Ranbir- Alia Wedding: ಮದುವೆಗೂ ಮುನ್ನ ರಣಬೀರ್ ಬ್ಯಾಚುಲರ್ ಪಾರ್ಟಿ; ಆಹ್ವಾನಿತರ ಹೆಸರು ಬಹಿರಂಗ

Ranbir- Alia Wedding: ಮದುವೆಗೂ ಮುನ್ನ ರಣಬೀರ್ ಬ್ಯಾಚುಲರ್ ಪಾರ್ಟಿ; ಆಹ್ವಾನಿತರ ಹೆಸರು ಬಹಿರಂಗ
ಆಲಿಯಾ ಭಟ್- ರಣಬೀರ್ ಕಪೂರ್

Ranbir Kapoor | Alia Bhatt: ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ವಿವಾಹ ಏಪ್ರಿಲ್​ನಲ್ಲಿ ನೆರವೇರಲಿದೆ. ದಿನಾಂಕದ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲವಾದರೂ, ಇದೀಗ ರಣಬೀರ್ ಬ್ಯಾಚುಲರ್ ಪಾರ್ಟಿ ಆಯೋಜಿಸುತ್ತಿರುವ ಮಾಹಿತಿ ಹೊರಬಿದ್ದಿದೆ. ಇದರಲ್ಲಿ ಯಾರೆಲ್ಲಾ ಭಾಗವಹಿಸಲಿದ್ದಾರೆ ಎನ್ನುವ ಮಾಹಿತಿಯೂ ಬಹಿರಂಗಗೊಂಡಿದೆ.

TV9kannada Web Team

| Edited By: shivaprasad.hs

Apr 05, 2022 | 12:44 PM

ಬಾಲಿವುಡ್ ಮತ್ತೊಂದು ವಿವಾಹಕ್ಕೆ ಸಜ್ಜಾಗುತ್ತಿದೆ. ದೀರ್ಘಕಾಲದಿಂದ ಮದುವೆಗೆ ಕಾದಿದ್ದ ತಾರಾ ಜೋಡಿ ಆಲಿಯಾ ಭಟ್  ಹಾಗೂ ರಣಬೀರ್ ಕಪೂರ್ (Alia Bhatt- Ranbir Kapoor wedding) ಏಪ್ರಿಲ್​ನಲ್ಲಿಯೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಏಪ್ರಿಲ್ 17ರಂದು ವಿವಾಹ ಸಮಾರಂಭ ನಡೆಯಲಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಮದುವೆ ಶೀಘ್ರಕ್ಕಿಲ್ಲ ಎಂದು ರಣಬೀರ್ ಹೇಳುತ್ತಲೇ, ಇದೀಗ ಮದುವೆಗೆ ತಯಾರಿ ನಡೆಸಿದ್ದಾರೆ. ಈ ನಡುವೆ ರಣಬೀರ್ ಭರ್ಜರಿಯಾಗಿ ಬ್ಯಾಚುಲರ್ ಪಾರ್ಟಿ ನಡೆಸಲು ಸಿದ್ಧತೆ ನಡೆಸಿದ್ದಾರೆ. ಅವರು ಆಹ್ವಾನ ನೀಡಿರುವ ಅತಿಥಿಗಳ ಪಟ್ಟಿಯ ಬಗ್ಗೆಯೂ ಮಾಹಿತಿ ಹೊರಬಿದ್ದಿದೆ. ಇಂಡಿಯಾ ಟುಡೆ ಮೂಲಗಳನ್ನು ಉಲ್ಲೇಖಿಸಿ ಈ ಬಗ್ಗೆ ವರದಿ ಮಾಡಿದೆ. ಬ್ಯಾಚುಲರ್​ ಪಾರ್ಟಿಗೆ ರಣಬೀರ್ ಕಪೂರ್ ಆಪ್ತ ಸ್ನೇಹಿತರಾದ ಅರ್ಜುನ್ ಕಪೂರ್, ಆದಿತ್ಯ ರಾಯ್ ಕಪೂರ್ ಮತ್ತು ಅಯಾನ್ ಮುಖರ್ಜಿ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.

ರಣಬೀರ್ ತಮ್ಮ ಸ್ವಂತ ಜಾಗದಲ್ಲಿ ಬ್ಯಾಚುಲರ್ ಪಾರ್ಟಿ ಆಯೋಜಿಸಲಿದ್ದಾರೆ. ತಮ್ಮ ಆಪ್ತ ವಲಯ ಹಾಗೂ ಬಾಲ್ಯದ ಸ್ನೇಹಿತರನ್ನು ಅವರು ಆಹ್ವಾನಿಸಲಿದ್ದಾರೆ. ಈ ಮೂಲಕ ಬ್ಯಾಚುಲರ್​ ಪಾರ್ಟಿಯನ್ನು ಬಹಳ ವಿಶೇಷವಾಗಿ ಅವರು ನಡೆಸಲಿದ್ದಾರೆ. ರಣಬೀರ್​ಗೆ ಬಹಳ ಆಪ್ತರಾದವರಲ್ಲಿ ಅರ್ಜುನ್ ಕಪೂರ್, ಆದಿತ್ಯ ಕಪೂರ್ ಹಾಗೂ ಅಯಾನ್ ಮುಖರ್ಜಿ ಪ್ರಮುಖರು. ಅವರು ಈ ವಿಶೇಷ ಸಂದರ್ಭದಲ್ಲಿ ರಣಬೀರ್ ಜತೆಯಿರಲಿದ್ದಾರೆ ಎಂದು ವರದಿಗಳು ಹೇಳಿವೆ.

ರಣಬೀರ್ ಕಪೂರ್ ಬಾಲಿವುಡ್​ನ ‘ಡೆಸ್ಟಿನೇಷನ್ ವೆಡ್ಡಿಂಗ್’ ಟ್ರೆಂಡ್​ ಬ್ರೇಕ್ ಮಾಡಲಿದ್ದಾರೆ. ಕಾರಣ, ಈ ಹಿಂದೆ ಹಲವು ಜೋಡಿಗಳು ದೂರದೂರುಗಳಲ್ಲಿ ಅಥವಾ ವಿದೇಶಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ರಣಬೀರ್ ಹಾಗೂ ಆಲಿಯಾ ತಮ್ಮ ಹಿರಿಯರ ನಿವಾಸದಲ್ಲಿ ವಿವಾಹ ಬಂಧನಕ್ಕೆ ಒಳಗಾಗಲಿದ್ದಾರೆ.

ಚಿತ್ರಗಳ ವಿಷಯಕ್ಕೆ ಬಂದರೆ ರಣಬೀರ್ ‘ಬ್ರಹ್ಮಾಸ್ತ್ರ’ ಬಿಡುಗಡೆಗೆ ಕಾದಿದ್ದಾರೆ. ಆಲಿಯಾ ಹಾಗೂ ರಣಬೀರ್ ಜತೆಯಾಗಿ ನಟಿಸಿರುವ ಮೊದಲ ಚಿತ್ರ ಇದಾಗಿರುವುದು ವಿಶೇಷ. ‘ಶಂಷೇರಾ’ ಚಿತ್ರದಲ್ಲೂ ರಣಬೀರ್ ಕಾಣಿಸಿಕೊಂಡಿದ್ದು, ಅದು ರಿಲೀಸ್​ಗೆ ಸಿದ್ಧಗೊಂಡಿದೆ. ರಣಬೀರ್ ಬತ್ತಳಿಕೆಯಲ್ಲಿ ಮಹತ್ವದ ಪ್ರಾಜೆಕ್ಟ್​ಗಳಿವೆ. ‘ಅರ್ಜುನ್ ರೆಡ್ಡಿ’ ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಆಕ್ಷನ್ ಕಟ್ ಹೇಳುತ್ತಿರುವ ‘ಅನಿಮಲ್’ ಚಿತ್ರ ಅನೌನ್ಸ್ ಆಗಿದೆ. ಇತ್ತೀಚೆಗಷ್ಟೇ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಬಹಿರಂಗವಾಗಿತ್ತು.

ಆಲಿಯಾ ಕೂಡ ಹಲವು ಚಿತ್ರಗಳಲ್ಲಿ ಬ್ಯುಸಿಯಿದ್ದಾರೆ. ಇತ್ತೀಚೆಗೆ ಅವರು ಕಾಣಿಸಿಕೊಂಡಿದ್ದ ‘ಗಂಗೂಬಾಯಿ ಕಾಠಿಯಾವಾಡಿ’ ಹಾಗೂ ‘ಆರ್​ಆರ್​ಆರ್​’ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದವು. ಹಾಲಿವುಡ್​ಗೆ ಆಲಿಯಾ ಪದಾರ್ಪಣೆ ಮಾಡಲಿದ್ದಾರೆ. ಇದಲ್ಲದೇ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ಯಲ್ಲಿ ಆಲಿಯಾ ರಣವೀರ್ ಸಿಂಗ್​ಗೆ ಜತೆಯಾಗಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: Beast: ‘ಬೀಸ್ಟ್​​’ಗೆ ಸಂಕಷ್ಟ; ಚಿತ್ರದ ಬಿಡುಗಡೆಯನ್ನೇ ಬ್ಯಾನ್ ಮಾಡಿದೆ ಈ ದೇಶ; ಕಾರಣವಾದರೂ ಏನು?

ಗ್ರೀಸ್​ನಲ್ಲಿ ತೆರೆಕಾಣಲಿರುವ ಮೊದಲ ದಕ್ಷಿಣ ಭಾರತೀಯ ಚಿತ್ರ ಕೆಜಿಎಫ್ 2; ರಿಲೀಸ್​ಗೂ ಮುನ್ನ ಹಲವು ದಾಖಲೆ ಬರೆದ ಯಶ್​ ಚಿತ್ರ

Follow us on

Related Stories

Most Read Stories

Click on your DTH Provider to Add TV9 Kannada