Viral Video: ಬೀನ್ ಬ್ಯಾಗ್ ಮೇಲೆ ಕೂಡಲು ನಾಯಿಯ ಹರಸಾಹಸ, ವಿಡಿಯೋ ವೈರಲ್

TV9 Digital Desk

| Edited By: ವಿವೇಕ ಬಿರಾದಾರ

Updated on:May 21, 2022 | 2:42 PM

ನಾಯಿಯೊಂದು ಕೂಡಲು ಕೂಡವ ಆಸನವನ್ನು ಸರಿಪಡಿಸಿಕೊಳ್ಳಲು ಪಡುತ್ತಿರುವ ಹರಸಾಹಸದ ವಿಡಿಯೋ ವೈರಲ್ ಆಗಿದೆ ವಿಡಿಯೋದಲ್ಲಿ ನಾಯಿ ಹೆಸರು ಸ್ಟೆಲ್ಲಾ , ಸ್ಟೆಲ್ಲಾ ಬೀನ್ ಬ್ಯಾಗ್  ಮೇಲೆ ಕೂಡಲು ಬ್ಯಾಗ್​ನೊಂದಿಗೆ ಹೋರಾಟವನ್ನೇ ಮಾಡುತ್ತದೆ.

Viral Video: ಬೀನ್ ಬ್ಯಾಗ್ ಮೇಲೆ ಕೂಡಲು ನಾಯಿಯ ಹರಸಾಹಸ, ವಿಡಿಯೋ ವೈರಲ್
ಬಿಗ್ ಬ್ಯಾಗ್ ಮೇಲೆ ಕೂಡಲು ಯತ್ನಿಸುತ್ತಿರುವ ಸ್ಟೆಲ್ಲ
Image Credit source: Hindustan Times

ಪ್ರಾಣಿಗಳ ಆಟವನ್ನು ನೋಡುವುದೇ ಚಂದ. ಸಾಕು ಪ್ರಾಣಿಗಳು ಮನೆಯಲ್ಲಿ ಮಾಡುವ ಕೀಟಲೆ ನೋಡಲು ಚಂದ ಹಾಗೇ ಅವುಗಳ ಜೊತೆ ಆಟವಾಡುವುದು ಚಂದ. ಹೀಗೆ ನಾಯಿಯೊಂದು ಕೂಡಲು ಕೂಡವ ಆಸನವನ್ನು ಸರಿಪಡಿಸಿಕೊಳ್ಳಲು ಪಡುತ್ತಿರುವ ಹರಸಾಹಸದ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ನಾಯಿ ಹೆಸರು ಸ್ಟೆಲ್ಲಾ (Stella), ಸ್ಟೆಲ್ಲಾ ಬೀನ್ ಬ್ಯಾಗ್  ಮೇಲೆ ಕೂಡಲು ಬ್ಯಾಗ್​ನೊಂದಿಗೆ ಹೋರಾಟವನ್ನೇ ಮಾಡುತ್ತದೆ.

ಇದನ್ನು ಓದಿ: ಗಂಗೂಬಾಯಿ ಕಾಠಿಯಾವಾಡಿ: ಆಲಿಯಾ ಭಟ್​ಳಂತೆ ಕಾಣಿಸಿಕೊಂಡ ಬೆಕ್ಕು ಫುಲ್ ವೈರಲ್: ನೆಟ್ಟಿಗರು ಫಿದಾ

ಇದನ್ನೂ ಓದಿ

View this post on Instagram

A post shared by LABsurdity DOGumented (@dognamedstella)

ವಿಡಿಯೋದಲ್ಲಿ ಸ್ಟೆಲ್ಲಾ ನೆಲದ ಮೇಲೆ ಇರಿಸಲಾಗಿರುವ ಬೀನ್ ಬ್ಯಾಗ್ ಮೇಲೆ ಕೂಡಲು ಬ್ಯಾಗ್ ಮೇಲೆ ಹತ್ತುತ್ತದೆ. ಆಗ ಬ್ಯಾಗ್​ನ ಒಂದು ಭಾಗ ಉಬ್ಬು, ಒಂದು ಕಡೆ ತೆಳ್ಳಗೆ ಇರುತ್ತದೆ. ಇದನ್ನು ಸಮತಟ್ಟಾಗಿಸಲು ನಾಯಿ ಬ್ಯಾಗ್​ನ ಆ ಕಡೆ ಈ ಕಡೆ ಒಡಾಡುತ್ತೆ. ಸತತ ಪ್ರಯತ್ನ ಮಾಡುತ್ತದೆ. ಕೊನೆಗೆ ಬ್ಯಾಗ್ ಸರಿ ಹೋಗುವುದಿಲ್ಲ ಬೇಸರದಿಂದ ಬಾಗ್ ಯಾವ ಸ್ಥಿತಿಯಲ್ಲಿದೆಯೋ ಅದೇ ಸ್ಥಿಯಲ್ಲಿ ಕೂಡುತ್ತದೆ.

ವಿಡಿಯೋವನ್ನು ಇನ್​ಸ್ಟಾಗ್ರಾಮನಲ್ಲಿ ಹಂಚಿಕೊಂಡ ನಾಯಿ ಮಾಲಿಕ “ಎಲ್ಲರೂ ಮಾರ್ವೆಲ್ ಚಲನಚಿತ್ರಗಳ ಬಗ್ಗೆ ಮಾತನಾಡುತ್ತಿದ್ದಾರೆ ಮತ್ತು ಸ್ಟೆಲ್ಲಾ ಬೀನ್ ಬ್ಯಾಗ್‌ನಲ್ಲಿ ಆರಾಮದಾಯಕವಾಗಿ ಕೂಡಲು ಪ್ರಯತ್ನಿಸುತ್ತಿರುವುದನ್ನು ವೀಕ್ಷಿಸಲು ನಾನು ಇಲ್ಲಿದ್ದೇನೆ” ಎಂದು ಬರೆದುಕೊಂಡಿದ್ದಾರೆ.

ಇದನ್ನು ಓದಿ: ಛಾಯಾಗ್ರಾಹಕರ ಮುಂದೆ ಕಿರುಚುತ್ತಾ ಅರೆ ಬೆತ್ತಲೆಯಾದ ಮಹಿಳೆ: ಮುಂದೆ ಆಗಿದ್ದೇನು?

ಕೆಲ ದಿನಗಳ ಹಿಂದೆ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ವಿಡಿಯೋ ಪೋಸ್ಟ್ ಆದಾಗಿನಿಂದ ಸುಮಾರು 16,000 ಲೈಕ್‌ಗಳನ್ನು ಪಡೆದಿದೆ ಮತ್ತು ಸಂಖ್ಯೆಗಳು ಹೆಚ್ಚುತ್ತಿವೆ. ವಿಡಿಯೋ ಕುರಿತು ಅನೇಕರು ಕಾಮೆಂಟ್ ಮಾಡಿದ್ದಾರೆ. “ಇದುವರೆಗಿನ ಅತ್ಯುತ್ತಮ ಸ್ಟೆಲ್ಲಾ ವೀಡಿಯೊಗಳಲ್ಲಿ ಇದು ಒಂದಾಗಿದೆ”. “ನಾನು ವಿಡಿಯೋ ನೋಡಿ ದಣಿದಿದ್ದೇನೆ” “ನಾನು ಅವಳ ಹೋರಾಟವನ್ನು ಅನುಭವಿಸಿದೆ” ಎಂದು ಕಾಮೆಂಟ್ ಮಾಡಿದ್ದಾರೆ.

ಮತ್ತಷ್ಟು ಸುದ್ದಿಗಳಿಗಾಗಿ ಲಿಂಕ್ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada