Shocking News: ತಲೆಕೂದಲು ಉದುರದಂತೆ ತಡೆಯಲು ಈ ವ್ಯಕ್ತಿ ಮಾಡಿದ ಪ್ಲಾನ್ ಏನು ಗೊತ್ತಾ?; ಕೇಳಿದ್ರೆ ಶಾಕ್ ಆಗ್ತೀರ

ಆರು ವರ್ಷಗಳ ಹಿಂದೆ ಶಾಂಪೂ ಮತ್ತು ಕಂಡೀಷನರ್ ಬಳಸಿ ಕೂದಲು ತೊಳೆಯುವುದನ್ನು ಬಿಟ್ಟ ವ್ಯಕ್ತಿಯೊಬ್ಬ ಅದೇ ತನ್ನ ಕೂದಲು ಉದುರುವುದನ್ನು ನಿಲ್ಲಿಸಲು ಕಾರಣವಾಯಿತು ಎಂದು ಹೇಳಿದ್ದಾನೆ.

Shocking News: ತಲೆಕೂದಲು ಉದುರದಂತೆ ತಡೆಯಲು ಈ ವ್ಯಕ್ತಿ ಮಾಡಿದ ಪ್ಲಾನ್ ಏನು ಗೊತ್ತಾ?; ಕೇಳಿದ್ರೆ ಶಾಕ್ ಆಗ್ತೀರ
6 ವರ್ಷದಿಂದ ತಲೆಸ್ನಾನ ಮಾಡದ ನಿಕ್
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Apr 10, 2022 | 1:06 PM

ಧೂಳು, ರಾಸಾಯನಿಕಯುಕ್ತ ಆಹಾರ, ಒತ್ತಡದ ಜೀವನಶೈಲಿಯಿಂದಾಗಿ ತಲೆಕೂದಲು ಉದುರುವುದು ಸಾಮಾನ್ಯವಾಗಿದೆ. ಕೂದಲು ಉದುರುವುದನ್ನು ನಿಲ್ಲಿಸುವುದು ಹೇಗೆಂಬ ಬಗ್ಗೆ ನೀವೇನಾದರೂ ತಲೆಕೆಡಿಸಿಕೊಂಡಿದ್ದರೆ ಇಲ್ಲೊಬ್ಬ ವ್ಯಕ್ತಿ ಹೊಸ ಉಪಾಯವೊಂದನ್ನು ನೀಡಿದ್ದಾನೆ. ಆದರೆ, ಈ ಉಪಾಯವನ್ನು ಪಾಲಿಸುವುದು ಅಷ್ಟು ಸುಲಭವೇನಲ್ಲ. ಏಕೆಂದರೆ ಈತ ಕಳೆದ 6 ವರ್ಷಗಳಿಂದ ತಲೆಗೆ ಸ್ನಾನವೇ ಮಾಡಿಲ್ಲವಂತೆ. ಇದೇ ಕಾರಣದಿಂದ ಆತನಿಗೆ ಕೂದಲು ಉದುರುವ ಸಮಸ್ಯೆ ದೂರವಾಗಿದೆಯಂತೆ!

ಆರು ವರ್ಷಗಳ ಹಿಂದೆ ಶಾಂಪೂ ಮತ್ತು ಕಂಡೀಷನರ್ ಬಳಸಿ ಕೂದಲು ತೊಳೆಯುವುದನ್ನು ಬಿಟ್ಟ ವ್ಯಕ್ತಿಯೊಬ್ಬ ಅದೇ ತನ್ನ ಕೂದಲು ಉದುರುವುದನ್ನು ನಿಲ್ಲಿಸಲು ಕಾರಣವಾಯಿತು ಎಂದು ಹೇಳಿದ್ದಾನೆ. ನಿಕ್ ಕೋಟ್ಜಿ ಎಂಬ ವ್ಯಕ್ತಿ ವಿದ್ಯಾರ್ಥಿಯಾಗಿದ್ದಾಗ ಆತನಿಗೆ ಸಿಕ್ಕಾಪಟ್ಟೆ ಕೂದಲು ಉದುರುತ್ತಿತ್ತು. ಅವನ ಕೂದಲು ಉದುರಲು ಪ್ರಾರಂಭಿಸಿ, ಒಂದುಕಡೆಯಿಂದ ತಲೆ ಬೋಳಾಗತೊಡಗಿತು.

ಈ ಬಗ್ಗೆ ಟಿಕ್​ಟಾಕ್ ವಿಡಿಯೋ ಮಾಡಿರುವ ಆ ವ್ಯಕ್ತಿ ನಾನು 6 ವರ್ಷಗಳ ಹಿಂದೆ ಪ್ರತಿದಿನ ಶಾಂಪೂ ಮತ್ತು ಕಂಡೀಷನಿಂಗ್ ಮಾಡುವ ಮೂಲಕ ದಿನವೂ ತಲೆಸ್ನಾನ ಮಾಡುತ್ತಿದ್ದೆ. ಆದರೆ, ಅದರಿಂದ ಕೂದಲು ಉದುರತೊಡಗಿತು. ಶಾಂಪೂ ಹಾಕಿಕೊಂಡು ಸ್ನಾನ ಮಾಡಿದ್ದಕ್ಕೇ ತಲೆಕೂದಲು ಉದುರುತ್ತಿದೆ ಎಂದು ಭಾವಿಸಿದ ನಿಕ್ ಅಂದಿನಿಂದ ತನ್ನ ಕೂದಲನ್ನು ತೊಳೆಯುವುದನ್ನು ನಿಲ್ಲಿಸಲು ನಿರ್ಧರಿಸಿದನು.

“ಆಶ್ಚರ್ಯಕರವಾಗಿ ನನ್ನ ಕೂದಲು ಸಾಕಷ್ಟು ಆರೋಗ್ಯಕರವಾಗಿದೆ. ಕೂದಲು ಉದುರುವುದು ನಿಂತು, ಬೋಳಾದ ಭಾಗದಲ್ಲಿ ತಲೆಕೂದಲು ಹುಟ್ಟತೊಡಗಿತು ಎಂಬುದು ನನ್ನ ಗಮನಕ್ಕೆ ಬಂದಿದೆ” ಎಂದು ನಿಕ್ ಹೇಳಿದ್ದಾನೆ. “ನೀವು ನಿಮ್ಮ ಕೂದಲನ್ನು ತೊಳೆಯುವುದನ್ನು ನಿಲ್ಲಿಸಿದರೆ ಅದು ಜಿಡ್ಡಿನಿಂದ ಕೂಡುತ್ತದೆ ಎಂದು ನೀವು ಭಾವಿಸಬಹುದು. ಸುಮಾರು ಎರಡು ಅಥವಾ ಮೂರು ವಾರಗಳವರೆಗೆ ತಲೆಕೂದಲಲ್ಲಿ ಜಿಡ್ಡಿನಂಶ ಇರುತ್ತದೆ. ಆದರೆ ಅದರ ನಂತರ ನಿಮ್ಮ ತಲೆಯಲ್ಲಿ ನೈಸರ್ಗಿಕ ತೈಲ ಉತ್ಪತ್ತಿಯಾಗುತ್ತದೆ. ನಂತರ ನಿಮ್ಮ ಕೂದಲನ್ನು ತೊಳೆಯದೆ ಅತ್ಯಂತ ಆರೋಗ್ಯಕರವಾಗಿರಬಹುದು.” ಎಂದು ನಿಕ್ ಹೇಳಿದ್ದಾರೆ.

ಆತನ ಈ ಅಭಿಪ್ರಾಯಕ್ಕೆ ಸಾಕಷ್ಟು ಪರ-ವಿರೋಧದ ಚರ್ಚೆಗಳು ಶುರುವಾಗಿವೆ. ತಲೆಸ್ನಾನ ಮಾಡದಿದ್ದರೆ ಕೂದಲು ಆರೋಗ್ಯದಿಂದಿರಲು ಹೇಗೆ ಸಾಧ್ಯ? ಕೂದಲು ಬೆವರಿ ಗಬ್ಬುವಾಸನೆ ಬರುವುದಿಲ್ಲವೇ? ಎಂದು ಕೂಡ ಹಲವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Hair Care: ಕೂದಲಿಗೆ ಆಲಿವ್ ಎಣ್ಣೆ ಏಕೆ ಒಳ್ಳೆಯದು ಗೊತ್ತಾ..!

Splits Hair: ಸ್ಲ್ಪಿಟ್ ಆಗಿರುವ ಕೂದಲಿಗೆ ಮನೆ ಮದ್ದು ಇಲ್ಲಿದೆ

Published On - 1:05 pm, Sun, 10 April 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್