ಆಲಿಯಾ ಭಟ್ ಬಾಯ್ಫ್ರೆಂಡ್ ಮೇಲೆ ಕಣ್ಣಿಟ್ಟ ಪೂಜಾ ಹೆಗ್ಡೆ; ಏನಿದು ಹೊಸ ಕಥೆ?
ಆಲಿಯಾ ಭಟ್ ಬಾಯ್ಫ್ರೆಂಡ್ ರಣಬೀರ್ ಕಪೂರ್ ಮೇಲೆ ಪೂಜಾ ಹೆಗ್ಡೆ ಕಣ್ಣಿಟ್ಟಿದ್ದಾರೆ. ಹಾಗಂತ ರಣಬೀರ್ ಜತೆ ಡೇಟಿಂಗ್ ಮಾಡಬೇಕು ಎಂದು ಪೂಜಾ ಹೇಳಿಕೊಂಡಿಲ್ಲ. ನಟನೆ ವಿಚಾರವಾಗಿ ಅವರು ಈ ಮಾತನ್ನು ಹೇಳಿದ್ದಾರೆ.
Updated on: Mar 06, 2022 | 3:38 PM

ಪೂಜಾ ಹೆಗ್ಡೆ ಅವರಿಗೆ ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇದೆ. ಅವರ ಅಭಿಮಾನಿ ಬಳಗ ದಿನ ಕಳೆದಂತೆ ಹಿರಿದಾಗುತ್ತಿದೆ. ಈಗ ಅವರ ನಟನೆಯ ‘ರಾಧೆ ಶ್ಯಾಮ್’ ಸಿನಿಮಾ ತೆರೆಗೆ ಬರೋಕೆ ರೆಡಿ ಆಗಿದೆ. ಈ ಸಿನಿಮಾವನ್ನು ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳು ಕಾದು ಕೂತಿದ್ದಾರೆ. ಪ್ರಭಾಸ್ ಜತೆ ಪೂಜಾ ತೆರೆಹಂಚಿಕೊಂಡಿದ್ದಾರೆ. ಈ ಮಧ್ಯೆ ಹೊಸ ಸುದ್ದಿ ಒಂದು ಹುಟ್ಟಿಕೊಂಡಿದೆ.

ಆಲಿಯಾ ಭಟ್ ಬಾಯ್ಫ್ರೆಂಡ್ ರಣಬೀರ್ ಕಪೂರ್ ಮೇಲೆ ಪೂಜಾ ಹೆಗ್ಡೆ ಕಣ್ಣಿಟ್ಟಿದ್ದಾರೆ. ಹಾಗಂತ ರಣಬೀರ್ ಜತೆ ಡೇಟಿಂಗ್ ಮಾಡಬೇಕು ಎಂದು ಪೂಜಾ ಹೇಳಿಕೊಂಡಿಲ್ಲ. ನಟನೆ ವಿಚಾರವಾಗಿ ಅವರು ಈ ಮಾತನ್ನು ಹೇಳಿದ್ದಾರೆ.

ಪೂಜಾ ಹೆಗ್ಡೆ ಅವರಿಗೆ ‘ರಾಧೆ ಶ್ಯಾಮ್’ ಚಿತ್ರದ ಪ್ರಚಾರದ ವೇಳೆ ಒಂದಷ್ಟು ಪ್ರಶ್ನೆಗಳು ಎದುರಾದವು. ನೀವು ಯಾರ್ಯಾರ ಜತೆ ನಟಿಸಬೇಕು ಎಂದುಕೊಂಡಿದ್ದೀರಿ ಎಂದು ಪೂಜಾಗೆ ಕೇಳಾಯಿತು. ಬಾಲಿವುಡ್ನಲ್ಲಿ ರಣಬೀರ್ ಕಪೂರ್ ಹೆಸರನ್ನು ಪೂಜಾ ಹೆಗ್ಡೆ ಹೇಳಿದ್ದಾರೆ. ಅವರ ಜತೆ ನಟಿಸಬೇಕು ಎನ್ನುವ ಆಸೆ ಪೂಜಾಗೆ ಇದೆ.

ತಮಿಳಿನಲ್ಲಿ ಧನುಷ್ ಜತೆ ನಟಿಸಬೇಕು ಎನ್ನುವ ಆಸೆ ಪೂಜಾಗೆ ಇದೆ. ಧನುಷ್ ಪ್ರತಿ ಸಿನಿಮಾದಲ್ಲೂ ಭಿನ್ನ ಕಥೆ ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಕಾರಣಕ್ಕೆ ಪೂಜಾ ಈ ಮಾತನ್ನು ಹೇಳಿದ್ದಾರೆ.

ಹಿರಿಯ ನಟರಲ್ಲಿ ಕಮಲ್ ಹಾಸನ್ ಅವರನ್ನು ಕಂಡರೆ ಪೂಜಾ ಹೆಗ್ಡೆಗೆ ಅಚ್ಚುಮೆಚ್ಚು. ಆದರೆ, ಕಮಲ್ ಜತೆ ನಟಿಸುವ ಅವಕಾಶ ಪೂಜಾಗೆ ಈವರೆಗೆ ಸಿಕ್ಕಿಲ್ಲ.

ಪೂಜಾ ಹೆಗ್ಡೆ




