ಶಾರುಖ್-ಕರಣ್ ಸಂಬಂಧದ ಬಗ್ಗೆ ಹುಟ್ಟಿತ್ತು ಅನುಮಾನ; ಎಲ್ಲವನ್ನೂ ವಿವರಿಸಿದ್ದ ಜೋಹರ್  

ಕರಣ್ ಜೋಹರ್ ಹಾಗೂ ಶಾರುಖ್ ಖಾನ್ ಹಲವು ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ಇವರ ನಡುವೆ ಒಳ್ಳೆಯ ಫ್ರೆಂಡ್​ಶಿಪ್​ ಇದೆ. ಆದರೆ, ಇದನ್ನು ಕೆಲವರು ಬೇರೆಯದೇ ರೀತಿಯಲ್ಲಿ ಅರ್ಥೈಸಿದ್ದರು.

ಶಾರುಖ್-ಕರಣ್ ಸಂಬಂಧದ ಬಗ್ಗೆ ಹುಟ್ಟಿತ್ತು ಅನುಮಾನ; ಎಲ್ಲವನ್ನೂ ವಿವರಿಸಿದ್ದ ಜೋಹರ್  
ಶಾರುಖ್​-ಕರಣ್
TV9kannada Web Team

| Edited By: Rajesh Duggumane

Jun 25, 2022 | 9:48 PM

ಕರಣ್ ಜೋಹರ್ (Karan Johar) ಬಾಲಿವುಡ್​ನ ಖ್ಯಾತ ನಿರ್ಮಾಪಕರಲ್ಲಿ ಒಬ್ಬರು. ಅವರು ತುಂಬ ಪ್ರಭಾವಿ ಕೂಡ ಹೌದು. ಸ್ಟಾರ್ ಮಕ್ಕಳನ್ನು ಚಿತ್ರರಂಗಕ್ಕೆ ಪರಿಚಯಿಸುವುದರಲ್ಲಿ ಸದಾ ಮುಂದಿರುತ್ತಾರೆ. ಚಿತ್ರರಂಗದ ಖ್ಯಾತ ನಾಮರಿಗೆ ಮಾತ್ರ ಅವರು ಬೆಂಬಲ ನೀಡುತ್ತಾರೆ ಎನ್ನುವ ಆರೋಪ ಮೊದಲಿನಿಂದಲೂ ಇದೆ. ಆದರೆ, ಈ ಬಗ್ಗೆ ಅವರು ತಲೆಕೆಡಿಸಿಕೊಂಡಿಲ್ಲ. ಸ್ಟಾರ್ ನಟರು ಹಾಗೂ ಅವರ ಮಕ್ಕಳ ಚಿತ್ರಕ್ಕೆ ಬಂಡವಾಳ ಹೂಡುವುದನ್ನು ಮುಂದುವರಿಸಿದ್ದಾರೆ. ಕರಣ್ ಜೋಹರ್ ಹಾಗೂ ಶಾರುಖ್ ಖಾನ್ (Shah Rukh Khan) ನಡುವೆ ಬೇರೆಯದೇ ರೀತಿಯ ಸಂಬಂಧ ಇದೆ ಎನ್ನುವ ವದಂತಿ ಈ ಮೊದಲು ಹುಟ್ಟಿಕೊಂಡಿತ್ತು. ಇದಕ್ಕೆ ಸ್ವತಃ ಕರಣ್ ಸ್ಪಷ್ಟನೆ ನೀಡಿದ್ದರು.

ಕರಣ್ ಜೋಹರ್ ಹಾಗೂ ಶಾರುಖ್ ಖಾನ್ ಹಲವು ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ಇವರ ನಡುವೆ ಒಳ್ಳೆಯ ಫ್ರೆಂಡ್​ಶಿಪ್​ ಇದೆ. ಆದರೆ, ಇದನ್ನು ಕೆಲವರು ಬೇರೆಯದೇ ರೀತಿಯಲ್ಲಿ ಅರ್ಥೈಸಿದ್ದರು. ಇದು ಶಾರುಖ್ ಕಿವಿಗೂ ಬಿದ್ದಿತ್ತು. ಈ ವದಂತಿಗಳ ಬಗ್ಗೆ ಅವರು ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ. ಆದರೆ, ಕರಣ್ ಜೋಹರ್ ಅವರು ಹೆಚ್ಚು ದಿನ ಇದನ್ನು ಸಹಿಸಿಕೊಳ್ಳಲಿಲ್ಲ. ಈ ಬಗ್ಗೆ ಅವರು ಮೌನ ಮುರಿದಿದ್ದರು.

ಕರಣ್ ಜೋಹರ್ ಆಟೋಬಯೋಗ್ರಫಿ ಬರೆದಿದ್ದಾರೆ. ಈ ಪುಸ್ತಕದಲ್ಲಿ ಒಂದಷ್ಟು ಸಾಲುಗಳನ್ನು ಅವರು ಈ ವಿಚಾರದ ಬಗ್ಗೆ ಬರೆಯಲು ಮೀಸಲಿಟ್ಟಿದ್ದರು. ‘ಇಂದು ಪ್ರಪಂಚದಲ್ಲಿರುವ ಎಲ್ಲ ಲೈಂಗಿಕತೆಯನ್ನು ಹೊಂದಲು ನನ್ನ ಬಳಿ ಮಾರ್ಗಗಳಿವೆ ಎಂದು ಜನರು ಭಾವಿಸುತ್ತಾರೆ. ಆದರೆ ಹಾಗಲ್ಲ. ನನಗೆ ಸೆಕ್ಸ್ ಎಂಬುದು ತುಂಬಾ ವೈಯಕ್ತಿಕ ಭಾವನೆ. ಇದು ಕ್ಯಾಶ್ಯುವಲ್ ಆಗಿ ಮಾಡುವ ವಿಷಯವಲ್ಲ. ನನ್ನ ಬಗ್ಗೆ ಕೇಳಿ ಬಂದ ವದಂತಿಗಳನ್ನು ನಾನು ಯಾವಾಗಲೂ ನಿಭಾಯಿಸಿದ್ದೇನೆ’ ಎನ್ನುವ ಮೂಲಕ ಪರೋಕ್ಷವಾಗಿ ಎಲ್ಲದಕ್ಕೂ ಅವರು ತೆರೆ ಎಳೆದಿದ್ದರು.

‘ನನ್ನ ಲೈಂಗಿಕತೆಯ ಬಗ್ಗೆ ತುಂಬಾ ಊಹಾಪೋಹಗಳಿವೆ. ಶಾರುಖ್ ಮತ್ತು ನನ್ನ ಬಗ್ಗೆಯೂ ಸಾಕಷ್ಟು ವದಂತಿಗಳು ಹುಟ್ಟಿಕೊಂಡಿವೆ. ನಾನು ಅದರಿಂದ ಆಘಾತಕ್ಕೊಳಗಾಗಿದ್ದೆ. ಹಿಂದಿ ವಾಹಿನಿಯೊಂದರ ಶೋನಲ್ಲಿ ಶಾರುಖ್ ಬಗ್ಗೆ ನನ್ನಲ್ಲಿ ಕೇಳಲಾಯಿತು. ‘ನಿಮ್ಮಿಬ್ಬರ ಸಂಬಂಧ ಹೇಗಿದೆ’ ಎಂದು ಅವರು ಪ್ರಶ್ನೆ ಮಾಡಿದರು. ನನಗೆ ಕೋಪ ಬಂತು. ‘ನೀವು ನಿಮ್ಮ ಸಹೋದರನೊಂದಿಗೆ ಮಲಗುತ್ತೀರಾ ಎಂದು ನಾನು ನಿಮ್ಮನ್ನು ಕೇಳಿದರೆ ನಿಮಗೆ ಹೇಗೆ ಅನಿಸುತ್ತದೆ?’ ಎಂದು ಅವರನ್ನು ಪ್ರಶ್ನಿಸಿದೆ. ಶಾರುಖ್​ ನನಗೆ ಓರ್ವ ತಂದೆ, ಓರ್ವ ಅಣ್ಣ ಇದ್ದ ಹಾಗೆ’ ಎಂದು ಬರೆದುಕೊಂಡಿದ್ದರು ಕರಣ್.

ಇದನ್ನೂ ಓದಿ: ಕರಣ್ ಜೋಹರ್ ಪಾರ್ಟಿ ಎಫೆಕ್ಟ್​; ಶಾರುಖ್​, ಕತ್ರಿನಾಗೆ ಕೊರೊನಾ ಪಾಸಿಟಿವ್

ಇದನ್ನೂ ಓದಿ

ನಿರ್ಮಾಪಕ ಕರಣ್ ಜೋಹರ್​​ನಿಂದ ಐದು ಕೋಟಿ ರೂಪಾಯಿ ಸುಲಿಗೆ ಮಾಡಲು ನಡೆದಿತ್ತು ಪ್ಲ್ಯಾನ್​

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada