Viral Video : ಟ್ರೋಲ್ ಮಾಡಿದವರನ್ನು ತರಾಟೆಗೆ ತೆಗೆದುಕೊಂಡ ಆಟೋ ಚಾಲಕ ! ಇಲ್ಲಿದೆ ವಿಡಿಯೋ
ಚಂದು ಚಂದು.. ಎಂದು ಡಬ್ಬ್ ಮಾಡಿ ಶಂಕರ್ ನಾಗ್ ಅವರ ಒಂದು ಸಿನಿಮಾದ ಹಾಡನ್ನು ಹೇಳಿದ್ದಾರೆ. ತನ್ನ ಆಟೋದಲ್ಲಿ ಶಂಕರ್ ನಾಗ್ ಹಾಗೂ ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರವನ್ನು ಹಾಕಿದ್ದಾರೆ.
ಟ್ರೋಲ್ ಟ್ರೋಲ್… ಯಾವುದೇ ಒಂದು ವಿಷಯವನ್ನು ಇಟ್ಟುಕೊಂಡು ಟ್ರೋಲ್ ಮಾಡುವುದನ್ನು ದಿನ ನಿತ್ಯವು ಕಾಣುತ್ತೇವೆ. ಅವುಗಳು ಸಕಾರಾತ್ಮಕ ಅಥವ ಋಣಾತ್ಮಕವಾಗಿದ್ದರು ಟ್ರೋಲ್ ಮಾಡುವ ಕೆಲವೊಂದು ಟ್ರೋಲ್ ಪೇಜ್ ಗಳು ಇವೆ. ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಹಾವಳಿ ಹೆಚ್ಚಾಗಿರುವುದು ನಿಜ, ಆದರೆ ಅವುಗಳಿಂದ ಕೆಲವೊಂದು ಒಳ್ಳೆಯ ಕೆಲಸವು ಆಗಿದೆ. ಇದರ ಜೊತೆಗೆ ಇದರಿಂದ ಕೆಲವೊಂದು ವ್ಯಕ್ತಿಗಳಿಗೆ ಬೇಜಾರುಗುವುದು ಇದೆ. ಸಾಮಾಜಿಕ ಜಾಲತಾಣಲದಲ್ಲಿ ವೈಯಕ್ತಿಕವಾಗಿ ಹಾಕಿರುವ ವಿಡಿಯೋಗಳನ್ನು ಟ್ರೋಲ್ ಪೇಜ್ ಗಳು ತಮ್ಮ ಟ್ರೋಲ್ ಪೇಜ್ ಗಳಲ್ಲಿ ಎಡಿಟ್ ಮಾಡಿ ಅದನ್ನು ತಮಾಷೆಯಾಗಿ ಹಾಕಿಕೊಳ್ಳತ್ತದೆ. ಇನ್ನು ಕೆಲವು ಪೇಜ್ ಗಳು ರಾಜಕೀಯ ವ್ಯಕ್ತಿಗಳ ಮಾತು ಅಥವ ಅವರ ತಪ್ಪುಗಳನ್ನು ಟ್ರೋಲ್ ಮಾಡುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡುವ ಪೇಜ್ ಗಳಿಂದ ಖ್ಯಾತಿಯಾಗಿರುವವರು ಇದ್ದಾರೆ. ಆದರೆ ಕೆಲವೊಂದು ಅತೀಯಾದರೆ ಆ ಟ್ರೋಲ್ ಪೇಜ್ ಗಳು ಟ್ರೋಲ್ ಆಗುವುದು ಇದೆ. ಅದಕ್ಕೆ ಉದಾರಣೆ ಇಲ್ಲಿದೆ ನೋಡಿ.
ಆಟೋ ಚಾಲಕನ ಹಾಡು ಟ್ರೋಲ್
ಸಾಮಾಜಿಕ ತಾಣದಲ್ಲಿ ಹಾಡುವ, ನೃತ್ಯ ಮಾಡುವ, ಇನ್ನೂ ಅನೇಕ ವಿಡಿಯೋಗಳನ್ನು ಹಾಕಿಕೊಳ್ಳವುದು ಸಹಜ, ಅದು ಒಂದೊಂದು ಬಾರಿ ಟ್ರೋಲ್ ಆಗುತ್ತದೆ. ಹಾಗೆ ಇಲ್ಲೊಬ್ಬ ಆಟೋ ಚಾಲಕ ತಾನು ಹಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಟ್ರೋಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಇದು ವೈರಲ್ ಮಾಡಲಾಗಿದೆ. ಚಂದು ಚಂದು.. ಎಂದು ಡಬ್ಬ್ ಮಾಡಿ ಶಂಕರ್ ನಾಗ್ ಅವರ ಒಂದು ಸಿನಿಮಾದ ಹಾಡನ್ನು ಹೇಳಿದ್ದಾರೆ. ತನ್ನ ಆಟೋದಲ್ಲಿ ಶಂಕರ್ ನಾಗ್ ಹಾಗೂ ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರವನ್ನು ಹಾಕಿದ್ದಾರೆ. ಇವರು ಹಾಡಿರುವ ಈ ಹಾಡನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಲೆಜಿಂಡ್ ಆಫ್ ಚಿಕ್ಕಮಂಗಳೂರು ಎಂಬ ಟ್ರೋಲ್ ಪೇಜ್ ಈ ವಿಡಿಯೋವನ್ನು ಟ್ರೋಲ್ ಮಾಡಿದೆ. “ಏನ್ ವಾಯ್ಸ್ ಗುರು ಕೋಗಿಲೆ ಚಂದು” ಎಂದು ಟೈಟಲ್ ಹಾಕಿ ಟ್ರೋಲ್ ಮಾಡಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
View this post on Instagram
ಟ್ರೋಲ್ ಮಾಡಿದವರನ್ನು ತರಾಟೆಗೆ ತೆಗೆದುಕೊಂಡ ಆಟೋ ಚಾಲಕ
“ಏನ್ ವಾಯ್ಸ್ ಗುರು ಕೋಗಿಲೆ ಚಂದು” ಎಂದು ಟ್ರೋಲ್ ಮಾಡಿರುವ ಲೆಜಿಂಡ್ ಆಫ್ ಚಿಕ್ಕಮಂಗಳೂರು ಟ್ರೋಲ್ ಪೇಜ್ ನ್ನು ಆ ಆಟೋ ಚಾಲಕ ತರಾಟೆ ತೆಗೆದುಕೊಂಡಿದ್ದಾನೆ. ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ, ಟ್ರೋಲ್ ಮಾಡಿದವರಿಗೆ ವಿಡಿಯೋ ಮಾಡುವ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾನೆ. ನನ್ನ ಜೊತೆಗೆ ಎಲ್ಲರೂ ಇದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಆಶೀರ್ವಾದ ಇದೆ. ನಾನೊಬ್ಬ ಸಮಾಜ ಸೇವಕ, ಅನೇಕ ಸನ್ಮಾನ ಆಗಿದೆ. ನನ್ನ ಟ್ರೋಲ್ ಮಾಡಿತ್ತಿರು ಆ ದೇವರು ನಿಮ್ಮ ಸುಮ್ಮನೆ ಬಿಡುವುದಿಲ್ಲ ಎಂದೆಲ್ಲ ಹೇಳಿದ್ದಾರೆ. ಈ ವಿಡಿಯೋವನ್ನು ಭೀಮಾತೀರ ಟ್ರೋಲ್ ಪೇಜ್ ತಮ್ಮ ಪೇಜ್ ನಲ್ಲಿ ಹಾಕಿಕೊಂಡಿದ್ದಾರೆ. ಇದೀಗ ಎಲ್ಲ ಕಡೆ ವೈರಲ್ ಆಗಿದೆ.
View this post on Instagram
ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ತಾಜಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ