Viral Video: ವೀಲ್​ಚೇರ್​​ನಲ್ಲಿ ಕುಳಿತ ಗೆಳೆಯನಿಗೆ ಆಟವಾಡಲು ಸಹಾಯ ಮಾಡಿದ ಬಾಲಕ; ವಿಡಿಯೋ ವೈರಲ್

Trending Video: ತನ್ನ ವಿಕಲಚೇತನ ಸ್ನೇಹಿತನ ಎಲ್ಲ ಆಸೆಗಳನ್ನೂ ಈಡೇರಿಸಬೇಕೆಂದು ಬಯಸಿದ ಆತನ ಗೆಳೆಯ ಶಾಲೆಯ ಗುಂಪಿನ ಚಟುವಟಿಕೆಯಲ್ಲಿ ಭಾಗವಹಿಸಲು ಸಹಾಯ ಮಾಡಿದ್ದಾನೆ. ಈ ವಿಡಿಯೋ ನೆಟ್ಟಿಗರಿಂದ ಮೆಚ್ಚುಗೆ ಗಳಿಸಿದೆ.

Viral Video: ವೀಲ್​ಚೇರ್​​ನಲ್ಲಿ ಕುಳಿತ ಗೆಳೆಯನಿಗೆ ಆಟವಾಡಲು ಸಹಾಯ ಮಾಡಿದ ಬಾಲಕ; ವಿಡಿಯೋ ವೈರಲ್
ವೀಲ್​ಚೇರ್​​ನಲ್ಲಿ ಕುಳಿತ ಗೆಳೆಯನಿಗೆ ಆಟವಾಡಲು ಸಹಾಯ ಮಾಡುತ್ತಿರುವ ಸ್ನೇಹಿತ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: May 23, 2022 | 8:10 PM

ಸುಮ್ಮನೆ ಇಂಟರ್ನೆಟ್​ನಲ್ಲಿ (Internet) ಕಣ್ಣಾಡಿಸಿದರೂ ಸಾಕು ಸಾವಿರಾರು ಸ್ಫೂರ್ತಿದಾಯಕ, ತಮಾಷೆಯ, ಸಂದೇಶವಿರುವ, ಎಮೋಷನಲ್ ಹೀಗೆ ನಾನಾ ರೀತಿಯ ವಿಡಿಯೋಗಳು ಕಾಣಸಿಗುತ್ತವೆ. ವೀಲ್​ಚೇರ್​​ನಲ್ಲಿ (Wheelchair) ಕುಳಿತಿದ್ದ ಗೆಳೆಯನಿಗೆ ಶಾಲೆಯ ಆಟದಲ್ಲಿ ಭಾಗವಹಿಸಲು ಸಹಾಯ ಮಾಡುವ ಹುಡುಗನ ವಿಡಿಯೋ ವೈರಲ್ (Video Viral) ಆಗಿದೆ. ಈ ಮುಗ್ಧ ಸ್ನೇಹವನ್ನು ನೋಡಿದರೆ ಕಣ್ತುಂಬಿ ಬರುವುದು ಗ್ಯಾರಂಟಿ.

ತನ್ನ ವಿಕಲಚೇತನ ಸ್ನೇಹಿತನ ಎಲ್ಲ ಆಸೆಗಳನ್ನೂ ಈಡೇರಿಸಬೇಕೆಂದು ಬಯಸಿದ ಆತನ ಗೆಳೆಯ ಶಾಲೆಯ ಗುಂಪಿನ ಚಟುವಟಿಕೆಯಲ್ಲಿ ಭಾಗವಹಿಸಲು ಸಹಾಯ ಮಾಡಿದ್ದಾನೆ. ಈ ವಿಡಿಯೋವನ್ನು ಫ್ರೆಡ್ ಷುಲ್ಟ್ಜ್ ಎಂಬುವವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದುವರೆಗೆ ಈ ವಿಡಿಯೋ 8 ಲಕ್ಷ ವೀಕ್ಷಣೆಗಳನ್ನು ಪಡೆದಿದೆ.

ಶಾಲೆಯ ಗುಂಪಿನ ಚಟುವಟಿಕೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳ ಗುಂಪನ್ನು ವೀಡಿಯೊದಲ್ಲಿ ನೋಡಬಹುದು. ಈ ಹುಡುಗ ವೀಲ್​ಚೇರನ್ನು ತಳ್ಳುವ ಮೂಲಕ ತನ್ನ ಸ್ನೇಹಿತನಿಗೆ ಸಹಾಯ ಮಾಡಿದನು. ವೀಲ್​ಚೇರ್​ನಲ್ಲಿದ್ದುಕೊಂಡೇ ಅಂತಿಮ ಹಂತವನ್ನು ತಲುಪಲು ಓಡುತ್ತಿದ್ದ ಇತರ ಮಕ್ಕಳೊಂದಿಗೆ ಸ್ಪರ್ಧಿಸಿದನು. ಆ ಹುಡುಗ ತುಂಬಾ ಕ್ರಿಯಾಶೀಲನಾಗಿದ್ದ. ಹಾಗೇ, ತಾನು ಕೂಡ ಇತರ ವಿದ್ಯಾರ್ಥಿಗಳಿಗೆ ಸರಿಸಮಾನ ಎಂದು ಭಾವಿಸಿ ಖುಷಿಪಟ್ಟ.

ಇದನ್ನೂ ಓದಿ: Viral Video: ಮಂಟಪದಲ್ಲೇ ವರನ ತಲೆಯಿಂದ ಕೆಳಗೆ ಬಿತ್ತು ವಿಗ್; ಮದುವೆಯೇ ಬೇಡವೆಂದ ವಧು!

ಈ ವಿಡಿಯೋ ನೆಟ್ಟಿಗರಿಂದ ಭಾರೀ ಮೆಚ್ಚುಗೆ ಗಳಿಸಿದೆ. ನನ್ನ ಮಗ ಕೂಡ ವೀಲ್​ಚೇರ್ ಬಳಸುತ್ತಾನೆ. ಇತರ ಮಕ್ಕಳು ಅವನಿಗೆ ಎಲ್ಲ ರೀತಿಯ ಕೆಲಸಗಳನ್ನು ಮಾಡಿಕೊಟ್ಟು ಸಹಾಯ ಮಾಡುತ್ತಾರೆ. ಮಕ್ಕಳ ಮನಸು ಪರಿಶುದ್ಧವಾಗಿರುತ್ತದೆ ಎಂದು ಈ ವಿಡಿಯೋ ನೆಟ್ಟಿಗರೊಬ್ಬರು ತಮ್ಮ ಅನುಭವವನ್ನು ಕೂಡ ಹಂಚಿಕೊಂಡಿದ್ದಾರೆ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್