Trending: 80ರ ವರ್ಷದಲ್ಲಿ ಡೆಡ್‌ಲಿಫ್ಟ್‌ ಮಾಡುತ್ತಿರುವ ಅಜ್ಜಿಯ ವಿಡಿಯೋ ವೈರಲ್

ಮೊಮ್ಮಗನಿಗೆ ಸವಾಲಾಗಿ ಡೆಡ್‌ಲಿಫ್ಟ್‌ ಮಾಡಿದ ಅಜ್ಜಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.

Trending: 80ರ ವರ್ಷದಲ್ಲಿ ಡೆಡ್‌ಲಿಫ್ಟ್‌ ಮಾಡುತ್ತಿರುವ ಅಜ್ಜಿಯ ವಿಡಿಯೋ ವೈರಲ್
ಡೆಡ್‌ಲಿಫ್ಟ್‌ ಮಾಡಿದ ಅಜ್ಜಿ
TV9kannada Web Team

| Edited By: Rakesh Nayak

May 22, 2022 | 12:11 PM

ಇಂದಿನ ಪೀಳಿಗೆಯಲ್ಲಿ ವರ್ಷ 40 ದಾಟಿದರೆ ಸಾಕು, ಬಗ್ಗಿ ಏಳುವಾಗ ಅಥವಾ ಭಾರ ಎತ್ತುವಾಗ ಅಯ್ಯೋ… ಅಮ್ಮಾ… ಆಗಲ್ಲಪ್ಪಾ ಆಗಲ್ಲ ಅಂತ ಹೇಳುವವರೇ ಜಾಸ್ತಿ. ಇದಕ್ಕೆ ಕಾರಣ ಇಂದಿನ ಆಹಾರ ಪದ್ದತಿ. ಇಂಥ ಜನಗಳ ನಡುವೆ ಹಿರಿ ತಲೆಗಳೂ ಬದುಕುಳಿದಿದ್ದಾರೆ. ಅವರ ಎಷ್ಟು ಗಟ್ಟಿಮುಟ್ಟಾಗಿರುತ್ತಾರೆ ಎಂದರೆ ಯುವಕರೂ ಅಚ್ಚರಿ ಪಡುತ್ತಾರೆ. ಅದಕ್ಕೆ ಪುಷ್ಠಿ ಎಂಬಂತೆ 80 ವರ್ಷದ ಅಜ್ಜಿ(grandmother) ತನ್ನ ಮೊಮ್ಮಗನಿಗೆ ಸವಾಲಾಗಿ ಡೆಡ್‌ಲಿಫ್ಟ್‌ಗಳನ್ನು (ಭಾರ ಎತ್ತುವುದು) ಮಾಡಿದ್ದಾರೆ. ಇದರ ವಿಡಿಯೋ ಭಾರಿ ವೈರಲ್ ಆಗುತ್ತಿದೆ.

ವಿಡಿಯೋದಲ್ಲಿ ವಯಸ್ಸಾದ ಮಹಿಳೆಯೊಬ್ಬರು ಬಾರ್‌ಬೆಲ್‌ (barbell)ನಿಂದ ಓವರ್‌ಹೆಡ್ ಪ್ರೆಸ್ ಮಾಡುತ್ತಿರುವುದನ್ನು ಕಾಣಬಹುದು. ಅಲ್ಲದೆ, ತನ್ನದೇ ಅಜ್ಜಿಯ ಸಾಮರ್ಥ್ಯವನ್ನು ಕಂಡ ಮೊಮ್ಮಗ ಅಚ್ಚರಿಗೊಳಪಡುತ್ತಾನೆ. ಮೊಮ್ಮಗನ ಸವಾಲಿಗೆ 80ರ ವರ್ಷದಲ್ಲೂ ಅಜ್ಜಿ ಇಂಥ ಸಾಹಸ ಮಾಡಿರುವುದು ಮೆಚ್ಚಲೇಬೇಕು. ಈ ವಿಡಿಯೋವನ್ನು ಪಂಜಾಬಿ ಇಂಡಸ್ಟ್ರಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ.  ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಲ್ಲದೆ, ಆಶ್ಚರ್ಯಚಕಿತರೂ ಆಗಿದ್ದಾರೆ.

ಇದನ್ನೂ ಓದಿ: ಅಬ್ಬಬ್ಬಾ! ಕೊಪ್ಪಳ ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿ ಬೃಹತ್ ಗಾತ್ರದ ಮೀನು; ವಿಡಿಯೋ ವೈರಲ್

ಸಾಮಾಜಿಕ ಜಾಲತಾಣದಲ್ಲಿ ಇಂಥ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಹಿಂದೊಮ್ಮೆ 90 ವರ್ಷದ ವ್ಯಕ್ತಿ, ತನ್ನ ಮೊಮ್ಮಗಳೊಂದಿಗೆ ಬೌಲಿಂಗ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ವ್ಯಕ್ತಿ ಇಪ್ಪತ್ತರ ಹರೆಯದಲ್ಲಿ ಬೆನ್ನಿನ ಸಮಸ್ಯೆ ಎದುರಿಸಿ ಚಿಕಿತ್ಸೆಗೆ ಒಳಪಟ್ಟಿದ್ದರು. ಸದ್ಯ ಚೇತರಿಕೆಕಂಡು ವೈರಲ್ ಕೂಡ ಆಗಿದ್ದಾರೆ.

ಇದನ್ನೂ ಓದಿ: ಜೂನ್​​ 21ರಂದು ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗಿಯಾಗೋದು ಬಹುತೇಕ ಫಿಕ್ಸ್

ಇದನ್ನೂ ಓದಿ: India Covid Updates: ಭಾರತದಲ್ಲಿ 2226 ಮಂದಿಗೆ ಕೊರೊನಾ ಸೋಂಕು: 65 ಮಂದಿ ಸಾವು

ಇದನ್ನೂ ಓದಿ: ‘ಒಮ್ಮೆ ನೋಡಬಹುದು, ಹೆಚ್ಚು ಮನರಂಜನೆ ಇಲ್ಲ’: ‘ಸರ್ಕಾರು ವಾರಿ ಪಾಟ’ ಚಿತ್ರಕ್ಕೆ ಪ್ರೇಕ್ಷಕರ ಪ್ರಾಮಾಣಿಕ ವಿಮರ್ಶೆ

ಮತ್ತಷ್ಟು ಸುದ್ದಿಗಳಿಗಾಗಿ ಲಿಂಕ್ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada