‘ದಯವಿಟ್ಟು ಕಾಫಿ ವಿತ್ ಕರಣ್​ ಶೋಗೆ ಬನ್ನಿ’; ಸೆಲೆಬ್ರಿಟಿಗಳಿಗೆ ಕರೆ ಮಾಡಿ ಬೇಡಿದ ಕರಣ್ ಜೋಹರ್

ಕರಣ್​ ಜೋಹರ್ ಅವರು ಯಶಸ್ವಿಯಾಗಿ ‘ಕಾಫಿ ವಿತ್ ಕರಣ್​’ ಶೋನ ಆರು ಸೀಸನ್​ಗಳನ್ನು ಪೂರೈಸಿದ್ದಾರೆ. ಈಗ ಏಳನೇ ಸೀಸನ್ ಡಿಸ್ನಿ+ ಹಾಟ್​ಸ್ಟಾರ್​ನಲ್ಲಿ ಪ್ರಸಾರ ಆಗುತ್ತಿದೆ.

‘ದಯವಿಟ್ಟು ಕಾಫಿ ವಿತ್ ಕರಣ್​ ಶೋಗೆ ಬನ್ನಿ’; ಸೆಲೆಬ್ರಿಟಿಗಳಿಗೆ ಕರೆ ಮಾಡಿ ಬೇಡಿದ ಕರಣ್ ಜೋಹರ್
ಕರಣ್
Follow us
| Updated By: ರಾಜೇಶ್ ದುಗ್ಗುಮನೆ

Updated on: Jun 28, 2022 | 4:49 PM

ಕರಣ್ ಜೋಹರ್ (Karan Johar) ಅವರಿಗೆ ಬಾಲಿವುಡ್​ನಲ್ಲಿ ಬಹುಬೇಡಿಕೆ ಇದೆ. ಅವರು ನಿರ್ಮಾಪಕನಾಗಿ, ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ಬಾಲಿವುಡ್​ನಲ್ಲಿ ಅವರ ಮಾತು ನಡೆಯುತ್ತದೆ. ಅವರು ಪಾರ್ಟಿ ಆಯೋಜನೆ ಮಾಡಿದರೆ ಸಾಕು, ಇಡೀ ಬಾಲಿವುಡ್​ ಈ ಪಾರ್ಟಿಗೆ ಹಾಜರಿ ಹಾಕುತ್ತದೆ. ಅಷ್ಟರ ಮಟ್ಟಿಗೆ ಕರಣ್ ಜೋಹರ್ ಫೇಮಸ್. ಈಗ ಕರಣ್ ಜೋಹರ್ ನಡೆಸಿಕೊಡುತ್ತಿರುವ ‘ಕಾಫಿ ವಿತ್ ಕರಣ್​’ ಶೋನ (Koffee With Karan Chat Show) ಏಳನೇ ಸೀಸನ್ ಬರುತ್ತಿದೆ. ಈ ಚಾಟ್ ಶೋಗೆ ಬರುವಂತೆ ಸೆಲೆಬ್ರಿಟಿಗಳ ಎದುರು ಬೇಡುವ ಪರಿಸ್ಥಿತಿ ಕರಣ್​ಗೆ ಬಂದಿದೆ. ಈ ಫನ್ನಿ ಪ್ರೋಮೋ ಸಖತ್ ವೈರಲ್ ಆಗುತ್ತಿದೆ.

ಕರಣ್​ ಜೋಹರ್ ಅವರು ಯಶಸ್ವಿಯಾಗಿ ‘ಕಾಫಿ ವಿತ್ ಕರಣ್​’ ಶೋನ ಆರು ಸೀಸನ್​ಗಳನ್ನು ಪೂರೈಸಿದ್ದಾರೆ. ಈಗ ಏಳನೇ ಸೀಸನ್ ಡಿಸ್ನಿ+ ಹಾಟ್​ಸ್ಟಾರ್​ನಲ್ಲಿ ಪ್ರಸಾರ ಆಗುತ್ತಿದೆ. ಜುಲೈ 7ರಿಂದ ಈ ಶೋ ಪ್ರಸಾರ ಆರಂಭಿಸಲಿದೆ. ಇದಕ್ಕೆ ಈಗಾಗಲೇ ಪ್ರಮೋಷನ್ ಕಾರ್ಯಗಳು ಆರಂಭವಾಗಿದೆ. ಇದರ ಹೊಸ ಪ್ರೋಮೋ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ
Image
ಶಾರುಖ್-ಕರಣ್ ಸಂಬಂಧದ ಬಗ್ಗೆ ಹುಟ್ಟಿತ್ತು ಅನುಮಾನ; ಎಲ್ಲವನ್ನೂ ವಿವರಿಸಿದ್ದ ಜೋಹರ್  
Image
‘ನಾವು ‘ಕೆಜಿಎಫ್​’ ರೀತಿಯ ಸಿನಿಮಾ ಮಾಡಿದ್ರೆ ಕಟು ಟೀಕೆ ವ್ಯಕ್ತವಾಗುತ್ತಿತ್ತು’: ಕರಣ್​ ಜೋಹರ್​ ಆರೋಪ
Image
‘ನನ್ನನ್ನೇಕೆ ದೂಷಿಸುತ್ತೀರಿ?’; ಏಕಾಏಕಿ ಸಿಟ್ಟಾದ ನಿರ್ಮಾಪಕ ಕರಣ್​ ಜೋಹರ್
Image
‘ಇಂಥ ಕೆಲಸ ಮಾಡ್ಬೇಡಿ’: ಎಲ್ಲರ ಎದುರು ಕರಣ್​ ಜೋಹರ್​ಗೆ ಅನಿಲ್​ ಕಪೂರ್ ವಾರ್ನಿಂಗ್​; ವಿಡಿಯೋ ವೈರಲ್​​

ಡಿಸ್ನಿ+ ಹಾಟ್​ಸ್ಟಾರ್ ಹಂಚಿಕೊಂಡಿರುವ ಪ್ರೋಮೋದಲ್ಲಿ ‘ನನ್ನ ಶೋಗಾಗಿ ಎಲ್ಲರೂ ಕಾದಿದ್ದಾರೆ’ ಎಂದು ಹೇಳುತ್ತಾರೆ ಕರಣ್. ಸೋಶಿಯಲ್ ಮೀಡಿಯಾದಲ್ಲಿ ‘ಕಾಫಿ ವಿತ್​ ಕರಣ್​’ ಶೋ ಬಗ್ಗೆ ಕಾಣಿಸಿದ ನೆಗೆಟಿವ್ ಕಾಮೆಂಟ್​ಗಳನ್ನು ತೋರಿಸಲಾಗುತ್ತದೆ. ‘ಎಲ್ಲರೂ ಅಲ್ಲ, ಆದರೆ, ಸೆಲೆಬ್ರಿಟಿಗಳೆಲ್ಲರೂ ನನ್ನ ಶೋಗೆ ಬರೋಕೆ ಇಷ್ಟಪಡುತ್ತಾರೆ’ ಎಂದು ಹೇಳುತ್ತಾರೆ ಕರಣ್​. ಈ ಬೆನ್ನಲ್ಲೇ ಅವರು ಸೆಲೆಬ್ರಿಟಿಗಳಿಗೆ ಕರೆ ಮಾಡಿ ತಮ್ಮ ಶೋಗೆ ಬರುವಂತೆ ಬೇಡಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ಎರಡು ಹ್ಯಾಂಪರ್, ಸಿನಿಮಾದಲ್ಲಿ ಆಫರ್ ನೀಡುವ ಆಮಿಷ ಒಡ್ಡುತ್ತಾರೆ. ಆದರೆ, ಯಾರೊಬ್ಬರೂ ಈ ಶೋಗೆ ಬರೋಕೆ ಆಸಕ್ತಿ ತೋರುವುದಿಲ್ಲ. ಈ ಪ್ರೋಮೋ ಸಖತ್ ಫನ್ನಿ ಆಗಿದೆ.

‘ಕಾಫಿ ವಿತ್ ಕರಣ್’ ಮೊದಲ ಸೀಸನ್ ಪ್ರಸಾರವಾಗಿದ್ದು 2004ರಲ್ಲಿ. ಇದೇ ಮೊದಲ ಬಾರಿಗೆ ಈ ಶೋ ಟಿವಿಯಲ್ಲಿ ಪ್ರಸಾರವಾಗದೆ ಒಟಿಟಿಯಲ್ಲಿ ಟೆಲಿಕಾಸ್ಟ್​ ಆಗುತ್ತಿದೆ. ಈ ಬಾರಿ ದಕ್ಷಿಣದ ಕಲಾವಿದರಾದ ಸಮಂತಾ, ವಿಜಯ್ ದೇವರಕೊಂಡ ಮೊದಲಾದವರು ಈ ಶೋನಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಈ ಶೋನಲ್ಲಿ ಕೆಲ ಪ್ರಶ್ನೆಗಳು ತುಂಬಾನೇ ನೇರವಾಗಿರುತ್ತದೆ. ಇದರಿಂದ ವಿವಾದಗಳು ಹೊತ್ತಿಕೊಂಡಿದ್ದೂ ಇದೆ. ರಣಬೀರ್ ಕಪೂರ್ ಅವರು ಈ ಶೋ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಸಲ್ಮಾನ್ ಖಾನ್, ಶಾರುಖ್ ಸೇರಿ ಅನೇಕರು ಈ ಶೋನಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: ನಿರ್ಮಾಪಕ ಕರಣ್ ಜೋಹರ್​​ನಿಂದ ಐದು ಕೋಟಿ ರೂಪಾಯಿ ಸುಲಿಗೆ ಮಾಡಲು ನಡೆದಿತ್ತು ಪ್ಲ್ಯಾನ್​

ಶಾರುಖ್-ಕರಣ್ ಸಂಬಂಧದ ಬಗ್ಗೆ ಹುಟ್ಟಿತ್ತು ಅನುಮಾನ; ಎಲ್ಲವನ್ನೂ ವಿವರಿಸಿದ್ದ ಜೋಹರ್  

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ