ಗಂಗೂಬಾಯಿ ಕಾಠಿಯಾವಾಡಿ: ಆಲಿಯಾ ಭಟ್​ಳಂತೆ ಕಾಣಿಸಿಕೊಂಡ ಬೆಕ್ಕು ಫುಲ್ ವೈರಲ್: ನೆಟ್ಟಿಗರು ಫಿದಾ

ಗಂಗೂಬಾಯಿ ಕಾಠಿಯಾವಾಡಿ ಸಿನಿಮಾದಲ್ಲಿ ನಟಿ ಆಲಿಯಾ ಭಟ್ ಪಾತ್ರದಂತೆ ಬೆಕ್ಕೊಂದು ಸೀರೆ ಉಟ್ಟ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

ಗಂಗೂಬಾಯಿ ಕಾಠಿಯಾವಾಡಿ: ಆಲಿಯಾ ಭಟ್​ಳಂತೆ ಕಾಣಿಸಿಕೊಂಡ ಬೆಕ್ಕು ಫುಲ್ ವೈರಲ್: ನೆಟ್ಟಿಗರು ಫಿದಾ
ನಟಿ ಆಲಿಯಾ ಭಟ್ ಮತ್ತು ವೈರಲ್ ಆಗುತ್ತಿರುವ ಬೆಕ್ಕಿನ ಫೋಟೋ
Follow us
TV9 Web
| Updated By: Rakesh Nayak Manchi

Updated on: May 21, 2022 | 1:04 PM

ಬಾಲಿವುಡ್ ನಟಿ ಆಲಿಯಾ ಭಟ್(Alia Bhat) ಅಭಿನಯದ ಗಂಗೂಬಾಯಿ ಕಾಠಿಯಾವಾಡಿ (Gangubai Kathiawadi) ಸಿನಿಮಾ ರಿಲೀಸ್ ಆಗಿ ಭರ್ಜರಿ ಪ್ರದರ್ಶನ ಕಂಡಿದೆ. ಒಟಿಟಿ(OTT) ಪ್ಲಾಟ್​ಫಾರ್ಮ್​ನಲ್ಲೂ ಬಿಡುಗಡೆಯಾದ ನಂತರ ನೆಟ್​ಫ್ಲಿಕ್ಸ್​ ಭಾರತದಲ್ಲಿ ಹೆಚ್ಚು ಟ್ರೆಂಡಿಂಗ್ ಆದ ಚಲನಚಿತ್ರಗಳಲ್ಲಿ ಒಂದಾಗಿದೆ. ಚಿತ್ರದಲ್ಲಿ ಅಜಯ್ ದೇವಗನ್ (Ajay Devgan), ಜಿಮ್ ಸರ್ಭ್, ಶಂತನು ಮಹೇಶ್ವರಿ, ವಿಜಯ್ ರಾಜ್, ಇಂದಿರಾ ತಿವಾರಿ ಮತ್ತು ಸೀಮಾ ಭಾರ್ಗವ ಮತ್ತಿತರ ದಿಗ್ಗಜರು ನಟಿಸಿದ್ದಾರೆ. ಇದೀಗ ಈ  ಸಿನಿಮಾದಲ್ಲಿ ಆಲಿಯಾ ಭಟ್ ಪಾತ್ರದಂತೆ ಬೆಕ್ಕೊಂದು ಸೀರೆ ಉಟ್ಟ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಈ ಫೋಟೋವನ್ನು ಮೋಹಕವಾದ ಕ್ಷಣಗಳಲ್ಲಿ ಒಂದಾಗಿದೆ ಎಂದು ಇಂಟರ್ನೆಟ್​ ಪ್ರಶಂಸಿಸಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಸನ್ನಿ ಲಿಯೋನ್; ‘ಚಾಂಪಿಯನ್’ ಸಿನಿಮಾ ಆಡಿಯೋ ಲಾಂಚ್ ಲೈವ್​ ಇಲ್ಲಿದೆ

ವೈರಲ್ ಫೋಟೋವನ್ನು ಗಮನಿಸಿದಾಗ, ಬೆಕ್ಕಿಗೆ ಬಿಳಿ ಸೀರೆಯನ್ನು ಉಡಿಸಲಾಗಿದೆ. ಸೀರೆಯ ಸೆರಗನ್ನು ಬೆಕ್ಕಿನ ತಲೆ ಮೇಲೂ ಹಾಕಲಾಗಿದೆ. ಅದರ ಹಣೆಗೆ ಸಿಂಧೂರ ಇಡಲಾಗಿದ್ದು, ಕೈಗೆ ಬಳೆ ಹಾಕಿರುವುದನ್ನು ಕಾಣಬಹುದು. ಈ ರೀತಿಯಾಗಿ ಆಲಿಯಾ ಭಟ್, ಗಂಗೂಬಾಯಿ ಕಾಠಿಯಾವಾಡಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಬೆಕ್ಕಿನ ಈ ಅವತಾರವನ್ನು ನೋಡಿದ ನೆಟ್ಟಿಗರು ಗಂಗೂಬಾಯಿ ಆಲಿಯಾಭಟ್​ ಅವರನ್ನು ಹೋಲುವಂತಿದೆ ಎಂದು ಹೇಳುತ್ತಿದ್ದಾರೆ. ಆಲಿಯಾ ಭಟ್ ಕೂಡ ಬೆಕ್ಕು ಪ್ರೇಮಿಯಾಗಿದ್ದು, ಬೆಕ್ಕನ್ನು ಸಾಕುತ್ತಿದ್ದಾರೆ.

ಗಂಗೂಬಾಯಿ ಕಾಠಿಯಾವಾಡಿ ಎಂದು ಜನಪ್ರಿಯವಾಗಿರುವ ಗಂಗೂಬಾಯಿ ಹರ್ಜಿವಂದಾಸ್ ಅವರ ನೈಜ ಕಥೆಯನ್ನಾಧರಿಸಿದ ಗಂಗೂಬಾಯಿ ಕಾಠಿಯಾವಾಡಿ ಸಿನಿಮಾವನ್ನು ಸಂಜಯ್ ಲೀಲಾ ಬನ್ಸಾಲಿ ಅವರು ಬರೆದು ನಿರ್ದೇಶಿಸಿದಿದ್ದಾರೆ. ಬನ್ಸಾಲಿ ಪ್ರೊಡಕ್ಷನ್ಸ್ ಮತ್ತು ಡಾ. ಜಯಂತಿಲಾಲ್ ಗಡಾದ ಪೆನ್ ಸ್ಟುಡಿಯೋಸ್ ನಿರ್ಮಿಸಿದೆ.

ಇದನ್ನೂ ಓದಿ: ಬಿಳಿ ಬಣ್ಣದ ಬಟ್ಟೆಯಲ್ಲಿ ಮಿಂಚಿದ ಆಲಿಯಾ ಭಟ್; ಇಲ್ಲಿದೆ ಫೋಟೋ

ಇದನ್ನೂ ಓದಿ: ಉಕ್ರೇನ್​​ನಲ್ಲಿ ಆಸ್ಪತ್ರೆಗಳ ಮೇಲೆ 34 ಬಾರಿ ದಾಳಿ ನಡೆಸಿದ ರಷ್ಯಾ ಸೇನಾ ಪಡೆ; ವಾರ್​ ಕ್ರೈಂ ನಡೆಯುತ್ತಿರುವುದಕ್ಕೆ ಇದು ಪುರಾವೆ

ಇದನ್ನೂ ಓದಿ: ಪೂರ್ವ ಲಡಾಖ್‌ನ ಪಾಂಗಾಂಗ್ ಸರೋವರ ಬಳಿ ಎರಡನೇ ಸೇತುವೆ ನಿರ್ಮಿಸುತ್ತಿದೆ ಚೀನಾ: ಅಧಿಕೃತ ಪ್ರತಿಕ್ರಿಯೆ ನೀಡಿದ ಭಾರತ

ಮತ್ತಷ್ಟು ಸುದ್ದಿಗಳಿಗಾಗಿ ಲಿಂಕ್ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ