IND vs PAK: ಮಿಂಚಿದ ಕನ್ನಡತಿ ರಾಜೇಶ್ವರಿ! ಪಾಕ್ ವಿರುದ್ಧ ಸತತ 11ನೇ ಗೆಲುವಿಗೆ ಭಾರತದ ಈ ಐವರು ಕಾರಣ

Icc Women World Cup 2022: ಇದು ಏಕದಿನ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತಕ್ಕೆ ಸತತ 11ನೇ ಜಯವಾಗಿದೆ. 50 ಓವರ್‌ಗಳ ಮಾದರಿಯಲ್ಲಿ ಭಾರತವು ತನ್ನ ನೆರೆಯ ರಾಷ್ಟ್ರದ ವಿರುದ್ಧ ಇಲ್ಲಿಯವರೆಗೆ ಸೋತಿಲ್ಲ.

ಪೃಥ್ವಿಶಂಕರ
|

Updated on:Mar 06, 2022 | 2:02 PM

ಭಾರತ ಮಹಿಳಾ ಕ್ರಿಕೆಟ್ ತಂಡ

1 / 6
ಪೂಜಾ ವಸ್ತ್ರಾಕರ್ - ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಪೂಜಾ ಅಬ್ಬರಿಸಿದರು. ಭಾರತ ತಂಡ ಆರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಪೂಜಾ ಬಿರುಸಿನ ಬ್ಯಾಟಿಂಗ್ ನಡೆಸಿದರು. ಅವರು 59 ಎಸೆತಗಳಲ್ಲಿ ಎಂಟು ಬೌಂಡರಿಗಳ ನೆರವಿನಿಂದ 67 ರನ್ ಗಳಿಸಿದರು. ಈ ಇನ್ನಿಂಗ್ಸ್ ಆಧಾರದ ಮೇಲೆ ಭಾರತ ತಂಡ 244 ರನ್ ಗಳಿಸಿತು. ಪೂಜಾ ಅವರು ಸ್ನೇಹ್ ರಾಣಾ ಅವರೊಂದಿಗೆ ಏಳನೇ ವಿಕೆಟ್‌ಗೆ 122 ರನ್‌ಗಳ ಪ್ರಮುಖ ಜೊತೆಯಾಟವನ್ನು ಮಾಡಿದರು. ಪೂಜಾ ರನ್ ಗಳಿಸಿದ್ದು ಮಾತ್ರವಲ್ಲದೆ ವೇಗವಾಗಿ ರನ್ ಗಳಿಸಿದರು. ಇದು ಭಾರತಕ್ಕೆ ಬಹಳ ಮುಖ್ಯವಾಗಿತ್ತು.

2 / 6
IND vs PAK: ಮಿಂಚಿದ ಕನ್ನಡತಿ ರಾಜೇಶ್ವರಿ! ಪಾಕ್ ವಿರುದ್ಧ ಸತತ 11ನೇ ಗೆಲುವಿಗೆ ಭಾರತದ ಈ ಐವರು ಕಾರಣ

ರಾಜೇಶ್ವರಿ ಗಾಯಕ್ವಾಡ್ - ಈ ಪರಿಣಿತ ಸ್ಪಿನ್ನರ್ ಅವರು ಭಾರತ ತಂಡಕ್ಕೆ ಎಷ್ಟು ಮುಖ್ಯ ಎಂಬುದನ್ನು ತೋರಿಸಿದರು. 10 ಓವರ್ ಗಳಲ್ಲಿ 31 ರನ್ ನೀಡಿ ನಾಲ್ಕು ವಿಕೆಟ್ ಪಡೆದರು. ಈ ಮೂಲಕ ಪಾಕಿಸ್ತಾನದ ಗುರಿ ಮುಟ್ಟುವ ಕನಸು ಭಗ್ನಗೊಂಡಿತು. ರಾಜೇಶ್ವರಿ ಗಾಯಕ್ವಾಡ್ ವಿಶ್ವಕಪ್‌ನಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲೂ ಇದು ಮುಂದುವರಿದಿತ್ತು. ಅವರು 38 ಬಾಲ್ ಡಾಟ್ ಬೌಲ್ ಮಾಡಿದರು.

3 / 6
IND vs PAK: ಮಿಂಚಿದ ಕನ್ನಡತಿ ರಾಜೇಶ್ವರಿ! ಪಾಕ್ ವಿರುದ್ಧ ಸತತ 11ನೇ ಗೆಲುವಿಗೆ ಭಾರತದ ಈ ಐವರು ಕಾರಣ

ಸ್ನೇಹ್ ರಾಣಾ- ಈ ಆಟಗಾರ್ತಿ ಭಾರತಕ್ಕೆ ಬಹಳ ಮುಖ್ಯ ಏಕೆಂದರೆ ಅವರು ತಮ್ಮ ಆಫ್-ಸ್ಪಿನ್‌ನೊಂದಿಗೆ 10 ಓವರ್‌ಗಳನ್ನು ಬೌಲ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ ಮತ್ತು ಕೆಳ ಕ್ರಮಾಂಕದಲ್ಲಿ ಉಪಯುಕ್ತ ರನ್ ಗಳಿಸುತ್ತಾರೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲೂ ಅವರು ಇದೇ ರೀತಿ ಮಾಡಿದ್ದಾರೆ. ಸ್ನೇಹ್ ರಾಣಾ ಔಟಾಗದೆ 53 ರನ್ ಗಳಿಸಿದರು. ನಂತರ ಬೌಲಿಂಗ್ ನಲ್ಲಿ ಎರಡು ವಿಕೆಟ್ ಪಡೆದರು. ಈ ಮೂಲಕ ಆಲ್ ರೌಂಡ್ ಆಟದ ಮೂಲಕ ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.

4 / 6
IND vs PAK: ಮಿಂಚಿದ ಕನ್ನಡತಿ ರಾಜೇಶ್ವರಿ! ಪಾಕ್ ವಿರುದ್ಧ ಸತತ 11ನೇ ಗೆಲುವಿಗೆ ಭಾರತದ ಈ ಐವರು ಕಾರಣ

ಸ್ಮೃತಿ ಮಂಧಾನ - ಭಾರತ ತಂಡದ ಆರಂಭಿಕ ಆಟಗಾರ್ತಿ ಅಮೋಘ ಬ್ಯಾಟಿಂಗ್‌ನಲ್ಲಿ ಅರ್ಧಶತಕ ಗಳಿಸಿದರು. ಶಫಾಲಿ ವರ್ಮಾ ಅಗ್ಗವಾಗಿ ಔಟಾದ ನಂತರ ಅವರು 52 ರನ್‌ಗಳ ಇನ್ನಿಂಗ್ಸ್‌ ಆಡಿದರು. ಈ ರೀತಿಯಾಗಿ, ಅವರು ಫಿಫ್ಟಿಯೊಂದಿಗೆ ವಿಶ್ವಕಪ್ 2022 ಅನ್ನು ಉತ್ತಮವಾಗಿ ಪ್ರಾರಂಭಿಸಿದರು. ಅವರ ಇನ್ನಿಂಗ್ಸ್‌ನಲ್ಲಿ ಮಂಧಾನ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್‌ಗಳನ್ನು ಬಾರಿಸಿದರು. ಅವರು ದೀಪ್ತಿ ಶರ್ಮಾ ಅವರೊಂದಿಗೆ ಎರಡನೇ ವಿಕೆಟ್‌ಗೆ 92 ರನ್‌ಗಳ ಅಮೂಲ್ಯ ಜೊತೆಯಾಟವನ್ನು ಹಂಚಿಕೊಂಡರು. ಇದರಿಂದಾಗಿ ಭಾರತ ಬಲಿಷ್ಠ ಸ್ಕೋರ್‌ಗೆ ಅಡಿಪಾಯ ಹಾಕಿತು.

5 / 6
ಮಹಿಳಾ ಕ್ರಿಕೆಟ್‌ನ ದಿಗ್ಗಜ ಬೌಲರ್ ಜೂಲನ್ ಗೋಸ್ವಾಮಿ ಮೈದಾನಕ್ಕೆ ಬಂದಾಗಲೆಲ್ಲಾ ತಮ್ಮ ಹೆಸರಿನಲ್ಲಿ ಕೆಲವು ದಾಖಲೆಗಳನ್ನು ಮಾಡುತ್ತಾರೆ. ಮಹಿಳಾ ವಿಶ್ವಕಪ್‌ನ 15ನೇ ಪಂದ್ಯದಲ್ಲಿ ಜೂಲನ್ ಗೋಸ್ವಾಮಿ ಇದೇ ರೀತಿಯ ಸಾಧನೆ ಮಾಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಜೂಲನ್ ಟ್ಯಾಮಿ ಬ್ಯೂಮಾಂಟ್ ಅವರನ್ನು ಔಟ್ ಮಾಡಿದ ತಕ್ಷಣ, ಅವರು ಏಕದಿನ ಕ್ರಿಕೆಟ್‌ನಲ್ಲಿ 250 ವಿಕೆಟ್‌ಗಳನ್ನು ಪೂರೈಸಿದರು.

ಜೂಲನ್ ಗೋಸ್ವಾಮಿ ಅವರು ತಮ್ಮ ಕೊನೆಯ ವಿಶ್ವಕಪ್ ಆಡುತ್ತಿದ್ದಾರೆ ಆದರೆ ಅವರ ಬೌಲಿಂಗ್​ನಲ್ಲಿ ಯಾವುದೇ ಕೊರತೆಯಿಲ್ಲ. 10 ಓವರ್ ಬೌಲ್ ಮಾಡಿ 26 ರನ್ ನೀಡಿ ಎರಡು ವಿಕೆಟ್ ಪಡೆದರು. ಜೂಲನ್ ತಮ್ಮ ಕೋಟಾ ಓವರ್‌ಗಳಲ್ಲಿ 42 ಎಸೆತಗಳನ್ನು ಡಾಟ್ ಮಬಾಲ್ ಮಾಡಿದರು. ಅವರು ಸಿದ್ರಾ ಅಮೀನ್ ಮತ್ತು ನಿದಾ ದಾರ್ ಅವರ ವಿಕೆಟ್ ಪಡೆದರು. ಇದೀಗ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ಗಳ ಪೈಕಿ ಎರಡನೇ ಸ್ಥಾನಕ್ಕೆ ಬಂದಿದ್ದಾರೆ. ವಿಶ್ವಕಪ್‌ಗೆ ಮುನ್ನ ಅವರ ಹೆಸರಿನಲ್ಲಿ 36 ವಿಕೆಟ್‌ಗಳಿದ್ದವು, ಅದು ಈಗ 38 ಆಗಿದೆ. ಇನ್ನು ಎರಡು ವಿಕೆಟ್ ಕಬಳಿಸುವ ಮೂಲಕ ಮಹಿಳಾ ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಳ್ಳಲಿದ್ದಾರೆ.

6 / 6

Published On - 1:50 pm, Sun, 6 March 22

Follow us
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ