AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Top 10 Indian Movies: 2022ರ ಟಾಪ್​ 10 ಭಾರತೀಯ ಚಿತ್ರಗಳಲ್ಲಿ ಸ್ಥಾನ ಪಡೆದ 7 ಸೌತ್​ ಸಿನಿಮಾಗಳು; ನಂಬರ್​ ಒನ್​ ಯಾವುದು?

Box Office Collection: ದಕ್ಷಿಣ ಭಾರತದ ಸಿನಿಮಾಗಳು ವಿಶ್ವಾದ್ಯಂತ ಶೈನ್​ ಆಗುತ್ತಿವೆ. ಬಾಲಿವುಡ್​ ಚಿತ್ರಗಳನ್ನು ಹಿಂದಿಕ್ಕಿ ಸೌತ್​ ಸಿನಿಮಾಗಳು ಜಯಭೇರಿ ಬಾರಿಸಿವೆ.

Top 10 Indian Movies: 2022ರ ಟಾಪ್​ 10 ಭಾರತೀಯ ಚಿತ್ರಗಳಲ್ಲಿ ಸ್ಥಾನ ಪಡೆದ 7 ಸೌತ್​ ಸಿನಿಮಾಗಳು; ನಂಬರ್​ ಒನ್​ ಯಾವುದು?
2022ರ ಟಾಪ್ 10 ಭಾರತೀಯ ಸಿನಿಮಾಗಳ
TV9 Web
| Edited By: |

Updated on:Jun 13, 2022 | 11:10 AM

Share

ಒಂದು ಕಾಲದಲ್ಲಿ ಭಾರತೀಯ ಸಿನಿಮಾ ಎಂದರೆ ಕೇವಲ ಬಾಲಿವುಡ್ (Bollywood)​ ಚಿತ್ರಗಳತ್ತ ಕೈ ತೋರಿಸಲಾಗುತ್ತಿತ್ತು. ಆ ರೀತಿಯ ತಪ್ಪು ಕಲ್ಪನೆ ಈಗಿಲ್ಲ. ಇಂಡಿಯನ್​ ಫಿಲ್ಮ್​ ಇಂಡಸ್ಟ್ರಿ (Indian Film Industry) ಎಂದರೆ ಅದರಲ್ಲಿ ಎಲ್ಲ ಭಾಷೆಯ ಸಿನಿಮಾಗಳೂ ಇರುತ್ತವೆ ಎಂಬುದು ಜಗತ್ತಿಗೇ ತಿಳಿಯುವಂತಾಗಿದೆ. ಅದರಲ್ಲೂ ಸೌತ್​ ಇಂಡಿಯನ್​ ಸಿನಿಮಾಗಳು (South Indian Movies) ಮಾಡುತ್ತಿರುವ ಸದ್ದು ಸಣ್ಣದೇನಲ್ಲ. ದಕ್ಷಿಣ ಭಾರತದ ಘಟಾನುಘಟಿ ನಿರ್ದೇಶಕರು, ನಿರ್ಮಾಪಕರು ಮತ್ತು ಹೀರೋಗಳಿಂದಾಗಿ ಎಲ್ಲರ ಮನಸ್ಥಿತಿ ಬದಲಾಗುವಂತಾಗಿದೆ. ಜಾಗತಿಕ ಮಟ್ಟದಲ್ಲಿ ನಮ್ಮ ಸಿನಿಮಾಗಳು ಗುರುತಿಸಿಕೊಳ್ಳುತ್ತಿವೆ. ‘ಕೆಜಿಎಫ್​: ಚಾಪ್ಟರ್​ 2’ (KGF Chapter 2), ‘ಆರ್​ಆರ್​ಆರ್​’ (RRR), ಮುಂತಾದ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಯಶಸ್ಸು ಕಂಡಿವೆ. 2022ರಲ್ಲಿ ಈವರೆಗೆ ಅತಿ ಹೆಚ್ಚು ಕಲೆಕ್ಷನ್​ ಮಾಡಿದ ಟಾಪ್​ 10 ಭಾರತೀಯ ಸಿನಿಮಾಗಳ (Top 10 Indian movies) ಪಟ್ಟಿಯನ್ನು ಐಎಂಬಿಡಿ (IMDB) ವೆಬ್​ಸೈಟ್​ನಲ್ಲಿ ಪ್ರಕಟಿಸಲಾಗಿದೆ. ಈ 10 ಸಿನಿಮಾಗಳಲ್ಲಿ ಬರೋಬ್ಬರಿ 7 ಸ್ಥಾನಗಳನ್ನು ದಕ್ಷಿಣ ಭಾರತದ ಚಿತ್ರಗಳು ಆಕ್ರಮಿಸಿಕೊಂಡಿವೆ ಎಂಬುದು ವಿಶೇಷ. ಹಾಗಾದರೆ ನಂಬರ್​ ಒನ್​ ಪಟ್ಟ ಯಾರಿಗೆ? ಕನ್ನಡದ ‘ಕೆಜಿಎಫ್​: ಚಾಪ್ಟರ್​ 2’ ಚಿತ್ರಕ್ಕೆ!

ಪ್ರಶಾಂತ್​ ನೀಲ್ (Prashanth Neel)​ ನಿರ್ದೇಶನದ, ಯಶ್ (Yash) ​ನಟನೆಯ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ವಿಶ್ವಾದ್ಯಂತ ಅಬ್ಬರಿಸಿದೆ. ಜಾಗತಿಕ ಬಾಕ್ಸ್​ ಆಫೀಸ್​ನಲ್ಲಿ 1228.3 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವುದು ಈ ಚಿತ್ರದ ಹೆಚ್ಚುಗಾರಿಕೆ. ಈ ಸಿನಿಮಾವನ್ನು ನಿರ್ಮಾಣ ಮಾಡಿದ ‘ಹೊಂಬಾಳೆ ಫಿಲ್ಮ್ಸ್​’  (Hombale Fimls) ಸಂಸ್ಥೆಗೆ ಭರ್ಜರಿ ಲಾಭ ಆಗಿದೆ. 2ನೇ ಸ್ಥಾನದಲ್ಲಿ ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್​’ ಸಿನಿಮಾ ಇದೆ. ತೆಲುಗಿನ ಈ ಚಿತ್ರ ವಿಶ್ವಾದ್ಯಂತ ಬಾಕ್ಸ್​ ಆಫೀಸ್​ನಲ್ಲಿ ಗಳಿಸಿದ್ದು 1131.1 ಕೋಟಿ ರೂಪಾಯಿ.

ವಿವೇಕ್​ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ವಿಶ್ವಾದ್ಯಂತ 337.6 ಕೋಟಿ ರೂಪಾಯಿ ಗಳಿಕೆ ಮಾಡಿ ಮೂರನೇ ಸ್ಥಾನ ಪಡೆದುಕೊಂಡಿದೆ. ಕಮಲ್​ ಹಾಸನ್​ ನಟನೆಯ ‘ವಿಕ್ರಮ್​’ ಸಿನಿಮಾದ ಸಾಧನೆ ಕೂಡ ದೊಡ್ಡದು. ಸದ್ಯ ನಾಲ್ಕನೇ ಸ್ಥಾನದಲ್ಲಿ ಇರುವ ಈ ಚಿತ್ರ 290.2 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಇನ್ನೂ ಅನೇಕ ಕಡೆಗಳಲ್ಲಿ ಈ ಸಿನಿಮಾ ಅದ್ದೂರಿಯಾಗಿ ಪ್ರದರ್ಶನ ಕಾಣುತ್ತಿದೆ.

ಇದನ್ನೂ ಓದಿ
Image
‘ಕೆಜಿಎಫ್​ 3’ ಚಿತ್ರದಲ್ಲಿ ಹೃತಿಕ್​ ರೋಷನ್​ ಇರ್ತಾರಾ? ಊರ ತುಂಬ ಹಬ್ಬಿದೆ ಹೊಸ ಗಾಸಿಪ್​
Image
‘ಕೆಜಿಎಫ್​ 3’ ಸದ್ಯಕ್ಕಿಲ್ಲ: ಸ್ಪಷ್ಟನೆ ನೀಡಿದ ಹೊಂಬಾಳೆ ಫಿಲ್ಮ್ಸ್​ನ ಕಾರ್ತಿಕ್​ ಗೌಡ; ಅಂತೆ-ಕಂತೆಗಳಿಗೆ ಬ್ರೇಕ್​
Image
‘ಗೆದ್ದ ಸಿನಿಮಾವನ್ನು ಅತಿಯಾಗಿ ಹೊಗಳ್ತಾರೆ’: ಕೆಜಿಎಫ್​ 2, ಆರ್​ಆರ್​ಆರ್​ ಬಗ್ಗೆ ನವಾಜುದ್ದೀನ್​ ಸಿದ್ದಿಕಿ ಹೇಳಿಕೆ
Image
‘ಕೆಜಿಎಫ್​ ಚಾಪ್ಟರ್​ 2’ ಬಗ್ಗೆ ಹಲವು ಅಚ್ಚರಿಯ ವಿಚಾರಗಳು; ಯಶ್ ಜತೆಗಿನ ವಿಶೇಷ ಸಂದರ್ಶನ

ಕಾರ್ತಿಕ್​ ಆರ್ಯನ್​ ನಟನೆಯ ‘ಭೂಲ್​ ಭುಲಯ್ಯ 2’ (230.8 ಕೋಟಿ), ‘ಬೀಸ್ಟ್​’ (227.3 ಕೋಟಿ), ‘ಗಂಗೂಬಾಯಿ ಕಾಠಿಯಾವಾಡಿ’ (194.8 ಕೋಟಿ), ‘ಸರ್ಕಾರು ವಾರಿ ಪಾಟ’ (191.8 ಕೋಟಿ), ‘ವಲಿಮೈ’ (163.2 ಕೋಟಿ), ‘ಭೀಮ್ಲಾ ನಾಯಕ್​’ (161.3 ಕೋಟಿ) ಚಿತ್ರಗಳು ಅನುಕ್ರಮವಾಗಿ 5ರಿಂದ 10ನೇ ಸ್ಥಾನಗಳನ್ನು ಪಡೆದುಕೊಂಡಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:55 am, Mon, 13 June 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್