ಹೇಗಿದೆ ಮಲೈಕಾ ಅರೋರಾ ಆರೋಗ್ಯ?; ಹೆಚ್ಚು ಕಾಳಜಿ ತೋರುತ್ತಿದ್ದಾರೆ ಅರ್ಜುನ್ ಕಪೂರ್

\ಮಲೈಕಾ ಅವರು ಚಿಕಿತ್ಸೆ ಪಡೆದು ತಮ್ಮ ಮನೆಗೆ ಮರಳಿದ್ದಾರೆ. ಅರ್ಜುನ್ ಕಪೂರ್ ಅವರು ಮಲೈಕಾ ಮನೆಗೆ ಭೇಟಿ ನೀಡುತ್ತಿದ್ದಾರೆ.

ಹೇಗಿದೆ ಮಲೈಕಾ ಅರೋರಾ ಆರೋಗ್ಯ?; ಹೆಚ್ಚು ಕಾಳಜಿ ತೋರುತ್ತಿದ್ದಾರೆ ಅರ್ಜುನ್ ಕಪೂರ್
ಮಲೈಕಾ-ಅರ್ಜುನ್ (ಸಂಗ್ರಹ ಚಿತ್ರ)
Follow us
| Updated By: ರಾಜೇಶ್ ದುಗ್ಗುಮನೆ

Updated on: Apr 10, 2022 | 6:14 AM

ಖ್ಯಾತ ನಟಿ ಮಲೈಕಾ ಅರೋರಾ (Malaika Arora) ಅವರು ಇತ್ತೀಚೆಗೆ ಕಾರು ಅಪಘಾತಕ್ಕೆ ತುತ್ತಾಗಿದ್ದರು. ಈ ಅಪಘಾತದ ವೇಳೆ (Malaika Arora Car Accident) ಅವರ ತಲೆಗೆ ಹಾಗೂ ಕಣ್ಣಿಗೆ ಗಾಯ ಆಗಿದೆ ಎಂದು ವರದಿ ಆಗಿತ್ತು. ಈ ಘಟನೆ ನಡೆದು ಒಂದು ವಾರ ಕಳೆದಿದೆ. ಮಲೈಕಾ ಅವರು ಮುಂಬೈನ ತಮ್ಮ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಪ್ರಿಯಕರ ಅರ್ಜುನ್ ಕಪೂರ್ (Arjun Kapoor) ಅವರು ಮಲೈಕಾ ಅವರ ಆರೋಗ್ಯದ ಬಗ್ಗೆ ಕಾಳಜಿ ತೋರುತ್ತಿದ್ದಾರೆ. ಮಲೈಕಾ ಮನೆಯ ಸಮೀಪ ಅರ್ಜುನ್ ಕಾಣಿಸಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋಗೆ ಅಭಿಮಾನಿಗಳು, ‘ಕಪಲ್​ ಗೋಲ್ಸ್​’ ಎಂದು ಕಮೆಂಟ್ ಮಾಡುತ್ತಿದ್ದಾರೆ.

ಪುಣೆಯಲ್ಲಿ ಒಂದು ಫ್ಯಾಷನ್​ ಇವೆಂಟ್​ ಮುಗಿಸಿಕೊಂಡು ಮಲೈಕಾ ಹಿಂದಿರುಗುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿತ್ತು. ಮುಂಬೈನ ಖಾಸಗಿ ಆಸ್ಪತ್ರೆಗೆ ಮಲೈಕಾ ಅವರನ್ನು ದಾಖಲಿಸಿ, ಚಿಕಿತ್ಸೆ ನೀಡಲಾಗಿತ್ತು. ಅಪಘಾತದಿಂದ ಕಾರಿನ ಮುಂಭಾಗ ಝಕಂ ಆಗಿತ್ತು. ಈ ಫೋಟೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿತ್ತು. ಮಲೈಕಾ ಅವರು ಚಿಕಿತ್ಸೆ ಪಡೆದು ತಮ್ಮ ಮನೆಗೆ ಮರಳಿದ್ದಾರೆ. ಅರ್ಜುನ್ ಕಪೂರ್ ಅವರು ಮಲೈಕಾ ಮನೆಗೆ ಭೇಟಿ ನೀಡುತ್ತಿದ್ದಾರೆ.

ಅರ್ಜುನ್​ ಕಪೂರ್ ಅವರು ಮಲೈಕಾ ಮನೆಗೆ ಭೇಟಿ ನೀಡಿದ ವಿಡಿಯೋ ಪಾಪಾರಾಜಿಯೊಬ್ಬರ ಪೇಜ್​ನಲ್ಲಿ  ಹಂಚಿಕೊಳ್ಳಲಾಗಿದೆ. ಮಲೈಕಾ ಅವರು ಚೇತರಿಸಿಕೊಳ್ಳುತ್ತಿದ್ದು, ಅರ್ಜುನ್​ ಕಪೂರ್​ ಅವರು ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ ಎಂದು ವರದಿ ಆಗಿದೆ. ಅವರು ಶೀಘ್ರವೇ ಸಂಪೂರ್ಣವಾಗಿ ಗುಣಮುಖರಾಗಲಿದ್ದಾರೆ ಎನ್ನಲಾಗುತ್ತಿದೆ.

ಹಲವು ವರ್ಷಗಳಿಂದ ಮಲೈಕಾ ಅರೋರಾ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅನೇಕ ಐಟಂ ಸಾಂಗ್​ಗಳಲ್ಲಿ ಕಾಣಿಸಿಕೊಂಡು ಅವರು ಫೇಮಸ್​ ಆಗಿದ್ದಾರೆ. ಈಗಲೂ ಅವರಿಗೆ ಅಷ್ಟೇ ಬೇಡಿಕೆ ಇದೆ. ಫಿಟ್ನೆಸ್​ ವಿಚಾರದಲ್ಲಿ ಅನೇಕರಿಗೆ ಮಲೈಕಾ ಮಾದರಿ ಆಗಿದ್ದಾರೆ. ಈಗ ಅವರಿಗೆ 48ರ ಪ್ರಾಯ. ಈ ವಯಸ್ಸಿನಲ್ಲೂ ಅವರು ಹದಿಹರೆಯದ ಹುಡುಗಿಯರೂ ನಾಚುವಂತೆ ಫಿಟ್ನೆಸ್​ ಕಾಪಾಡಿಕೊಂಡಿದ್ದಾರೆ. ಇನ್ನು, ಅವರು ವೈಯಕ್ತಿಕ ವಿಚಾರದಿಂದಲೂ ಆಗಾಗ ಸುದ್ದಿ ಆಗುವುದುಂಟು. ನಟ ಅರ್ಜುನ್​ ಕಪೂರ್​ ಜೊತೆ ಮಲೈಕಾ ಲಿವ್​-ಇನ್-ರಿಲೇಷನ್​ಶಿಪ್​ನಲ್ಲಿ ಇದ್ದಾರೆ ಎಂಬುದು ಬಹಿರಂಗ ಸತ್ಯ. ತಮ್ಮ ಪ್ರೀತಿಯ ವಿಚಾರವನ್ನು ಈ ಜೋಡಿ ಹಕ್ಕಿಗಳು ಮುಚ್ಚಿಟ್ಟಿಲ್ಲ. ಇಬ್ಬರ ನಡುವಿನ ಆಪ್ತತೆಗೆ ಅನೇಕ ಫೋಟೋಗಳು ಸಾಕ್ಷಿ ಒದಗಿಸುತ್ತವೆ.

ಇದನ್ನೂ ಓದಿ: Malaika Arora Accident: ಕಾರು ಅಪಘಾತದಲ್ಲಿ ನಟಿ ಮಲೈಕಾ ಅರೋರಾ ತಲೆಗೆ ಪೆಟ್ಟು; ಆಸ್ಪತ್ರೆಗೆ ದಾಖಲು

ಅಪಘಾತದಲ್ಲಿ ಗಾಯಗೊಂಡಿದ್ದ ಮಲೈಕಾ ಆರೋಗ್ಯ ಈಗ ಹೇಗಿದೆ?

ಯಾವ ರೈತನಿಗೂ ಸಮಸ್ಯೆಯಾಗಲ್ಲ, ಬಿಜೆಪಿ ರೈತರನ್ನು ಎತ್ತಿಕಟ್ಟುತ್ತಿದೆ: ಜಮೀರ್
ಯಾವ ರೈತನಿಗೂ ಸಮಸ್ಯೆಯಾಗಲ್ಲ, ಬಿಜೆಪಿ ರೈತರನ್ನು ಎತ್ತಿಕಟ್ಟುತ್ತಿದೆ: ಜಮೀರ್
ಜಮೀರ್ ಕೋಮುದ್ವೇಷ ಬಿತ್ತುವ ಪ್ರಯತ್ನ ಮಾಡುತ್ತಿದ್ದಾರೆ: ಪ್ರಲ್ಹಾದ್ ಜೋಶಿ
ಜಮೀರ್ ಕೋಮುದ್ವೇಷ ಬಿತ್ತುವ ಪ್ರಯತ್ನ ಮಾಡುತ್ತಿದ್ದಾರೆ: ಪ್ರಲ್ಹಾದ್ ಜೋಶಿ
ದರ್ಶನ್ ಜಾಮೀನು ಅರ್ಜಿ ತೀರ್ಪು; ಲೈವ್ ನೋಡಿ
ದರ್ಶನ್ ಜಾಮೀನು ಅರ್ಜಿ ತೀರ್ಪು; ಲೈವ್ ನೋಡಿ
ಗಣ್ಯರ ಅಗಮನದಿಂದ ಮತ್ತಷ್ಟು ಹೆಚ್ಚಲಿದೆ ನೂಕುನುಗ್ಗಲು, ಪೊಲೀಸರಿಗೆ ಸವಾಲು
ಗಣ್ಯರ ಅಗಮನದಿಂದ ಮತ್ತಷ್ಟು ಹೆಚ್ಚಲಿದೆ ನೂಕುನುಗ್ಗಲು, ಪೊಲೀಸರಿಗೆ ಸವಾಲು
ಹೇಗಿತ್ತು ನೋಡಿ ‘ಟಾಕ್ಸಿಕ್’ ಸೆಟ್​ ಹಾಕಿದ ಪ್ರದೇಶ; ಇಲ್ಲಿದೆ ವಿಡಿಯೋ
ಹೇಗಿತ್ತು ನೋಡಿ ‘ಟಾಕ್ಸಿಕ್’ ಸೆಟ್​ ಹಾಕಿದ ಪ್ರದೇಶ; ಇಲ್ಲಿದೆ ವಿಡಿಯೋ
ಕೆಎಸ್​ಆರ್​ಟಿಸಿ ಐರಾವತ ಕ್ಲಬ್ ಕ್ಲಾಸ್ 2.0: ಹೊಸ ವೋಲ್ವೋ ವಿಶೇಷಗಳೇನು?
ಕೆಎಸ್​ಆರ್​ಟಿಸಿ ಐರಾವತ ಕ್ಲಬ್ ಕ್ಲಾಸ್ 2.0: ಹೊಸ ವೋಲ್ವೋ ವಿಶೇಷಗಳೇನು?
ಪಕ್ಕಾ ಪ್ಲ್ಯಾನ್ ಮಾಡಿ ಎಲ್ಲರನ್ನೂ ಹೊಡೆದ ಹನುಮಂತ; ತಂತ್ರಕ್ಕೆ ಎಲ್ಲರೂ ಶಾಕ್
ಪಕ್ಕಾ ಪ್ಲ್ಯಾನ್ ಮಾಡಿ ಎಲ್ಲರನ್ನೂ ಹೊಡೆದ ಹನುಮಂತ; ತಂತ್ರಕ್ಕೆ ಎಲ್ಲರೂ ಶಾಕ್
ಸಾಲಿಗ್ರಾಮ ಮನೆಯಲ್ಲಿದ್ದರೆ ಪೂಜಿಸುವುದು ಹೇಗೆಂದು ತಿಳಿಯಿರಿ
ಸಾಲಿಗ್ರಾಮ ಮನೆಯಲ್ಲಿದ್ದರೆ ಪೂಜಿಸುವುದು ಹೇಗೆಂದು ತಿಳಿಯಿರಿ
Nithya Bhavishya: ಜಲಪೂರ್ಣ ದಿನದಂದು ಯಾವ ರಾಶಿಗೆಲ್ಲಾ ಶುಭ, ಅಶುಭ
Nithya Bhavishya: ಜಲಪೂರ್ಣ ದಿನದಂದು ಯಾವ ರಾಶಿಗೆಲ್ಲಾ ಶುಭ, ಅಶುಭ
ವಿಡಿಯೋ: ಬೆಂಗಳೂರಿನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಭಯಭೀತರಾದ ಜನ
ವಿಡಿಯೋ: ಬೆಂಗಳೂರಿನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಭಯಭೀತರಾದ ಜನ