Penis Plants: ಪುರುಷರ ಶಿಶ್ನದಂತಿರುವ ಗಿಡ ಕಿತ್ತ ಯುವತಿಯರ ವಿಡಿಯೋ ವೈರಲ್; ಪ್ರವಾಸಿಗರಿಗೆ ಎಚ್ಚರಿಕೆ ನೀಡಿದ ಕಾಂಬೋಡಿಯಾ ಸರ್ಕಾರ
'ಶಿಶ್ನ ಸಸ್ಯ' (ಪೆನಿಸ್ ಪ್ಲಾಂಟ್) ಎಂದು ಕರೆಯಲ್ಪಡುವ ನೆಪೆಂಥಿಸ್ ಹೋಲ್ಡೆನಿಯು ಪಶ್ಚಿಮ ಕಾಂಬೋಡಿಯಾದ ಪರ್ವತ ಪ್ರದೇಶದಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ.
ಪುರುಷರ ಜನನಾಂಗ(ಶಿಶ್ನ) ಹೋಲುವ ಗಿಡವನ್ನು ಕೈಯಲ್ಲಿ ಹಿಡಿದು ಯುವತಿಯರು ವಿಡಿಯೋ, ಫೋಟೋ ತೆಗೆದುಕೊಳ್ಳುವುದು ಹೆಚ್ಚಾಗುತ್ತಿದ್ದಂತೆ ಕಾಂಬೋಡಿಯಾ ಸರ್ಕಾರ ಈ ಪೆನಿಸ್ ಪ್ಲಾಂಟ್ (ಶಿಶ್ನವನ್ನು ಹೋಲುವ ಗಿಡ) ಕೀಳದಂತೆ ಪ್ರವಾಸಿಗರಿಗೆ ಸೂಚನೆ ನೀಡಿದೆ. ಮೂವರು ಮಹಿಳೆಯರು ಪೆನಿಸ್ ಪ್ಲಾಂಟ್ (Penis Plants) ಕೀಳುತ್ತಿರುವ ವೀಡಿಯೊ ವೈರಲ್ ಆದ ನಂತರ ಕಾಂಬೋಡಿಯಾ ಸರ್ಕಾರವು (Cambodian government) ಸಾರ್ವಜನಿಕರಿಗೆ ಈ ಎಚ್ಚರಿಕೆ ನೀಡಿದೆ. ಪೆನಿಸ್ ಪ್ಲಾಂಟ್ ಅಳಿವಿನಂಚಿನಲ್ಲಿರುವ ಸಸ್ಯವಾಗಿದೆ. ಈ ರೀತಿ ಪ್ರವಾಸಿಗರು ಅದನ್ನು ಕೀಳುತ್ತಿದ್ದರೆ ಆ ಗಿಡಗಳು ಸತ್ತು ಹೋಗಿ, ಪ್ರಭೇದವೇ ನಾಶವಾಗುತ್ತದೆ ಎಂದು ಸರ್ಕಾರ ಹೇಳಿದೆ.
‘ಶಿಶ್ನ ಸಸ್ಯ’ (ಪೆನಿಸ್ ಪ್ಲಾಂಟ್) ಎಂದು ಕರೆಯಲ್ಪಡುವ ನೆಪೆಂಥಿಸ್ ಹೋಲ್ಡೆನಿಯು ಪಶ್ಚಿಮ ಕಾಂಬೋಡಿಯಾದ ಪರ್ವತ ಪ್ರದೇಶದಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಈ ಸಸ್ಯಗಳು ಮಾಂಸಾಹಾರಿ ಸಸ್ಯಗಳಾಗಿದ್ದು, ಕಡಿಮೆ ಪೌಷ್ಠಿಕಾಂಶದ ಮಣ್ಣಿನಲ್ಲಿ ಬದುಕುತ್ತವೆ. ಕೀಟಗಳನ್ನು ಆಕರ್ಷಿಸಲು ತಮ್ಮ ಮಕರಂದ ಮತ್ತು ಸಿಹಿ ಪರಿಮಳವನ್ನು ಬಳಸುತ್ತವೆ. ಕೀಟ ತನ್ನ ಸಮೀಪಕ್ಕೆ ಬಂದ ತಕ್ಷಣ ಅದನ್ನೇ ತನ್ನ ಆಹಾರವನ್ನಾಗಿ ಮಾಡಿಕೊಳ್ಳುವ ಈ ಗಿಡಗಳು ಇದೀಗ ಅಳಿವಿನಂಚಿನಲ್ಲಿವೆ.
ಈ ಬಗ್ಗೆ ಫೇಸ್‌ಬುಕ್ ಪೋಸ್ಟ್‌ನಲ್ಲಿ ಕಾಂಬೋಡಿಯಾ ದೇಶದ ಪರಿಸರ ಸಚಿವಾಲಯವು ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಈ ಯುವತಿಯರು ಪೆನಿಸ್ ಪ್ಲಾಂಟ್ಗಳನ್ನು ಕೀಳುತ್ತಿರುವ ರೀತಿ ನೀವು ಕೂಡ ಮಾಡಬೇಡಿ! ನೈಸರ್ಗಿಕ ಸಂಪನ್ಮೂಲಗಳನ್ನು ಪ್ರೀತಿಸಿದ್ದಕ್ಕಾಗಿ ಧನ್ಯವಾದಗಳು. ಆದರೆ, ಅವುಗಳನ್ನು ಕೀಳಬೇಡಿ. ಇದರಿಂದ ಅವು ಸಾಯುತ್ತವೆ ಎಂದು ಸರ್ಕಾರ ಸೂಚನೆ ನೀಡಿದೆ. (Source)
ಇದನ್ನೂ ಓದಿ: Shocking News: ತಲೆಕೂದಲು ಉದುರದಂತೆ ತಡೆಯಲು ಈ ವ್ಯಕ್ತಿ ಮಾಡಿದ ಪ್ಲಾನ್ ಏನು ಗೊತ್ತಾ?; ಕೇಳಿದ್ರೆ ಶಾಕ್ ಆಗ್ತೀರ
ಕಾಂಬೋಡಿಯಾದ ಕಾಂಪೋಟ್ ಪ್ರಾಂತ್ಯದ ಬೋಕೋರ್ ಪರ್ವತದಲ್ಲಿ ಮೂವರು ಮಹಿಳೆಯರು ಅಳಿವಿನಂಚಿನಲ್ಲಿರುವ ಪೆನಿಸ್ ಪ್ಲಾಂಟ್ನ ಹೂವುಗಳನ್ನು ಕೀಳುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇತ್ತೀಚೆಗೆ ಈ ಅಪರೂಪದ ಸಸ್ಯಗಳ ಜೊತೆ ಸೆಲ್ಫೀ, ಫೋಟೋ ತೆಗೆದುಕೊಳ್ಳಲು ಈ ಸಸ್ಯಗಳನ್ನು ಕೀಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕಾಂಬೋಡಿಯಾದ ಕಂಪೋಟ್ ಪ್ರಾಂತ್ಯದ ಬೋಕೋರ್ ಪರ್ವತದಲ್ಲಿ ಈ ವಿಡಿಯೋವನ್ನು ಚಿತ್ರೀಕರಿಸಲಾಗಿದೆ ಎಂದು ವರದಿಯಾಗಿದೆ.
ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:34 pm, Fri, 20 May 22