‘ಭವಿಷ್ಯವನ್ನು ಒಟ್ಟಿಗೆ ಕಳೆಯುವ ಆಸೆ ಇದೆ’; ಅರ್ಜುನ್ ಕಪೂರ್ ಬಗ್ಗೆ ಮಲೈಕಾ ಮಾತು

ಮಲೈಕಾ ಅವರಿಗೆ ಇತ್ತೀಚೆಗೆ ಕಾರು ಅಪಘಾತ ಉಂಟಾಗಿತ್ತು. ಈ ವೇಳೆ ಅವರು ಗಾಯಗೊಂಡಿದ್ದರು. ಈ ಬಗ್ಗೆಯೂ ಮಲೈಕಾ ಮಾತನಾಡಿದ್ದಾರೆ. ಕಾರು ಅಪಘಾತಕ್ಕೆ ಒಳಗಾದ 15 ದಿನಗಳವರೆಗೆ ನಾನು ಭಯದಲ್ಲೇ ಇದ್ದೆ ಎಂದಿದ್ದಾರೆ

‘ಭವಿಷ್ಯವನ್ನು ಒಟ್ಟಿಗೆ ಕಳೆಯುವ ಆಸೆ ಇದೆ’; ಅರ್ಜುನ್ ಕಪೂರ್ ಬಗ್ಗೆ ಮಲೈಕಾ ಮಾತು
ಮಲೈಕಾ-ಅರ್ಜುನ್
Follow us
TV9 Web
| Updated By: ಮದನ್​ ಕುಮಾರ್​

Updated on: May 06, 2022 | 9:11 AM

ನಟಿ ಮಲೈಕಾ ಅರೋರಾ (Malaika Arora) ಹಾಗೂ ಅರ್ಜುನ್ ಕಪೂರ್ (Arjun Kapoor) ಪರಸ್ಪರ ರಿಲೇಶನ್​ಶಿಪ್​ನಲ್ಲಿದ್ದಾರೆ. 2019ರಿಂದ ಇಲ್ಲಿವರೆಗೆ ಇಬ್ಬರೂ ಅನೇಕ ಬಾರಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಇವರು ಲಿವ್​-ಇನ್​-ರಿಲೇಶನ್​ಶಿಪ್​ನಲ್ಲಿದ್ದಾರೆ ಎಂದು ಕೂಡ ವರದಿ ಆಗಿದೆ. ಆದರೆ, ಇವರು ಮದುವೆ ಆಗುವ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ. ಅರ್ಜುನ್​ಗಿಂತ ಮಲೈಕಾ ವಯಸ್ಸಿನಲ್ಲಿ ತುಂಬಾನೇ ದೊಡ್ಡವರು. ಈ ಕಾರಣಕ್ಕೆ ಇವರದ್ದು ಟೈಮ್​ಪಾಸ್ ಲವ್ ಎಂದು ಕೆಲವರು ದೂರಿದ್ದಿದೆ. ಆದರೆ, ಮಲೈಕಾ ಭಿನ್ನ ಕನಸುಗಳನ್ನು ಹೊಂದಿದ್ದಾರೆ. ಇವರಿಗೆ ಭವಿಷ್ಯದಲ್ಲಿ ಒಟ್ಟಾಗಿ ಇರುವ ಆಲೋಚನೆ ಇದೆ. ಈ ಬಗ್ಗೆ ಮಲೈಕಾ ಹೇಳಿಕೊಂಡಿದ್ದಾರೆ.

ಟೈಮ್ಸ್ ಆಫ್​ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಮಲೈಕಾ, ‘ಪ್ರತಿಯೊಂದು ಸಂಬಂಧವು ಅದರದ್ದೇ ಆದ ರೀತಿ-ನೀತಿಗಳನ್ನು ಹೊಂದಿರುತ್ತದೆ. ನಾವು ಒಟ್ಟಿಗೆ ಭವಿಷ್ಯವನ್ನು ಕಳೆಯಲು ಬಯಸುತ್ತೇವೆಯೇ ಎನ್ನುವ ವಿಚಾರ ನಮಗೆ ತಿಳಿದಿರಬೇಕು’ ಎಂದಿದ್ದಾರೆ ಮಲೈಕಾ. ಈ ಮೂಲಕ ಅಭಿಮಾನಿಗಳಿಗೆ ಅವರು ರಿಲೇಶನ್​ಶಿಪ್ ಟಿಪ್ಸ್ ನೀಡಿದ್ದಾರೆ.

‘ನಾವು (ಮಲೈಕಾ-ಅರ್ಜುನ್ ಕಪೂರ್) ಬಹಳಷ್ಟು ವಿಷಯಗಳನ್ನು ಚರ್ಚಿಸುತ್ತೇವೆ. ನಾವು ಒಂದೇ ರೀತಿಯ ಆಲೋಚನೆಗಳನ್ನು ಹೊಂದಿದ್ದೇವೆ. ನಾವು ನಿಜವಾಗಿಯೂ ಒಬ್ಬರನ್ನೊಬ್ಬರು ಇಷ್ಟಪಡುತ್ತೇವೆ. ನಾವು ಪ್ರಬುದ್ಧವಾಗಿ ಆಲೋಚಿಸುತ್ತೇವೆ. ನಾವು ಭವಿಷ್ಯದಲ್ಲಿ ಒಟ್ಟಿಗೆ ಇರಲು ಬಯಸುತ್ತೇವೆ. ನಿಮ್ಮ ಸಂಬಂಧದಲ್ಲಿ ನೀವು ಪಾಸಿಟಿವ್​ ವೈಬ್ ಹೊಂದಿರಬೇಕು ಮತ್ತು ಸೇಫ್ ಎಂಬ ಭಾವನೆ ನಿಮ್ಮಲ್ಲಿ ಇರಬೇಕು’ ಎಂದಿದ್ದಾರೆ ಮಲೈಕಾ.

ಇದನ್ನೂ ಓದಿ
Image
ಪ್ರಾದೇಶಿಕ ಸಿನಿಮಾಗಳನ್ನು ಹೆಚ್ಚು ಜನರಿಗೆ ತಲುಪಿಸಲು ಬಾಲಿವುಡ್ ಮಂದಿ ರಿಮೇಕ್ ಮಾಡುತ್ತಿದ್ದಾರೆ ಎಂದ ನಟಿ
Image
‘ದಂಗಲ್​’ ದಾಖಲೆ ಉಡೀಸ್​ ಮಾಡಿದ ಯಶ್​​; ಅತಿ ಹೆಚ್ಚು ಹಣ ಗಳಿಸಿದ​ 2ನೇ ಸಿನಿಮಾ ‘ಕೆಜಿಎಫ್​ 2’
Image
‘ಅಮೇರಿಕನ್ ಗಾಯಕಿಯರ ಉಡುಪನ್ನು ಹೊಗಳುವವರು, ನಮ್ಮನ್ನು ಟ್ರೋಲ್ ಮಾಡುವುದೇಕೆ?’; ಮಲೈಕಾ ನೇರ ಪ್ರಶ್ನೆ
Image
Malaika Arora: ಬ್ರೇಕಪ್ ಮಾಡಿಕೊಂಡ್ರಾ ಮಲೈಕಾ- ಅರ್ಜುನ್? ವೈರಲ್ ಆಗಿರೋ ಈ ಸುದ್ದಿಯ ಅಸಲಿಯತ್ತು ಇಲ್ಲಿದೆ

ಮಲೈಕಾ ಅವರಿಗೆ ಇತ್ತೀಚೆಗೆ ಕಾರು ಅಪಘಾತ ಉಂಟಾಗಿತ್ತು. ಈ ವೇಳೆ ಅವರು ಗಾಯಗೊಂಡಿದ್ದರು. ಈ ಬಗ್ಗೆಯೂ ಮಲೈಕಾ ಮಾತನಾಡಿದ್ದಾರೆ. ‘ಕಾರು ಅಪಘಾತಕ್ಕೆ ಒಳಗಾದ 15 ದಿನಗಳವರೆಗೆ ನಾನು ಭಯದಲ್ಲೇ ಇದ್ದೆ. ಕಾರು ಹತ್ತಲು ನನಗೆ ಹೆದರಿಕೆ ಆಗುತ್ತಿತ್ತು. ಕಾರು ಸೇಫ್ ಅಲ್ಲ ಎನ್ನುವ ಫೀಲ್ ಬರುತ್ತಿತ್ತು’ ಎಂದಿದ್ದಾರೆ ಅವರು.

ಪುಣೆಯಲ್ಲಿ ಒಂದು ಫ್ಯಾಷನ್​ ಇವೆಂಟ್​ ಮುಗಿಸಿಕೊಂಡು ಮಲೈಕಾ ಹಿಂದಿರುಗುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿತ್ತು. ಮುಂಬೈನ ಖಾಸಗಿ ಆಸ್ಪತ್ರೆಗೆ ಮಲೈಕಾ ಅವರನ್ನು ದಾಖಲಿಸಿ, ಚಿಕಿತ್ಸೆ ನೀಡಲಾಗಿತ್ತು. ಅಪಘಾತದಿಂದ ಕಾರಿನ ಮುಂಭಾಗ ಝಕಂ ಆಗಿತ್ತು. ಈ ಫೋಟೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿತ್ತು. ಮಲೈಕಾ ಅವರು ಚಿಕಿತ್ಸೆ ಪಡೆದು ತಮ್ಮ ಮನೆಗೆ ಮರಳಿದ್ದಾರೆ. ಅರ್ಜುನ್ ಕಪೂರ್ ಅವರು ಮಲೈಕಾ ಮನೆಗೆ ಭೇಟಿ ನೀಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ