AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕೆಜಿಎಫ್​ 3’ ಚಿತ್ರದಲ್ಲಿ ಹೃತಿಕ್​ ರೋಷನ್​ ಇರ್ತಾರಾ? ಊರ ತುಂಬ ಹಬ್ಬಿದೆ ಹೊಸ ಗಾಸಿಪ್​

‘ಕೆಜಿಎಫ್​’ ಸಿನಿಮಾ ತಂಡ ಮೊದಲಿನಿಂದಲೂ ಬಾಲಿವುಡ್​ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳುತ್ತಾ ಬಂದಿದೆ. ಈಗ ಹೃತಿಕ್​ ರೋಷನ್​ ಬಗ್ಗೆ ಗಾಸಿಪ್​ ಹಬ್ಬಿದೆ.

‘ಕೆಜಿಎಫ್​ 3’ ಚಿತ್ರದಲ್ಲಿ ಹೃತಿಕ್​ ರೋಷನ್​ ಇರ್ತಾರಾ? ಊರ ತುಂಬ ಹಬ್ಬಿದೆ ಹೊಸ ಗಾಸಿಪ್​
ಯಶ್​, ಹೃತಿಕ್​ ರೋಷನ್​
TV9 Web
| Edited By: |

Updated on: May 28, 2022 | 8:00 AM

Share

‘ಕೆಜಿಎಫ್​’ ಎಂಬ ಹೆಸರು ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಕ್ರೇಜ್​ ಸೃಷ್ಟಿ ಮಾಡಿದೆ. ಎರಡು ಪಾರ್ಟ್​ಗಳಲ್ಲಿ ಬಂದ ಈ ಚಿತ್ರಕ್ಕೆ ಕೋಟ್ಯಂತರ ಪ್ರೇಕ್ಷಕರು ಫುಲ್​ ಮಾರ್ಕ್ಸ್​ ನೀಡಿದರು. ನಿರ್ದೇಶಕ ಪ್ರಶಾಂತ್​ ನೀಲ್ (Hombale Films)​ ಅವರ ತಂಡಕ್ಕೆ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದಿಂದ ಬಹು ದೊಡ್ಡ ಗೆಲುವು ಸಿಕ್ಕಿದೆ. ಇತ್ತೀಚೆಗೆ ‘ಕೆಜಿಎಫ್​ 3’ ಕುರಿತು ಸಿನಿಪ್ರಿಯರ ವಲಯದಲ್ಲಿ ಹೆಚ್ಚು ಚರ್ಚೆ ಆಗುತ್ತಿದೆ. ಅನೇಕ ಅಂತೆ-ಕಂತೆಗಳು ಕೇಳಿಬರುತ್ತಿವೆ. ಅದರಲ್ಲೂ ‘ಕೆಜಿಎಫ್​: ಚಾಪ್ಟರ್​ 3’ (KGF Chapter 3) ಸಿನಿಮಾದ ಪಾತ್ರವರ್ಗದ ಬಗ್ಗೆ ಎಲ್ಲರಿಗೂ ತುಂಬ ಕುತೂಹಲ ಇದೆ. ಖ್ಯಾತ ನಟ ಹೃತಿಕ್​ ರೋಷನ್​ ಅವರ ಕುರಿತು ಗಾಸಿಪ್​ ಹಬ್ಬಿದೆ. ‘ಕೆಜಿಎಫ್​ 3’ ಚಿತ್ರದಲ್ಲಿ ಹೃತಿಕ್​ ನಟಿಸುತ್ತಾರೆ ಎಂದೆಲ್ಲ ಗುಸುಗುಸು ಹಬ್ಬಿಸಲಾಗಿದೆ. ಆದರೆ ಪಾತ್ರವರ್ಗದ ಬಗ್ಗೆ ‘ಹೊಂಬಾಳೆ ಫಿಲ್ಮ್ಸ್​’ ಕಡೆಯಿಂದ ಈವರೆಗೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಅತ್ತ ಹೃತಿಕ್​ ರೋಷನ್​ (Hrithik Roshan) ಕೂಡ ಈ ಕುರಿತು ಏನನ್ನೂ ಹೇಳಿಲ್ಲ. ಹಾಗಿದ್ದರೂ ಕೂಡ ಅವರ ಬಗ್ಗೆ ಗಾಳಿಸುದ್ದಿ ಜೋರಾಗಿ ಹರಡಿದೆ. ಇತ್ತೀಚೆಗೆ ಹೃತಿಕ್​ ರೋಷನ್​ ಅವರ ಗಡ್ಡದ ಲುಕ್​ ವೈರಲ್​ ಆಗಿತ್ತು. ಆ ಕಾರಣದಿಂದಲೇ ಇಂಥ ಗಾಸಿಪ್​ ಹಬ್ಬಿರುವ ಸಾಧ್ಯತೆ ಇದೆ.

‘ಕೆಜಿಎಫ್​’ ಸಿನಿಮಾ ತಂಡ ಮೊದಲಿನಿಂದಲೂ ಬಾಲಿವುಡ್​ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳುತ್ತಾ ಬಂದಿದೆ. ‘ಕೆಜಿಎಫ್​: ಚಾಪ್ಟರ್​ 1’ ಸಿನಿಮಾದ ಐಟಂ ಸಾಂಗ್​ನಲ್ಲಿ ಮೌನಿ ರಾಯ್​ ಅಭಿನಯಿಸಿದ್ದರು. ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದಲ್ಲಿ ಸಂಜಯ್​ ದತ್​ ಹಾಗೂ ರವೀನಾ ಟಂಡನ್​ ನಟಿಸಿದರು. ಅದೇ ರೀತಿ ‘ಕೆಜಿಎಫ್​ 3’ ಸಿನಿಮಾದಲ್ಲೂ ಹಿಂದಿ ಚಿತ್ರರಂಗದ ನಟ-ನಟಿಯರು ಇರುತ್ತಾರೆ ಎಂಬುದು ಪ್ರೇಕ್ಷಕರ ಊಹೆ. ಅದೇ ಕಾರಣಕ್ಕಾಗಿ ಹೃತಿಕ್​ ರೋಷನ್​ ಅವರ ಹೆಸರು ಕೇಳಿಬರುತ್ತಿದೆ.

ಇದನ್ನೂ ಓದಿ: Fact Check: ‘ಕೆಜಿಎಫ್​ 3’ ಟ್ರೇಲರ್​ ಬಿಡುಗಡೆ ಆಗಿದ್ಯಾ? ವೈರಲ್ ಆಗಿರುವ ವಿಡಿಯೋದ ಅಸಲಿಯತ್ತು ಇಲ್ಲಿದೆ

ಇದನ್ನೂ ಓದಿ
Image
Hrithik Roshan: ಹೊಸ ಗೆಳತಿ ಸಿಕ್ಕಿದ್ಮೇಲೆ ಗಡ್ಡಕ್ಕೆ ಬೈ ಬೈ ಹೇಳಲು ಪ್ಲಾನ್ ಮಾಡಿದ್ರಾ ಹೃತಿಕ್? ಇಲ್ಲಿದೆ ಅಸಲಿ ಸಮಾಚಾರ
Image
ಹೃತಿಕ್​ ರೋಷನ್​ಗೂ ಅಚ್ಚರಿ ಮೂಡಿಸಿತು 67 ವರ್ಷದ ನಟ ಅನುಪಮ್​ ಖೇರ್​ ಫಿಟ್ನೆಸ್​; ಇಲ್ಲಿದೆ ಫೋಟೋ
Image
‘ಹೃತಿಕ್​ ರೋಷನ್​ ಜತೆ ನೀವು ಡೇಟಿಂಗ್​ ಮಾಡ್ತಾ ಇದ್ದೀರಾ?’; ನೇರ ಪ್ರಶ್ನೆಗೆ ಸಬಾ ಉತ್ತರ ಏನಿತ್ತು?
Image
ಒಂದೇ ಸಿನಿಮಾದಲ್ಲಿ ಸಲ್ಮಾನ್​, ಶಾರುಖ್​, ಹೃತಿಕ್​; ‘ಅವೆಂಜರ್ಸ್​ ಎಂಡ್​ಗೇಮ್​’ ರೀತಿ ಬಾಲಿವುಡ್​ ಪ್ಲ್ಯಾನ್​

ಯಶ್​ ಅವರು ತಮ್ಮ ಮುಂದಿನ ಸಿನಿಮಾ ಬಗ್ಗೆ ಅನೌನ್ಸ್​ ಮಾಡುವುದು ಇನ್ನೂ ಬಾಕಿ ಇದೆ. ಅವರ ಹೊಸ ಚಿತ್ರದ ಬಗ್ಗೆ ತಿಳಿಯಲು ಅಭಿಮಾನಿಗಳು ಕಾದಿದ್ದಾರೆ. ಅತ್ತ, ಪ್ರಶಾಂತ್​ ನೀಲ್​ ಅವರು ಪ್ರಭಾಸ್​ ಜೊತೆ ‘ಸಲಾರ್​’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಆ ಬಳಿಕ ಜ್ಯೂ. ಎನ್​ಟಿಆರ್​ ಜೊತೆ ಸಿನಿಮಾ ಮಾಡಲಿದ್ದಾರೆ. ಇಷ್ಟೆಲ್ಲ ಆದ ಬಳಿಕ ‘ಕೆಜಿಎಫ್​ 3’ ಚಿತ್ರವನ್ನು ಕೈಗೆತ್ತಿಕೊಳ್ಳಬೇಕಿದೆ. ಅದೆಕ್ಕೆಲ್ಲ ಇನ್ನೂ ಸಾಕಷ್ಟು ಸಮಯ ಹಿಡಿಯಲಿದೆ. ಹಾಗಾಗಿ ‘ಕೆಜಿಎಫ್​ 3’ ಸಿನಿಮಾ ಸದ್ಯಕ್ಕಂತೂ ಸೆಟ್ಟೇರುವುದಿಲ್ಲ ಎಂಬುದು ಖಚಿತ. ಆ ಕುರಿತು ‘ಹೊಂಬಾಳೆ ಫಿಲ್ಮ್ಸ್​’ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್​ ಗೌಡ ಅವರು ಇತ್ತೀಚೆಗೆ ಟ್ವೀಟ್​ ಮಾಡಿದ್ದರು.

ಇದನ್ನೂ ಓದಿ: KGF 3: ‘ಇನ್ನೂ ಭರ್ಜರಿಯಾದ ದೃಶ್ಯಗಳಿವೆ’: ‘ಕೆಜಿಎಫ್​ 3’ ಬಗ್ಗೆ ಮಾಹಿತಿ ಬಹಿರಂಗ ಮಾಡಿದ ಯಶ್​​

‘ಹರಿದಾಡುತ್ತಿರುವುದು ಬರೀ ಗಾಳಿ ಸುದ್ದಿ. ನಮ್ಮ ಮುಂದೆ ಸಾಕಷ್ಟು ಪ್ರಾಜೆಕ್ಟ್​ಗಳು ಇವೆ. ನಮ್ಮ ಹೊಂಬಾಳೆ ಫಿಲ್ಮ್ಸ್​ ಕಡೆಯಿಂದ ಸದ್ಯಕ್ಕಂತೂ ‘ಕೆಜಿಎಫ್​ 3’ ಸಿನಿಮಾ ಕೆಲಸಗಳು ಶುರು ಆಗುವುದಿಲ್ಲ. ಆ ಕೆಲಸ ಶುರು ಆದಾಗ ನಾವೇ ದೊಡ್ಡದಾಗಿ ನಿಮಗೆ ತಿಳಿಸುತ್ತೇವೆ’ ಎಂದು ಕಾರ್ತಿಕ್​ ಗೌಡ ಪೋಸ್ಟ್​ ಮಾಡಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
TV9 Web
TV9 Web

TV9 Kannada

Read More
ಮಳೆಗಾಲದಲ್ಲಿ ಕೆಸರುಮಯ ರಸ್ತೆ, ಆಟದ ಮೈದಾನವೂ ಇಲ್ಲ
ಮಳೆಗಾಲದಲ್ಲಿ ಕೆಸರುಮಯ ರಸ್ತೆ, ಆಟದ ಮೈದಾನವೂ ಇಲ್ಲ
ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ್ದಕ್ಕೆ ಸಿಡಿದೆದ್ದ ಕುರುಬ ಸಮುದಾಯ
ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ್ದಕ್ಕೆ ಸಿಡಿದೆದ್ದ ಕುರುಬ ಸಮುದಾಯ
ತುಂಗಭದ್ರಾ ಡ್ಯಾಮ್‌ನಿಂದ ಕಾರ್ಖಾನೆಗಳಿಗೆ ಅನಧಿಕೃತ ನೀರು ಸರಬರಾಜು
ತುಂಗಭದ್ರಾ ಡ್ಯಾಮ್‌ನಿಂದ ಕಾರ್ಖಾನೆಗಳಿಗೆ ಅನಧಿಕೃತ ನೀರು ಸರಬರಾಜು
ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು
ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು
ಚಿತ್ರದುರ್ಗದಲ್ಲಿ ಮಹಾಗಣಪತಿ ಉತ್ಸವಕ್ಕೆ ನಗರ ದೇವತೆಗಳ ಮೆರುಗು
ಚಿತ್ರದುರ್ಗದಲ್ಲಿ ಮಹಾಗಣಪತಿ ಉತ್ಸವಕ್ಕೆ ನಗರ ದೇವತೆಗಳ ಮೆರುಗು
ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ
ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ
ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ
ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ
ಧಾರಾಕಾರ ಮಳೆಗೆ ಮಂಡ್ಯ, ಹನೂರು ತತ್ತರ: ಎಂ.ಎಂ. ಹಿಲ್ಸ್‌ನಲ್ಲಿ ಗುಡ್ಡ ಕುಸಿತ
ಧಾರಾಕಾರ ಮಳೆಗೆ ಮಂಡ್ಯ, ಹನೂರು ತತ್ತರ: ಎಂ.ಎಂ. ಹಿಲ್ಸ್‌ನಲ್ಲಿ ಗುಡ್ಡ ಕುಸಿತ
ಬೆಂಗಳೂರಿನ ಅಂಚೆಪಾಳ್ಯದಲ್ಲಿ ಚಿರತೆ ಪ್ರತ್ಯಕ್ಷ
ಬೆಂಗಳೂರಿನ ಅಂಚೆಪಾಳ್ಯದಲ್ಲಿ ಚಿರತೆ ಪ್ರತ್ಯಕ್ಷ
Live: ಹೆಚ್.ಡಿ. ಕುಮಾರಸ್ವಾಮಿ ಸುದ್ದಿಗೋಷ್ಠಿ ನೇರಪ್ರಸಾರ
Live: ಹೆಚ್.ಡಿ. ಕುಮಾರಸ್ವಾಮಿ ಸುದ್ದಿಗೋಷ್ಠಿ ನೇರಪ್ರಸಾರ