AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RBI Dividend: ಆರ್​ಬಿಐನಿಂದ ಕೇಂದ್ರ ಸರ್ಕಾರಕ್ಕೆ 30,307 ಕೋಟಿ ರೂಪಾಯಿ ಡಿವಿಡೆಂಡ್ ಅನುಮೋದನೆ

ಭಾರತೀಯ ರಿಸರ್ವ್ ಬ್ಯಾಂಕ್​ನಿಂದ ಕೇಂದ್ರ ಸರ್ಕಾರಕ್ಕೆ 30,307 ಕೋಟಿ ರೂಪಾಯಿ ಡಿವಿಡೆಂಡ್ ಅನುಮೋದನೆ ನೀಡಲಾಗಿದೆ. ಇದು ಕಳೆದ ಸಾಲಿಗೆ ಹೋಲಿಸಿದರೆ ಬಹಳ ಕಡಿಮೆ ಪ್ರಮಾಣದ್ದಾಗಿದೆ.

RBI Dividend: ಆರ್​ಬಿಐನಿಂದ ಕೇಂದ್ರ ಸರ್ಕಾರಕ್ಕೆ 30,307 ಕೋಟಿ ರೂಪಾಯಿ ಡಿವಿಡೆಂಡ್ ಅನುಮೋದನೆ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಸಾಂದರ್ಭಿಕ ಚಿತ್ರ)
TV9 Web
| Edited By: |

Updated on: May 22, 2022 | 7:53 AM

Share

ಭಾರತೀಯ ರಿಸರ್ವ್ ಬ್ಯಾಂಕ್ (RBI) 2021-2022ರ ಆರ್ಥಿಕ ವರ್ಷಕ್ಕೆ 30,307 ಕೋಟಿ ರೂಪಾಯಿಗಳನ್ನು ಸರ್ಕಾರಕ್ಕೆ ಡಿವಿಡೆಂಡ್ ಆಗಿ ನೀಡಲು ಅನುಮೋದಿಸಿದೆ. ಇದು ಕಳೆದ ವರ್ಷದ ಪಾವತಿಗಿಂತ ಬಹಳ ಕಡಿಮೆಯಾಗಿದೆ. ರಿಸರ್ವ್ ಬ್ಯಾಂಕ್ ಹಣಕಾಸು ವರ್ಷ 2021ರಲ್ಲಿ ಒಂಬತ್ತು ತಿಂಗಳ ಅವಧಿಯ ಲಾಭಾಂಶವಾಗಿ 99,122 ಕೋಟಿ ರೂಪಾಯಿ ನೀಡಿತ್ತು. ಅಂದಹಾಗೆ ಆರ್​ಬಿಐ ಮಂಡಳಿಯ 596ನೇ ಸಭೆಯು ಗವರ್ನರ್ ಶಕ್ತಿಕಾಂತ ದಾಸ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. 2020ರಲ್ಲಿ ಕೇಂದ್ರೀಯ ಬ್ಯಾಂಕ್ ಜುಲೈನಿಂದ ಜೂನ್​ವರೆಗೆ ಇದ್ದದ್ದನ್ನು ಸರ್ಕಾರದ ಹಣಕಾಸು ವರ್ಷಕ್ಕೆ ಹೊಂದಿಕೊಳ್ಳುವ ಪ್ರಯತ್ನದಲ್ಲಿ ಏಪ್ರಿಲ್-ಮಾರ್ಚ್ ಲೆಕ್ಕಪರಿಶೋಧಕ ವರ್ಷಕ್ಕೆ ಬದಲಾಯಿಸಿತು. ಇದನ್ನು ಸಹ ಪರಿಗಣಿಸಿ, ಹಣಕಾಸು ವರ್ಷ 2021ರ ಲಾಭಾಂಶವು ಹಣಕಾಸು ವರ್ಷ 2022ಕ್ಕಾಗಿನ ಲಾಭಾಂಶಕ್ಕಿಂತ ಹೆಚ್ಚಾಗಿತ್ತು, ಇದು ಹನ್ನೆರಡು ತಿಂಗಳ ಅವಧಿಗಾಗಿತ್ತು.

ಡಿವಿಡೆಂಡ್ ಇತ್ಯಾದಿಗಳಿಗೆ ಸಂಬಂಧಿಸಿದ ಎಲ್ಲ ವಿವರಗಳೊಂದಿಗೆ ಆರ್‌ಬಿಐ ತನ್ನ ವಾರ್ಷಿಕ ವರದಿಯನ್ನು ತಿಂಗಳಾಂತ್ಯದಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. ರಿಸರ್ವ್ ಬ್ಯಾಂಕ್‌ನಿಂದ ಬರುವ ಲಾಭಾಂಶವು ಸರ್ಕಾರದ ಮುಖ್ಯ ಆದಾಯದ ಮೂಲಗಳಲ್ಲಿ ಒಂದಾಗಿದೆ. ಇದು ಈಗಾಗಲೇ ದಾಖಲೆಯ ಅಧಿಕ ಹಣದುಬ್ಬರದೊಂದಿಗೆ ಹೆಣಗಾಡುತ್ತಿದೆ. ಕೇಂದ್ರೀಯ ಬ್ಯಾಂಕ್‌ನಿಂದ ಲಾಭಾಂಶದಲ್ಲಿ ಗಮನಾರ್ಹ ಕುಸಿತವು ಸರ್ಕಾರಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ಬಜೆಟ್ 2022ರ ಪ್ರಕಟಣೆಗಳ ಪ್ರಕಾರ, ಹಣಕಾಸು ವರ್ಷ 2023ರಲ್ಲಿ ಆರ್​ಬಿಐ ಮತ್ತು ಇತರ ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಂದ (PSBs) 73,948 ಕೋಟಿ ರೂಪಾಯಿಗಳನ್ನು ಪಡೆಯುವ ನಿರೀಕ್ಷೆಯನ್ನು ಸರ್ಕಾರ ಹೊಂದಿದೆ. ಹಣದ ಪೂರೈಕೆಯನ್ನು ನಿಯಂತ್ರಿಸಲು ಹಣಕಾಸು ವರ್ಷ 2022ರಲ್ಲಿ ರಿವರ್ಸ್ ರೆಪೋ ದರದಲ್ಲಿನ ಹೆಚ್ಚಳದಿಂದಾಗಿ ಕೇಂದ್ರಕ್ಕೆ ಕಡಿಮೆ ಪಾವತಿ ಆಗಬಹುದು.

ರಿವರ್ಸ್ ರೆಪೋ ದರವು ಆರ್ಥಿಕತೆಯಿಂದ ಹೆಚ್ಚುವರಿ ಲಿಕ್ವಿಡಿಟಿಯನ್ನು ಸೆಳೆಯಲು ವಾಣಿಜ್ಯ ಬ್ಯಾಂಕ್​ಗಳಿಂದ ಕೇಂದ್ರ ಬ್ಯಾಂಕ್ ಸಾಲ ಪಡೆಯುವ ಬಡ್ಡಿ ದರವಾಗಿದೆ. ಹಣಕಾಸು ವರ್ಷ 2020 ರಲ್ಲಿ ಕೋವಿಡ್ ಸಾಂಕ್ರಾಮಿಕ ರೋಗವು ದೇಶಕ್ಕೆ ಹೊಡೆತ ನೀಡಿದಾಗ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ರೆಪೊ ದರಗಳನ್ನು 115 ಬೇಸಿಸ್ ಪಾಯಿಂಟ್​ಗಳಷ್ಟು ಕಡಿಮೆ ಮಾಡುವ ಮೂಲಕ ವ್ಯವಸ್ಥೆಯಲ್ಲಿ ಭಾರಿ ಪ್ರಮಾಣದ ಲಿಕ್ವಿಡಿಟಿಯನ್ನು ಪೂರೈಸಿತ್ತು. ಹಣಕಾಸು ವರ್ಷ 2022ರಲ್ಲಿ ಕೊರೊನಾ ರೋಗವು ನಿಯಂತ್ರಣಕ್ಕೆ ಬಂದಾಗ ಮತ್ತು ಆರ್ಥಿಕತೆಯು ಮತ್ತೆ ಆರಂಭಗೊಂಡಾಗ ಆರ್​ಬಿಐ ಹಣದ ಪೂರೈಕೆಯನ್ನು ಕಡಿಮೆ ಮಾಡಲು ರಿವರ್ಸ್ ರೆಪೋ ದರವನ್ನು ಹೆಚ್ಚಿಸಿತು. ಇದಲ್ಲದೆ, ಬ್ಯಾಂಕಿಂಗ್ ವಲಯದ ನಿಯಂತ್ರಕವು ಶೇ 5.5 ಆಕಸ್ಮಿಕ ಅಪಾಯದ ಬಫರ್ ಅನ್ನು ಇರಿಸಿಕೊಳ್ಳಲು ನಿರ್ಧರಿಸಿದೆ.

ಹೆ್ಚ್ಚಿನ ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ