ಬಾಲಿವುಡ್ ಹಾಡಿಗೆ ಹೆಜ್ಜೆ ಹಾಕಿದ 63 ವರ್ಷದ ಅಜ್ಜಿ; ಇಲ್ಲಿದೆ ವೈರಲ್ ವಿಡಿಯೋ

ರವಿ ಬಾಲಾ ಶರ್ಮಾ ಅವರು ಡ್ಯಾನ್ಸ್​ ಮಾಡುವುದರಲ್ಲಿ ತುಂಬಾನೇ ಫೇಮಸ್. ಅವರ ಎನರ್ಜಿಗೆ ವಯಸ್ಸು ಅಡ್ಡ ಬಂದಿಲ್ಲ. ಸಾಕಷ್ಟು ರೀಲ್ಸ್ ಮಾಡಿ ಅವರು ಪೋಸ್ಟ್ ಮಾಡುತ್ತಾ ಇರುತ್ತಾರೆ. ಇದಕ್ಕೆ ಲಕ್ಷಾಂತರ ವೀವ್ಸ್ ಬರುತ್ತವೆ.

ಬಾಲಿವುಡ್ ಹಾಡಿಗೆ ಹೆಜ್ಜೆ ಹಾಕಿದ 63 ವರ್ಷದ ಅಜ್ಜಿ; ಇಲ್ಲಿದೆ ವೈರಲ್ ವಿಡಿಯೋ
ಡ್ಯಾನ್ಸಿಂಗ್ ದಾದಿ
Follow us
| Edited By: Rajesh Duggumane

Updated on: May 25, 2022 | 9:40 PM

ಸಾಕಷ್ಟು ಹಾಡುಗಳು ಅದ್ಯಾವಮಟ್ಟಿಗೆ ಹಿಟ್ ಆಗುತ್ತವೆ ಎಂದರೆ ಎಂದಿಗೂ ಆ ಹಾಡು ಚಾಲ್ತಿಯಲ್ಲಿರುತ್ತದೆ. ಡ್ಯಾನ್ಸ್ ಮಾಡುವವರಿಗೆ ಕೆಲ ಸಾಂಗ್ ಅಚ್ಚುಮೆಚ್ಚು. ಅದೇ ರೀತಿ ಡ್ಯಾನ್ಸಿಂಗ್ ದಾದಿ (Dancing Dadi) ಎಂದೇ ಫೇಮಸ್ ಆಗಿರುವ ರವಿ ಬಾಲಾ ಶರ್ಮಾ (Ravi Bala Sharma) ಅವರು ಸೋಶಿಯಲ್​ ಮೀಡಿಯಾದಲ್ಲಿ ಸಖತ್ ಫೇಮಸ್​. ಹಲವು ಹಾಡಿಗೆ ಅವರು ಡ್ಯಾನ್ಸ್ ಮಾಡುತ್ತಾರೆ. ಈಗ 2012ರ ಬಾಲಿವುಡ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ 63 ವರ್ಷದ ಅಜ್ಜಿಯ ಎನರ್ಜಿ ನೋಡಿ ನೆಟ್ಟಿಗರು ಸಖತ್ ಖುಷಿಪಟ್ಟಿದ್ದಾರೆ.

ರವಿ ಬಾಲಾ ಶರ್ಮಾ ಅವರು ಡ್ಯಾನ್ಸ್​ ಮಾಡುವುದರಲ್ಲಿ ತುಂಬಾನೇ ಫೇಮಸ್. ಅವರ ಎನರ್ಜಿಗೆ ವಯಸ್ಸು ಅಡ್ಡ ಬಂದಿಲ್ಲ. ಸಾಕಷ್ಟು ರೀಲ್ಸ್ ಮಾಡಿ ಅವರು ಪೋಸ್ಟ್ ಮಾಡುತ್ತಾ ಇರುತ್ತಾರೆ. ಇದಕ್ಕೆ ಲಕ್ಷಾಂತರ ವೀವ್ಸ್ ಬರುತ್ತವೆ. ಫ್ಯಾನ್ಸ್ ಅವರನ್ನು ತುಂಬಾನೇ ಇಷ್ಟಪಡುತ್ತಾರೆ. ಈಗ ಅವರು ಮಾಡಿರುವ ಹೊಸ ವಿಡಿಯೋವನ್ನು ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ.

ಅರ್ಜುನ್ ಕಪೂರ್ ಹಾಗೂ ಪರಿಣೀತಿ ಚೋಪ್ರಾ ನಟನೆಯ ‘ಇಶಕ್​ಜಾದೇ’ ಸಿನಿಮಾ 2012ರಲ್ಲಿ ತೆರೆಗೆ ಬಂದಿತ್ತು. ಈ ಸಿನಿಮಾದ ‘ಚೋಕ್ರಾ ಜವಾನ್..’ ಹಾಡು ಹಿಟ್ ಆಗಿತ್ತು. ಕೇಳುಗರು ಈ ಹಾಡನ್ನು ಅನೇಕರು ಈಗಲೂ ಇಷ್ಟಪಡುತ್ತಾರೆ. ಈ ಫೇಮಸ್​ ಹಾಡಿಗೆ ರವಿ ಬಾಲಾ ಶರ್ಮಾ ಹೆಜ್ಜೆ ಹಾಕಿದ್ದಾರೆ.

ಇದನ್ನೂ ಓದಿ: ‘ಭವಿಷ್ಯವನ್ನು ಒಟ್ಟಿಗೆ ಕಳೆಯುವ ಆಸೆ ಇದೆ’; ಅರ್ಜುನ್ ಕಪೂರ್ ಬಗ್ಗೆ ಮಲೈಕಾ ಮಾತು

ರವಿ ಬಾಲಾ ಶರ್ಮಾ ಹಾಗೂ ಅವರ ಮಗ ಏಕಾಂಶ್ ಅವರು ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಅಮ್ಮ-ಮಗನನ್ನು ಸ್ಟೆಪ್ ಹಾಕಿದ ರೀತಿಗೆ ಫ್ಯಾನ್ಸ್​ ಖುಷಿ ವ್ಯಕ್ತಪಡಿಸಿದ್ದಾರೆ. ‘ರವಿ ಬಾಲಾ ಅವರು ಅನೇಕರಿಗೆ ಮಾದರಿ. ಅವರ ಎನರ್ಜಿ ತುಂಬಾನೇ ಇಷ್ಟವಾಗುತ್ತದೆ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಈ ವಿಡಿಯೋ 32 ಸಾವಿರಕ್ಕೂ ಅಧಿಕ ವೀಕ್ಷಣೆ ಕಂಡಿದೆ.

ಡ್ಯಾನ್ಸಿಂಗ್ ದಾದಿ ಅವರು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಅವರಿಗೆ 1.87 ಲಕ್ಷ ಹಿಂಬಾಲಕರು ಇನ್​ಸ್ಟಾಗ್ರಾಮ್​ನಲ್ಲಿ ಇದ್ದಾರೆ. ಅವರ ವಯಸ್ಸಿಗೂ, ಎನರ್ಜಿಗೂ ನಿಜಕ್ಕೂ ಮ್ಯಾಚ್ ಆಗುವುದಿಲ್ಲ, ವಯಸ್ಸು ದೇಹಕ್ಕೆ ಮಾತ್ರ ಎನರ್ಜಿಗೆ ಅಲ್ಲ ಎಂಬುದು ಅನೇಕರ ಅಭಿಪ್ರಾಯ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ
‘ನಾನು ವಿಸ್ಮಯ ನೋಡಿದೆ’: ಅಮ್ಮನಿಗೆ ಅಂತಿಮ ವಿದಾಯ ಹೇಳಿದ ವಿನೋದ್ ಭಾವುಕ
‘ನಾನು ವಿಸ್ಮಯ ನೋಡಿದೆ’: ಅಮ್ಮನಿಗೆ ಅಂತಿಮ ವಿದಾಯ ಹೇಳಿದ ವಿನೋದ್ ಭಾವುಕ
ಜನತಾ ದಳದಲ್ಲಿದ್ದಾಗ ಯತ್ನಾಳ್ ಮುಸಲ್ಮಾನರನ್ನು ಓಲೈಸುತ್ತಿದ್ದರು: ಪಾಟೀಲ್
ಜನತಾ ದಳದಲ್ಲಿದ್ದಾಗ ಯತ್ನಾಳ್ ಮುಸಲ್ಮಾನರನ್ನು ಓಲೈಸುತ್ತಿದ್ದರು: ಪಾಟೀಲ್
ಗರುಡ ಮಾಲ್​ನಲ್ಲಿ ಮದ್ಯದ ನಶೆಯಲ್ಲಿ ಮಹಿಳೆ ರಾದ್ಧಾಂತ, ಸಿಬ್ಬಂದಿಗೆ ಥಳಿತ
ಗರುಡ ಮಾಲ್​ನಲ್ಲಿ ಮದ್ಯದ ನಶೆಯಲ್ಲಿ ಮಹಿಳೆ ರಾದ್ಧಾಂತ, ಸಿಬ್ಬಂದಿಗೆ ಥಳಿತ
ಸಕಲ ಸರ್ಕಾರೀ ಗೌರವದೊಂದಿಗೆ ನೆರವೇರಿದ ಲೀಲಾವತಿ ‘ಅಮ್ಮ’ನ ಅಂತಿಮ ಸಂಸ್ಕಾರ
ಸಕಲ ಸರ್ಕಾರೀ ಗೌರವದೊಂದಿಗೆ ನೆರವೇರಿದ ಲೀಲಾವತಿ ‘ಅಮ್ಮ’ನ ಅಂತಿಮ ಸಂಸ್ಕಾರ
ಶಿವಕುಮಾರ್  ನಾರಾಯಣ ಹೃದಯಾಲಯದಲ್ಲಿ ಬೆಡ್ ರೆಡಿ ಮಾಡಿಸಿಕೊಳ್ಳಲಿ: ಯತ್ನಾಳ್
ಶಿವಕುಮಾರ್  ನಾರಾಯಣ ಹೃದಯಾಲಯದಲ್ಲಿ ಬೆಡ್ ರೆಡಿ ಮಾಡಿಸಿಕೊಳ್ಳಲಿ: ಯತ್ನಾಳ್
ಅಶೋಕ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲ್ಲ: ವಿಶ್ವನಾಥ್, ಬಿಜೆಪಿ ಶಾಸಕ
ಅಶೋಕ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲ್ಲ: ವಿಶ್ವನಾಥ್, ಬಿಜೆಪಿ ಶಾಸಕ
ಕೆಸಿಆರ್ ಹಿಪ್ ರಿಪ್ಲೇಸ್ಮೆಂಟ್ ಸರ್ಜರಿ, ವಾಕರ್ ಸಹಾಯದಿಂದ ನಡೆದಾಟ ಪ್ರಯತ್ನ
ಕೆಸಿಆರ್ ಹಿಪ್ ರಿಪ್ಲೇಸ್ಮೆಂಟ್ ಸರ್ಜರಿ, ವಾಕರ್ ಸಹಾಯದಿಂದ ನಡೆದಾಟ ಪ್ರಯತ್ನ
ಉತ್ತರ ಕನ್ನಡ: ಫಕೀರರ ವೇಷದಲ್ಲಿ ಅಮಾಯಕರನ್ನ ಮೋಸ ಮಾಡ್ತಿದ್ದ ಯುವಕರು ವಶಕ್ಕೆ
ಉತ್ತರ ಕನ್ನಡ: ಫಕೀರರ ವೇಷದಲ್ಲಿ ಅಮಾಯಕರನ್ನ ಮೋಸ ಮಾಡ್ತಿದ್ದ ಯುವಕರು ವಶಕ್ಕೆ
ವಿನೋದ್ ತಾಯಿಯನ್ನು ನೋಡಿಕೊಂಡ ರೀತಿ ಪ್ರತಿಯೊಬ್ಬರಿಗೂ ಮಾದರಿ: ಶಿವಕುಮಾರ್
ವಿನೋದ್ ತಾಯಿಯನ್ನು ನೋಡಿಕೊಂಡ ರೀತಿ ಪ್ರತಿಯೊಬ್ಬರಿಗೂ ಮಾದರಿ: ಶಿವಕುಮಾರ್
ಕಟುಕರಿಗೆ ಈ ವಾರ ಇದೆ ಮಾರಿ ಹಬ್ಬ; ಸೂಚನೆ ಕೊಟ್ಟ ಸುದೀಪ್
ಕಟುಕರಿಗೆ ಈ ವಾರ ಇದೆ ಮಾರಿ ಹಬ್ಬ; ಸೂಚನೆ ಕೊಟ್ಟ ಸುದೀಪ್