KK Death: ಸಾವಿಗಿಂತ ಕೆಲವೇ ನಿಮಿಷಗಳ ಮುನ್ನ ವೇದಿಕೆ ತೊರೆದಿದ್ದ ಗಾಯಕ ಕೆಕೆ; ಇಲ್ಲಿದೆ ವೈರಲ್​ ವಿಡಿಯೋ

KK Last Video: ಕೆಕೆ ಅವರ ಸಾವಿಗೆ ಸೂಕ್ತ ಕಾರಣ ಏನು ಎಂಬುದನ್ನು ತಿಳಿಯಲು ಮರಣೋತ್ತರ ಪರೀಕ್ಷೆಯ ವರದಿ ಬರಬೇಕಿದೆ. ಅದಕ್ಕೂ ಮುನ್ನವೇ ಹಲವು ಅನುಮಾನಗಳು ಹುಟ್ಟಿಕೊಂಡಿವೆ.

KK Death: ಸಾವಿಗಿಂತ ಕೆಲವೇ ನಿಮಿಷಗಳ ಮುನ್ನ ವೇದಿಕೆ ತೊರೆದಿದ್ದ ಗಾಯಕ ಕೆಕೆ; ಇಲ್ಲಿದೆ ವೈರಲ್​ ವಿಡಿಯೋ
ಗಾಯಕ ಕೆಕೆ
Follow us
TV9 Web
| Updated By: ಮದನ್​ ಕುಮಾರ್​

Updated on: Jun 01, 2022 | 10:48 AM

ಖ್ಯಾತ ಗಾಯಕ ಕೆಕೆ ಅವರ ನಿಧನದ (KK Death) ಹಿಂದೆ ಅನೇಕ ಅನುಮಾನಗಳು ಮೂಡಿವೆ. ಮಂಗಳವಾರ (ಮೇ 31) ಕೋಲ್ಕತ್ತಾದಲ್ಲಿ ಸಂಗೀತ ಕಾರ್ಯಕ್ರಮ ನೀಡುತ್ತಿದ್ದ ಅವರು ಏಕಾಏಕಿ ಅಸ್ವಸ್ಥರಾದರು. ಬಳಿಕ ಅವರಿಗೆ ಹೃದಯಾಘಾತ ಆಯಿತು ಎಂಬ ಪ್ರಾಥಮಿಕ ವರದಿ ಲಭ್ಯವಾಗಿದೆ. ಆದರೆ ಕೆಕೆ (ಕೃಷ್ಣಕುಮಾರ್​ ಕುನ್ನರ್​) ಅವರ ಸಾವಿಗೆ ನಿಜವಾದ ಕಾರಣ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ. ಕೆಕೆ ನಿಧನದ ಬಳಿಕ ಕೆಲವು ವಿಡಿಯೋಗಳು (KK viral Video) ವೈರಲ್​ ಆಗಿವೆ. ಕಾರ್ಯಕ್ರಮದ ಆಯೋಜಕರ ಎಡವಟ್ಟಿನಿಂದಲೇ ಈ ಸಾವು ಸಂಭವಿಸಿದೆಯೇ ಎಂಬ ಅನುಮಾನ ಕೂಡ ವ್ಯಕ್ತವಾಗುತ್ತಿದೆ. ವೇದಿಕೆಯಲ್ಲಿ ಹಾಡುವಾಗ ಕೆಕೆ ಅವರು ವಿಪರೀತ ಬೆವರುತ್ತಿದ್ದರು. ಅವರ ಆರೋಗ್ಯದಲ್ಲಿ ಏರುಪೇರು ಆಗುತ್ತಿದೆ ಎಂಬುದು ಗೊತ್ತಾಗುತ್ತಿದ್ದಂತೆಯೇ ಅವರನ್ನು ಹೋಟೆಲ್​ಗೆ ಕಳಿಸಿಕೊಡಲಾಯಿತು. ಕೆಕೆ (Krishnakumar Kunnath) ಅವರು ವೇದಿಕೆ ತೊರೆದ ಕೊನೇ ಕ್ಷಣದ ವಿಡಿಯೋ ಈಗ ವೈರಲ್​ ಆಗಿದೆ.

ತೀವ್ರವಾಗಿ ಸೆಕೆ ಆಗಿದ್ದರಿಂದ ಕೆಕೆ ಅವರು ಕಾರ್ಯಕ್ರಮದ ನಡುವೆ ಬ್ರೇಕ್​ ತೆಗೆದುಕೊಂಡಿದ್ದರು. ಮುಖ ಒರೆಸಿಕೊಂಡು ಅವರು ಮತ್ತೆ ಮೈಕ್​ ಹಿಡಿದರು. ಆದರೆ ಅಲ್ಲಿನ ವಾತಾವರಣ ಅವರಿಗೆ ಹಿಡಿಸಲಿಲ್ಲ. ‘ತುಂಬ ಸೆಕೆ ಇದೆ’ ಎಂದು ಜನರು ಮಾತನಾಡಿಕೊಳ್ಳುತ್ತಿರುವುದು ಕೂಡ ಈ ವಿಡಿಯೋದಲ್ಲಿ ಕೇಳಿಸಿದೆ. ಕಳಪೆ ರೀತಿಯಲ್ಲಿ ಕಾರ್ಯಕ್ರಮ ಆಯೋಜನೆ ಆಗಿದ್ದರಿಂದ ಈ ರೀತಿ ಆಗಿದೆ ಎಂಬ ಆರೋಪ ಕೂಡ ಕೇಳಿಬರುತ್ತಿದೆ.

(ಇಲ್ಲಿದೆ ವೈರಲ್​ ವಿಡಿಯೋ)

ಇದನ್ನೂ ಓದಿ
Image
KK Death Case: ಸಿಂಗರ್​ ಕೆಕೆ ಸಾವಿನಲ್ಲಿ ಮೂಡಿದೆ ಅನುಮಾನ; ಮುಖ, ತಲೆಯಲ್ಲಿ ಗಾಯದ ಗುರುತು? ಕೇಸ್​ ದಾಖಲು
Image
KK Death News: ಗಾಯಕ ಕೆಕೆ ನಿಧನ; 1 ಕೋಟಿ ರೂ. ಕೊಟ್ಟರೂ ಅಂಥ ಸ್ಥಳದಲ್ಲಿ ಹಾಡುವುದಿಲ್ಲ ಎಂದಿದ್ದ ಸಿಂಗರ್​
Image
Singer KK Death: ಕೋಲ್ಕತ್ತಾದಲ್ಲಿ ಸಂಗೀತ ಕಾರ್ಯಕ್ರಮ ನೀಡಿದ ನಂತರ 53 ವರ್ಷದ ಗಾಯಕ ಕೆಕೆ ಕುಸಿದು ಬಿದ್ದು ಸಾವು
Image
Edava Basheer Death: ಹಾಡುವಾಗಲೇ ವೇದಿಕೆಯಲ್ಲಿ ಕುಸಿದು ಬಿದ್ದು ಆರ್ಕೆಸ್ಟ್ರಾ ಗಾಯಕ ಎಡವ ಬಶೀರ್​ ನಿಧನ; ವಿಡಿಯೋ ವೈರಲ್​

ಕೆಕೆ ಅವರ ಸಾವಿಗೆ ಸೂಕ್ತ ಕಾರಣ ಏನು ಎಂಬುದನ್ನು ತಿಳಿಯಲು ಮರಣೋತ್ತರ ಪರೀಕ್ಷೆಯ ವರದಿ ಬರಬೇಕಿದೆ. ಅದಕ್ಕೂ ಮುನ್ನವೇ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಕೆಕೆ ಅವರದ್ದು ಅಸಹಜ ಸಾವು ಆಗಿರಬಹುದು ಎಂಬ ಗುಮಾನಿ ಕೂಡ ವ್ಯಕ್ತವಾಗುತ್ತಿದೆ.

ಅಸಹಜ ಸಾವು ಪ್ರಕರಣ ದಾಖಲು:

ಕೆಕೆ ಅವರ ಮುಖ ಮತ್ತು ತಲೆಯಲ್ಲಿ ಗಾಯದ ಗುರುತುಗಳು ಇವೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ‘ಇಂಡಿಯಾ ಟುಡೇ’ ವರದಿ ಮಾಡಿದೆ. ಸಂಗೀತ ಕಾರ್ಯಕ್ರಮದ ವೇಳೆ ಕೆಕೆ ಅವರು ಹಲವು ಬಾರಿ ವೇದಿಕೆಯ ಹಿಂಭಾಗಕ್ಕೆ ತೆರಳಿದ್ದರು ಎಂಬ ಮಾಹಿತಿ ಕೂಡ ಕೇಳಿಬಂದಿದೆ.

ಇಂದು (ಜೂನ್​ 1) ಕೋಲ್ಕತ್ತಾದ ಎಸ್​ಎಸ್​ಕೆಎಮ್​ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ. ಕೆಕೆ ಅವರು ಉಳಿದುಕೊಂಡಿದ್ದ ಖಾಸಗಿ ಹೋಟೆಲ್​ನ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಸಾವಿಗೆ ಅಸಲಿ ಕಾರಣ ಏನು ಎಂಬುದನ್ನು ತಿಳಿಯಲು ತನಿಖೆ ಆರಂಭ ಆಗಿದೆ. ಕಾರ್ಯಕ್ರಮದ ಆಯೋಜಕರು ಮತ್ತು ಹೋಟೆಲ್​ ಸಿಬ್ಬಂದಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಲಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ