Edava Basheer Death: ಹಾಡುವಾಗಲೇ ವೇದಿಕೆಯಲ್ಲಿ ಕುಸಿದು ಬಿದ್ದು ಆರ್ಕೆಸ್ಟ್ರಾ ಗಾಯಕ ಎಡವ ಬಶೀರ್​ ನಿಧನ; ವಿಡಿಯೋ ವೈರಲ್​

Edava Basheer: ಗಾಯಕ ಎಡವ ಬಶೀರ್ ಅವರು ವೇದಿಕೆಯಲ್ಲಿ ಕುಸಿದು ಬಿದ್ದ ವಿಡಿಯೋ ವೈರಲ್​ ಆಗಿದೆ. ಖ್ಯಾತ ಗಾಯಕಿ ಕೆ.ಎಸ್​. ಚಿತ್ರಾ ಸೇರಿದಂತೆ ಅನೇಕರು ​ಬಶೀರ್​ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

Edava Basheer Death: ಹಾಡುವಾಗಲೇ ವೇದಿಕೆಯಲ್ಲಿ ಕುಸಿದು ಬಿದ್ದು ಆರ್ಕೆಸ್ಟ್ರಾ ಗಾಯಕ ಎಡವ ಬಶೀರ್​ ನಿಧನ; ವಿಡಿಯೋ ವೈರಲ್​
ಎಡವ ಬಶೀರ್
Follow us
TV9 Web
| Updated By: ಮದನ್​ ಕುಮಾರ್​

Updated on: May 30, 2022 | 11:56 AM

ಕೇರಳದಲ್ಲಿ ಜನಪ್ರಿಯವಾಗಿದ್ದ ಗಾಯಕ ಎಡವ ಬಶೀರ್​ (Edava Basheer) ಅವರು ನಿಧನರಾಗಿದ್ದಾರೆ. ಮೇ 28ರ ಸಂಜೆ ವೇದಿಕೆ ಮೇಲೆ ಹಾಡು ಹೇಳುತ್ತಿರುವಾಗಲೇ ಅವರು ಕುಸಿದು ಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಅಷ್ಟರಲ್ಲಾಗಲೇ ಕೊನೆಯುಸಿರೆಳೆದು ಎಂಬುದು ತಿಳಿದು ಬಂದಿದೆ. ಎಡವ ಬಶೀರ್​ ನಿಧನಕ್ಕೆ (Edava Basheer Death) ಅನೇಕರು ಕಂಬನಿ ಮಿಡಿದಿದ್ದಾರೆ. ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಕೂಡ ಸಂತಾಪ ಸೂಚಿಸಿದ್ದಾರೆ. ಸಾಕಷ್ಟು ಮಲಯಾಳಂ ಸಿನಿಮಾಗಳಲ್ಲಿ (Malayalam Cinema) ಅವರು ಗೀತೆಗಳನ್ನು ಹಾಡಿದ್ದರು. ಆದರೂ ಕೂಡ ಅವರು ಹೆಚ್ಚು ಫೇಮಸ್​ ಆಗಿದ್ದು ಆರ್ಕೆಸ್ಟ್ರಾಗಳಲ್ಲಿ. ಕೇರಳದಲ್ಲಿ ಆರ್ಕೆಸ್ಟ್ರಾವನ್ನು (Orchestra) ಜನಪ್ರಿಯಗೊಳಿಸಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ಅಂಥ ಗಾಯಕ ವೇದಿಕೆಯಲ್ಲಿ ಹಾಡುತ್ತಿರುವಾಗಲೇ ಕುಸಿದು ಬಿದ್ದು ನಿಧನರಾಗಿದ್ದು ವಿಪರ್ಯಾಸವೇ ಸರಿ.

ಬ್ಲೂ ಡೈಮಂಡ್​ ಆರ್ಕೆಸ್ಟ್ರಾದ ಸುವರ್ಣ ಮಹೋತ್ಸವದ ಸಲುವಾಗಿ ಅದ್ದೂರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂಗೀತ ಸಮಾರಂಭದಲ್ಲಿ ಅವರು ಹಲವು ಗೀತೆಗಳನ್ನು ಹಾಡಿದರು. ಹಿಂದಿಯ ‘ಮಾನಾ ಹೋ ತುಮ್​ ಬೇಹದ್​ ಹಸೀ..’ ಹಾಡನ್ನು ಹಾಡುತ್ತ ಅವರು ಎಲ್ಲರನ್ನೂ ರಂಜಿಸುತ್ತಿದ್ದರು. ಈ ವೇಳೆ ಅವರಿಗೆ ಎದೆ ನೋವು ಕಾಣಿಸಿಕೊಂಡಿತು. ವೇದಿಕೆಯಲ್ಲೇ ಅವರು ಕುಸಿದು ಬಿದ್ದರು.

ಇದನ್ನೂ ಓದಿ
Image
Chalapathi Chowdary Death: ಹಿರಿಯ ನಟ ಕ್ಯಾಪ್ಟನ್​ ಚಲಪತಿ ಚೌದ್ರಿ ನಿಧನ
Image
ಫ್ಯಾಟ್​ ಕರಗಿಸಲು ಹೋಗಿ ಜೀವ ಕಳೆದುಕೊಂಡ ಕನ್ನಡದ ನಟಿ; 22ರ ಪ್ರಾಯದ ಪುತ್ರಿ ನಿಧನಕ್ಕೆ ಕಣ್ಣೀರಿಡುತ್ತಿರುವ ತಂದೆ
Image
Anekal Balaraj Death: ‘ಕರಿಯ’ ಸಿನಿಮಾ ನಿರ್ಮಾಪಕ ಆನೇಕಲ್​ ಬಾಲರಾಜ್​ ಇನ್ನಿಲ್ಲ; ಬೆಂಗಳೂರಿನಲ್ಲಿ ಅಪಘಾತದಿಂದ ನಿಧನ
Image
ಪಾರ್ವತಮ್ಮ ರಾಜ್​ಕುಮಾರ್ ಸಹೋದರಿ ಎಸ್​.ಎ. ನಾಗಮ್ಮ ನಿಧನ

ಎಡವ ಬಶೀರ್​ ಅವರು ಕುಸಿದು ಬೀಳುತ್ತಿರುವ ದೃಶ್ಯ ಕೆಲವರ ಮೊಬೈಲ್​ನಲ್ಲಿ ಸೆರೆಯಾಗಿದೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಎಡವ ಬಶೀರ್​ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ. ಆರ್ಕೆಸ್ಟ್ರಾದಲ್ಲಿ ಹಲವು ವರ್ಷಗಳ ಕಾಲ ಗಾಯಕನಾಗಿ ಸೇವೆ ಸಲ್ಲಿಸಿದ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದರು. 78ನೇ ವಯಸ್ಸಿಗೆ ಎಡವ ಬಶೀರ್​ ಅವರು ಇಹಲೋಕ ತ್ಯಹಿಸಿದ್ದಾರೆ.

ಬಾಲ್ಯದಿಂದಲೇ ಎಡವ ಬಶೀರ್​ ಅವರಿಗೆ ಸಂಗೀತದ ಮೇಲೆ ಆಸಕ್ತಿ ಮೂಡಿತ್ತು. ಸ್ವಾತಿ ತಿರುನಾಲ್​ ಸಂಗೀತ ಅಕಾಡೆಮಿಯಿಂದ ಅವರು ಸಂಗೀತದಲ್ಲಿ ಪದವಿ ಪಡೆದಿದ್ದರು. ‘ಕೊಲ್ಲಂ ಸಂಗೀತಾಲಯ ಗಾನಮೇಳ’ ತಂಡವನ್ನು ಅವರು ಕಟ್ಟಿದ್ದರು. ಕೇರಳದ ಬಹುತೇಕ ದೇವಾಲಯಗಳ ಉತ್ಸವದಲ್ಲಿ ಎಡವ ಬಶೀರ್​ ಹಾಡು ಹೇಳುತ್ತಿದ್ದಾರೆ. ದುರ್ಗಾ ದೇವಿಯನ್ನು ಗುಣಗಾನ ಮಾಡುವ ಹಾಡನ್ನು ಹೇಳುವಂತೆ ಕೇಳುಗರು ಅವರಿಗೆ ಒತ್ತಾಯ ಮಾಡುತ್ತಿದ್ದರು. ದೇಶ-ವಿದೇಶಗಳಲ್ಲೂ ಅವರು ಸಂಗೀತ ಕಾರ್ಯಕ್ರಮಗಳನ್ನು ಮಾಡಿದ್ದರು. ಅಮೆರಿಕ, ಇಂಗ್ಲೆಂಡ್​ ಸೇರಿದಂತೆ ಹಲವು ದೇಶಗಳಲ್ಲಿ ಅವರು ಹಾಡಿ ಬಂದಿದ್ದರು.

ಕೇರಳ ಸಿಎಂ ಪಿಣರಾಯಿ ವಿಜಯನ್​, ಪ್ರತಿಪಕ್ಷ ನಾಯಕ ವಿ.ಡಿ. ಸತೀಶನ್​, ಖ್ಯಾತ ಗಾಯಕಿ ಕೆ.ಎಸ್​. ಚಿತ್ರಾ ಸೇರಿದಂತೆ ಅನೇಕರು ಎಡವ ಬಶೀರ್​ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ