ಸದ್ಯ ರಾಜ್ಯದಲ್ಲಿ ಮಳೆ (Rian) ಮುಂದುವರಿದಿದ್ದು, ಮಳೆರಾಯನಿಂದ ಅಪಾರ ನಷ್ಟವಾಗಿದೆ. ಹಲವೆಡೆ ಮನೆಗಳು ಕುಸಿದು ಹಲವು ಕುಟುಂಬಗಳು ಪರದಾಡುತ್ತಿದ್ದರೆ, ಕೆಲವೆಡೆ ರಸ್ತೆಗಳಲ್ಲಿ ಭಾರೀ ಪ್ರಮಾಣದ ನೀರು ಹರಿದು ಸಂಪರ್ಕ ಕಡಿತವಾಗಿದೆ. ಹೀಗೆ ಜನರು ಮುಂಗಾರು ಆರಂಭದ ಮೊದಲು ಪರದಾಟ ಪಡುವಂತಾಗಿದೆ. ಈ ಎಲ್ಲದರ ನಡುವೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ (Viral) ಆಗಿದೆ. ಅದೇ ದೊಡ್ಡ ಗಾತ್ರದ ಮೀನು. ಹೊಸ ನೀರು ಹೆಚ್ಚಾದ್ದಂತೆ, ಮೀನುಗಳ ಸಂಖ್ಯೆಯೂ ಹೆಚ್ಚಾಗುತ್ತದೆ. ಕೊಪ್ಪಳ ತಾಲೂಕಿನ ತಿಗರಿ ಬಳಿ ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿ ಬೃಹತ್ ಗಾತ್ರದ ಮೀನು ಪತ್ತೆಯಾಗಿದೆ. ದೊಡ್ಡ ಮೀನು ಕಂಡ ಸ್ಥಳೀಯರು ವಿಡಿಯೋ ಮಾಡಿದ್ದಾರೆ.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ