- Kannada News Photo gallery HBD Alia Bhatt Alia turns 29 Actress soon will marry with Ranbir in Shimla says reports
Alia Bhatt: 29ನೇ ವಸಂತಕ್ಕೆ ಕಾಲಿಟ್ಟ ಆಲಿಯಾ; ಮದುವೆ ಬಗ್ಗೆ ಕೇಳಿಬಂತು ಹೊಸ ಸುದ್ದಿ!
Alia Bhatt Birthday: ಬಾಲಿವುಡ್ ಬೆಡಗಿ ಆಲಿಯಾ ಭಟ್ ಇಂದು (ಮಾ.15) 29ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಗೆಳೆಯ ರಣಬೀರ್ ಜತೆ ಅವರು ಏಪ್ರಿಲ್ನಲ್ಲಿ ವಿವಾಹವಾಗಲಿದ್ದಾರೆ. ಶಿಮ್ಲಾದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂಬ ಸುದ್ದಿ ಬಿಟೌನ್ನಿಂದ ಜೋರಾಗಿ ಕೇಳಿಬಂದಿದೆ. ಆದರೆ ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಬರಬೇಕಿದೆ.
Updated on: Mar 15, 2022 | 9:33 AM
Share

ಬಾಲಿವುಡ್ನ ಬಹುಬೇಡಿಕೆಯ ನಾಯಕಿಯರಲ್ಲಿ ಈಗ ಆಲಿಯಾ ಭಟ್ ಮುಂಚೂಣಿಯಲ್ಲಿದ್ದಾರೆ. ಇಂದು (ಮಾ.15) ಅವರು 29ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಪ್ರಸ್ತುತ ಆಲಿಯಾ ಭಟ್ ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರದ ಭರ್ಜರಿ ಯಶಸ್ಸಿನಲ್ಲಿ ತೇಲುತ್ತಿದ್ದಾರೆ.

ಆಲಿಯಾ ಇಂದು ಹುಟ್ಟುಹಬ್ಬವನ್ನು ತಮ್ಮ ಸಹೋದರಿ ಹಾಗೂ ತಾಯಿಯೊಂದಿಗೆ ಮುಂಬೈ ಹೊರಗೆ ಆಚರಿಸುತ್ತಿದ್ದಾರೆ.

ಆಲಿಯಾ ಗೆಳೆಯ ರಣಬೀರ್ ಕಪೂರ್ ಚಿತ್ರೀಕರಣದಲ್ಲಿ ಬ್ಯುಸಿಯಿರುವುದರಿಂದ ನಂತರದಲ್ಲಿ ಆಲಿಯಾ ಜತೆ ಹುಟ್ಟುಹಬ್ಬ ಆಚರಿಸಲಿದ್ದಾರೆ ಎಂದು ಬಾಲಿವುಡ್ ವರದಿಗಳು ಹೇಳಿವೆ.

ಆಲಿಯಾ ಹಾಗೂ ರಣಬೀರ್ ಮುಂದಿನ ತಿಂಗಳು ಏಪ್ರಿಲ್ನಲ್ಲಿ ಶಿಮ್ಲಾದಲ್ಲಿ ವಿವಾಹವಾಗಬಹುದುಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಮಾಹಿತಿ ಖಚಿತವಾಗಿಲ್ಲ.

ಚಿತ್ರಗಳ ವಿಷಯಕ್ಕೆ ಬಂದರೆ ಆಲಿಯಾ ಈಗ ‘ಆರ್ಆರ್ಆರ್’ ಚಿತ್ರದ ರಿಲೀಸ್ ಸಿದ್ಧತೆಯಲ್ಲಿದ್ದಾರೆ. ‘ಗಂಗೂಬಾಯಿ ಕಾಠಿಯಾವಾಡಿ’ ಅವರಿಗೆ ದೊಡ್ಡ ಮಟ್ಟದಲ್ಲಿ ಯಶಸ್ಸು ತಂದುಕೊಟ್ಟಿದೆ.
Related Photo Gallery
ಭಾರತದ ಪ್ರಧಾನಿ ಮೋದಿಗೆ ಓಮನ್ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ



