AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ranbir- Alia Wedding: ಕೊನೆಗೂ ಬಯಲಾಯ್ತು ಆಲಿಯಾ- ರಣಬೀರ್ ವಿವಾಹದ ದಿನಾಂಕ; ಇಲ್ಲಿದೆ ನೋಡಿ ಲೇಟೆಸ್ಟ್ ಡಿಟೇಲ್ಸ್

Alia Bhatt | Ranbir Kapoor: ಆಲಿಯಾ- ರಣಬೀರ್ ವಿವಾಹದ ಬಗ್ಗೆ ದಿನಕ್ಕೊಂದು ಮಾಹಿತಿ ಹೊರಬರುತ್ತಿದೆ. ಈ ಹಿಂದೆ ಏಪ್ರಿಲ್ 17ರಂದು ವಿವಾಹ ಎಂದು ಹೇಳಲಾಗುತ್ತಿತ್ತು. ಏಪ್ರಿಲ್ 15 ಎಂದೂ ಹೇಳಲಾಗುತ್ತಿತ್ತು. ಆದರೆ ಆಲಿಯಾ ಅವರ ಸಂಬಂಧಿಕರು ಈ ಬಗ್ಗೆ ಮಾತನಾಡಿದ್ದು, ವಿವಾಹದ ಹೊಸ ದಿನಾಂಕವನ್ನು ಬಹಿರಂಗಪಡಿಸಿದ್ದಾರೆ.

Ranbir- Alia Wedding: ಕೊನೆಗೂ ಬಯಲಾಯ್ತು ಆಲಿಯಾ- ರಣಬೀರ್ ವಿವಾಹದ ದಿನಾಂಕ; ಇಲ್ಲಿದೆ ನೋಡಿ ಲೇಟೆಸ್ಟ್ ಡಿಟೇಲ್ಸ್
ಆಲಿಯಾ ಭಟ್- ರಣಬೀರ್ ಕಪೂರ್
TV9 Web
| Edited By: |

Updated on: Apr 09, 2022 | 9:00 AM

Share

ಬಾಲಿವುಡ್​ನ ತಾರಾ ಜೋಡಿಗಳಲ್ಲಿ ಒಂದಾದ ಆಲಿಯಾ ಭಟ್ (Alia Bhatt) ಹಾಗೂ ರಣಬೀರ್ ಕಪೂರ್ (Ranbir Kapoor) ವಿವಾಹಕ್ಕೆ ಅಭಿಮಾನಿಗಳು ದೀರ್ಘಕಾಲದಿಂದ ಕಾದಿದ್ದಾರೆ. ಆದರೆ ವಿವಾಹದ ದಿನಾಂಕದ ಬಗ್ಗೆ ಅಧಿಕೃತವಾಗಿ ತಾರಾ ಜೋಡಿ ಇನ್ನೂ ಬಾಯ್ಬಿಟ್ಟಿಲ್ಲ. ಹೀಗಾಗಿ ಫ್ಯಾನ್ಸ್ ವಲಯದಲ್ಲಿ ಈ ಬಗ್ಗೆ ಕುತೂಹಲ ಹೆಚ್ಚಿದೆ. ಜತೆಗೆ ಆಲಿಯಾ- ರಣಬೀರ್ ವಿವಾಹದ ಬಗ್ಗೆ ದಿನಕ್ಕೊಂದು ಮಾಹಿತಿ ಹೊರಬರುತ್ತಿದೆ. ಈ ಹಿಂದೆ ಏಪ್ರಿಲ್ 17ರಂದು ವಿವಾಹ ಎಂದು ಹೇಳಲಾಗುತ್ತಿತ್ತು. ಏಪ್ರಿಲ್ 15 ಎಂದೂ ಹೇಳಲಾಗುತ್ತಿತ್ತು. ಆದರೆ ಆಲಿಯಾ ಅವರ ಸಂಬಂಧಿಕರು ಈ ಬಗ್ಗೆ ಮಾತನಾಡಿದ್ದು, ವಿವಾಹದ ದಿನಾಂಕವನ್ನು ಬಹಿರಂಗಪಡಿಸಿದ್ದಾರೆ. ವಿವಾಹದ ಬಗ್ಗೆ ನಟಿಯ ಸಂಬಂಧಿ ರಾಬಿನ್ ಭಟ್ ಇಂಡಿಯಾ ಟುಡೆಯೊಂದಿಗೆ ಮಾತನಾಡಿದ್ದಾರೆ. ಆಲಿಯಾ ಹಾಗೂ ರಣಬೀರ್ ಏಪ್ರಿಲ್ 14ರಂದು ವಿವಾಹವಾಗಲಿದ್ದಾರೆ ಎನ್ನುವುದನ್ನು ರಾಬಿನ್ ಭಟ್ ಬಹಿರಂಗಗೊಳಿಸಿದ್ದಾರೆ.

ಏಪ್ರಿಲ್ 14ರಂದು ಆಲಿಯಾ ರಣಬೀರ್ ಮದುವೆ ನಡೆಯಲಿದ್ದರೆ, ಅದರ ಹಿಂದಿನ ದಿನ ಅಂದರೆ ಏಪ್ರಿಲ್ 13ರಂದು ಮೆಹಂದಿ ಸಮಾರಂಭ ನಡೆಯಲಿದೆ. ರಾಬಿನ್ ಭಟ್ ವಿವಾಹ ಎಲ್ಲಿ ನಡೆಯಲಿದೆ ಎನ್ನುವುದನ್ನೂ ಬಹಿರಂಗಗೊಳಿಸಿದ್ದು, ಎಲ್ಲಾ ವದಂತಿಗಳಿಗೆ ತೆರ ಎಳೆದಿದ್ದಾರೆ. ಈ ಹಿಂದೆ ವರದಿಯಾಗಿದ್ದಂತೆ ರಣಬೀರ್ ಕಪೂರ್ ಬಾಂದ್ರಾದಲ್ಲಿನ ನಿವಾಸ ‘ವಾಸ್ತು’ವಿನಲ್ಲಿ ಸಮಾರಂಭ ನಡೆಯಲಿದೆ.

ಈ ಹಿಂದೆ ರಣಬೀರ್ ಕಪೂರ್ ತಾಯಿ ನೀತು ಕಪೂರ್ ಪುತ್ರನ ವಿವಾಹದ ಬಗ್ಗೆ ಓಡಾಡುತ್ತಿರುವ ಗಾಸಿಪ್​ಗಳ ಬಗ್ಗೆ ಪ್ರತಿಕ್ರಿಯಿಸಿದ್ದರು. ‘‘ಆ ಎಲ್ಲಾ ಸುದ್ದಿಗಳು ಕಳೆದ ಎರಡು ವರ್ಷಗಳಿಂದ ಓಡಾಡುತ್ತಿವೆ. ನಾವು ರಣಬೀರ್ ವಿವಾಹದ ಬಗೆಗಿನ ಸುದ್ದಿ ಓದಿ ಎಂಜಾಯ್ ಮಾಡುತ್ತೇವೆ’’ ಎಂದು ನಗುತ್ತಾ ಹೇಳಿದ್ದರು. ‘‘ಕೆಲವರು ಏ.17 ಎನ್ನುತ್ತಾರೆ, ಕೆಲವರು ಏಪ್ರಿಲ್ 15 ಎನ್ನುತ್ತಾರೆ. ಮೊದಲಿಗೆ ವಿವಾಹ ರಾಣಾಥಂಬೋರ್​ನಲ್ಲಿ ಎನ್ನುತ್ತಿದ್ದರು. ಈಗ ಬಾಂದ್ರಾದ ನಿವಾಸದಲ್ಲಿ ಎನ್ನುತ್ತಿದ್ದಾರೆ. ನೋಡೋಣ, ಎಲ್ಲವೂ ಎಲ್ಲಿ ನಡೆಯುತ್ತದೆಂದು’’ ಎಂದಿದ್ದಾರೆ ನೀತು ಕಪೂರ್.

ಆಲಿಯಾ ಹಾಗೂ ರಣಬೀರ್ ವಿವಾಹದ ತಯಾರಿ ಜೋರಾಗಿಯೇ ನಡೆಯುತ್ತಿದೆ. ನೀತು ಕಪೂರ್ ಖ್ಯಾತ ವಸ್ತ್ರ ವಿನ್ಯಾಸಕ ಮನೀಶ್ ಮಲ್ಹೋತ್ರಾ ವಿನ್ಯಾಸ ಮಾಡಿರುವ ಪಂಜಾಬಿ ಶೈಲಿಯ ದಿರಿಸನ್ನು ಧರಿಸಲಿದ್ದಾರೆ. ಆಲಿಯಾ ಕೂಡ ಮನೀಶ್ ಮಲ್ಹೋತ್ರಾ ವಿನ್ಯಾಸ ಮಾಡಿರುವ ಸವ್ಯಸಾಚಿ ಲೆಹೆಂಗಾ ಧರಿಸಲಿದ್ದಾರೆ ಎನ್ನಲಾಗಿದೆ.

ಚಿತ್ರಗಳ ವಿಷಯಕ್ಕೆ ಬಂದರೆ ಆಲಿಯಾ ಹಾಗೂ ರಣಬೀರ್ ಜತೆಯಾಗಿ ನಟಿಸಿರುವ ಮೊದಲ ಚಿತ್ರ ‘ಬ್ರಹ್ಮಾಸ್ತ್ರ’ದ ಚಿತ್ರೀಕರಣ ಮುಕ್ತಾಯವಾಗಿದೆ. ಇದರ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಚಿತ್ರವನ್ನು ಅಯಾನ್ ಮುಖರ್ಜಿ ನಿರ್ದೇಶಿಸಿದ್ದಾರೆ. ಪ್ಯಾನ್ ಇಂಡಿಯಾ ಮಾದರಿಯ ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್, ನಾಗಾರ್ಜುನ್ ಅಕ್ಕಿನೇನಿ, ಮೌನಿ ರಾಯ್ ಮೊದಲಾದವರು ಬಣ್ಣಹಚ್ಚಿದ್ದಾರೆ.

ಇದನ್ನೂ ಓದಿ: ಸಖತ್ ಬೋಲ್ಡ್​​ ಲುಕ್​ನಲ್ಲಿ ಮಿಂಚಿದ ಆಲಿಯಾ

‘ಓಲ್ಡ್​ ಮಾಂಕ್​’ ಗೆದ್ದ ಬಳಿಕ ಶ್ರೀನಿ ಹೊಸ ಚಿತ್ರ ಅನೌನ್ಸ್​; ಈ ಬಾರಿ ಶಿವಣ್ಣ, ಸಂದೇಶ್​ ನಾಗರಾಜ್​ ಜೊತೆ ಸಿನಿಮಾ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್