Viral Video: 6ನೇ ಮಹಡಿಯ ಕಿಟಕಿಯಲ್ಲಿ ನೇತಾಡುತ್ತಿದ್ದ ಬಾಲಕಿಯನ್ನು ಕಾಪಾಡಲು ಬರಿಗೈಯಲ್ಲಿ ಕಟ್ಟಡ ಹತ್ತಿದ ಯುವಕ; ವಿಡಿಯೋ ವೈರಲ್

ಯುವಕನೊಬ್ಬ ಆ ಹುಡುಗಿಯನ್ನು ಕಾಪಾಡಲು ತನ್ನ ಪ್ರಾಣದ ಹಂಗು ತೊರೆದು ಬರಿಗೈಯಲ್ಲೇ ಕಟ್ಟಡವನ್ನು ಹತ್ತಿ 6ನೇ ಮಹಡಿಗೆ ತಲುಪಿ, ಬಾಲಕಿಯನ್ನು ಕಾಪಾಡಿದ್ದಾನೆ. ಇದರ ವಿಡಿಯೋ ಈಗ ವೈರಲ್ ಆಗಿದೆ.

Viral Video: 6ನೇ ಮಹಡಿಯ ಕಿಟಕಿಯಲ್ಲಿ ನೇತಾಡುತ್ತಿದ್ದ ಬಾಲಕಿಯನ್ನು ಕಾಪಾಡಲು ಬರಿಗೈಯಲ್ಲಿ ಕಟ್ಟಡ ಹತ್ತಿದ ಯುವಕ; ವಿಡಿಯೋ ವೈರಲ್
ಬರಿಗೈಯಲ್ಲಿ ಮಹಡಿ ಹತ್ತಿ ಬಾಲಕಿಯನ್ನು ಕಾಪಾಡಿದ ಯುವಕImage Credit source: India.com
Follow us
TV9 Web
| Updated By: ಸುಷ್ಮಾ ಚಕ್ರೆ

Updated on: May 25, 2022 | 2:49 PM

ಕಿಟಕಿಯಿಂದ ಕೆಳಗೆ ನೇತಾಡುತ್ತಿದ್ದ ಮಗುವನ್ನು ರಕ್ಷಿಸಲು ಯಾವುದೇ ರಕ್ಷಣಾ ಸಾಧನಗಳಿಲ್ಲದೆ ಬರಿಗೈಯಲ್ಲೇ ಕಟ್ಟಡದ 6 ಮಹಡಿಗಳನ್ನು ಏರಿದ ಧೈರ್ಯಶಾಲಿ ಯುವಕನಿಗೆ ಸಾಮಾಜಿಕ ಮಾಧ್ಯಮದಲ್ಲಿ (Social Media) ವ್ಯಾಪಕವಾಗಿ ಮೆಚ್ಚುಗೆ ವ್ಯಕ್ತವಾಗಿದೆ. ಕಳೆದ ವಾರ ಚೀನಾದ ಶಾಂಕ್ಸಿ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದ್ದು, 5 ವರ್ಷದ ಬಾಲಕಿಯೊಬ್ಬಳು ಕಿಟಕಿಯಿಂದ ನೇತಾಡುತ್ತಿದ್ದಳು. ಕಿಟಕಿಯ ಭದ್ರತಾ ಗ್ರಿಲ್‌ಗಳ ನಡುವೆ ನೇತಾಡುತ್ತಿದ್ದ ಆಕೆ ಸಹಾಯಕ್ಕಾಗಿ ಕೂಗುತ್ತಿದ್ದಳು. ಹುಡುಗಿಯ ನೆರೆಹೊರೆಯವರು ಆ ಧ್ವನಿಯನ್ನು ಕೇಳಿ ಹೊರಗೆ ಬಂದು ನೋಡಿದಾಗ ಆಕೆ ಪ್ರಾಣಾಪಾಯದಲ್ಲಿರುವುದು ಗೊತ್ತಾಗಿತ್ತು.

ಅದೇ ಬಿಲ್ಡಿಂಗ್​ನಲ್ಲಿ ವಾಸವಾಗಿದ್ದ ಯುವಕನೊಬ್ಬ ಆ ಹುಡುಗಿಯನ್ನು ಕಾಪಾಡಲು ತನ್ನ ಪ್ರಾಣದ ಹಂಗು ತೊರೆದು ಬರಿಗೈಯಲ್ಲೇ ಕಟ್ಟಡವನ್ನು ಹತ್ತಿ 6ನೇ ಮಹಡಿಗೆ ತಲುಪಿದ್ದಾನೆ. ಇದರ ವಿಡಿಯೋ ಈಗ ವೈರಲ್ ಆಗಿದೆ. ತನ್ನ ಜೀವವನ್ನು ಲೆಕ್ಕಿಸದೆ ಅಪಾರ್ಟ್​​ಮೆಂಟ್​ನ ಮುಂಭಾಗಕ್ಕೆ ಜೋಡಿಸಲಾದ ಭದ್ರತಾ ಬಾರ್‌ಗಳನ್ನು ಬಳಸಿಕೊಂಡು ಕಟ್ಟಡದ ಹೊರಗಿನಿಂದ 6ನೇ ಮಹಡಿಯನ್ನು ಹತ್ತಿದ ಯುವಕ ಕೊನೆಗೂ ಆ ಹುಡುಗಿಯನ್ನು ಹಿಡಿದುಕೊಂಡು, ಆಕೆಯನ್ನು ಕಾಪಾಡಿದ್ದಾರೆ ಎಂದು ಪೀಪಲ್ಸ್ ಡೈಲಿ ಆನ್‌ಲೈನ್ ವರದಿ ಮಾಡಿದೆ.

ಇದನ್ನೂ ಓದಿ: Viral Video: ಸ್ವಿಮ್ಮಿಂಗ್ ಪೂಲ್ ಪಕ್ಕದಲ್ಲಿ ಮನುಷ್ಯರಂತೆ ಕುರ್ಚಿ ಮೇಲೆ ಕುಳಿತ ತುಂಟ ನಾಯಿ: ಹೃದಯಸ್ಪರ್ಶಿ ವಿಡಿಯೋ ವೈರಲ್

ಕಿಟಕಿಯಲ್ಲಿ ನೇತಾಡುತ್ತಿದ್ದ ಬಾಲಕಿ ಬಹಳ ಹೆದರಿದ್ದಳು. ಹೆದರಿಕೆಯಿಂದ ಜೋರಾಗಿ ಅಳುತ್ತಲೇ ಇದ್ದಳು. ನಾನು ಅವಳನ್ನು ಭಯಪಡಬೇಡ ಎಂದು ಹೇಳಿದೆ. ನಾನು ಅವಳನ್ನು ಉಳಿಸಲು ಬರುತ್ತಿದ್ದೇನೆ ಎಂದು ವಿವರಿಸಿದೆ ಎಂದು ಪೀಪಲ್ಸ್ ಡೈಲಿಗೆ ಆ ಯುವಕ ಹೇಳಿದ್ದಾರೆ. ಈ ವೀಡಿಯೊ ವೈರಲ್ ಆಗಿದೆ.

ಇತ್ತೀಚೆಗೆ, ಕಝಾಕಿಸ್ತಾನ್‌ನಲ್ಲಿ 8ನೇ ಮಹಡಿಯಲ್ಲಿ ನೇತಾಡುತ್ತಿದ್ದ ಮಗುವನ್ನು ರಕ್ಷಿಸಲು ವ್ಯಕ್ತಿಯೊಬ್ಬರು ಗೋಪುರದ ಮೇಲೆ ಹತ್ತಿದ ನಂತರ ಇದೇ ರೀತಿಯ ಧೈರ್ಯದ ಕಥೆಯು ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ. 3 ವರ್ಷದ ಮಗು ತನ್ನ ತಾಯಿ ಶಾಪಿಂಗ್‌ಗೆ ಹೋಗಿದ್ದ ಸಂದರ್ಭದಲ್ಲಿ ಆಟದ ಸಾಮಾನನ್ನು ಕಿಟಕಿಯಿಂದ ಹೊರಗೆ ಹಾಕಿ ಆಟವಾಡುವಾಗ ಈ ಘಟನೆ ಸಂಭವಿಸಿದೆ. ಇದನ್ನೂ ಓದಿ:

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ