Malaika Arora Accident: ಕಾರು ಅಪಘಾತದಲ್ಲಿ ನಟಿ ಮಲೈಕಾ ಅರೋರಾ ತಲೆಗೆ ಪೆಟ್ಟು; ಆಸ್ಪತ್ರೆಗೆ ದಾಖಲು

Malaika Arora Car Accident: ಪುಣೆಯಲ್ಲಿ ಒಂದು ಫ್ಯಾಷನ್​ ಇವೆಂಟ್​ ಮುಗಿಸಿಕೊಂಡು ವಾಪಸ್​ ಬರುವಾಗ ಈ ಅಪಘಾತ ಸಂಭವಿಸಿದೆ. ಮುಂಬೈನ ಖಾಸಗಿ ಆಸ್ಪತ್ರೆಗೆ ಮಲೈಕಾ ಅರೋರಾ ಅವರನ್ನು ದಾಖಲಿಸಲಾಗಿದೆ.

Malaika Arora Accident: ಕಾರು ಅಪಘಾತದಲ್ಲಿ ನಟಿ ಮಲೈಕಾ ಅರೋರಾ ತಲೆಗೆ ಪೆಟ್ಟು; ಆಸ್ಪತ್ರೆಗೆ ದಾಖಲು
ಮಲೈಕಾ ಅರೋರಾ
Follow us
| Updated By: ಮದನ್​ ಕುಮಾರ್​

Updated on:Apr 03, 2022 | 8:32 AM

ಖ್ಯಾತ ನಟಿ ಮಲೈಕಾ ಅರೋರಾ (Malaika Arora) ಅವರ ಅಭಿಮಾನಿಗಳ ಪಾಲಿಗೆ ಇದು ಬೇಸರದ ಸುದ್ದಿ. ಮಲೈಕಾ ಚಲಿಸುತ್ತಿದ್ದ ಕಾರು ಅಪಘಾತಕ್ಕೆ ಒಳಗಾಗಿದೆ. ಶನಿವಾರ (ಏ.2) ಈ ಘಟನೆ ನಡೆದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಲೈಕಾ ಅರೋರಾ ಅವರ ತಲೆಗೆ ಪೆಟ್ಟು ಬಿದ್ದಿದೆ ಎಂಬ ಮಾಹಿತಿ ಕೇಳಿಬಂದಿದೆ. ಕಣ್ಣಿಗೂ ಸಹ ಗಾಯ ಆಗಿದೆ ಎನ್ನಲಾಗುತ್ತಿದೆ. ಪುಣೆಯಲ್ಲಿ ಒಂದು ಫ್ಯಾಷನ್​ ಇವೆಂಟ್​ ಮುಗಿಸಿಕೊಂಡು ವಾಪಸ್​ ಬರುವಾಗ ಈ ಅಪಘಾತ (Malaika Arora Car Accident) ಸಂಭವಿಸಿದೆ. ಮುಂಬೈನ ಖಾಸಗಿ ಆಸ್ಪತ್ರೆ ಮಲೈಕಾ ಅವರನ್ನು ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಆಕ್ಸಿಡೆಂಟ್​ನಿಂದ ಜಖಂ ಆಗಿರುವ ಕಾರಿನ ಫೋಟೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಮಲೈಕಾ ಅವರು ಬೇಗ ಚೇತರಿಸಿಕೊಳ್ಳಲಿ ಎಂದು ಅವರ ಅಭಿಮಾನಿಗಳು ಮತ್ತು ಸ್ನೇಹಿತರು ಪ್ರಾರ್ಥಿಸುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಈ ಅಪಘಾತ ಸಂಭವಿಸಿದಾಗ ಕಾರಿನಲ್ಲಿ ಮಲೈಕಾ ಅವರ ಬಾಡಿಗಾರ್ಡ್​ ಮತ್ತು ಕಾರು ಚಾಲಕ ಕೂಡ ಇದ್ದರು ಎನ್ನಲಾಗಿದೆ. ‘ಮಲೈಕಾ ಅರೋರಾ ಅವರ ಹಣೆಗೆ ಚಿಕ್ಕ ಗಾಯಗಳು ಆಗಿವೆ. ಸಿಟಿ ಸ್ಕ್ಯಾನ್​ ಮಾಡಲಾಗಿದೆ. ಯಾವುದೇ ಅಪಾಯ ಇಲ್ಲ ಎಂಬುದು ತಿಳಿದುಬಂದಿದೆ. ರಾತ್ರಿ ಅವರ ಆರೋಗ್ಯವನ್ನು ಗಮನಿಸಿ, ನಂತರ ಡಿಸ್ಚಾರ್ಜ್​ ಮಾಡಲಾಗುವುದು’ ಎಂದು ವೈದ್ಯರು ತಿಳಿಸಿದ್ದಾರೆ. ಈ ಅಪಘಾತಕ್ಕೆ ಕಾರಣ ಏನು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

ಆ್ಯಕ್ಸಿಡೆಂಟ್​ ಸಂಭವಿಸಿದಾಗ ಮೂರು ಕಾರುಗಳು ಜಖಂ ಆಗಿವೆ. ಎಲ್ಲ ವಾಹನಗಳ ನೋಂದಣಿ ಸಂಖ್ಯೆ ಮತ್ತಿತರ ವಿವರಗಳನ್ನು ಪೊಲೀಸರು ಪಡೆದುಕೊಂಡಿದ್ದಾರೆ. ಈಗಾಗಲೇ ತನಿಖೆ ಆರಂಭ ಆಗಿದೆ. ಶೀಘ್ರವೇ ಎಫ್​ಐಆರ್​ ದಾಖಲಾಗಲಿದೆ ಎಂದು ಪೊಲೀಸರು ತಿಳಿಸಿರುವುದಾಗಿ ಕೆಲವು ಮಾಧ್ಯಮಗಳು ವರದಿ ಮಾಡಿವೆ. ‘ಮಲೈಕಾ ಚೇತರಿಸಿಕೊಳ್ಳುತ್ತಾ ಇದ್ದಾರೆ’ ಎಂದು ಅವರ ಸಹೋದರಿ ಅಮೃತಾ ಅರೋರಾ ತಿಳಿಸಿದ್ದಾರೆ.

ಹಲವು ವರ್ಷಗಳಿಂದ ಮಲೈಕಾ ಅರೋರಾ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅನೇಕ ಐಟಂ ಸಾಂಗ್​ಗಳಲ್ಲಿ ಕಾಣಿಸಿಕೊಂಡು ಅವರು ಫೇಮಸ್​ ಆಗಿದ್ದಾರೆ. ಈಗಲೂ ಅವರಿಗೆ ಅಷ್ಟೇ ಬೇಡಿಕೆ ಇದೆ. ಫಿಟ್ನೆಸ್​ ವಿಚಾರದಲ್ಲಿ ಅನೇಕರಿಗೆ ಮಲೈಕಾ ಮಾದರಿ ಆಗಿದ್ದಾರೆ. ಈಗ ಅವರಿಗೆ 48ರ ಪ್ರಾಯ. ಈ ವಯಸ್ಸಿನಲ್ಲೂ ಅವರು ಹದಿಹರೆಯದ ಹುಡುಗಿಯರೂ ನಾಚುವಂತೆ ಫಿಟ್ನೆಸ್​ ಕಾಪಾಡಿಕೊಂಡಿದ್ದಾರೆ. ಇನ್ನು, ಅವರು ವೈಯಕ್ತಿಕ ವಿಚಾರದಿಂದಲೂ ಆಗಾಗ ಸುದ್ದಿ ಆಗುವುದುಂಟು. ನಟ ಅರ್ಜುನ್​ ಕಪೂರ್​ ಜೊತೆ ಮಲೈಕಾ ಲಿವ್​-ಇನ್-ರಿಲೇಷನ್​ಶಿಪ್​ನಲ್ಲಿ ಇದ್ದಾರೆ ಎಂಬುದು ಬಹಿರಂಗ ಸತ್ಯ. ತಮ್ಮ ಪ್ರೀತಿಯ ವಿಚಾರವನ್ನು ಈ ಜೋಡಿ ಹಕ್ಕಿಗಳು ಮುಚ್ಚಿಟ್ಟಿಲ್ಲ. ಇಬ್ಬರ ನಡುವಿನ ಆಪ್ತತೆಗೆ ಅನೇಕ ಫೋಟೋಗಳು ಸಾಕ್ಷಿ ಒದಗಿಸುತ್ತವೆ.

ಇದನ್ನೂ ಓದಿ:

‘ಅಮೇರಿಕನ್ ಗಾಯಕಿಯರ ಉಡುಪನ್ನು ಹೊಗಳುವವರು, ನಮ್ಮನ್ನು ಟ್ರೋಲ್ ಮಾಡುವುದೇಕೆ?’; ಮಲೈಕಾ ನೇರ ಪ್ರಶ್ನೆ

ವೀಕೆಂಡ್ ಮೂಡಲ್ಲಿ ನಟಿ ಮಲೈಕಾ ಅರೋರಾ; ಕಲರ್​ಪುಲ್ ಡ್ರೆಸ್​ನಲ್ಲಿ ಮಿಂಚಿದ ಹಾಟ್​ ಬೆಡಗಿ; ಇಲ್ಲಿವೆ ಫೋಟೋಗಳು

Published On - 7:58 am, Sun, 3 April 22

ದರ್ಶನ್​ಗೆ ಜಾಮೀನು ನೀಡಿರುವುದನ್ನು ಸರ್ಕಾರ ಸ್ವಾಗತಿಸುತ್ತದೆ: ಶಿವಕುಮಾರ್
ದರ್ಶನ್​ಗೆ ಜಾಮೀನು ನೀಡಿರುವುದನ್ನು ಸರ್ಕಾರ ಸ್ವಾಗತಿಸುತ್ತದೆ: ಶಿವಕುಮಾರ್
‘ದರ್ಶನ್​​ಗೆ ಬೆನ್ನು ನೋವು ಬಂದಿದ್ದು ಇಂದು ನಿನ್ನೆಯಲ್ಲ’; ವಕೀಲರ ಸ್ಪಷ್ಟನೆ
‘ದರ್ಶನ್​​ಗೆ ಬೆನ್ನು ನೋವು ಬಂದಿದ್ದು ಇಂದು ನಿನ್ನೆಯಲ್ಲ’; ವಕೀಲರ ಸ್ಪಷ್ಟನೆ
ದುಬಾರಿ ದೀಪಾವಳಿ: ಹೂವು, ಹಣ್ಣು ತರಕಾರಿ ಬೆಲೆ ಏರಿಕೆ
ದುಬಾರಿ ದೀಪಾವಳಿ: ಹೂವು, ಹಣ್ಣು ತರಕಾರಿ ಬೆಲೆ ಏರಿಕೆ
ಯಾವ ರೈತನಿಗೂ ಸಮಸ್ಯೆಯಾಗಲ್ಲ, ಬಿಜೆಪಿ ರೈತರನ್ನು ಎತ್ತಿಕಟ್ಟುತ್ತಿದೆ: ಜಮೀರ್
ಯಾವ ರೈತನಿಗೂ ಸಮಸ್ಯೆಯಾಗಲ್ಲ, ಬಿಜೆಪಿ ರೈತರನ್ನು ಎತ್ತಿಕಟ್ಟುತ್ತಿದೆ: ಜಮೀರ್
ಜಮೀರ್ ಕೋಮುದ್ವೇಷ ಬಿತ್ತುವ ಪ್ರಯತ್ನ ಮಾಡುತ್ತಿದ್ದಾರೆ: ಪ್ರಲ್ಹಾದ್ ಜೋಶಿ
ಜಮೀರ್ ಕೋಮುದ್ವೇಷ ಬಿತ್ತುವ ಪ್ರಯತ್ನ ಮಾಡುತ್ತಿದ್ದಾರೆ: ಪ್ರಲ್ಹಾದ್ ಜೋಶಿ
ದರ್ಶನ್ ಜಾಮೀನು ಅರ್ಜಿ ತೀರ್ಪು; ಲೈವ್ ನೋಡಿ
ದರ್ಶನ್ ಜಾಮೀನು ಅರ್ಜಿ ತೀರ್ಪು; ಲೈವ್ ನೋಡಿ
ಗಣ್ಯರ ಅಗಮನದಿಂದ ಮತ್ತಷ್ಟು ಹೆಚ್ಚಲಿದೆ ನೂಕುನುಗ್ಗಲು, ಪೊಲೀಸರಿಗೆ ಸವಾಲು
ಗಣ್ಯರ ಅಗಮನದಿಂದ ಮತ್ತಷ್ಟು ಹೆಚ್ಚಲಿದೆ ನೂಕುನುಗ್ಗಲು, ಪೊಲೀಸರಿಗೆ ಸವಾಲು
ಹೇಗಿತ್ತು ನೋಡಿ ‘ಟಾಕ್ಸಿಕ್’ ಸೆಟ್​ ಹಾಕಿದ ಪ್ರದೇಶ; ಇಲ್ಲಿದೆ ವಿಡಿಯೋ
ಹೇಗಿತ್ತು ನೋಡಿ ‘ಟಾಕ್ಸಿಕ್’ ಸೆಟ್​ ಹಾಕಿದ ಪ್ರದೇಶ; ಇಲ್ಲಿದೆ ವಿಡಿಯೋ
ಕೆಎಸ್​ಆರ್​ಟಿಸಿ ಐರಾವತ ಕ್ಲಬ್ ಕ್ಲಾಸ್ 2.0: ಹೊಸ ವೋಲ್ವೋ ವಿಶೇಷಗಳೇನು?
ಕೆಎಸ್​ಆರ್​ಟಿಸಿ ಐರಾವತ ಕ್ಲಬ್ ಕ್ಲಾಸ್ 2.0: ಹೊಸ ವೋಲ್ವೋ ವಿಶೇಷಗಳೇನು?
ಪಕ್ಕಾ ಪ್ಲ್ಯಾನ್ ಮಾಡಿ ಎಲ್ಲರನ್ನೂ ಹೊಡೆದ ಹನುಮಂತ; ತಂತ್ರಕ್ಕೆ ಎಲ್ಲರೂ ಶಾಕ್
ಪಕ್ಕಾ ಪ್ಲ್ಯಾನ್ ಮಾಡಿ ಎಲ್ಲರನ್ನೂ ಹೊಡೆದ ಹನುಮಂತ; ತಂತ್ರಕ್ಕೆ ಎಲ್ಲರೂ ಶಾಕ್