ಸಾರ್ವಜನಿಕ ಸ್ಥಳದಲ್ಲಿ ನಟಿಯ ಬೆತ್ತಲೆ ಫೋಟೋಶೂಟ್​ ಕೇಸ್​; ಪೂನಂ ಪಾಂಡೆ ವಿರುದ್ಧ ಚಾರ್ಜ್​ಶೀಟ್​ ಸಲ್ಲಿಕೆ

Poonam Pandey: ಪೂನಂ ಪಾಂಡೆ ಮತ್ತು ಮಾಜಿ ಪತಿ ಸ್ಯಾಮ್​ ಬಾಂಬೆ ಅವರು ಚಾಪೋಲಿ ಡ್ಯಾಮ್​ಗೆ ತೆರಳಿದ್ದರು. ಅಲ್ಲಿ ಎಲ್ಲರ ಎದುರು ಬೆತ್ತಲೆ ಫೋಟೋಶೂಟ್​ ಮಾಡಿದ್ದರು.

ಸಾರ್ವಜನಿಕ ಸ್ಥಳದಲ್ಲಿ ನಟಿಯ ಬೆತ್ತಲೆ ಫೋಟೋಶೂಟ್​ ಕೇಸ್​; ಪೂನಂ ಪಾಂಡೆ ವಿರುದ್ಧ ಚಾರ್ಜ್​ಶೀಟ್​ ಸಲ್ಲಿಕೆ
ಪೂನಂ ಪಾಂಡೆ
Follow us
TV9 Web
| Updated By: ಮದನ್​ ಕುಮಾರ್​

Updated on: Jun 01, 2022 | 9:21 AM

ನಟಿ ಪೂನಂ ಪಾಂಡೆ (Poonam Pandey) ಅವರು ಸಿನಿಮಾಗಳಿಗಿಂತಲೂ ವಿವಾದಗಳಿಂದಲೇ ಹೆಚ್ಚು ಫೇಮಸ್​. ವೃತ್ತಿ ಬದುಕಿನಲ್ಲಿ ಮಾತ್ರವಲ್ಲದೇ ವೈಯಕ್ತಿಕ ಜೀವನದಲ್ಲೂ ಅವರು ಹತ್ತಾರು ಕಿರಿಕ್​ ಮಾಡಿಕೊಂಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಹಲವು ಬೋಲ್ಡ್​ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಅವರು ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತಾರೆ. ಆದರೆ ಅದೇ ಈಗ ಪೂನಂ ಪಾಂಡೆಗೆ ಮುಳುವಾಗಿದೆ. ಎರಡು ವರ್ಷಗಳ ಹಿಂದೆ ಸಾರ್ವಜನಿಕವಾಗಿ ಬೆತ್ತಲೆ ಫೋಟೋಶೂಟ್​ ಮಾಡಿದ್ದ ಅವರ ವಿರುದ್ಧ ಗೋವಾ ಪೊಲೀಸರು ಚಾರ್ಜ್​ಶೀಟ್​ (Chargesheet) ಸಲ್ಲಿಕೆ ಮಾಡಿದ್ದಾರೆ. ಈ ಫೋಟೋಶೂಟ್​ ನಡೆದಾಗ ಅವರ ಜೊತೆ ಪತಿ ಸ್ಯಾಮ್​ ಬಾಂಬೆ (Sam Bombay) ಕೂಡ ಇದ್ದರು. ಹಾಗಾಗಿ ಅವರ ಹೆಸರು ಕೂಡ ಚಾರ್ಜ್​ಶೀಟ್​ನಲ್ಲಿ ಉಲ್ಲೇಖ ಆಗಿದೆ. ಮದುವೆ ಆದ ಕೆಲವೇ ದಿನಗಳಲ್ಲಿ ಈ ಜೋಡಿಯ ನಡುವೆ ವೈಮನಸ್ಸು ಮೂಡಿದ್ದರಿಂದ ಇಬ್ಬರೂ ಬೇರೆ ಬೇರೆ ಆದರು. ಈಗ ಇಬ್ಬರಿಗೂ ಕಾನೂನಿಕ ಸಂಕಷ್ಟ ಎದುರಾಗಿದೆ.

2022ರಲ್ಲಿ ಪೂನಂ ಪಾಂಡೆ ಮತ್ತು ಸ್ಯಾಮ್​ ಬಾಂಬೆ ಅವರು ಚಾಪೋಲಿ ಡ್ಯಾಮ್​ಗೆ ತೆರಳಿದ್ದರು. ಅಲ್ಲಿ ಎಲ್ಲರ ಎದುರು ಬೆತ್ತಲೆ ಫೋಟೋಶೂಟ್​ ಮಾಡಿದ್ದರು. ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲವಾಗಿ ನಡೆದುಕೊಂಡಿದ್ದರಿಂದ ಅವರ ವಿರುದ್ಧ ಕೇಸ್​ ದಾಖಲಾಗಿತ್ತು. ಆ ಸಂದರ್ಭದ ಕೆಲವು ವಿಡಿಯೋ ಮತ್ತು ಫೋಟೋಗಳು ಕೂಡ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದವು. ಇಬ್ಬರನ್ನೂ ಬಂಧಿಸಿ, ನಂತರ ಬಿಡುಗಡೆ ಮಾಡಲಾಗಿತ್ತು.

ಈ ಕೇಸ್​ನಲ್ಲಿ ಅನೇಕ ವ್ಯಕ್ತಿಗಳ ಹೇಳಿಕೆಗಳನ್ನು ದಾಖಲು ಮಾಡಿಕೊಳ್ಳಲಾಗಿದೆ. 39 ಜನರು ನ್ಯಾಯಾಲಯದಲ್ಲಿ ಸಾಕ್ಷಿ ಹೇಳಲಿದ್ದಾರೆ ಎಂದು ಪೊಲೀಸರು ತಿಳಿಸಿರುವುದಾಗಿ ಹಲವೆಡೆ ವರದಿ ಆಗಿದೆ. ಕನ್ನಡದ ‘ಲವ್​ ಈಸ್​ ಪಾಯಿಸನ್​’ ಸಿನಿಮಾದಲ್ಲಿ ಪೂನಂ ಪಾಂಡೆ ನಟಿಸಿದ್ದಾರೆ. ಹಿಂದಿ, ತೆಲುಗು, ಭೋಜ್​ಪುರಿ ಭಾಷೆಯ ಚಿತ್ರಗಳಲ್ಲೂ ಅವರು ಅಭಿನಯಿಸಿದ್ದಾರೆ. ಸಿನಿಮಾಗಳಿಗಿಂತಲೂ ವಿವಾದದಿಂದಲೇ ಅವರು ಹೆಚ್ಚು ಸುದ್ದಿ ಆಗುತ್ತಾರೆ.

ಇದನ್ನೂ ಓದಿ
Image
‘ಗಂಡ ಹಗಲು-ರಾತ್ರಿ ಕುಡಿದು, ತಲೆಗೆ ಹೊಡಿತಿದ್ದ’; ಲಾಕಪ್​ ಶೋನಲ್ಲಿ ಕಷ್ಟ ತೋಡಿಕೊಂಡ ಪೂನಂ ಪಾಂಡೆ
Image
‘ಕೆಲಸ ಇಲ್ಲ ಅಂತ ವಿವಾದ ಮಾಡಿಕೊಂಡೆ’; ಎಲ್ಲವನ್ನೂ ಒಪ್ಪಿಕೊಂಡ ಕಾಂಟ್ರವರ್ಸಿ ನಟಿ ಪೂನಂ ಪಾಂಡೆ
Image
‘ನಾನು ಅಶ್ಲೀಲ ಸಿನಿಮಾ ಮಾಡಿಲ್ಲ, ಮುಖ ಮುಚ್ಕೊಂಡು ಓಡಾಡಲ್ಲ’; ಮೌನ ಮುರಿದ ರಾಜ್​ ಕುಂದ್ರಾ
Image
ಮಾದಕ ನಟಿ ಪೂನಂ ಪಾಂಡೆ ಆಸ್ಪತ್ರೆಗೆ ದಾಖಲು; ಪತಿಯನ್ನು ಬಂಧಿಸಿದ ಪೊಲೀಸರು

ರಿಯಾಲಿಟಿ ಶೋಗಳಲ್ಲೂ ಭಾಗವಹಿಸುವ ಮೂಲಕ ಪೂನಂ ಪಾಂಡೆ ಅವರು ಖ್ಯಾತಿ ಗಳಿಸಿದ್ದಾರೆ. ‘ಫಿಯರ್​ ಫ್ಯಾಕ್ಟರ್​: ಖತ್ರೋಂಕೆ ಕಿಲಾಡಿ 4’ ಶೋನಲ್ಲಿ ಅವರು ಸ್ಪರ್ಧಿಸಿದ್ದರು. ಕಂಗನಾ ರಣಾವತ್ ನಡೆಸಿಕೊಟ್ಟ ‘ಲಾಕ್​ ಅಪ್​’ ಶೋನಲ್ಲಿ ಭಾಗವಹಿಸುವ ಮೂಲಕವೂ ಪೂನಂ ಪಾಂಡೆ ಫೇಮಸ್​ ಆಗಿದ್ದಾರೆ. ಇತ್ತೀಚೆಗಷ್ಟೇ ಈ ಕಾರ್ಯಕ್ರಮ ಮುಕ್ತಾಯ ಆಗಿದೆ. ಪೂನಂ ಪಾಂಡೆ ತಮ್ಮದೇ ಮೊಬೈಲ್​ ಆಪ್​ ಹೊಂದಿದ್ದರು. ಬಳಿಕ ಅದನ್ನು ಗೂಗಲ್​ ಬ್ಯಾನ್​ ಮಾಡಿತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ