Electric Car Loan: ಎಸ್​ಬಿಐನಿಂದ ಎಲೆಕ್ಟ್ರಿಕ್ ಕಾರು ಸಾಲ ಶೇ 7.25 ಬಡ್ಡಿ ದರದಿಂದ ಆರಂಭ

ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾವು ಎಲೆಕ್ಟ್ರಿಕ್ ಕಾರು ಖರೀದಿಗಾಗಿ ಗ್ರೀನ್ ಕಾರ್ ಲೋನ್ ನೀಡುತ್ತಿದೆ. ಇದರ ಬಡ್ಡಿ ದರ ಶೇ 7.25ರಿಂದ ಶುರುವಾಗುತ್ತದೆ.

Electric Car Loan: ಎಸ್​ಬಿಐನಿಂದ ಎಲೆಕ್ಟ್ರಿಕ್ ಕಾರು ಸಾಲ ಶೇ 7.25 ಬಡ್ಡಿ ದರದಿಂದ ಆರಂಭ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: May 22, 2022 | 7:43 AM

ಎಲೆಕ್ಟ್ರಿಕ್ ವಾಹನಗಳನ್ನು ಆಯ್ಕೆ ಮಾಡಲು ಭಾರತವು ನಾಗರಿಕರನ್ನು ಪ್ರೋತ್ಸಾಹಿಸುತ್ತಿದೆ. 2030ರ ವೇಳೆಗೆ ಶೇ 100ರಷ್ಟು ಎಲೆಕ್ಟ್ರಿಕ್ ವಾಹನ ರಾಷ್ಟ್ರವಾಗುವ ಗುರಿಯನ್ನು ಸರ್ಕಾರ ಹೊಂದಿದೆ ಮತ್ತು ಅದಕ್ಕೆ ಅನುಗುಣವಾಗಿ ಅನೇಕ ಪ್ರಮುಖ ಉಪಕ್ರಮಗಳನ್ನು ಘೋಷಿಸಲಾಗಿದೆ. ಆಕರ್ಷಕ ಸಾಲಗಳನ್ನು ನೀಡುವ ಮೂಲಕ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಪ್ರೇರೇಪಿಸಲು ಬ್ಯಾಂಕ್​ಗಳು ಕ್ರಮಗಳನ್ನು ಕೈಗೊಂಡಿವೆ. ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು (SBI) ಜನರು ತಮ್ಮ ಕಾರ್ಬನ್ ಫುಟ್‌ಪ್ರಿಂಟ್ ಅನ್ನು ಕಡಿಮೆ ಮಾಡಲು ತಮ್ಮ ಗ್ರೀನ್ ಕಾರ್ ಲೋನ್ (Car Loan) ಯೋಜನೆ ಮೂಲಕ ಎಲೆಕ್ಟ್ರಿಕಲ್ ವಾಹನಗಳಿಗೆ ಅರ್ಜಿ ಸಲ್ಲಿಸಲು ಪ್ರೋತ್ಸಾಹಿಸುತ್ತದೆ.

ಈ ವಾರದ ಆರಂಭದಲ್ಲಿ ಎಸ್‌ಬಿಐ ತನ್ನ ಟ್ವಿಟ್ಟರ್ ಖಾತೆಯ ಮೂಲಕ, “ಭಾರತದ ಹಸಿರು ಭವಿಷ್ಯವನ್ನು ತುಂಬುತ್ತಿದೆ! ಜನರು ತಮ್ಮ ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡಲು ಮತ್ತು ಎಲೆಕ್ಟ್ರಿಕ್ ವಾಹನಗಳನ್ನು ಆಯ್ಕೆ ಮಾಡಲು ಉತ್ತೇಜಿಸುವುದಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಭಾರತದ ಮೊದಲ ಗ್ರೀನ್ ಕಾರ್ ಸಾಲವನ್ನು ಒದಗಿಸುತ್ತಿದೆ. “ಎಲೆಕ್ಟ್ರಿಕ್ ವಾಹನಗಳಿಗಾಗಿ ಗ್ರೀನ್ ಕಾರ್ ಲೋನ್ ಯೋಜನೆಯಲ್ಲಿ ಎಸ್​ಬಿಐ ಮೇ 15, 2022ರಿಂದ ಜಾರಿಗೆ ಬರುವಂತೆ ಶೇ 7.25ರಿಂದ ಶೇ 7.60ರ ವರೆಗೆ ಬಡ್ಡಿದರದಲ್ಲಿ ನೀಡುತ್ತದೆ. ಮರುಪಾವತಿ ಅವಧಿಯು ಕನಿಷ್ಠ 3 ವರ್ಷಗಳು ಮತ್ತು ಗರಿಷ್ಠ 8 ವರ್ಷಗಳವರೆಗೆ ಇರುತ್ತದೆ. ಸಾಲವನ್ನು ಮಂಜೂರು ಮಾಡಲು ಅರ್ಹ ವಯಸ್ಸಿನ ಗುಂಪು 21 ವರ್ಷದಿಂದ 67 ವರ್ಷಗಳು.

ಎಸ್​ಬಿಐ ತನ್ನ ಗ್ರಾಹಕರಿಗೆ ಸಾಮಾನ್ಯ ಕಾರ್ ಸಾಲಗಳಿಗೆ ಅನ್ವಯವಾಗುವ ಬಡ್ಡಿ ದರದಲ್ಲಿ 20 ಬೇಸಿಸ್ ಪಾಯಿಂಟ್‌ಗಳ ಹೆಚ್ಚಿನ ರಿಯಾಯಿತಿಯನ್ನು ನೀಡುತ್ತದೆ. ಇದರ ಮಾರ್ಜಿನ್ ಆನ್-ರೋಡ್ ಬೆಲೆಯ ಶೇ 90ರ ವರೆಗೆ ಇರುತ್ತದೆ. ಯೋಜನೆಯಡಿ, ಎಸ್​ಬಿಐ ಮೂರು ವರ್ಗಗಳಿಗೆ ಎಲೆಕ್ಟ್ರಿಕ್ ವಾಹನ ಸಾಲಗಳನ್ನು ನೀಡುತ್ತದೆ. ಮೊದಲ ವರ್ಗವು ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳ (ಮಹಾರತ್ನ/ನವರತ್ನಗಳು/ಮಿನಿರತ್ನಗಳು) ಉದ್ಯೋಗಿಗಳಾದ ರಕ್ಷಣಾ ವೇತನ ಪ್ಯಾಕೇಜ್ (DSP), ಪ್ಯಾರಾ ಮಿಲಿಟರಿ ವೇತನ ಪ್ಯಾಕೇಜ್ (PMSP) ಮತ್ತು ಭಾರತೀಯ ಕರಾವಳಿ ಗಾರ್ಡ್ ಪ್ಯಾಕೇಜ್ (IGSP) ಗ್ರಾಹಕರು ಮತ್ತು ವಿವಿಧ ರಕ್ಷಣಾ ಸಂಸ್ಥೆಗಳ ಶಾರ್ಟ್ ಕಮಿಷನ್ಡ್ ಅಧಿಕಾರಿಗಳು. ಸರ್ಕಾರಿ ಉದ್ಯೋಗಿಗಳಿಗೆ ಎಸ್‌ಬಿಐ ಕನಿಷ್ಠ ರೂ. 3 ಲಕ್ಷ ಆದಾಯದ ಮಾನದಂಡವನ್ನು ಇರಿಸುತ್ತದೆ. ಈ ಆದಾಯದ ಮೇಲೆ ಎಸ್​ಬಿಐ ನಿವ್ವಳ ಮಾಸಿಕ ಆದಾಯದ 48 ಪಟ್ಟು ಗರಿಷ್ಠ ಸಾಲವನ್ನು ನೀಡುತ್ತದೆ.

ಎರಡನೆ ವರ್ಗವು ವೃತ್ತಿಪರರು, ಸ್ವಯಂ ಉದ್ಯೋಗಿಗಳು, ಉದ್ಯಮಿಗಳು, ಆದಾಯ ತೆರಿಗೆ ಮೌಲ್ಯಮಾಪನ ಮಾಡುವ ಸ್ವಾಮ್ಯದ/ಪಾಲುದಾರಿಕೆ ಸಂಸ್ಥೆಗಳಿಗೆ. ಈ ವರ್ಗಕ್ಕೆ ಆದಾಯದ ಮಾನದಂಡಗಳನ್ನು ನಿವ್ವಳ ಲಾಭ ಅಥವಾ ವಾರ್ಷಿಕ ರೂ. 3 ಲಕ್ಷದ ಒಟ್ಟು ತೆರಿಗೆಯ ಆದಾಯ ಎಂದು ವ್ಯಾಖ್ಯಾನಿಸಲಾಗಿದೆ. ಎರಡನೆಯ ವರ್ಗಕ್ಕೆ ಎಸ್​ಬಿಐ ಸವಕಳಿ ಮತ್ತು ಅಸ್ತಿತ್ವದಲ್ಲಿರುವ ಎಲ್ಲ ಸಾಲಗಳ ಮರುಪಾವತಿಯನ್ನು ಸೇರಿಸಿದ ನಂತರ ಐಟಿಆರ್ ಪ್ರಕಾರ, ಗರಿಷ್ಠ ನಿವ್ವಳ ಲಾಭ ಅಥವಾ ಒಟ್ಟು ತೆರಿಗೆ ಆದಾಯದ 4 ಪಟ್ಟು ನೀಡುತ್ತದೆ.

ಮೂರನೆಯ ವರ್ಗವೆಂದರೆ, ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿರುವ ವ್ಯಕ್ತಿಗಳು. ಆದಾಯದ ಮಾನದಂಡಗಳನ್ನು ಕನಿಷ್ಠ ರೂ. 4 ಲಕ್ಷ ನಿವ್ವಳ ವಾರ್ಷಿಕ ಆದಾಯಕ್ಕೆ ನಿಗದಿಪಡಿಸಲಾಗಿದೆ. ನಿವ್ವಳ ವಾರ್ಷಿಕ ಆದಾಯದ 3 ಪಟ್ಟು ಗರಿಷ್ಠ ಸಾಲ ನೀಡಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ