ಪೆಟ್ರೋಲ್ (Petrol), ಡೀಸೆಲ್ (Diesel) ದರ ಏರಿಕೆಯಿಂದ ಕಂಗೆಟ್ಟಿದ್ದ ಜನರಿಗೆ ಕೇಂದ್ರ ಸರ್ಕಾರ ಕೊನೆಗೂ ಸಿಹಿ ಸುದ್ದಿ ನೀಡಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಕೇಂದ್ರ ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ (Central Government) ಕಡಿತ ಮಾಡಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಿನ್ನೆ (ಶನಿವಾರ, ಮೇ 21) ಟ್ವೀಟ್ ಮಾಡಿ, ಪ್ರತಿ ಲೀಟರ್ ಪೆಟ್ರೋಲ್ ಮೇಲೆ 8 ರೂಪಾಯಿ ಮತ್ತು ಪ್ರತಿ ಲೀಟರ್ ಡೀಸೆಲ್ ಮೇಲೆ 6 ರೂಪಾಯಿ ಸುಂಕವನ್ನು ಇಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಇಂದಿನ ಇಂಧನ ದರ ಹೀಗಿದೆ: ಕೇಂದ್ರ ಸರ್ಕಾರ ಅಬಕಾರಿ ಸುಂಕ ಇಳಿಸಿದ್ದರಿಂದ ತೈಲ ದರ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 101.96 ರೂ. ಪ್ರತಿ ಲೀಟರ್ ಡೀಸೆಲ್ ದರ 87.89 ರೂಪಾಯಿ ನಿಗದಿಯಾಗಿದೆ. ನಗರದಲ್ಲಿ ನಿನ್ನೆ ಒಂದು ಲೀಟರ್ ಪೆಟ್ರೋಲ್ಗೆ 111.11 ರೂ. ಹಾಗೂ ಒಂದು ಲೀಟರ್ ಡೀಸೆಲ್ಗೆ 94.81 ರೂ. ಇತ್ತು. ಇನ್ನು ಮೈಸೂರಿನಲ್ಲಿ ಲೀಟರ್ ಪೆಟ್ರೋಲ್ ದರ 101.46, ಡೀಸೆಲ್ ದರ 87.45 ರೂಪಾಯಿ ಇದೆ.
ಇದನ್ನೂ ಓದಿ: Health care tips: ಕೊಲೆಸ್ಟ್ರಾಲ್ ಹೆಚ್ಚಾದರೇ ದೇಹದ ಯಾವ ಭಾಗಗಳು ಹಾನಿಗೀಡಾಗುತ್ತವೆ ಗೊತ್ತಾ..! ಇಲ್ಲಿದೆ ಮಾಹಿತಿ
ವಾಹನ ಸವಾರರಿಂದ ಮಿಶ್ರ ಪ್ರತಿಕ್ರಿಯೆ: ಇಂಧನ ದರ ಇಳಿಕೆಗೆ ಬೆಂಗಳೂರಿನಲ್ಲಿ ವಾಹನ ಸವಾರರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಕೊಂಚ ಬೆಲೆ ಇಳಿಕೆಯಿಂದ ಬೈಕ್ ಹೊರಗೆ ತೆಗೆದಿದ್ದೇನೆ. 110ಕ್ಕಿಂತ ಹೆಚ್ಚಿದ್ದ ಟೈಂನಲ್ಲಿ ಬಸ್ನಲ್ಲಿ ಪ್ರಯಾಣ ಮಾಡುತಿದ್ದೆ. ಈಗ ಕೊಂಚ ಪೆಟ್ರೋಲ್ ಇಳಿಕೆಯಿಂದ ಖುಷಿಯಾಗಿದೆ ಎಂದು ಬೈಕ್ ಸವಾರ ಹೇಳಿದ್ದಾರೆ. ಕಡಿಮೆ ಅಂದರೆ 80 ರೂ. ಬಂದರೆ ನಮಗೆ ಖುಷಿ. ಸ್ವಲ್ಪ ಮಟ್ಟಿಗೆ ಇಳಿಸುವುದರಿಂದ ನಮಗೇನೂ ಉಪಯೋಗ ಆಗೊಲ್ಲ. ಇವತ್ತಿನ ಬೆಲೆ ಇಳಿಕೆ ನಮಗೆ ಹೆಚ್ಚು ತೃಪ್ತಿ ತಂದಿಲ್ಲ ಎಂದು ಕೆಲ ಚಾಲಕರು ಹೇಳಿದರು.
ಇದನ್ನೂ ಓದಿ: RBI Dividend: ಆರ್ಬಿಐನಿಂದ ಕೇಂದ್ರ ಸರ್ಕಾರಕ್ಕೆ 30,307 ಕೋಟಿ ರೂಪಾಯಿ ಡಿವಿಡೆಂಡ್ ಅನುಮೋದನೆ
ಭಾರತದ ವಿವಿಧ ನಗರಗಳಲ್ಲಿ ಇಂಧನ ದರ ಹೀಗಿದೆ: * ದೆಹಲಿ – ಪೆಟ್ರೋಲ್ ದರ 96.72 ರೂ. ಡೀಸೆಲ್ ದರ 89.62 ರೂಪಾಯಿ ಇದೆ.
* ಚೆನೈ- ಪೆಟ್ರೋಲ್ ದರ 102.63 ರೂ. ಡೀಸೆಲ್ ದರ 94.24 ರೂಪಾಯಿ ಇದೆ.
* ಮುಂಬೈ- ಪೆಟ್ರೋಲ್ ದರ 111.35 ರೂ. ಡೀಸೆಲ್ ದರ 97.28 ರೂಪಾಯಿ ಇದೆ.
* ಹೈದಾರಬಾದ್- ಪೆಟ್ರೋಲ್ ದರ 109.66 ರೂ. ಡೀಸೆಲ್ ದರ 97.82 ರೂಪಾಯಿ ಇದೆ.
* ಶ್ರೀನಗರ – ಪೆಟ್ರೋಲ್ ದರ 101.67 ರೂ. ಡೀಸೆಲ್ ದರ 86.82 ರೂಪಾಯಿ ಇದೆ.
* ಪಾಟ್ನಾ – ಪೆಟ್ರೋಲ್ ದರ 107.24 ರೂ. ಡೀಸೆಲ್ ದರ 94.04 ರೂಪಾಯಿ ಇದೆ.
ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪರಿಷ್ಕರಣೆ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಪ್ರತಿನಿತ್ಯ ಹೊಸ ದರಗಳು ಬೆಳಿಗ್ಗೆ 6 ಗಂಟೆಗೆ ನಿಗದಿಯಾಗುತ್ತವೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್), ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಐಒಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್ಪಿಸಿಎಲ್) ಇಂಧನ ಬೆಲೆಗಳನ್ನು ಪ್ರತಿದಿನ ಅಂತರರಾಷ್ಟ್ರೀಯ ಮಾನದಂಡಗಳು ಮತ್ತು ವಿದೇಶಿ ವಿನಿಮಯ ದರಗಳೊಂದಿಗೆ ಪರಿಷ್ಕರಿಸುತ್ತವೆ. ಆ ಮೂಲಕ ವಿದೇಶಿ ವಿನಿಮಯ ದರಗಳ ಜತೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆಗಳು ಏನೆಂಬುದನ್ನು ಅವಲಂಬಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗುತ್ತವೆ.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ