Salman Khan: ‘ನನ್ನೆಲ್ಲಾ ಪ್ರೇಯಸಿಯರಿಗೆ ಮದುವೆಯಾಗಿದೆ’ ಎಂದು ಅಲವತ್ತುಕೊಂಡ ಸಲ್ಮಾನ್ ಖಾನ್; ಮುಂದಿನ ಕತೆ ಏನು?

ಸಲ್ಮಾನ್ ಹೊಸ ವಿಡಿಯೋವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲಿ ಸಲ್ಮಾನ್ 1994ರ ಹಿಟ್ ಚಿತ್ರದ ತಮ್ಮದೇ ಪಾತ್ರವೊಂದರ ಜತೆ ಮಾತುಕತೆಗೆ ಇಳಿದಿದ್ದಾರೆ. ಈ ವೇಳೆ ಹಲವು ಮಜವಾದ ವಿಚಾರಗಳು ಹೊರಬಂದಿವೆ.

Salman Khan: ‘ನನ್ನೆಲ್ಲಾ ಪ್ರೇಯಸಿಯರಿಗೆ ಮದುವೆಯಾಗಿದೆ’ ಎಂದು ಅಲವತ್ತುಕೊಂಡ ಸಲ್ಮಾನ್ ಖಾನ್; ಮುಂದಿನ ಕತೆ ಏನು?
ಸಲ್ಮಾನ್ ಖಾನ್
Follow us
TV9 Web
| Updated By: shivaprasad.hs

Updated on: Mar 08, 2022 | 2:20 PM

ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಬಾಲಿವುಡ್​ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎಂದೇ ಗುರುತಿಸಿಕೊಳ್ಳುತ್ತಾರೆ. 56 ವರ್ಷದ ಸಲ್ಲು ಭಾಯಿಯ ಮದುವೆ ವಿಚಾರ ಆಗಾಗ ಸುದ್ದಿಯಾಗುತ್ತದೆ. ಇತ್ತೀಚೆಗಷ್ಟೇ ನಟಿಯೊಬ್ಬರೊಂದಿಗೆ ಸಲ್ಲು ವಿವಾಹವಾಗಿದ್ದಾರೆ ಎಂಬ ರೂಮರ್ ಓಡಾಡಿತ್ತು. ನಕಲಿ ಫೋಟೋಗಳನ್ನು ಸೃಷ್ಟಿಸಿ ಇಂತಹ ಸುದ್ದಿ ಸೃಷ್ಟಿಸಲಾಗಿದೆ ಎಂದು ಈ ವಿಚಾರಕ್ಕೆ ತೆರೆ ಎಳೆಯಲಾಗಿತ್ತು. ಸಲ್ಮಾನ್ ವಿದೇಶದ ಗೆಳತಿಯೊಬ್ಬರೊಂದಿಗೆ ಓಡಾಡುತ್ತಿದ್ದಾರೆ ಎಂದೂ ಸುದ್ದಿಯಾಗಿತ್ತು. ಆದರೆ ನಟಿ ಅದನ್ನು ನಿರಾಕರಿಸಿದ್ದರು. ಆದ್ದರಿಂದಲೇ ಸಲ್ಮಾನ್ ಅಭಿಮಾನಿ ವಲಯದಲ್ಲಿ ಅವರ ವಿವಾಹದ ಕುರಿತು ಚರ್ಚೆಗಳು ಜೋರಾಗಿಯೇ ನಡೆಯುತ್ತವೆ. ಇದೀಗ ಸಲ್ಮಾನ್ ಅವರೂ ಇದಕ್ಕೆ ದನಿಗೂಡಿಸಿದ್ಧಾರೆ. ಅಷ್ಟೇ ಅಲ್ಲ, ತಮ್ಮ ಪ್ರೇಯಸಿಯಲ್ಲೆರಿಗೂ ಈಗ ಮದುವೆಯಾಗಿದೆ ಎಂದೂ ಅಲವತ್ತುಕೊಂಡಿದ್ದಾರೆ. ಸಲ್ಮಾನ್ ಯಾರಲ್ಲಿ ಈ ಕಷ್ಟವೆಲ್ಲಾ ತೋಡಿಕೊಂಡರು ಎಂದು ಯೋಚಿಸುತ್ತಿದ್ದೀರಾ? ತಮ್ಮದೇ ಸೂಪರ್ ಹಿಟ್ ಚಿತ್ರವೊಂದರ ಪಾತ್ರದ ಜತೆ ಸಲ್ಮಾನ್ ಈ ರೀತಿ ಮಾತುಕತೆ ನಡೆಸಿದ್ದಾರೆ.

ಸಲ್ಮಾನ್ ಖಾನ್ ಇನ್​ಸ್ಟಾಗ್ರಾಂನಲ್ಲಿ ಹೊಸ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಪಾನೀಯವೊಂದರ ಜಾಹಿರಾತಿನಲ್ಲಿ ಸಲ್ಮಾನ್ ಕಾಣಿಸಿಕೊಂಡಿದ್ದು, ಅದರ ವಿಷಯ ವಸ್ತು ಎಲ್ಲರ ಮನಗೆದ್ದಿದೆ. 1994ರಲ್ಲಿ ತೆರೆಕಂಡ ಸಲ್ಮಾನ್ ಹಾಗೂ ಮಾಧುರಿ ದೀಕ್ಷಿತ್ ನಟನೆಯ ‘ಹಮ್ ಆಪ್​ಕೆ ಹೈ ಕೌನ್’ ಚಿತ್ರದ ಸಲ್ಮಾನ್ ಪಾತ್ರವನ್ನು ಮರುಸೃಷ್ಟಿಸಲಾಗಿದೆ.

1994ರ ಸಲ್ಮಾನ್ ಹಾಗೂ 2022ರ ಸಲ್ಮಾನ್ ಖಾನ್ ಪರಸ್ಪರ ಮುಖಾಮುಖಿಯಾಗುವ ಮಜವಾದ ಥೀಮ್​ನೊಂದಿಗೆ ಜಾಹಿರಾತನ್ನು ಕಟ್ಟಿಕೊಡಲಾಗಿದೆ. ಈಗಿನ ಸಲ್ಮಾನ್ ಖಾನ್​ರನ್ನು ನೋಡುವ ಪ್ರೇಮ್ (ಹಮ್ ಆಪ್​ಕೆ ಹೈ ಕೌನ್ ಚಿತ್ರದಲ್ಲಿ ಸಲ್ಮಾನ್ ಪಾತ್ರದ ಹೆಸರು) ದೇಹವು ಬದಲಾಗಿರುವುದನ್ನು, ಕಟ್ಟುಮಸ್ತಾಗಿರುವುದನ್ನು ನೋಡಿ ಖುಷಿಪಡುತ್ತಾನೆ. ಅಲ್ಲದೇ ಪ್ರಸ್ತುತ ಅಭಿಮಾನಿ ಬಳಗ ಹೇಗಿದೆ ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಉತ್ತರಿಸುವ ಸಲ್ಮಾನ್, ಅದೂ ಕೂಡ ಮೊದಲಿನಂತೆ ಬಹಳ ದೊಡ್ಡ ಮಟ್ಟದಲ್ಲಿ ಇದೆ ಎಂದು ಉತ್ತರಿಸುತ್ತಾರೆ.

‘ಮದುವೆ..’ ಎಂದು ಕೇಳುವ ಪ್ರೇಮ್​ಗೆ ಸಲ್ಮಾನ್ ‘‘ಆಗಿದೆ… ಎಲ್ಲಾ ಪ್ರೇಯಸಿಯರಿಗೂ ಮದುವೆಯಾಗಿದೆ’’ ಎಂದು ಬೇಸರದಿಂದ ಹೇಳುತ್ತಾರೆ. ಇದರಿಂದ 1994ರ ಚಿತ್ರದ ಪ್ರೇಮ್​ಗೆ ಬೇಸರವಾಗುತ್ತದೆ. ಹಾಗಾದರೆ ಎಲ್ಲವೂ ಮೊದಲಿನಂತೇ ಇದೆ ಎಂದು ಪ್ರೇಮ್ ಬೇಸರದಿಂದ ಹೇಳುತ್ತಾನೆ. ‘ಎಲ್ಲವೂ ಮೊದಲಿನಂತಿದೆ. ಆದರೆ ಇದೊಂದನ್ನು ಬಿಟ್ಟು..’ ಎಂದು ಸಲ್ಮಾನ್ ಪಾನೀಯವನ್ನು ನೀಡುತ್ತಾರೆ. ಅಲ್ಲಿಗೆ ಜಾಹಿರಾತು ಮುಕ್ತಾಯವಾಗಿದೆ.

ಆದರೆ ಈ ಜಾಹಿರಾತು ಸಲ್ಮಾನ್ ಅಭಿಮಾನಿ ವಲಯದಲ್ಲಿ ಮಜವಾದ ಚರ್ಚೆಗಳಿಗೆ ಕಾರಣವಾಗಿದ್ದು, ಮತ್ತೆ ಸಲ್ಮಾನ್ ಮದುವೆಯ ವಿಚಾರ ಪ್ರಸ್ತಾಪವಾಗುತ್ತಿದೆ. ಹಲವರು ಜಾಹಿರಾತಿನ ವಿಷಯವನ್ನು ಹೊಗಳಿದರೆ, ಮತ್ತೆ ಹಲವರು ಸಲ್ಮಾನ್ ಯಾವಾಗ ಮದುವೆಯಾಗುತ್ತಾರೆ ಎಂದು ಹಳೆಯ ಪ್ರಶ್ನೆಯನ್ನೇ ಪುನರಾವರ್ತಿಸಿದ್ದಾರೆ.

ಸಲ್ಮಾನ್ ಹಂಚಿಕೊಂಡ ಮಜವಾದ ವಿಡಿಯೋ ಇಲ್ಲಿದೆ:

ಚಿತ್ರಗಳ ವಿಷಯಕ್ಕೆ ಬಂದರೆ ಸಲ್ಮಾನ್ ‘ಟೈಗರ್ 3’ಯಲ್ಲಿ ಬ್ಯುಸಿಯಾಗಿದ್ದಾರೆ. ಕತ್ರಿನಾ ಕೈಫ್​ ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:

Alia Bhatt: ‘ಗಂಗೂಬಾಯಿ’ ಯಶಸ್ಸಿನ ಬೆನ್ನಲ್ಲೇ ಹಾಲಿವುಡ್ ಕಡೆ ಮುಖ ಮಾಡಿದ್ರಾ ಆಲಿಯಾ? ಇಲ್ಲಿದೆ ಹೊಸ ಸಮಾಚಾರ

ಆಲಿಯಾ ಭಟ್​ ಬಾಯ್​ಫ್ರೆಂಡ್ ​ಮೇಲೆ ಕಣ್ಣಿಟ್ಟ ಪೂಜಾ ಹೆಗ್ಡೆ; ಏನಿದು ಹೊಸ ಕಥೆ?