾಗಿ ತಂತ್ರಜ್ಞಾನ ಮುಂಚೂಣಿಯ ವಿಸ್ತೃತ ಡಿಜಿಟಲ್ ಬ್ಯಾಂಕಿಂಗ್ ಅನುಭವವನ್ನು ಗ್ರಾಹಕರಿಗೆ ಒದಗಿಸುತ್ತಿದ್ದೇವೆ, ಎಂದು ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Electric Car Loan: ಎಸ್ಬಿಐನಿಂದ ಎಲೆಕ್ಟ್ರಿಕ್ ಕಾರು ಸಾಲ ಶೇ 7.25 ಬಡ್ಡಿ ದರದಿಂದ ಆರಂಭ