Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾನವ ಶೌಚದಿಂದ ತುಂಬಿದ ಚರಂಡಿಯೊಳಗೆ ಬಿದ್ದ ಮಗುವನ್ನು ಉಳಿಸಲು ಈ ಮಹಿಳೆ ಅದರೊಳಗೆ ಧುಮುಕಿದರು

ಅವನ ಹಿಂದೆಯೇ ನಡೆದು ಬರುತ್ತಿದ್ದ ಬ್ಲಿತ್ ಮಗ ತನ್ನ ಕಣ್ಣೆದುರೇ ಚರಂಡಿಗೆ ಬೀಳುವುದನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ. ಅವನನ್ನು ಹಿಡಿಯುವ ಪ್ರಯತ್ನ ಅವರು ಮಾಡಿದರೂ ಮಗು ಆಳವಾದ ಚರಂಡಿಗೆ ಬಿದ್ದುಬಿಟ್ಟಿದೆ.

ಮಾನವ ಶೌಚದಿಂದ ತುಂಬಿದ ಚರಂಡಿಯೊಳಗೆ ಬಿದ್ದ ಮಗುವನ್ನು ಉಳಿಸಲು ಈ ಮಹಿಳೆ ಅದರೊಳಗೆ ಧುಮುಕಿದರು
ಥಿಯೋ ಚರಂಡಿಗೆ ಬೀಳುವ ಮುನ್ನ ಮತ್ತು ನಂತರ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 24, 2022 | 10:38 PM

ಯುನೈಟೆಡ್ ಕಿಂಗ್​ಡಮ್​ನಲ್ಲಿ ಮಹಿಳೆಯೊಬ್ಬರು ಮ್ಯಾನ್ ಹೋಲ್ ಕವರ್ ಮೂಲಕ ಚರಂಡಿಗೆ ಬಿದ್ದ ತನ್ನ 18-ತಿಂಗಳು ಮಗುವನ್ನು ಉಳಿಸಲು ಅದರೊಳಗೆ ಧುಮುಕಿದ ದೃಶ್ಯ ರಸ್ತೆ ಬದಿಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸದರಿ ವಿಡಿಯೋ ವೈರಲ್ ಅಗಿದೆ. ಫೇಸ್ಬುಕ್ ಪೋಸ್ಟ್ ಪ್ರಕಾರ ಘಟನೆಯು ರವಿವಾರ ನಡೆದಿದೆ. 23-ವರ್ಷ ವಯಸ್ಸಿನ ಎಮಿ ಬ್ಲಿತ್ (Amy Blyth) ಹೆಸರಿನ ಮಹಿಳೆ ಕೆಂಟ್ ಌಶ್ಫೋರ್ಡ್ (Kent Ashford) ನಲ್ಲಿ ತನ್ನ ಮಗ ಥಿಯೋ (Theo) ಜೊತೆ ನಡೆದು ಹೋಗುತ್ತಿದ್ದಾಗ ಮಗುವಿನಲ್ಲಿ ಚರಂಡಿಯ ಮುಚ್ಚಳ ಕುತೂಹಲ ಮೂಡಿಸಿದೆ. ಅದರ ಸಮೀಪಕ್ಕೆ ಹೋದ ಕೂಡಲೇ 20-ಅಡಿ ಆಳದ ಕೂಪದೊಳಗೆ ಜಾರಿ ಬಿದ್ದಿದ್ದಾನೆ ಮತ್ತು ಅವನು ಬಿದ್ದ ಬಳಿಕ ಚರಂಡಿಯ ಕವರ್ ಮುಚ್ಚಿಕೊಂಡು ಬಿಟ್ಟಿದ್ದರಿಂದ ಕಣ್ಮರೆಯಾಗಿದ್ದಾನೆ.

ಅವನ ಹಿಂದೆಯೇ ನಡೆದು ಬರುತ್ತಿದ್ದ ಬ್ಲಿತ್ ಮಗ ತನ್ನ ಕಣ್ಣೆದುರೇ ಚರಂಡಿಗೆ ಬೀಳುವುದನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ. ಅವನನ್ನು ಹಿಡಿಯುವ ಪ್ರಯತ್ನ ಅವರು ಮಾಡಿದರೂ ಮಗು ಆಳವಾದ ಚರಂಡಿಗೆ ಬಿದ್ದುಬಿಟ್ಟಿದೆ.

ಒಂದು ಕ್ಷಣವೂ ತಡಮಾಡದೆ ಬ್ಲಿತ್ ಚರಂಡಿಯೊಳಗೆ ಧುಮುಕಿ ಮಾನವ ಶೌಚದಲ್ಲಿ ಸಿಲುಕಿದ್ದ ಮಗನನ್ನು ಮೇಲಕ್ಕೆ ಎಳೆದು ತಂದಿದ್ದಾರೆ. ತಮ್ಮ ಭಯಾನಕ ಅನುಭವವನ್ನು ಅವರು ಫೇಸ್ ಬುಕ್ ಪೇಜಲ್ಲಿ ಹಂಚಿಕೊಂಡಿದ್ದಾರೆ.

‘ನಿನ್ನೆ ನನ್ನ ಬದುಕಿನ ಅತ್ಯಂತ ಭಯಾನಕ ಮತ್ತು ಅಷ್ಟೇ ಯಾತನಾಮಯ ದಿನವಾಗಿತ್ತು. ಸತ್ತೇ ಹೋಗಬಹುದಾಗಿದ್ದ ನನ್ನ ಮಗನನ್ನು ರಕ್ಷಿಸಲು ಚರಂಡಿಯೊಂದರ ಮುಚ್ಚಳ ತೆಗೆದು ಅದರೊಳಗೆ ಧುಮಕುತ್ತೇನೆ ಅಂತ ಕನಸಿನಲ್ಲೂ ಎಣಿಸಿರಲಿಲ್ಲ,’ ಎಂದು ಅವರು ಸೋಮವಾರ ಪೋಸ್ಟ್ನಲ್ಲಿ ಹೇಳಿದ್ದಾರೆ.

‘ಅದೃಷ್ಟವಶಾತ್ ಒಳಗೆ ಧುಮುಕಿದಾಗ ನಾನು ಒಂದು ಕಾಂಕ್ರೀಟ್ ಸ್ಲ್ಯಾಬ್ ಮೇಲೆ ಲ್ಯಾಂಡ್ ಆಗಿ ನನ್ನ ಥಿಯೋನನ್ನು ಮೇಲಕ್ಕೆ ಎಳೆದುಕೊಳ್ಳುವಲ್ಲಿ ಸಫಲಳಾದೆ. ಚರಂಡಿಯೊಳಗೆ ಮಲ ಮತ್ತು ಮೂತ್ರ ನಮ್ಮ ಮೇಲೆ ಸುರಿಯುತಿತ್ತು,’ ಎಂದು ಅವರು ಹೇಳಿದ್ದಾರೆ.

ಮಾನವ ಶೌಚದಿಂದ ಅವೃತವಾಗಿರುವ ಮಗನ ಬಟ್ಟೆಗಳ ಚಿತ್ರವನ್ನೂ ಪೋಸ್ಟ್ ಮಾಡಿರುವ ಅವರು, ‘ಘಟನೆಯಿಂದ ನಾನು ಯಾವತ್ತೂ ಮಾನಸಿಕ ಚೇತರಿಸಿಕೊಳ್ಳಲಾರೆ’ ಎಂದಿದ್ದಾರೆ.

ಹ್ಯಾಂಪ್‌ಶೈರ್, ಐಲ್ ಆಫ್ ವೈಟ್, ವೆಸ್ಟ್ ಸಸೆಕ್ಸ್, ಈಸ್ಟ್ ಸಸೆಕ್ಸ್ ಮತ್ತು ಕೆಂಟ್‌ನಲ್ಲಿ ಸಾರ್ವಜನಿಕ ತ್ಯಾಜ್ಯ ನೀರಿನ ಸಂಗ್ರಹಣೆ ಮತ್ತು ಸಂಸ್ಕರಣೆಯ ಜವಾಬ್ದಾರಿ ಹೊತ್ತಿರುವ ಯುಟಿಲಿಟಿ ಕಂಪನಿಯಾಗಿರುವ ಸದರ್ನ್ ವಾಟರ್‌ನ ಸಂಸ್ಥೆಯನ್ನು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

‘ಚರಂಡಿಯನ್ನು ಯಾಕೆ ಹಾಗೆ ಅಪಾಪಯಕಾರಿ ರೀತಿಯಲ್ಲಿ ಬಿಡಲಾಗಿತ್ತು ಅಂತ ಸಂಸ್ಥೆಯಿಂದ ಉತ್ತರ ಸಿಗದ ಹೊರತು ನಾನು ವಿಶ್ರಮಿಸಲಾರೆ, ಥಿಯೋಗೆ ಅರ್ಹವಾಗಿರುವುದು ಸಿಗುವರೆಗೆ ನಾನು ಪ್ರತಿದಿನ ಹೋರಾಡುತ್ತೇನೆ,’ ಎಂದು ಬ್ಲಿತ್ ಹೇಳಿದ್ದಾರೆ.

ಸದರ್ನ್ ವಾಟರ್‌ನ ಸಂಸ್ಥೆಯು ಬ್ಲಿತ್ ಕುಟುಂಬದ ಕ್ಷಮೆ ಯಾಚಿಸಿದ್ದು, ಈ ಘಟನೆಯನ್ನ ಸಂಸ್ಥೆಯು ಬಹಳ ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದೆ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಸಂಸ್ಥೆ ತನಿಖೆಯನ್ನು ಆರಂಭಿಸಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಲಿದ್ದಾರೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ
ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಲಿದ್ದಾರೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ
ಕಂಡಕ್ಟರ್​ನಿಂದ ಯುವತಿಗೆ ಲೈಂಗಿಕ ಕಿರುಕುಳ: ವಿಡಿಯೋ ವೈರಲ್
ಕಂಡಕ್ಟರ್​ನಿಂದ ಯುವತಿಗೆ ಲೈಂಗಿಕ ಕಿರುಕುಳ: ವಿಡಿಯೋ ವೈರಲ್
IPL 2025: ನಂಬಿ ಕೆಟ್ಟ ಇಶಾನ್ ಕಿಶನ್: ಇಲ್ಲಿದೆ ಒರಿಜಿನಲ್ ವಿಡಿಯೋ
IPL 2025: ನಂಬಿ ಕೆಟ್ಟ ಇಶಾನ್ ಕಿಶನ್: ಇಲ್ಲಿದೆ ಒರಿಜಿನಲ್ ವಿಡಿಯೋ
‘ಅಪ್ಪನೇ ನನ್ನ ದೊಡ್ಡ ಪ್ರಪಂಚ’; ತಂದೆಯ ಕಾಲಿಗೆ ಬಿದ್ದು ಹೇಳಿದ ಪ್ರತಾಪ್
‘ಅಪ್ಪನೇ ನನ್ನ ದೊಡ್ಡ ಪ್ರಪಂಚ’; ತಂದೆಯ ಕಾಲಿಗೆ ಬಿದ್ದು ಹೇಳಿದ ಪ್ರತಾಪ್
ಬೆಳಗ್ಗೆ 6 ಗಂಟೆಗೆ ದೆಹಲಿಯಿಂದ ಬೆಂಗಳೂರು ಆಗಮಿಸಿದ ಮಂಜುನಾಥ್ ದೇಹ
ಬೆಳಗ್ಗೆ 6 ಗಂಟೆಗೆ ದೆಹಲಿಯಿಂದ ಬೆಂಗಳೂರು ಆಗಮಿಸಿದ ಮಂಜುನಾಥ್ ದೇಹ
PSL 2025: ಬೌಲಿಂಗ್ ವೇಳೆ ಕಳ್ಳಾಟ: ಆಟಗಾರರ ನಡುವೆ ವಾಕ್ಕಲಹ
PSL 2025: ಬೌಲಿಂಗ್ ವೇಳೆ ಕಳ್ಳಾಟ: ಆಟಗಾರರ ನಡುವೆ ವಾಕ್ಕಲಹ
ಭರತ್ ಭೂಷಣ್ ಪತ್ನಿ ಮತ್ತು ಕುಟುಂಬಸ್ಥರಿಗೆ ಮುಖ್ಯಮಂತ್ರಿಯಿಂದ ಸಾಂತ್ವನ
ಭರತ್ ಭೂಷಣ್ ಪತ್ನಿ ಮತ್ತು ಕುಟುಂಬಸ್ಥರಿಗೆ ಮುಖ್ಯಮಂತ್ರಿಯಿಂದ ಸಾಂತ್ವನ
ಬ್ಯಾಟರ್ ಬಿದ್ದು ಒದ್ದಾಡಿದರೂ ತಿರುಗಿ ಕೂಡ ನೋಡದ ಜಸ್​ಪ್ರೀತ್ ಬುಮ್ರಾ
ಬ್ಯಾಟರ್ ಬಿದ್ದು ಒದ್ದಾಡಿದರೂ ತಿರುಗಿ ಕೂಡ ನೋಡದ ಜಸ್​ಪ್ರೀತ್ ಬುಮ್ರಾ
ಇದೆಂತಹ ವರ್ತನೆ... ಮೌನಾಚರಣೆ ವೇಳೆಯೂ ಹಾರ್ದಿಕ್ ಪಾಂಡ್ಯ ಹುಚ್ಚಾಟ
ಇದೆಂತಹ ವರ್ತನೆ... ಮೌನಾಚರಣೆ ವೇಳೆಯೂ ಹಾರ್ದಿಕ್ ಪಾಂಡ್ಯ ಹುಚ್ಚಾಟ
ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ
ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ