AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಳ ಉಡುಪು ಹಾಕದೆ ರಸ್ತೆಗಿಳಿದ ಪೂನಂ ಪಾಂಡೆ; ಪ್ರದರ್ಶನವಾಯ್ತು ಖಾಸಗಿ ಅಂಗ

ಸೋಶಿಯಲ್ ಮೀಡಿಯಾದಲ್ಲಿ ನಟಿಯರು ಎಷ್ಟೇ ಬೋಲ್ಡ್ ಫೋಟೋಗಳನ್ನು ಹಾಕಬಹುದು. ಆದರೆ, ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಅವರು ಕೊಂಚ ಸಭ್ಯತೆ ತೋರಲಿ ಎಂದು ಫ್ಯಾನ್ಸ್ ನಿರೀಕ್ಷಿಸುತ್ತಾರೆ.

ಒಳ ಉಡುಪು ಹಾಕದೆ ರಸ್ತೆಗಿಳಿದ ಪೂನಂ ಪಾಂಡೆ; ಪ್ರದರ್ಶನವಾಯ್ತು ಖಾಸಗಿ ಅಂಗ
ಪೂನಂ ಪಾಂಡೆ
TV9 Web
| Updated By: ರಾಜೇಶ್ ದುಗ್ಗುಮನೆ|

Updated on:Jun 26, 2022 | 11:07 AM

Share

ನಟಿ ಪೂನಂ ಪಾಂಡೆ (Poonam Pandey) ಸದಾ ಸುದ್ದಿಯಲ್ಲಿರುತ್ತಾರೆ. ಅವರು ಸಿನಿಮಾಗಿಂತ (Cinema) ವೈಯಕ್ತಿಕ ವಿಚಾರಗಳಿಂದ ಗಮನ ಸೆಳೆಯುವುದೇ ಹೆಚ್ಚು. ವಿವಾದಗಳ ಮೂಲಕ ಅವರು ಸದಾ ಸುದ್ದಿಯಲ್ಲಿರುತ್ತಾರೆ. ಈಗ ಪೂನಂ ಪಾಂಡೆ ಕ್ರಾಪ್ ಟಾಪ್ ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಇಷ್ಟೇ ಆಗಿದ್ದರೆ ಈ ವಿಚಾರ ಅಷ್ಟು ಚರ್ಚೆ ಆಗುತ್ತಿರಲಿಲ್ಲ. ಆದರೆ, ಈ ಸಂದರ್ಭದಲ್ಲಿ ಅವರು ಒಳಉಡುಪು ಹಾಕಿರಲಿಲ್ಲ. ಹೀಗಾಗಿ, ಖಾಸಗಿ ಅಂಗ ಸಾರ್ವಜನಿಕವಾಗಿಯೇ ಪ್ರದರ್ಶನವಾಗಿದೆ. ಈ ಬಗ್ಗೆ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ನಟಿಯರು ಎಷ್ಟೇ ಬೋಲ್ಡ್ ಫೋಟೋಗಳನ್ನು ಹಾಕಬಹುದು. ಆದರೆ, ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಅವರು ಕೊಂಚ ಸಭ್ಯತೆ ತೋರಲಿ ಎಂದು ಫ್ಯಾನ್ಸ್ ನಿರೀಕ್ಷಿಸುತ್ತಾರೆ. ಆದರೆ, ಕೆಲವರು ಈ ವಿಚಾರವನ್ನು ಗಮನಕ್ಕೆ ತೆಗೆದುಕೊಳ್ಳುವುದೇ ಇಲ್ಲ. ತಮ್ಮ ಇಷ್ಟ ಬಂದ ರೀತಿಯ ಡ್ರೆಸ್ ಹಾಕಿ ಕಾಣಿಸಿಕೊಳ್ಳುತ್ತಾರೆ. ಈ ವೇಳೆ ಆಗುವ ಅಚಾತುರ್ಯದಿಂದ ಟ್ರೋಲ್ ಆಗುತ್ತಾರೆ. ಈಗ ಪೂನಂ ಪಾಂಡೆಗೆ ಆಗಿದ್ದೂ ಇದೇ.

ಇದನ್ನೂ ಓದಿ
Image
ಸಾರ್ವಜನಿಕ ಸ್ಥಳದಲ್ಲಿ ನಟಿಯ ಬೆತ್ತಲೆ ಫೋಟೋಶೂಟ್​ ಕೇಸ್​; ಪೂನಂ ಪಾಂಡೆ ವಿರುದ್ಧ ಚಾರ್ಜ್​ಶೀಟ್​ ಸಲ್ಲಿಕೆ
Image
‘ರಿಲೇಷನ್​ಶಿಪ್​​ನಲ್ಲಿದ್ದ 4 ವರ್ಷ ಸರಿಯಾಗಿ ನಿದ್ರಿಸಿಲ್ಲ, ಸಾಯುವ ಪ್ರಯತ್ನವೂ ನಡೆದಿತ್ತು’; ಎಲ್ಲವನ್ನೂ ಹೇಳಿಕೊಂಡ ನಟಿ
Image
‘ಗಂಡ ಹಗಲು-ರಾತ್ರಿ ಕುಡಿದು, ತಲೆಗೆ ಹೊಡಿತಿದ್ದ’; ಲಾಕಪ್​ ಶೋನಲ್ಲಿ ಕಷ್ಟ ತೋಡಿಕೊಂಡ ಪೂನಂ ಪಾಂಡೆ
Image
‘ಕೆಲಸ ಇಲ್ಲ ಅಂತ ವಿವಾದ ಮಾಡಿಕೊಂಡೆ’; ಎಲ್ಲವನ್ನೂ ಒಪ್ಪಿಕೊಂಡ ಕಾಂಟ್ರವರ್ಸಿ ನಟಿ ಪೂನಂ ಪಾಂಡೆ

ಪೂನಂ ಪಾಂಡೆ ಅವರು ಮುಂಬೈನಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಈ ವೇಳೆ ಒಳ ಉಡುಪು ಧರಿಸದೇ ಕ್ರಾಪ್ ಟಾಪ್ ಹಾಕಿದ್ದರು. ಇದು ಅವರ ಫ್ಯಾನ್ಸ್ ಗಮನಕ್ಕೆ ಬಂದಿದೆ. ಈ ಬಗ್ಗೆ ಅಭಿಮಾನಿಗಳು ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

‘ಸ್ವಲ್ಪವಾದರೂ ಗೌರವ ಉಳಿಸಿಕೊಳ್ಳಿ’ ಎಂದು ಕೆಲವರು ಕಮೆಂಟ್ ಮಾಡಿದರೆ ಇನ್ನೂ ಕೆಲವರು, ‘ನಾವು ನಿಮ್ಮ ಅಭಿಮಾನಿಗಳು ಹೌದು. ಆದರೆ, ದಯವಿಟ್ಟು ಈ ರೀತಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳಬೇಡಿ’ ಎಂದು ಬರೆದುಕೊಂಡಿದ್ದಾರೆ. ಈ ಮೊದಲು ಕೂಡ ಇದೇ ರೀತಿಯ ವಿಚಾರಕ್ಕೆ ಪೂನಂ ಸುದ್ದಿ ಆಗಿದ್ದರು. ಬೋಲ್ಡ್ ಲುಕ್​ನಲ್ಲಿ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಿದೆ.

ಪೂನಂ ಬೆರಳೆಣಿಕೆಯ ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದಾರೆ. ಅಲ್ಲೊಂದು ಇಲ್ಲೊಂದು ಸಿನಿಮಾ ಮಾಡಿದ್ದಾರೆ. ಈ ವರ್ಷ ಒಟಿಟಿಯಲ್ಲಿ ಪ್ರಸಾರವಾದ ‘ಲಾಕಪ್​’ ಶೋನಲ್ಲಿ ಪೂನಂ ಪಾಂಡೆ ಕಾಣಿಸಿಕೊಂಡಿದ್ದರು. ಇಲ್ಲಿ ಹಲವು ವಿಚಾರಗಳನ್ನು ಅವರು ಹೇಳಿಕೊಂಡು ಕಣ್ಣೀರು ಹಾಕಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಪೂನಂ ಪಾಂಡೆ ಆ್ಯಕ್ಟೀವ್ ಆಗಿದ್ದಾರೆ.

ಇದನ್ನೂ ಓದಿ: ‘ಗಂಡ ಹಗಲು-ರಾತ್ರಿ ಕುಡಿದು, ತಲೆಗೆ ಹೊಡಿತಿದ್ದ’; ಲಾಕಪ್​ ಶೋನಲ್ಲಿ ಕಷ್ಟ ತೋಡಿಕೊಂಡ ಪೂನಂ ಪಾಂಡೆ

ಸಾರ್ವಜನಿಕ ಸ್ಥಳದಲ್ಲಿ ನಟಿಯ ಬೆತ್ತಲೆ ಫೋಟೋಶೂಟ್​ ಕೇಸ್​; ಪೂನಂ ಪಾಂಡೆ ವಿರುದ್ಧ ಚಾರ್ಜ್​ಶೀಟ್​ ಸಲ್ಲಿಕೆ

Published On - 7:39 am, Sun, 26 June 22